ದಲಿತರ ಮೇಲಿನ ದೌರ್ಜನ್ಯ ತಡೆಗೆ ಪ್ರತಿಭಟನೆ

Team Udayavani, Sep 27, 2019, 5:36 PM IST

ರಾಮನಗರ: ದಲಿತರು ಹೆಚ್ಚು ವಾಸಿಸುವ ಗ್ರಾಮಗಳು, ಬಡಾವಣೆಗಳು, ವಾರ್ಡುಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವುದರಲ್ಲಿ ಮತ್ತು ದಲಿತರ ಮೇಲೆ ದೌರ್ಜನ್ಯವನ್ನು ತಡೆಗಟ್ಟು ವಿಚಾರದಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರ ವಿಫ‌ಲವಾಗಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಕಂದಾಯಭವನ ಬಳಿ ಜಮಾಯಿಸಿದ ಕಾರ್ಯಕರ್ತರು ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕಿರ್ಣದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ನಿಂತಿಲ್ಲ. ಕೆಲವೆಡೆ ದಲಿತರು ಭಯದಿಂದಲೇ ಜೀವನ ಸಾಗಿಸಬೇಕಾದ ಪರಿಸ್ತಿತಿ ಇದೆ. ಜೀತ ಪದ್ಧತಿ, ಬಾಲ ಕಾರ್ಮಿಕ ಪದ್ಧತಿಗೆ ಮುಕ್ತಿ ದೊರಕಿಲ್ಲ ಎಂದು ಆರೋಪಿಸಿದರು.

ಹಲವಾರು ದಶಕಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ಭೂಮಿಗೆ ಹಕ್ಕುಪತ್ರ ನೀಡಲು ಸಹ ಅಧಿಕಾರಿಗಳು ವಿಳಂಬ ಧೋರಣೆ ತಳೆದಿದ್ದಾರೆ. ಸರ್ಕಾರ ಅನುಮತಿ ಕೊಟ್ಟಿದ್ದರೂ, ಸ್ಥಳೀಯವಾಗಿ ಅಧಿಕಾರಿಗಳು ತಮಗೆ ಹಕ್ಕು ಪತ್ರ ಕೊಡದಿರುವ ಬಗ್ಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಚನ್ನಪಟ್ಟಣದಲ್ಲಿ ಕಳೆದ 6-7 ವರ್ಷಗಳಿಂದ ಅಂಬೇಡ್ಕರ್‌ ಭವನ ಉದ್ಘಾಟಿಸಿಲ್ಲ, ಇಂದಿಗೂ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ದಲಿತರಿಗಾಗಿ ಸ್ಮಶಾನಕ್ಕೆ ಸ್ಥಳ ಗುರುತಿಸಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಕೆಲವು ಸರ್ಕಾರಿ ಇಲಾಖೆಗಳಲ್ಲಿ ಕೆಲವು ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ. 10 ವರ್ಷಗಳದಾರು ವರ್ಗಾವಣೆ ಆಗಲಿಲ್ಲ. ಹೀಗಾಗಿ ಕೆಲವು ಕಚೇರಿಗಳಲ್ಲಿ ತಾರತಮ್ಯ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು. ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಮನೆ ವಿತರಿಸುವ ಕಾರ್ಯದಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಮೈತ್ರಿ ಸರ್ಕಾರದಲ್ಲಿ ಕನಕಪುರ ತಾಲೂಕಿನಿಂದ ಬೇರ್ಪಡಿಸಿ ಹಾರೋಹಳ್ಳಿ ತಾಲೂಕು ರಚನೆಗೆ ಘೋಷಣೆಯಾಗಿತ್ತು. ತಕ್ಷಣ ತಾಲೂಕು ರಚನೆ ಕಾರ್ಯಗತವಾಗಬೇಕು ಎಂದರು.

ಸಮಿತಿ ರಾಜ್ಯಾಧ್ಯಕ್ಷ ಡಾ.ಸಿ. ಎಸ್‌ .ರಘು, ಜಿಲ್ಲಾಧ್ಯಕ್ಷ ಗುರು ಪ್ರಕಾಶ್‌, ಉಪಾದ್ಯಕ್ಷ ಪ್ರಭು, ಮುಖಂಡರಾದ ಅನಿಲ್‌, ಬೀರೇಶ್‌, ಚಿಕ್ಕ ಮಾಗಡಯ್ಯ, ರಾಮಪ್ರಸಾದ, ವಿನೋದ್‌ , ಸುರೇಶ್‌ ,ಕಾ ಡಣ್ಣ ಮತ್ತಿತರರು ಭಾಗವಹಿಸಿದ್ದರು. ಮನವಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಸ್ವೀಕರಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಚನ್ನಪಟ್ಟಣ: ಮಕ್ಕಳ ವಿಕಸನಕ್ಕೆ ಶಿಕ್ಷಣ ಬಹಳ ಮುಖ್ಯವಾಗಿದೆ. ಶಿಕ್ಷಕರಲ್ಲಿ ಶಿಸ್ತು, ಶ್ರದ್ಧೆ, ಸಮಯ ಪಾಲನೆಯ ಜೊತೆಗೆ ತಾಯ್ತನದ ಗುಣ ಇರಬೇಕು ಎಂದು ನಿವೃತ್ತ...

  • ಚನ್ನಪಟ್ಟಣ: ಸಾಹಿತ್ಯ ಭಾವನೆಗಳನ್ನು ಬೆಸೆಯುವ ಕೆಲಸ ಮಾಡುತ್ತದೆ. ಆ ಮೂಲಕ ಸಮಾಜವನ್ನು ಕಟ್ಟುತ್ತದೆ. ಭಾವಪೂರ್ಣವಾಗಿ ಗುರುಶಿಷ್ಯ ಸಂಬಂಧ ಬೆಳೆಸಿಕೊಳ್ಳುವ ಅವಕಾಶ...

  • ಕನಕಪುರ: ರಾಷ್ಟ್ರಮಟ್ಟದ ವಿಚಾರ ಸಂಕಿರಣ ಅ.15ರ ಮಂಗಳವಾರ ಎಸ್‌. ಕೆ. ಸ್ಮಾರಕ ಭವನದಲ್ಲಿ ನಡೆಯಲಿದೆ ಎಂದು ರೂರಲ್‌ ಕಾಲೇಜಿನ ಪ್ರಾಂಶುಪಾಲರಾದ ಗೋವಿಂದಯ್ಯ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ...

  • ಕುದೂರು: ಸರ್ಕಾರ 40 ಮೈಕ್ರಾನ್‌ಗಿಂತ ಕಡಿಮೆ ಇರುವ ತೆಳು ಪ್ಲಾಸ್ಟಿಕನ್ನು ಸಂಪೂರ್ಣ ನಿಷೇಧಿಸಿದ್ದರೂ ಪ್ಲಾಸ್ಟಿಕ್‌ ಬಳಕೆ ಮಾತ್ರ ಕುದೂರಿನಲ್ಲಿ ವ್ಯಾಪಕವಾಗಿ...

  • ಕನಕಪುರ: ಮನೆಗಳಲ್ಲಿ ಹೋಟೆಲ್‌ಗ‌ಳು ಬಾರ್‌ ಅಂಡ್‌ ರೆಸ್ಟೋರೆಂಟ್‌ ಕ್ಯಾಟರಿಂಗ್‌ ಬೀದಿಬದಿಯ ಕ್ಯಾಂಟೀನ್‌ಗಳು ಉತ್ಪಾದಿಸುವ ತ್ಯಾಜ್ಯವನ್ನು ಹೋಂ ಕಾಂಪೋಸ್ಟ್ ...

ಹೊಸ ಸೇರ್ಪಡೆ