ಮರ್ಯಾದಾ ಹತ್ಯೆ: 3ನೇ ಆರೋಪಿ ಬಂಧನ

Team Udayavani, May 16, 2019, 11:47 AM IST

ಕನಕಪುರ: ತಾಲೂಕಿನ ಕಲ್ಲೀಗೌಡನದೊಡ್ಡಿ ಗ್ರಾಮದಲ್ಲಿ ಜವರಾಯಿಗೌಡರ ಸೊಸೆ ಗ್ರಾಮದ ಯುವಕ ಜೊತೆ ಪರಾರಿಯಾದ ಹಿನ್ನೆಲೆಯ ಲ್ಲಿ ಯುವಕನ ತಂದೆ ತಾಯಿಯನ್ನು ವಿಷ ಕುಡಿಸಿ ಮರ್ಯಾದ ಹತ್ಯೆ ಮಾಡಿದ್ದ ಪ್ರಕರಣದ ಕುರಿತು ಮೂರನೆ ಆರೋಪಿಯನ್ನು ಸಾರ್ವಜನಿಕರೇ ಹಿಡಿದು ಪೋಲಿಸರ ವಶಕ್ಕೆ ಒಪ್ಪಿಸಿದ್ದಾರೆ.

ಸಾರ್ವಜನಿಕರು ಹಿಡಿದು ಹಲಗೂರು ಠಾಣೆಯಲ್ಲಿ ಒಪ್ಪಿಸಿದ ಆರೋಪಿಯನ್ನು ಕಲ್ಲೀ ಗೌಡನದೊಡ್ಡಿಯ ಜವರಾಯಿಗೌಡನ ಹೆಂಡತಿ ದುಂಡಮ್ಮ(65) ಎಂದು ಗುರುತಿಸಲಾಗಿದೆ. ಕನಕಪುರ ತಾಲೂಕಿನ ಉಯ್ಯಂಬಹಳ್ಳಿ ಹೋಬಳಿಯ ಕಲ್ಲೀಗೌಡನದೊಡ್ಡಿಯಲ್ಲಿ 6 ತಿಂಗಳ ಹಿಂದೆ ಜವರಾಯಿಗೌಡನ ಸೊಸೆಯು ಗ್ರಾಮದ ಯುವಕ ಜೊತೆ ಪರಾರಿಯಾಗಿದ್ದ ಪ್ರಕರಣದಲ್ಲಿ ಜವರಾಯಿಗೌಡರ ಕುಟುಂಬದ ಅನೇಕರು ಯುವಕನ ಮನೆಗೆ ನುಗ್ಗಿ ಆತನ ತಂದೆ ತಾಯಿಗೆ ಬಲವಂತವಾಗಿ ವಿಷ ಕುಡಿಸಿ ಸಾಯಿಸಿದ್ದ ಬಗ್ಗೆ ಕೋಡಿಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ಕೈಗೆತ್ತಿಕೊಂಡ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಮೂರನೆ ಆರೋಪಿ ಯನ್ನು ತಲೆಮರೆಸಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಸುಮ್ಮನಾ ಗಿದ್ದರು. ತಲೆಮರೆಸಿಕೊಂಡಿದ್ದ ಆರೋಪಿಗಳ ಬಗ್ಗೆ ಅನೇಕ ಬಾರಿ ಕೋಡಿಹಳ್ಳಿ ಪೋಲಿಸರಿಗೆ ಮತ್ತು ವೃತ್ತನೀರಿಕ್ಷಕರಿಗೆ ಮಾಹಿತಿ ನೀಡಿದರೂ ತಕ್ಷಣ ಆರೋಪಿಗಳಿಗೆ ಮಾಹಿತಿ ನೀಡಿ ತಪ್ಪಿಸಿಕೊಳ್ಳುವಂತೆ ಮಾಡಿ ನಂತರ ಶೋಧ ಮಾಡುವ ನಾಟಕ ಮಾಡುತ್ತಿದ್ದರು ಇದನ್ನು ಅರಿತ ಮೃತರ ಸಂಬಂಧಿಗಳು ಹಲಗೂರು ಬಳಿ ತೆರಳುತ್ತಿದ್ದಾಗ ರಸ್ತೆಯಲ್ಲಿ ಅಡ್ಡಹಾಕಿ ಆರೋಪಿ ಯನ್ನು ಹಿಡಿದು ಹಲಗೂರು ಠಾಣೆಗೆ ಒಪ್ಪಿಸಿ ಕನಕಪುರ ಪೋಲಿಸರಿಗೆ ವಿಷಯ ಮುಟ್ಟಿಸಿದ್ದರು.

ಹಲಗೂರು ಠಾಣೆಯಲ್ಲಿ ಪ್ರಕರಣದ ಆರೋಪಿ ಹಿಡಿದುಕೊಟ್ಟಿರುವ ಮಾಹಿತಿ ಪಡೆದ ಮೇಲಧಿಕಾರಿಗಳು ಹಲಗೂರು ಠಾಣೆಗೆ ತೆರಳಿ ಅಲ್ಲಿಂದ ವಶಕ್ಕೆ ಪಡೆದು ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ನ್ಯಾಯಾಧೀಶರ ಅನುಮತಿ ಪಡೆದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿಕೊಟ್ಟಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ