ಎಂಪಿಸಿಎಸ್‌ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

Team Udayavani, Jun 2, 2019, 1:57 PM IST

ಮಾಗಡಿ ತಾಲೂಕಿನ ಉಡುವೆಗೆರೆ ಹಾಲು ಉತ್ಪಾದಕರು ಎಂಪಿಸಿಎಸ್‌ ಸದಸ್ಯರು ಡೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಮಾಗಡಿ: ಹಾಲು ಉತ್ಪಾದಕರ ಸಂಘದಲ್ಲಿ ಮತದಾನದ ಹಕ್ಕು ನೀಡುವಲ್ಲಿ ಅಕ್ರಮ ನಡೆದಿದೆ ಎಂದು ಉಡುವೆಗೆರೆ ಗ್ರಾಮದ ಹಾಲು ಉತ್ಪಾದಕರು ಎಂಪಿಸಿಎಸ್‌ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಉಡುವೆಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಚುನಾವಣೆ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ ಚುನಾವಣಾಧಿಕಾರಿ ಬಂದಿದ್ದು 12.30ಕ್ಕೆ. ಅಲ್ಲದೆ ಸಂಘದಲ್ಲಿ 140 ಸದಸ್ಯರಿದ್ದರೂ ಸಹ ಕೇವಲ 10 ಸದಸ್ಯರಿಗೆ ಮತದಾನದ ಹಕ್ಕು ನೀಡಲಾಗಿದೆ ಎಂದು ಆರೋಪಿಸಿ ಸದಸ್ಯರು ಸಂಘದ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಉಡುವೆಗೆರೆ ಎಂಪಿಸಿಎಸ್‌ನಲ್ಲಿ ಒಟ್ಟು 152 ಸದಸ್ಯರಿದ್ದು, 12 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 54 ಮಂದಿ ಸಂಘಕ್ಕೆ 180 ದಿನದಲ್ಲಿ 500 ಲೀಟರ್‌ ಹಾಲು ಪೂರೈಕೆ ಮಾಡಿಲ್ಲ. ಎಂಪಿಸಿಎಸ್‌ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಹಾಗೂ ಮತದಾನದ ಹಕ್ಕು ಪಡೆಯಲು 180 ದಿನಗಳಿಗೆ 500 ಲೀಟರ್‌ ಹಾಲು ಪೂರೈಕೆ ಮಾಡಿರಬೇಕು. 3 ಸಾಮಾನ್ಯ ಸಭೆಗಳಿಗೆ ಕಡ್ಡಾಯವಾಗಿ ಹಾಜರಿದ್ದವರಿಗೆ ಮಾತ್ರ ಮತದಾನದ ಹಕ್ಕು ನೀಡಬೇಕು ನಿಯಮಕ್ಕೆ ತಿದ್ದುಪಡಿ ಮಾಡಲಾದ ಹಿನ್ನಲೆಯಲ್ಲಿ ಕೇವಲ 10 ಮಂದಿಗೆ ಮಾತ್ರ ಮತದಾನದ ಹಕ್ಕು ನೀಡಲಾಗಿದೆ. ಸುಮಾರು 40ಕ್ಕೂ ಹೆಚ್ಚು ಹಾಲು ಉತ್ಪಾದಕರು ಮತದಾನದ ಹಕ್ಕನ್ನು ಕಳೆದು ಕೊಂಡಿರುವುದು ಹಾಲು ಉತ್ಪಾದಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಮಾಡಬಾಳ್‌ ತಾಪಂ ಸದಸ್ಯ ವೆಂಕಟೇಶ್‌ ಮಾತನಾಡಿ, ಎಂಪಿಸಿಎಸ್‌ ಬೈಲಾಗೆ ತಿದ್ದುಪಡಿಯಾಗಿರುವ ವಿಷಯವನ್ನು ಸಂಘದ ಕಾರ್ಯದರ್ಶಿ ಹಾಲು ಉತ್ಪಾದಕರ ಗಮನಕ್ಕೆ ತಂದಿಲ್ಲ. ಅಲ್ಲದೇ ಕಾರ್ಯದರ್ಶಿ ಸಂಘದಲ್ಲಿ ಹಾಲನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಈ ಬಗ್ಗೆ ಗ್ರಾಮದಲ್ಲಿ ಪಂಚಾಯ್ತಿ ನಡೆದಿತ್ತು. ಆ ಸಮಯದಲ್ಲಿ ಕಾರ್ಯದರ್ಶಿ ಗ್ರಾಮದ ಮುಖಂಡರ ಬಳಿ ಕ್ಷಮೆಯಾಚಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ನೂತನ ನಿರ್ದೇಶಕರು ಬಂದರೆ ತಮ್ಮ ಆಕ್ರಮಗಳು ಬೆಳಕಿಗೆ ಬರುತ್ತದೆ ಎನ್ನುವ ಉದ್ದೇಶದಿಂದ ಬೈಲಾಗೆ ತಿದ್ದುಪಡಿಯಾಗಿರುವ ವಿಷಯವನ್ನು ಮುಚ್ಚಿಟ್ಟಿರುವ ಕಾರ್ಯದರ್ಶಿ ತಮಗೆ ಬೇಕಾದವರಿಗೆ ಮಾತ್ರ ಮತದಾನದ ಹಕ್ಕು ಸಿಗುವಂತೆ ಮಾಡಿದ್ದಾರೆ. ಸಂಘದಲ್ಲಿ 13 ನಿರ್ದೇಶಕ ಸ್ಥಾನಗಳಿದ್ದರೂ ಸಹ ಕೇವಲ 10 ಮಂದಿ ಮತದಾನದ ಆರ್ಹತೆ ಪಡೆದಿದ್ದಾರೆ. ಇದರಿಂದ ನ್ಯಾಯ ಸಮ್ಮತ ಚುನಾವಣೆಯ ನಡೆಯಲು ಸಾಧ್ಯವಾಗದ ಕಾರಣ ಚುನಾವಣೆ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ವೆಂಕಟೇಶ್‌ ಆಗ್ರಹಿಸಿ ದರು. ಮಧ್ಯಾಹ್ನ 2 ಗಂಟೆಯವರೆಗೂ ಪ್ರತಿಭಟನಕಾರರು ಎಂಪಿಸಿಎಸ್‌ ಕಚೇರಿ ಮುಂಭಾಗದಲ್ಲಿ ಪ್ರತಿ ಭಟನೆ ನಡೆಸಿದರು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಚುನಾವಣಾಧಿಕಾರಿಗೆ ಕಚೇರಿಯೊಳಗೆ ತೆರಳಲು ಅವಕಾಶ ಮಾಡಿಕೊಟ್ಟರು. ಕೆಲವು ಸದಸ್ಯರು ನಿರ್ದೇಶಕ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದರು.

ರಾಜೇಶ್‌, ಮರಿದೇವರು, ಶಿವಲಿಂಗಯ್ಯ, ಬಸವರಾಜ್‌, ಮಹದೇವಯ್ಯ, ನಾಗರಾಜ್‌, ಸಿದ್ದರಾಜು, ಮಂಜುನಾಥ್‌, ಗಿರೀಶ್‌ ಕುಮಾರ್‌, ರಾಮಣ್ಣ, ಶಿವಣ್ಣ, ಪರಮೇಶ್‌, ಚನ್ನಬಸವಣ್ಣ, ಸಿದ್ದಲಿಂಗಣ್ಣ ಬಸವರಾಜ್‌ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಚನ್ನಪಟ್ಟಣ: ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಪ್ರಮುಖ ರಸ್ತೆಗಳಲ್ಲಿ ದನಗಳ ಕಾಟ ಅತಿಯಾಗಿದ್ದು, ರಸ್ತೆಯಲ್ಲಿ ಸಾಗಲು ವಾಹನ ಸವಾರರು ಹಾಗೂ ಪಾದಚಾರಿಗಳು...

  • ಕುದೂರು: ತಿಪ್ಪಸಂದ್ರ ಹೋಬಳಿ ಸಮೀಪವಿರುವ ಡಿಸಿಎಂ ಅಶ್ವತ್ಥ ನಾರಾಯಣ್‌ ತವರೂರಾದ ಚಿಕ್ಕಕಲ್ಯಾ ಗ್ರಾಮದ ರಸ್ತೆಯಲ್ಲಿ ಮಳೆ ಬಂದರೆ ಸಾಕು ರಸ್ತೆಯಲ್ಲಿ ನೀರು ನಿಂತು...

  • ಮಾಗಡಿ: ಶ್ರೀರಂಗ ಏತ ನೀರವಾರಿ ಯೋಜನೆಗೆ ಸಂಬಂಧಿಸಿದಂತೆ ರೈತರ ಭೂ ಸ್ವಾಧೀನ ಕುರಿತು ಹತ್ತು ದಿನಗಳೊಳಗೆ 1 ರಿಂದ 5 ದಾಖಲೆ ಪೂರ್ಣಗೊಳಿಸಿ ಪಟ್ಟಿ ನೀಡಬೇಕು ಎಂದು...

  • ಕುದೂರು: ಮಾಗಡಿ ತಾಲೂಕಿನ ವೀರೇಗೌಡನದೊಡ್ಡಿ ಗ್ರಾಪಂ ವ್ಯಾಪ್ತಿ ಮತ್ತ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಗಳಿಂದ ಕೂಡಿದ್ದು ಜನತೆ ಸಂಕಷ್ಟ ಎದುರಿಸುವಂತಾಗಿದೆ....

  • ತಿರುಮಲೆ ಶ್ರೀನಿವಾಸ್‌ ಮಾಗಡಿ: ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಿದ್ದು, ಇದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಸಂಚರಿಸಲು ತೀವ್ರ ತೊಂದರೆಯಾಗಿದೆ...

ಹೊಸ ಸೇರ್ಪಡೆ