Udayavni Special

ಮಂಚನಾಯಕನಹಳ್ಳಿ ಮಾದರಿ ಗ್ರಾಮ ಪಂಚಾಯಿತಿ


Team Udayavani, May 19, 2020, 8:35 AM IST

grama model

ರಾಮನಗರ: ನರೇಗಾ ಯೋಜನೆ ಗ್ರಾಮಗಳ ಅಭಿವೃದ್ಧಿಗೆ ಹೇಗೆ ಸದ್ಬಳಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಮಂಚನಾಯಕನ ಹಳ್ಳಿ ಗ್ರಾಮ ಪಂಚಾಯಿತಿ ಕಲ್ಯಾಣಿ ನಿರ್ಮಿಸಿ ನಿರೂಪಿಸಿದೆ ಎಂದು ಮಾಗಡಿ ಶಾಸಕ ಎ. ಮಂಜುನಾಥ್‌  ಹೇಳಿದರು. ಬಿಡದಿ ಹೋಬಳಿಯ ತಾಳಕುಪ್ಪೆ ಗ್ರಾಮದ ಪಾರ್ವತಿ ದೇವಿ ದೇವಾಲಯದ ಬಳಿ ಪಂಚಾಯಿತಿಯಿಂದ ನಿರ್ಮಿಸಲಾಗಿರುವ ಕಲ್ಯಾಣಿಯನ್ನು ಸೋಮವಾರ ಲೋಕಾ ರ್ಪಣೆಗೊಳಿಸಿ ಮಾತನಾಡಿದರು.

ನರೇಗಾ  ಯೋಜನೆಯಡಿಯಲ್ಲಿ ಜಿಲ್ಲೆಗೆ ಮಾದರಿಯಾಗುವ ಕಲ್ಯಾಣಿಯನ್ನು ಮಂಚನಾಯ್ಕನಹಳ್ಳಿ ಗ್ರಾಪಂ ನಿರ್ಮಿಸಿದೆ. ನರೇಗಾ ಯೋಜನೆ ಸದ್ಬಳಕೆಗೆ ಇದೊಂದು ಉತ್ತಮ ನಿದರ್ಶನವಾಗಿದೆ. ಈ ಯೋಜನೆಯಿಂದ ಸುಮಾರು 20 ಲಕ್ಷ ರೂ.  ಮತ್ತು ಗ್ರಾಪಂ ನಿಧಿಯಿಂದ 5 ಲಕ್ಷ ರೂ. ವೆಚ್ಚ ಮಾಡಿಆಕರ್ಷಣೀಯವಾಗಿ ಕಲ್ಯಾಣಿ ನಿರ್ಮಿಸ ಲಾಗಿದೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಲ್ಯಾಣಿಯಲ್ಲಿ ನೀರು ಸದಾ ಇರಲು ಕೊಳವೆಬಾವಿ ಅಗತ್ಯವಿದ್ದು,

ಇದಕ್ಕೆಂದೇ ಪ್ರತ್ಯೇಕ ಕೊಳವೆ ಬಾವಿ  ಕೊರೆಸುವ ಉದ್ದೇಶವಿದೆ. ಇದರೊಟ್ಟಿಗೆ ಉದ್ಯಾನವನ ನಿರ್ಮಾಣ, ಹಾಕುವುದು ಹಾಗೂ ಮತ್ತಿತರ ಅಭಿವೃದ್ಧಿಗೆ ಇನ್ನೂ 5 ಲಕ್ಷ ರೂ. ಅಗತ್ಯವಿದೆ. ಪುರಾ ತನ ಕಲ್ಯಾ ಣಿ ಗಳೂ ಅಭಿ ವೃದ್ಧಿಯಾಗ  ಬೇಕು ಎಂದು ಆಶಿಸಿದರು. ಪಾರ್ವತಿ  ದೇವಿ ದೇವಾಲಯಕ್ಕೆ ಸೇರಿದ 12 ಎಕರೆ ಜಾಗವಿದೆ. ಅಲ್ಲಿ ಔಷಧ ಗಿಡ ನೆಡಲಾಗಿದೆ. ಈ ಜಾಗ ಅಭಿವೃದ್ಧಿಪಡಿಸ ಬೇಕಿದ್ದು, ಹೆಚ್ಚಿನ ಹಣಕಾಸಿನ ಸಹಕಾರ ನೀಡಬೇಕು ಎಂದು ಜಿಪಂ ಸಿಇಒ ಇಕ್ರಂ ಅವರಲ್ಲಿ ಶಾಸಕರು ಮನವಿ ಮಾಡಿದರು.

ಮಂಚನಾಯನಕಹಳ್ಳಿ ಗ್ರಾಪಂ ಅಧ್ಯಕ್ಷೆ  ನಂದಪ್ರಭಾ ಆನಂದ್‌ ಮಾತನಾಡಿ, ನಮ್ಮ ಗ್ರಾಪಂನ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿಯೇ ಒಂದು ಮಾದರಿಯಾದ ಕಲ್ಯಾಣಿ ನಿರ್ಮಿಸ ಲಾಗಿದೆ. ಈ ಯೋಜನೆ ಸಾಕಾರಗೊಳ್ಳಲು ಸಹಕಾರ ನೀಡಿದ  ಗ್ರಾಪಂ ಸದಸ್ಯ ಮೂಡಲಗಿರಿಯಪ್ಪ ಮತ್ತಿತರರಿಗೆ ಅವರು ಇದೇ ವೇಳೆ ಧನ್ಯವಾದ ತಿಳಿಸಿದರು. ಬೈರಮಂಗಲ ಜಿಪಂ ಸದಸ್ಯ ಮಂಜುನಾಥ್‌ ಮಾತನಾಡಿದರು.

ಜಿಪಂ ಸಿಇಒ ಇಕ್ರಂ, ಸಾರ್ವಜನಿಕರಿಗೆ ಬಟ್ಟೆ  ಬ್ಯಾಗ್‌ ವಿತರಿಸುವ ಮೂಲಕ  ಪ್ಲಾಸ್ಟಿಕ್‌ ಮುಕ್ತ ಗ್ರಾಪಂ ನಿರ್ಮಾಣ ಅಭಿಯಾನಕ್ಕೆ ಚಾಲನೆ ನೀಡಿದರು. ಜಿಪಂ ಅಧ್ಯಕ್ಷ ಬಸಪ್ಪ, ಬಿಡದಿ ರೈತರ ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ನರಸಿಂಹ ಮೂರ್ತಿ, ಮುಖಂಡರಾದ ವೀರಭದ್ರಣ್ಣ, ಶೇಷಪ್ಪ, ಸೋಮೇಗೌಡ, ಬಾಷ್‌  ಪ್ರತಿಷ್ಠಾನದ ಡಾ.ಪುಂಡಲೀಕ ಕಾಮತ್‌ ಸೇರಿದಂತೆ ಮತ್ತಿತರರು ಹಾಜರಿದ್ದರು.

ಟಾಪ್ ನ್ಯೂಸ್

aaryan

ಡ್ರಗ್ಸ್ ಪ್ರಕರಣದಲ್ಲಿ ಜಾಮೀನಿಲ್ಲ: ಆರ್ಯನ್ ಖಾನ್ ಗೆ ಜೈಲೇ ಗತಿ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

1-bc

ಕರ್ನಾಟಕದ 12 ದ್ವೀಪಗಳಿಗಾಗಿ ಗೋವಾ ಸರಕಾರದಿಂದ ಕೇಂದ್ರಕ್ಕೆ ಮನವಿ

1-bb

ಬಜರಂಗದಳದಿಂದ ಐವನ್ ಡಿಸೋಜ ಮನೆಗೆ ಮುತ್ತಿಗೆ ಯತ್ನ

Untitled-1

ಆರ್ ಎಸ್ಎಸ್ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಒಬ್ಬ ಬುದ್ಧಿಮಾಂದ್ಯ: ಸೋಮಶೇಖರ ರೆಡ್ಡಿ

ಮೋದಿ, ಬೊಮ್ಮಾಯಿ, ಬೆಲೆಯೇರಿಕೆ ಈ ಮೂರೂ ದೇಶಕ್ಕೆ ಅಪಾಯಕಾರಿ: ರಣದೀಪ್ ಸಿಂಗ್ ಸುರ್ಜೇವಾಲಾ

ಮೋದಿ, ಬೊಮ್ಮಾಯಿ, ಬೆಲೆಯೇರಿಕೆ ಈ ಮೂರೂ ದೇಶಕ್ಕೆ ಅಪಾಯಕಾರಿ: ರಣದೀಪ್ ಸಿಂಗ್ ಸುರ್ಜೇವಾಲಾ

kadala teerada barghavaru

ಕಡಲ ತೀರದಲ್ಲಿ ಹೊಸಬರ ಕನಸು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

magadi news

ಅಲೆಮಾರಿಗಳಿಗೆ ಸೌಲಭ್ಯ ಕೊಡಿ

ದೇವನಹಳ್ಳಿ: ತಾಲೂಕಿನಾದ್ಯಂತ ಸುರಿದ ಮಳೆಯಿಂದಾಗಿ ರೈತರ ತೋಟಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟವಾಗಿರುವುದರಿಂದ ಕೂಡಲೇ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ದಾಖಲೆ ಮಳೆ: ಶನಿವಾರ ಸಂಜೆಯಿಂದ ರಾತ್ರಿವರೆಗೆ ಉತ್ತಮ ಮಳೆಯಾಗಿದೆ. ರೈತರಿಗೆ ಈ ಮಳೆ ನುಂಗಲಾರದ ತುತ್ತಾಗಿದೆ. ಉತ್ತಮ ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ. ತೋಟಗಳಿಗೆ ನೀರು ನುಗ್ಗಿರುವುದರಿಂದ ರೈತರು ಸಾಲಸೋಲ ಮಾಡಿ ಬೆಳೆದಿದ್ದ ಹೂವು ನೀರುಪಾಲಾಗಿದೆ. ತಾಲೂಕಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ನಂತರ ಇದೇ ಮೊದಲ ಭಾರಿಗೆ 56.5 ಮಿ. ಮೀಟರ್‌ ನಷ್ಟು ದಾಖಲೆ ಮಳೆಯಾಗಿದ್ದು, ವಿಮಾನ ನಿಲ್ದಾಣಕ್ಕೂ ನೀರು ನುಗ್ಗಿತ್ತು. ಇದರಿಂದ ಪ್ರಯಾಣಿಕರು ಪರದಾಡಿದ್ದರು. ರಾಜಕಾಲುವೆ ಒತ್ತುವರಿ.. ರೈತರಿಗೆ ಕಿರಿಕಿರಿ: ಮಳೆಯ ನೀರು ಕೆರೆಗಳಿಗೆ ಹರಿದು ಹೋಗುವಂತೆ ಮಾಡಲಿಕ್ಕಾಗಿ ನಿರ್ಮಾಣ ಮಾಡಿರುವ ರಾಜಕಾಲುವೆಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವ ಕಾರಣ, ಮಳೆಯ ನೀರು ಕಾಲುವೆಗಳ ಮುಖಾಂತರ ಕೆರೆಗೆ ಹರಿಯಬೇಕಾಗಿರುವುದರ ಬದಲಾಗಿ ರೈತರ ತೋಟಗಳಿಗೆ ನುಗ್ಗಿವೆ. ಇದರಿಂದ ರೈತರ ಬೆಳೆಗಳು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿ¨ªಾರೆ. ಅಪಾರ ಬೆಳೆ ಹಾನಿ: ತಾಲೂಕಿನ ಅಣ್ಣೇಶ್ವರ, ಬೈಚಾಪುರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರ ಹೂವಿನ ಬೆಳೆಗಳು, ರಾಗಿ ಬೆಳೆ, ಜೋಳದ ಬೆಳೆ, ಸೌತೆಗಿಡ ಸೇರಿದಂತೆ ಬಹುತೇಕ ಬೆಳೆಗಳಿಗೆ ನೀರು ನುಗ್ಗಿದ್ದು, ಹೂವಿನ ಗಿಡಗಳು ಕೊಳೆಯುವಂತಹ ಸ್ಥಿತಿಗೆ ತಲುಪಿವೆ. ಲಕ್ಷಾಂತರ ರೂಪಾಯಿಗಳಷ್ಟು ಬಂಡವಾಳ ಹೂಡಿಕೆ ಮಾಡಿದ್ದೇವೆ. ತೋಟಗಳಲ್ಲಿ ನಿಂತಿರುವ ನೀರನ್ನು ಹೊರಗೆ ಹಾಕಲು ಮೋಟಾರುಗಳನ್ನು ಇಟ್ಟು ನೀರು ಖಾಲಿ ಮಾಡಿದರೂ ಶನಿವಾರ ಸಂಜೆ ಸುರಿದ ಮಳೆಯಿಂದಾಗಿ ಮತ್ತೆ ಜಲಾವೃತವಾಗಿದೆ. ನೀರು ನಿಂತರ ಪರಿಣಾಮ ಹೂ ಬಿಡಿಸಲಿಕ್ಕೂ ಕಾರ್ಮಿಕರು ಬರುತ್ತಿಲ್ಲ. ತೋಟಕ್ಕೆ ನಾವು ಔಷಧಿ ಸಿಂಪಡಣೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಔಷಧಿಯೆÇÉಾ ನೀರು ಪಾಲಾಗಿದೆ. ಒಂದು ಬಾರಿ ಔಷಧ ಸಿಂಪಡಣೆ ಮಾಡಬೇಕೆಂದರೆ 4 ರಿಂದ 5 ಸಾವಿರ ಖರ್ಚು ಮಾಡಬೇಕು. ಹೂವಿನ ಗಿಡಗಳ ಕಾಂಡಗಳು ಕೊಳೆಯುವಂತಾಗಿದ್ದು, ಬೆಳೆ ನಾಶವಾದರೆ ನಮ್ಮ ಕುಟುಂಬ ನಿರ್ವಹಣೆ ಹೇಗೆ ಎನ್ನುವ ಆತಂಕವೂ ಕಾಡುತ್ತಿದೆ. ವಿಮಾನ ನಿಲ್ದಾಣದ ಕಡೆಯಿಂದಲೂ ಕೂಡಾ ನೀರು ನಮ್ಮ ತೋಟಗಳಿಗೆ ನುಗ್ಗುತ್ತವೆ. ಕಾಲುವೆಯನ್ನು ಮಾಡಿ, ಅರ್ಧಕ್ಕೆ ನಿಲ್ಲಿಸಿ¨ªಾರೆ. ಇದರಿಂದಲೂ ನೀರು ಈ ಭಾಗಕ್ಕೆ ಹರಿದು ಬಂದು ತೋಟಗಳಲ್ಲಿ ನಿಲುತ್ತಿವೆ ಎಂದು ರೈತರು ತಮ್ಮ ನೋವನ್ನು ವ್ಯಕ್ತಪಡಿಸಿದರು. ತಾಲೂಕಿನ ಹೋಬಳಿವಾರು ಮಳೆಯ ಅಂಕಿ ಅಂಶ- ದೇವನಹಳ್ಳಿ ಟೌನ್‌- 26.1ಮಿ.ಮಿ., ವಿಜಯಪುರ- 5.2ಮಿ.ಮಿ., ಕುಂದಾಣ- 6.0ಮಿ.ಮಿ., ವಿಶ್ವನಾಥಪುರ- 5.4ಮಿ.ಮಿ., ಚನ್ನರಾಯಪಟ್ಟಣ- 13.8ಮಿ.ಮಿ. ಒಟ್ಟು 56.5ಮಿ.ಮಿ. ಮಳೆಯಾಗಿದೆ.

ತಾಲೂಕಿನಾದ್ಯಂತ ಭಾರಿ ಮಳೆ, ಕೊಚ್ಚಿ ಹೋದ ಬೆಳೆ!

ಆರೋಗ್ಯದ ಅರಿವಿಗೆ ಸಂಚಾರಿ ರಥ

ಆರೋಗ್ಯದ ಅರಿವಿಗೆ ಸಂಚಾರಿ ರಥ

ಹಾಲು ಗುಣಮಟ್ಟ ಸರಿಯಿಲ್ಲ ಎಂದು ಕ್ಯಾತೆ- ಡೇರಿ ಅವ್ಯವಹಾರ ಬೆಳಕಿಗೆ

ಸೋಲೂರು ಹಾಲು ಉತ್ಪಾದಕರ ಪ್ರತಿಭಟನೆ

ಗ್ರಾಮದ ಸಮಸ್ಯೆಗಳ ಪಟ್ಟಿ ಮಾಡಿದ ತಹಶೀಲ್ದಾರ್‌

ಗ್ರಾಮದ ಸಮಸ್ಯೆಗಳ ಪಟ್ಟಿ ಮಾಡಿದ ತಹಶೀಲ್ದಾರ್‌

MUST WATCH

udayavani youtube

ಮಲೆನಾಡಿನಾದ್ಯಂತ ಭೂಮಿ ಹುಣ್ಣಿಮೆಯ ಸಂಭ್ರಮ

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

ಹೊಸ ಸೇರ್ಪಡೆ

aaryan

ಡ್ರಗ್ಸ್ ಪ್ರಕರಣದಲ್ಲಿ ಜಾಮೀನಿಲ್ಲ: ಆರ್ಯನ್ ಖಾನ್ ಗೆ ಜೈಲೇ ಗತಿ

metro

ದಶಕ ಪೂರೈಸಿದ ನಮ್ಮ ಮೆಟ್ರೋ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

kalaburagi news

ಮೂರನೇ ಅಲೆ ತಡೆಗೆ ಲಸಿಕೆ ಹಾಕಿಸಿಕೊಳ್ಳಿ

gulbarga news

ಇಂದು ನಾಗಾವಿ ಯಲ್ಲಮ್ಮದೇವಿ ಜಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.