ಮಹಿಳೆಯರಿಂದ ಆಸ್ತಿ ಅಳತೆ ಕಾರ್ಯ ಯಶಸ್ವಿ

Team Udayavani, Jun 13, 2020, 6:33 AM IST

ahile-asti

ರಾಮನಗರ: ನ್ಯಾಷನಲ್‌ ರೂರಲ್‌ ವುಮನ್‌ ಲೈವ್ಲಿವುಡ್‌ ಮಿಷನ್‌ (ಎನ್‌.ಎಲ್‌.ಆರ್‌.ಎಂ) ಅಡಿಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಂದ ಆಸ್ತಿ ಅಳತೆ ಮಾಡಿಸುವ ಪೈಲೆಟ್‌ ಪ್ರಾಜೆಕ್ಟ್ ಯಶಸ್ವಿಯಾಗಿದ್ದು, ಇತರ  ಜಿಲ್ಲೆಗಳಲ್ಲೂ ಅಳಡವಡಿಸಿಕೊಳ್ಳುವ ವಿಚಾರದಲ್ಲಿ ಡಿಸಿಎಂ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಆಶಯ ವ್ಯಕ್ತಪಡಿಸಿದರು.

ಆಸ್ತಿ ಅಳತೆಯಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಸ್ವಸಹಾಯ ಗುಂಪಿನ ಮಹಿಳೆಯರ ಜೊತೆ ತಾಲೂಕಿನ  ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಗುಪ್ಪ ಗ್ರಾಮದಲ್ಲಿ ನಡೆದ ಸಂವಾದ ಸಭೆಯಲ್ಲಿ ಮಾತನಾಡಿದರು. ರಾಜ್ಯದ ಗ್ರಾಮೀಣ ಜೀವನೋಪಾಯ ಇಲಾಖೆ ಅಡಿಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ  ಸದಸ್ಯೆಯರು ಮನೆ ಇತ್ಯಾದಿ ಆಸ್ತಿ ಅಳತೆ, ತೆರಿಗೆ ಅಂದಾಜು ಮಾಡುವ ಪೈಲಟ್‌ ಯೋಜನೆ ಕೈಗೊಳ್ಳಲಾಗಿತ್ತು.

ಗ್ರಾಮೀಣ ಭಾಗದ ಮಹಿಳೆಯರಿಗೆ ಹೊಸದೊಂದು ಜೀವನೋ ಪಾಯ ಕೈಗೊಳ್ಳಲು ಈ ಯೋಜನೆಯನ್ನು ಜಿಲ್ಲೆ ಯಲ್ಲಿ  ಜಾರಿಗೊಳಿಸಲಾಗಿತ್ತು. ಮಹಿಳೆಯರಿಂದ ಆಸ್ತಿ ಅಳತೆ, ತೆರಿಗೆ ಅಂದಾಜಿಸುವ ಕೆಲಸ ತೃಪ್ತಿಕರವಾ ಗಿದೆ ಎಂದು ಸಚಿವರು ಶ್ಲಾ ಸಿದರು. ಜಿಲ್ಲೆಯ ಕಂಚುಗಾರನಹಳ್ಳಿ, ಲಕ್ಷ್ಮೀಪುರ, ಭೈರಮಂಗಲ ಮತ್ತು ಬನ್ನಿಕುಪ್ಪೆ ಗ್ರಾಮ ಪಂಚಾಯತಿಗಳ  ವ್ಯಾಪ್ತಿಯಲ್ಲಿ ಮಹಿಳೆಯರು ಸರ್ವೇ ಕಾರ್ಯ ನಡೆಸುತ್ತಿದ್ದಾರೆ.

ಪ್ರತಿ ಮನೆಯ ಸರ್ವೇ ಕಾರ್ಯಕ್ಕೆ 50 ರೂ. ಶುಲ್ಕ ನಿಗದಿಯಾ ಗಿದೆ. ಈ ಪ್ರಯತ್ನ ಯಶಸ್ವಿಯಾಗಿದೆ. ಗ್ರಾಮೀಣಾಭಿವೃದಿಟಛಿ-ಪಂಚಾಯತ್‌ ರಾಜ್ ಸಚಿವಾಲಯದ ಜತೆ  ಚರ್ಚಿಸಿ, ಈ ಯೋಜನೆ ಯನ್ನು ರಾಜ್ಯವ್ಯಾಪಿ ವಿಸ್ತರಿಸಲಾಗುವುದು. ಈ ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸಭಾಷ್ಯ ಬರೆಯಲಾಗುವುದು ಎಂದರು. ಈ ಯೋಜನೆ ಜಾರಿಯಾದರೆ ಇನ್ನು ಮುಂದೆ ರಾಜ್ಯಾದ್ಯಂತ ಆಸ್ತಿಗಳ ಸರ್ವೇ,  ತೆರಿಗೆ ಅಂದಾಜನ್ನು ಮಹಿಳೆಯರೇ ಮಾಡಲಿದ್ದಾರೆ.

ಜತೆಗೆ ಮುಂದೆ ಆಸ್ತಿ ತೆರಿಗೆಯನ್ನೂ ಮಹಿಳೆಯರೇ ಸಂಗ್ರಹಿಸಲಿದ್ದಾರೆ. ಮಹಿಳೆಯರು ಮಾಸಿಕ ತಲಾ 15ರಿಂದ 20 ಸಾವಿರ ರೂಪಾಯಿ ಆದಾಯಗಳಿಸಲು ಸಾಧ್ಯವಾಗಿದೆ ಎಂದರು.  ಇದೇ ವೇಳೆ ಮಹಿಳೆಯರ ಜತೆ ಸಂವಾದ ನಡೆಸಿದರು. ಈ ವೇಳೆ ನೂತನ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಮಹಿಳೆಯರು ತಮ್ಮ ಅನು ಭವ ಹಂಚಿಕೊಂಡರು. ಅಭಿಯಾನದ ನಿರ್ದೇಶಕಿ ಡಾ.ಬಿ.ಆರ್‌.ಮಮತಾ ಮಾತನಾಡಿ, ಜಿಲ್ಲೆಯ  ಕಂದಾಯ ಇಲಾಖೆ ಮೂಲಕ ಆಸ್ತಿ ಅಳತೆ ನಡೆಸುವ ಮಹಿಳೆ ಯರಿಗೆ ತಾಂತ್ರಿಕ ನೆರವು ನೀಡಿತ್ತು. ಸುಮಾರು 3,116 ಮನೆಗಳನ್ನು ಆಳತೆ ಮಾಡಿದ್ದಾರೆ.

ಸಂಜೀವಿನಿ ಸ್ವಸಹಾಯ ಗುಂಪುಗಳ ಸದಸ್ಯರ ಪೈಕಿ 10ನೇ ತರಗತಿ ತೇರ್ಗಡೆಯಾಗಿರುವ  ಕ್ರಿಯಾಶೀಲ ಮಹಿಳೆಯರನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಿದ ನಂತರ ಈ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿ ದರು. ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ, ಜಿಪಂ ಸಿಇಒ ಇಕ್ರಂ, ಗ್ರಾಪಂ ಅಧ್ಯಕ್ಷ ನಂದಪ್ರಭಾ,  ಕೆಡಿಪಿ ಸದಸ್ಯ ಎಂ.ರುದ್ರೇಶ್‌, ತಾಪಂ ಭದ್ರಯ್ಯ ಮುಂತಾದವರು ಹಾಜರಿದ್ದರು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

ramangar

Ramanagara: ಬೈಕ್ ಅಪಘಾತ, ಕೆಎಸ್ಆರ್ ಟಿಸಿ ಕಂಡಕ್ಟರ್ ಸಾವು

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.