ಕೆಂಪೇಗೌಡ ಜಯಂತಿಗೆ ಭೂಮಿ ಪೂಜೆ

Team Udayavani, Dec 6, 2019, 5:06 PM IST

ಮಾಗಡಿ: ಪಟ್ಟಣದ ಐತಿಹಾಸಿಕ ನಾಡಪ್ರಭು ಕೆಂಪೇಗೌಡ ಕೋಟೆ ಮೈದಾನದಲ್ಲಿ ಡಿ.12ರ ಗುರುವಾರ ದಿನದಂದು ನಡೆಯಲಿರುವ ಕೆಂಪೇಗೌಡರ 511ನೇ ಜಯಂತ್ಯುತ್ಸವದ ಬೃಹತ್‌ ವೇದಿಕೆ ನಿರ್ಮಾಣಕ್ಕೆ ಸಕಲ ಸಿದ್ದತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಎಚ್‌.ಎಂ.ಕೃಷ್ಣಮೂರ್ತಿ ತಿಳಿಸಿದರು.

ಪಟ್ಟಣದ ಕೆಂಪೇಗೌಡ ಕೋಟೆ ಮೈದಾನದಲ್ಲಿ ಗುರುವಾರ ದೇವಮೂಲೆಯಲ್ಲಿ ಹಾಲುಕಂಭ ನೆಟ್ಟು ಹಾಲೆರೆಂದು ಶ್ರದ್ಧಾಭಕ್ತಿಯಿಂದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ವಿಶ್ವಖ್ಯಾತಿ ಹೊಂದಿರುವ ನಾಡಪ್ರಭು ಕೆಂಪೇಗೌಡರು ಗಂಡು ಮೆಟ್ಟಿದ ಮಾಗಡಿಯ ಮಣ್ಣಿನ ಮಗ ಎಂದು ಹೇಳಲು ಹೆಮ್ಮೆ ಎನಿಸಿದೆ. ಅವರ 511ನೇ ಜಯಂತ್ಯುತ್ಸವದ ಸಮಾರಂಭಕ್ಕೆ ಸುಮಾರು 25 ಸಾವಿರ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸು ನಿರೀಕ್ಷೆ ಇದೆ ಎಂದರು.

ಕೆಂಪೇಗೌಡರ 511ನೇ ಜಯಂತ್ಯುತ್ಸವದ ಸಮಾರಂಭಕ್ಕೆ ಉಪಮುಖ್ಯಮಂತ್ರಿ ಡಾ.ಅಶ್ವಥನಾರಾಯಣ ಹಾಗೂ ಸಂಸದ ಡಿ.ಕೆ. ಸುರೇಶ್‌ ಇವರನ್ನು ವಿಶೇಷವಾಗಿ ಆಹ್ವಾಸಿಲಾಗಿದೆ. ನಾಡಪ್ರಭು ಕೆಂಪೇಗೌಡರ ಮೇಲೆ ಅಭಿಮಾನವುಳ್ಳ ಮಹಾನೀಯರು, ಮಠಾಧೀಶರು, ನಟನಟಿಯರು, ಗಣ್ಯರು, ಕಲಾವಿದರು, ಚಿಂತಕರು, ಸಾಹಿತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಮಾರಂಭಕ್ಕೆ ಆಗಮಿಸುವ ಕೆಂಪೇಗೌಡರ ಎಲ್ಲ ಅಭಿಮಾನಿಗಳಿಗೂ ನನ್ನ ಸ್ವಂತ ದುಡಿಮೆಯಹಣದಿಂದ ಬೂಂದಿಬೂರಿ ಬೋಜನದ ವ್ಯವಸ್ಥೆ ಮಾಡುತ್ತೇನೆ. ಈ ಸಮಾರಂಭವನ್ನು ಸರ್ಕಾರದ ಅನುದಾನದಿಂದ ಮಾಡುತ್ತಿಲ್ಲ ಎಂದು ಕೃಷ್ಣಮೂರ್ತಿ ಸ್ಪಷ್ಟಡಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ: 511 ನೇ ಕೆಂಪೇಗೌಡರ ಜಯಂತ್ಯುತ್ಸವ ಸಮಾರಂಭದ ಪ್ರಯುಕ್ತ ಹೆಸರಾಂತ ಕಲಾವಿದರು, ನಟನಟಿಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿ ಕೊಡಲಿದ್ದಾರೆ. ಸಾಧಕ ರೈತರು, ಯುವಪ್ರತಿಭೆಗಳು, ಮಹಿಳೆಯರು ಸೇರಿದಂತೆ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿರುವ 2 ಸಾವಿರ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸುವ ವಿಶೇಷ ವಿನೂತನವಾದ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ರೈತ ಸಂಘದ ಜಿಲ್ಲಾ ಸಂಚಾಲಕ ಭೈರೇಗೌಡ ಮಾತನಾಡಿ, ಪ್ರಥಮವಾಗಿ ಮಾಗಡಿಯಲ್ಲಿ ಕೆಂಪೇಗೌಡ ಜಯಂತಿಯನ್ನು ಪ್ರಾರಂಭಿಸಿದ್ದು, ಗಂಡು ಮೆಟ್ಟಿದ ಮಾಗಡಿಯಲ್ಲಿ ಕೃಷ್ಣಮೂರ್ತಿ ಅವರಲ್ಲಿರುವ ಕೆಂಪೇಗೌಡ ಆದರ್ಶಗಳೇ ಇದಕ್ಕೆಲ್ಲ ಸಾಕ್ಷಿಯಾಗಿದೆ. ಕಳೆದ 20 ವರ್ಷಗಳಿಂದ ಕೆಂಪೇಗೌಡ ಜಯಂತಿಯನ್ನು ಅವರ ಸ್ವಂತ ದುಡಿಮೆಯ ಹಣದಲ್ಲಿ ಮಾಡಿಕೊಂಡು ಬರುತ್ತಿರುವುದಕ್ಕೆ ನಾವೆಲ್ಲರೂ ಹೆಮ್ಮೆ ಪಡೆಬೇಕು. ಅವರ ವಿರುದ್ಧಆಹಂಕಾರ ದಿಂದ ಮಾತನಾಡುವುದನ್ನು ಬಿಡಬೇಕು. ಕೃಷ್ಣಮೂರ್ತಿ ಏನೇ ಆಗಿರಲಿ ಅವರಲ್ಲೊಬ್ಬ ಆದರ್ಶ ಕೆಂಪೇಗೌಡ ಇದ್ದಾನೆ ಎಂಬುದನ್ನು ಮರೆಯ ಬಾರದು ಎಂದರು.

ಜಯಂತ್ಯುತ್ಸವದಲ್ಲಿ ಜಾತ್ಯಾತೀತವಾಗಿ, ಪಕ್ಷಾತೀತವಾಗಿ, ರಾಜಕೀಯ ಮರೆತು ಭಾಗವಹಿಸಿದರೆ ನಿಮ್ಮಲ್ಲರ ಗೌವರರವೂ ಹೆಚ್ಚಾಗುತ್ತದೆ. ಎಲ್ಲರೂ ಜಯಂತ್ಯುತ್ಸವದಲ್ಲಿ ಭಾಗವಹಿಸುವ ಮೂಲಕ ಕೆಂಪೇಗೌಡರಿಗೆ ಒಂದು ಸಲಮ್‌ ಸಲ್ಲಿಸೋಣ. ಕೆಂಪೆಗೌಡರ ತತ್ವಾ ದರ್ಶನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.

ಸಮಿತಿಯ ಪದಾಧಿಕಾರಿಗಳಾದ ಗಂಗಾಧರ್‌, ತಮ್ಮಣ್ಣಗೌಡ, ಆನಂದ್‌, ಹೇಮಂತ್‌, ಗೋಪಾಲ್‌,ಕುಮಾರ್‌, ಮಂಜುನಾಥ್‌, ಗೊಲ್ಲರಪಾಳ್ಯದ ಜಯರಾಂ, ಕೋಟಪ್ಪ, ಶಿವಣ್ಣ, ರಂಗಪ್ಪ, ಶ್ರೀನಿವಾಸಯ್ಯ ರವಿಕುಮಾರ್‌,ಜಗದೀಶ್‌, ಶಂಕರ್‌ ಇತರರು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಾಗಡಿ: ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಜೀವ ತೆತ್ತ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ರಾಜ್ಯ...

  • ಚನ್ನಪಟ್ಟಣ: ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ ತಿದ್ದುಪಡಿ ಮಾಡಿರುವುದರ ಹಿಂದೆ ಭಾರೀ ಕುತಂತ್ರ ಅಡಗಿದೆ. ದೇಶದಲ್ಲಿ ಸಹೋದರರಂತೆ ಇರುವ ಹಿಂದೂ-ಮುಸ್ಲಿಮರ ನಡುವೆ...

  • ಚನ್ನಪಟ್ಟಣ: ಪ್ರಸಕ್ತ ಸಾಲಿನ ಆಯವ್ಯಯ ಸಂಬಂಧ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಗೆ ಸಾರ್ವಜನಿಕರು ಬೆವರಿಳಿಸಿದ ಪ್ರಸಂಗ ನಗರಸಭೆ ಸಭಾಂಗಣದಲ್ಲಿ...

  • ರಾಮನಗರ: ದಕ್ಷಿಣ ಭಾರತದಲ್ಲಿ ಖ್ಯಾತಿಯಾಗಿರುವ ರಾಮನಗರ ಮ್ಯಾರಥಾನ್‌ 2020 ಇದೇ ಫೆಬ್ರವರಿ 2ರಂದು ಆಯೋಜನೆಯಾಗಿದೆ ಎಂದು ಯಲ್ಲೋ ಆಂಡರ್‌ ರೆಡ್‌ ಫೌಂಡೇಷನ್‌ನ ಅಧ್ಯಕ್ಷ...

  • ದೇವನಹಳ್ಳಿ: ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿದಾಗ ಮಾತ್ರ ಅಪಘಾತ ತಡೆಯಲು ಸಾಧ್ಯ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರಿ ಪೊಲೀಸ್‌...

ಹೊಸ ಸೇರ್ಪಡೆ