ಕೋವಿಡ್ ನಿಯಮ ಪಾಲನೆಗೆ ಜಾಗೃತಿ
Team Udayavani, Apr 2, 2021, 12:06 PM IST
ರಾಮನಗರ: ಕೋವಿಡ್ ನಿಯಮ ಹಾಗೂ ದಂಡ ವಿಧಿಸುವ ಕುರಿತು ವಾಹನ ಸವಾರರಿಗೆ ಎಸ್ಪಿ ಗಿರೀಶ್ ಗುರುವಾರ ಅರಿವು ಮೂಡಿಸಿದರು. ಎಸ್ಪಿಯವರೊಟ್ಟಿಗೆ ನಗರ, ಐಜೂರು ಮತ್ತು ಗ್ರಾಮಾಂತರ ಠಾಣೆ ಅಧಿಕಾರಿಗಳು ಭಾಗವಹಿಸಿದ್ದರು. ಗುರುವಾರ ಸಂಜೆ 5ರ ವೇಳೆ ಐಜೂರು
ವೃತ್ತಕ್ಕೆ ಆಗಮಿಸಿದ ಪೊಲೀಸ್ ಪಡೆ, ಸಿಗ್ನಲ್‌ನಲ್ಲಿ ನಿಂತು ಸಾರ್ವಜನಿಕರಿಗೆ ಕೋವಿಡ್ ಬಗ್ಗೆ ಅರಿವು ಮೂಡಿಸಿದರು. ಮಾಸ್ಕ್, ಕರ ಪತ್ರ ಕೊಟ್ಟು ಕೋವಿಡ್ ಸೋಂಕು ನಿಯಂತ್ರಣಕ್ಕೆ ನಿಯಮಗಳ ಪಾಲನೆ ಅನಿವಾರ್ಯ ಎಂದು ಮಾಹಿತಿ ಕೊಟ್ಟರು. ಅಲ್ಲದೇ, ಉದ್ಧಟತನ ತೋರಿದ ಕೆಲವರಿಗೆ ಪೊಲೀಸರು ದಂಡ ವಿಧಿಸಿದರು. ಐಜೂರು ವೃತ್ತದಿಂದ ಕನಕಪುರ ವೃತ್ತದವರೆಗೂ ಜಾಥಾ ನಡೆಸಿದ ಪೊಲೀಸರು,ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಕೆಲ ಅಂಗಡಿಗಳ ವರ್ತಕರಿಗೂ ದಂಡ ವಿಧಿಸಿದರು.
ವಾಹನ ಚಾಲಕರು ಅಲ್ಲಲ್ಲೇ ವಾಹನಗಳನ್ನು ನಿಲ್ಲಿಸಿ ತರಾತುರಿಯಲ್ಲಿ ಮಾಸ್ಕ್, ಹೆಲ್ಮೆಟ್ ಧರಿಸಿಮುಂದೆ ಸಾಗುತ್ತಿದ್ದರು. ಶುಕ್ರವಾರದಿಂದ ಪ್ರತಿದಿನ ಆಯಾ ಠಾಣೆ ವ್ಯಾಪ್ತಿಯಲ್ಲಿ ನಿತ್ಯ 2 ಗಂಟೆ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ.
ಕೋವಿಡ್ ಸೋಂಕು ನಿಯಂತ್ರಣಕ್ಕೆ ಸರ್ಕಾರದ ನಿಯಮ ಪಾಲಿಸಬೇಕಾಗಿದೆ. ಕೆಲವರು ಪತ್ರಕರ್ತರ ಹೆಸರನ್ನು ದುರ್ಬಳಕೆ ಮಾಡಿಕೊಂಡು, ಪ್ರಸ್ ಬೋರ್ಡ್‌ಗಳನ್ನುವಾಹನಗಳ ಮೇಲೆ ಅಂಟಿಸಿಕೊಂಡು ಸಂಚರಿಸುತ್ತಿದ್ದಾರೆ. ಮುಂದಿನದಿನಗಳಲ್ಲಿ ಅಂತಹವರ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು. ● ಎಸ್.ಗಿರೀಶ್, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ, ರಾಮನಗರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಚಾರ್ಮಾಡಿ : ರಸ್ತೆ ಮಧ್ಯೆಯೇ ಮೋಜು ಮಸ್ತಿ, ಪ್ರವಾಸಿಗರ ಪುಂಡಾಟಕ್ಕೆ ವಾಹನ ಸವಾರರು ಸುಸ್ತು
ಭಾರಿ ಮಳೆಗೆ ಹೆಬ್ಬಾಳ ಸೇತುವೆ ಮುಳುಗಡೆ : ಕಳಸ – ಹೊರನಾಡು ಸಂಪರ್ಕ ಕಡಿತ
ಇಬ್ಬರು ಶಸ್ತ್ರ ಸಜ್ಜಿತ ಲಷ್ಕರ್ ಉಗ್ರರನ್ನು ಹಿಡಿದು ಕೊಟ್ಟ ಕಾಶ್ಮೀರದ ಗ್ರಾಮಸ್ಥರು
ಜಿಂಕೆಯನ್ನು ನುಂಗಿದ್ದ 80 ಕೆ.ಜಿ. ತೂಕದ 14 ಅಡಿ ಉದ್ದದ ಹೆಬ್ಬಾವು!
ವಿಟ್ಲದ ಈ ವಿದ್ಯಾರ್ಥಿನಿಯ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ…
ಹೊಸ ಸೇರ್ಪಡೆ
ಹಿರೇಬಾಗೇವಾಡಿ ಶಾಲೆಗಳು ಸಮಸ್ಯೆ ಆಗರ
ಮಂಧನಾ-ಶಫಾಲಿ ಅಜೇಯ ಜೊತೆಯಾಟ: ಲಂಕಾ ವಿರುದ್ದ ಏಕದಿನ ಸರಣಿ ಗೆದ್ದ ವನಿತೆಯರು
300 ಅಂಕಕ್ಕಿಂತಲೂ ಅಧಿಕ ಏರಿಕೆಯೊಂದಿಗೆ ಬಾಂಬೆ ಷೇರುಪೇಟೆ ವಹಿವಾಟು ಅಂತ್ಯ; ನಿಫ್ಟಿ ಜಿಗಿತ
ಗೋವಾ: ಭಾರೀ ಮಳೆಗೆ ಅನಮೋಡ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿತ; ಹಲವು ಗಂಟೆ ಟ್ರಾಫಿಕ್ ಜಾಮ್
ಹೆಬ್ರಿ: ಅಕ್ರಮ ಜಾನುವಾರು ಸಾಗಾಟ ಓರ್ವ ಸೆರೆ,ಇನ್ನೋರ್ವ ಪರಾರಿ