ರೇಷ್ಮೆಗೂಡು ಸಾಗಿಸಲು ಪೊಲೀಸರ ಕಿರುಕುಳ: ಪ್ರತಿಭಟನೆ

Team Udayavani, May 11, 2021, 11:50 AM IST

ರೇಷ್ಮೆಗೂಡು ಸಾಗಿಸಲು ಪೊಲೀಸರ ಕಿರುಕುಳ: ಪ್ರತಿಭಟನೆ

ಚನ್ನಪಟ್ಟಣ: ಖರೀದಿಸಿದ ರೇಷ್ಮೆಗೂಡು ಸಾಗಿಸಲು ಪೊಲೀಸರು ಅಡ್ಡಿಪಡಿಸಿ ದಂಡ ಹಾಕುತ್ತಾರೆ ಎಂದು ಆರೋಪಿಸಿ ಇಲ್ಲಿನ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೀಲರ್ಗಳು ಹರಾಜು ಪ್ರಕ್ರಿಯೆಯಿಂದ ದೂರ ಉಳಿದು ಪ್ರತಿಭಟಿಸಿದ ಘಟನೆ ನಡೆದಿದೆ.

ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ಆರಂಭವಾದ ವೇಳೆ ರೀಲರ್ಗಳು ರೈತರು ಮಾರುಕಟ್ಟೆ ಗ್ಯಾಲರಿಗೆ ಹಾಕಿದ್ದ ರೇಷ್ಮೆಗೂಡಿಗೆ ಹರಾಜು ಬಿಡ್‌ ಮಾಡದೇ ಮಾರುಕಟ್ಟೆ ಆವರಣದಲ್ಲಿ ತಟಸ್ಥರಾಗಿ ಉಳಿದರು. ಏಕಾಏಕಿ ರೇಷ್ಮೆ ಗೂಡಿನ ಹರಾಜು ಪ್ರಕ್ರಿಯೆಯಿಂದ ರೀಲರ್ಸ್ ಗಳು ದೂರ ಉಳಿದಿದ್ದರಿಂದ ಮಾರುಕಟ್ಟೆ ಅಧಿಕಾರಿಗಳು ಕೆಲ ಕಾಲ ವಿಚಲಿತರಾದರು.

ಇದರಿಂದ ಮಾರುಕಟ್ಟೆಗೆ ಗೂಡು ತಂದಿದ್ದ ರೈತರಲ್ಲೂ ಆತಂಕ ಮೂಡಿತ್ತು. ನಂತರ ರೀಲರ್ಗಳಬಳಿ ತೆರಳಿದ ಮಾರುಕಟ್ಟೆ ಸಹಾಯಕ ನಿರ್ದೇಶಕ ಹೊಂಬಾಳೇಗೌಡ, ಅಧಿಕಾರಿ ಸಿದ್ದರಾಜು ಕಾರಣ ಕೇಳಿದರು. ಇದಕ್ಕುತ್ತರಿಸಿದ ರೀಲರ್ಗಳು ನಾವು ಮಾರುಕಟ್ಟೆಯಲ್ಲಿ ಖರೀದಿ ಮಾಡಿ, ಗೂಡನ್ನು ತಮ್ಮ ಫಿಲೇಚರಿಗಳಿಗೆ ತೆಗೆದುಕೊಂಡು ಹೋಗಲು ಮಧ್ಯಾಹ್ನವಾಗುತ್ತದೆ. ಆ ವೇಳೆ ನಮ್ಮ ಮತ್ತು ಗೂಡು ಸಾಗಿಸುವ ಕಾರ್ಮಿಕರನ್ನು ಅಡ್ಡಗಟ್ಟುವ ಪೊಲೀಸರು ದಂಡ ವಿಧಿಸಿ, ಕಿರುಕುಳ ನೀಡುತ್ತಾರೆ. ಇದರಿಂದ ನಾವು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಘೋಷಿಸಿದರು.

ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ಹರಾಜು ಪ್ರಕ್ರಿಯೆ ಸ್ಥಗಿತಗೊಂಡಿದ್ದ ಸುದ್ದಿ ತಿಳಿದು ಸ್ಥಳಕ್ಕಾಗಿಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಆಪ್ತ ಸಹಾಯಕ ಕೆಂಚೇಗೌಡ, ರೀಲರ್ಗಳು ಮತ್ತು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಸಂಧಾನಕ್ಕೆ ರೀಲರ್ಗಳು ಒಪ್ಪದೇ ನೀವು ಈಗ ಹೇಳುತ್ತೀರೀ, ನಮಗೆ ನಾಳೆ ಆಗುವ ತೊಂದರೆಯನ್ನು ಯಾರು ತಡೆಗಟ್ಟುತ್ತಾರೆ. ನಾವು ಪೊಲೀಸರಿಂದ ಏಟು ತಿಂದು ಅವರಿಂದ ನಿಂದಿಸಿಕೊಂಡು ದಂಡ ಕಟ್ಟಬೇಕು. ಈಪುರುಷಾರ್ಥಕ್ಕೆ ನಾವು ಏಕೆ ಗೂಡು ಖರೀದಿಸಬೇಕೆಂದು ಪ್ರಶ್ನಿಸಿದರು.

ನಂತರ ಕೆಂಚೇಗೌಡ ದೂರವಾಣಿ ಮೂಲಕ ಸ್ಥಳೀಯ ಶಾಸಕರೂ ಆಗಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರ ಗಮನಕ್ಕೆ ತಂದರು.

ಮೊಬೈಲ್‌ನಲ್ಲಿ ರೀಲರ್ ಅಸೋಸಿಯೇಷನ್‌ ಮುಖಂಡರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾನು ತಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ನೀವು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿದ್ದರೇ ರೇಷ್ಮೆ ಬೆಳೆಗಾರರಿಗೆ ಸಮಸ್ಯೆಯಾಗುತ್ತದೆ. ತಾವು ಈಗಲೇ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಈ ಬಗ್ಗೆ ಅವರು ತಕ್ಷಣವೇ ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವುದಾಗಿ ಹೇಳಿದ್ದಾರೆ. ಯಾವುದೇ ರೀತಿಯಲ್ಲೂ ತಮಗೆ ತೊಂದರೆಯಾಗದೆಂದು ಖಚಿತ ಭರವಸೆ ನೀಡಿದರು.

ಕುಮಾರಸ್ವಾಮಿ ಮಾತಿನಿಂದ ತೃಪ್ತರಾದ ರೀಲರ್ಸ್ ಗಳು ನಂತರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಟಾಪ್ ನ್ಯೂಸ್

ತತ್ವಪದದಲ್ಲಿ ಶರೀಫ‌ರು ಜೀವಂತ: ಸಚಿವ ಸುನಿಲ್‌ ಕುಮಾರ್‌

ತತ್ವಪದದಲ್ಲಿ ಶರೀಫ‌ರು ಜೀವಂತ: ಸಚಿವ ಸುನಿಲ್‌ ಕುಮಾರ್‌

ಇಂಗ್ಲೆಂಡ್‌ 284; ಭಾರತಕ್ಕೆ 132 ರನ್‌ ಲೀಡ್‌: 4 ವಿಕೆಟ್‌ ಉರುಳಿಸಿದ ಸಿರಾಜ್‌

ಇಂಗ್ಲೆಂಡ್‌ 284; ಭಾರತಕ್ಕೆ 132 ರನ್‌ ಲೀಡ್‌: 4 ವಿಕೆಟ್‌ ಉರುಳಿಸಿದ ಸಿರಾಜ್‌

ವಿಂಬಲ್ಡನ್‌ ಕ್ವಾರ್ಟರ್‌ ಫೈನಲ್‌ಗೆ ತಜಾನಾ, ಬೌಜ್ಕೋವಾ, ನೀಮಿಯರ್‌

ವಿಂಬಲ್ಡನ್‌ ಕ್ವಾರ್ಟರ್‌ ಫೈನಲ್‌ಗೆ ತಜಾನಾ, ಬೌಜ್ಕೋವಾ, ನೀಮಿಯರ್‌

ಮಹಿಳಾ ಹಾಕಿ ವಿಶ್ವಕಪ್‌: ಭಾರತ-ಇಂಗ್ಲೆಂಡ್‌ ಡ್ರಾ

ಮಹಿಳಾ ಹಾಕಿ ವಿಶ್ವಕಪ್‌: ಭಾರತ-ಇಂಗ್ಲೆಂಡ್‌ ಡ್ರಾ

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೋವಿಡ್ ನಿಂದ ಗುಣಮುಖ

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೋವಿಡ್ ನಿಂದ ಗುಣಮುಖ

ನಾತಾಂಪ್ಟನ್‌ಶೈರ್‌ ವಿರುದ್ಧದ ಟಿ20 ಅಭ್ಯಾನಾತಾಂಪ್ಟನ್‌ಶೈರ್‌ ವಿರುದ್ಧದ ಟಿ20 ಅಭ್ಯಾಸ ಪಂದ್ಯ: ಹರ್ಷಲ್‌ ಪಟೇಲ್‌ ಅರ್ಧ ಶತಕಸ ಪಂದ್ಯ: ಹರ್ಷಲ್‌ ಪಟೇಲ್‌ ಅರ್ಧ ಶತಕ

ನಾತಾಂಪ್ಟನ್‌ಶೈರ್‌ ವಿರುದ್ಧದ ಟಿ20 ಅಭ್ಯಾಸ ಪಂದ್ಯ: ಹರ್ಷಲ್‌ ಪಟೇಲ್‌ ಅರ್ಧ ಶತಕ

ಉಡುಪಿ : ಮನೆಗೆ ನುಗ್ಗಿ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

ಉಡುಪಿ : ಮನೆಗೆ ನುಗ್ಗಿ ಕಳ್ಳತನ: ಇಬ್ಬರು ಆರೋಪಿಗಳ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವೈದ್ಯರ ಅವಿರತ ನಿಸ್ವಾರ್ಥ ಸೇವೆ ಅನನ್ಯವಾದದು

ವೈದ್ಯರ ಅವಿರತ ನಿಸ್ವಾರ್ಥ ಸೇವೆ ಅನನ್ಯವಾದದು

ಮಿಂಚಿನ ಕಾರ್ಯಾಚರಣೆ: ಬೈಕ್‌, ಪಂಪ್‌ಸೆಟ್‌ ಕಳ್ಳರ ಬಂಧನ

ಮಿಂಚಿನ ಕಾರ್ಯಾಚರಣೆ: ಬೈಕ್‌, ಪಂಪ್‌ಸೆಟ್‌ ಕಳ್ಳರ ಬಂಧನ

ನಾಗರಿಕರ ಸುಲಿಗೆಗೆ ನಿಂತ ನಗರಸಭೆ

ನಾಗರಿಕರ ಸುಲಿಗೆಗೆ ನಿಂತ ನಗರಸಭೆ

ಮಹಿಳೆಯರಿಗೆ ಕಾನೂನು ಅರಿವು ಅಗತ್ಯ; ಪರಶುರಾಮ ಕೋಪರ್ಡೆ

ಮಹಿಳೆಯರಿಗೆ ಕಾನೂನು ಅರಿವು ಅಗತ್ಯ; ಪರಶುರಾಮ ಕೋಪರ್ಡೆ

ನುಸಿರೋಗಕ್ಕೆ ತುತ್ತಾದ ತೆಂಗು ಬೆಳೆ

ನುಸಿರೋಗಕ್ಕೆ ತುತ್ತಾದ ತೆಂಗು ಬೆಳೆ

MUST WATCH

udayavani youtube

ಜಿಂಕೆಯನ್ನು ನುಂಗಿದ್ದ 80 ಕೆ.ಜಿ. ತೂಕದ 14 ಅಡಿ ಉದ್ದದ ಹೆಬ್ಬಾವು!

udayavani youtube

ಮದ್ರಸಾದಿಂದ ಮನೆಗೆ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…

udayavani youtube

ಎಂ.ಎಸ್ ಧೋನಿಯ 17 ವರ್ಷ ಹಿಂದಿನ ದಾಖಲೆ ಮುರಿದ ರಿಷಭ್ ಪಂತ್

udayavani youtube

ಮಲ್ಪೆಯಲ್ಲಿ ಲಂಗರು ಹಾಕಿದ್ದ ದೋಣಿಯ ಅವಶೇಷ ಕಾಪು ಪರಿಸರದಲ್ಲಿ ಪತ್ತೆ… ಅಪಾರ ನಷ್ಟ

udayavani youtube

ಹುಣಸೂರು : ಆಕಸ್ಮಿಕ ಬೆಂಕಿಗೆ ಲಕ್ಷಾಂತರ ರೂಪಾಯಿ ನಷ್ಟ… ಕಂಗಾಲಾದ ಮಾಲೀಕ

ಹೊಸ ಸೇರ್ಪಡೆ

ತತ್ವಪದದಲ್ಲಿ ಶರೀಫ‌ರು ಜೀವಂತ: ಸಚಿವ ಸುನಿಲ್‌ ಕುಮಾರ್‌

ತತ್ವಪದದಲ್ಲಿ ಶರೀಫ‌ರು ಜೀವಂತ: ಸಚಿವ ಸುನಿಲ್‌ ಕುಮಾರ್‌

ಇಂಗ್ಲೆಂಡ್‌ 284; ಭಾರತಕ್ಕೆ 132 ರನ್‌ ಲೀಡ್‌: 4 ವಿಕೆಟ್‌ ಉರುಳಿಸಿದ ಸಿರಾಜ್‌

ಇಂಗ್ಲೆಂಡ್‌ 284; ಭಾರತಕ್ಕೆ 132 ರನ್‌ ಲೀಡ್‌: 4 ವಿಕೆಟ್‌ ಉರುಳಿಸಿದ ಸಿರಾಜ್‌

ವಿಂಬಲ್ಡನ್‌ ಕ್ವಾರ್ಟರ್‌ ಫೈನಲ್‌ಗೆ ತಜಾನಾ, ಬೌಜ್ಕೋವಾ, ನೀಮಿಯರ್‌

ವಿಂಬಲ್ಡನ್‌ ಕ್ವಾರ್ಟರ್‌ ಫೈನಲ್‌ಗೆ ತಜಾನಾ, ಬೌಜ್ಕೋವಾ, ನೀಮಿಯರ್‌

ಮಹಿಳಾ ಹಾಕಿ ವಿಶ್ವಕಪ್‌: ಭಾರತ-ಇಂಗ್ಲೆಂಡ್‌ ಡ್ರಾ

ಮಹಿಳಾ ಹಾಕಿ ವಿಶ್ವಕಪ್‌: ಭಾರತ-ಇಂಗ್ಲೆಂಡ್‌ ಡ್ರಾ

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೋವಿಡ್ ನಿಂದ ಗುಣಮುಖ

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೋವಿಡ್ ನಿಂದ ಗುಣಮುಖ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.