ಆಸ್ತಿ ದಾಖಲೆ ಪಡೆದುಕೊಳ್ಳಲು ನಾರಾಯಣಪ್ಪ ಸಲಹೆ
Team Udayavani, Sep 24, 2020, 2:37 PM IST
ಮಾಗಡಿ: ಸರ್ಕಾರವೇ ಜನರ ಆಸ್ತಿ ದಾಖಲೆ ಮಾಡಿಕೊಡಲು ನಿಮ್ಮ ಮನೆ ಬಳಿ ಬರಲಿದೆ. ಅಧಿಕಾರಿಗಳೊಂದಿಗೆ ಸಹಕರಿಸಿ ನಿಮ್ಮ ಸ್ವತ್ತಿನ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಿಕೊಳ್ಳಿ ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷ ನಾರಾಯಣಪ್ಪ ಹೇಳಿದರು.
ತಾಲೂಕಿನ ಕಲ್ಯಾ ಗ್ರಾಮ ಪಂಚಾಯ್ತಿಯಲ್ಲಿ ಬುಧವಾರ ನಡೆದ ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆಯ ಕುರಿತು ಅರಿವು ಸಭೆಯಲ್ಲಿ ಮಾತನಾಡಿ ಅವರು, ಆಸ್ತಿಗಳ ದಾಖಲೆಗಳನ್ನು ತಂತ್ರಾಂಶದಲ್ಲಿ ಅಳವಡಿಸಲು ಸರ್ಕಾರ ಚಿಂತಿಸಿದ್ದು, ಭೂಮಿ ದಾಖಲೆಗಳನ್ನು ಹೊಂದಿಲ್ಲದವರಿಗೆ ಇದೊಂದು ಸದಾವಕಾಶ ಎಂದು ತಿಳಿಸಿದರು.
ಹಕ್ಕುಪತ್ರ ನೀಡುವ ಸ್ವಾಮಿತ್ವ ಯೋಜನೆ ರಾಜ್ಯದಲ್ಲೆಡೆ ಪ್ರಾರಂಭಗೊಂಡಿದ್ದು, ಮಾಗಡಿ ತಾಲೂಕಿನ 32 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಎಲ್ಲ ಜನವಸತಿ ಗ್ರಾಮಗಳಲ್ಲಿ ಸ್ವಾಮಿತ್ವ ಯೋಜನೆ ಅನುಷ್ಠಾಗೊಳಿಸಲು ಕ್ರಮ ಕೈಗೊಂಡಿದೆ. ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು. ಮಾಗಡಿ ಸರ್ವೇ ಇಲಾಖೆಯ ಸುಪರ್‌ವೈಸರ್ ನಂಜಪ್ಪ ಮಾತನಾಡಿ, ಮಾಗಡಿ ತಾಲೂಕಿನಲ್ಲಿ ಕಾಳಾರಿ ಕಾವಲ್ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ವಾಮಿತ್ವ ಯೋಜನೆಯ ಡ್ರೋನ್ ಸರ್ವೇ ಪೂರ್ಣಗೊಳಿಸಿದ್ದೇವೆ. ಕಲ್ಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಗ್ರಾಮದ ಗಡಿ ಹಾಗೂ ಪ್ರತಿ ಆಸ್ತಿಯ ಮಾಲೀಕರ ಸಮ್ಮುಖದಲ್ಲೇ ಪರಿಶೀಲನೆ ನಡೆಸಿ ಬಿಳಿ ಬಣ್ಣದಿಂದ ಗುರುತಿಸುತ್ತಾರೆ ಎಂದರು.
ಡ್ರೋನ್ ಸರ್ವೇ ಮಾಡಿ ಸ್ವತ್ತುಗಳ ಪೋಟೊ ಸೆರೆ ಹಿಡಿದು ಚಿತ್ರಗಳನ್ನು ಸಂಸ್ಕರಿಸಿ ಗುರುತಿಸಲಾದ ಆಸ್ತಿ ನಕಾಶೆ ತಯಾರಿಸಲಾಗುತ್ತದೆ. ಗ್ರಾಮ ಪಂಚಾಯ್ತಿಗಳಲ್ಲಿ ದಾಖಲಾಗುವ ದಾಖಲೆಗಳ ಜೊತೆ ಹೊಂದಾಣಿಕೆ ಮಾಡಿ ಪರಿಶೀಲಿಸಲಾಗುವುದು. ಎಲ್ಲ ಸರಿಯಾದ ನಂತರ ಗ್ರಾಮಸ §ರ ಸಭೆ ನಡೆಸಿ ತಕರಾರುಗಳಿದ್ದರೆ, ಇತ್ಯಾರ್ಥ ಪಡಿಸಲಾಗುತ್ತದೆ. ಈ ವೇಳೆ ಹೆಸರು ಅಥವಾ ಇನ್ನಿತರೆ ತಿದ್ದುಪಡಿಗೂ ಅವಕಾಶ ನೀಡಲಾಗುತ್ತದೆ. ದಾಖಲಾತಿ ಕಾರ್ಯ ಮುಗಿದ ಬಳಿಕ ಆಸ್ತಿಪತ್ರ ನೀಡಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿವೋ ವೈ75 ಫೋನ್ ಬಿಡುಗಡೆ; 44ಎಂಪಿ ಸೆಲ್ಫಿ ಕ್ಯಾಮರಾವಿರುವ ಫೋನು
ಕಾಂಗ್ರೆಸ್ ಕಟ್ಟಿ ಬೆಳೆಸಿದ್ದನ್ನು ಬಿಜೆಪಿ ಮಾರುತ್ತಿದೆ: ಮಲ್ಲಿಕಾರ್ಜುನ ಖರ್ಗೆ
ಸೊರಬ : ಎಸ್ಸೆಸ್ಸೆಲ್ಸಿ ಯಲ್ಲಿ ಸಮಾನ ಅಂಕ ಗಳಿಸುವ ಮೂಲಕ ಗಮನ ಸೆಳೆದ ಅವಳಿ ಸಹೋದರಿಯರು
ಪೇಟಿಎಂ ಕಂಪನಿಗೆ 761 ಕೋಟಿ ರೂ. ನಷ್ಟ!
ಬಾಣಂತಿಯರ ಶಸ್ತ್ರಚಿಕಿತ್ಸೆಯಲ್ಲಿ ಲೋಪ : ವಿಜಯಪುರ ಸರ್ಕಾರಿ ಆಸ್ಪತ್ರೆಗೆ ಉಪ ಲೋಕಾಯುಕ್ತ ಭೇಟಿ