ಇಂದಿನಿಂದ ರಾಘವೇಂದ್ರ ಸ್ವಾಮಿ ಆರಾಧನೆ ಮಹೋತ್ಸವ

Team Udayavani, Aug 16, 2019, 3:12 PM IST

ಮಾಗಡಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗೆ ವಿಶೇಷ ಅಲಂಕಾರ.

ಮಾಗಡಿ: ಗುರುರಾಜ ಸೇವಾ ಟ್ರಸ್ಟ್‌ ವತಿಯಿಂದ ರಾಘವೇಂದ್ರ ಸ್ವಾಮೀಜಿಗಳ 348ನೇ ಆರಾಧನೆ ಮಹೋತ್ಸವ ಆ.16ರಿಂದ ಆ.18ರವರೆಗೆ ನಡೆಯಲಿದೆ ಎಂದು ಬಿ.ಎಸ್‌.ಹಿರಿಯಣ್ಣ ತಿಳಿಸಿದ್ದಾರೆ.

ಆರಾಧನೆ ಮಹೋತ್ಸವದ ಪ್ರಯುಕ್ತ ಆ.16ರ ಶುಕ್ರವಾರ ಪೂರ್ವಾರಾಧನೆ, ಇದರ ಅಂಗವಾಗಿ ರಾಯರ ಬೃಂದಾವನಕ್ಕೆ ಫ‌ಲ ಪಂಚಾಮೃತ ಅಭಿಷೇಕ, ಕನಕಾಭಿಷೇಕ ಸೇವೆ, ವಿಶೇಷ ಅಲಂಕಾರ, ಮಂಗಳವಾಧ್ಯ ಸೇವೆ ನಂತರ ಮಧ್ಯಾಹ್ನ 11 ಗಂಟೆಗೆ ಗುರುಗಳ ಪಾದ ಪೂಜೆ, ಕನಕಾಭಿಷೇಕ, ವಿಶೇಷ ಪೂಜೆ, ಪ್ರಸಾದ ನಿಯೋಗ ನಡೆಯಲಿದೆ. ಸಂಜೆ ಶ್ರೀಮಾತಾ ಮಹಿಳಾ ಮಂಡಲಿ ವತಿಯಿಂದ ದೇವರ ನಾಮ, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದೆ.

ಶನಿವಾರ ರಾಯರ ಮಧ್ಯಾರಾಧನೆ: ಆ.17ರಂದು ನಡೆಯುವ ಮಧ್ಯಾರಾಧನೆ ಅಂಗವಾಗಿ ರಾಯರ ಬೃಂದಾವನಕ್ಕೆ ಫ‌ಲ ಪಂಚಾಮೃತ ಅಭಿಷೇಕ, ಕನಕಾಭಿಷೇಕ ಸೇವೆ, ವಿಶೇಷ ಅಲಂಕಾರ, ಸುಪ್ರಭಾತ ಸೇವೆ, ರಾಯರಿಗೆ ನಿರ್ಮಲ್ಯ ಸೇವೆ, ಮಧ್ಯಾಹ್ನ 11 ಗಂಟೆಗೆ ಗುರುರಾಯರ ರಥೋತ್ಸವ ಹಾಗೂ ವಿಶೇಷ ಪೂಜೆ, ಪ್ರಸಾದ ನಿಯೋಗ ನಡೆಯಲಿದೆ. ಸಂಜೆ ಶ್ವೇತ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

18ರಂದು ಉತ್ತರಾಧನೆ: ಆ.18ರ ಭಾನುವಾರ ನಡೆಯುವ ಉತ್ತರಾಧನೆ ಅಂಗವಾಗಿ ರಾಯರ ಬೃಂದಾವನಕ್ಕೆ ಫ‌ಲ ಪಂಚಾಮೃತ ಅಭಿಷೇಕ, ಕನಕಾಭಿಷೇಕ ಸೇವೆ, ಸುಪ್ರಭಾತ ಸೇವೆ, ಕನಕಭಿಷೇಕ ಪೂಜೆ ನಡೆಯಲಿದೆ. ಸಂಜೆ ಆರ್ಯವೈಶ್ಯ ಮಹಿಳಾ ಮಂಡಲಿ ವತಿಯಿಂದ ಲಲಿತಾ ಸಹಸ್ರನಾಮ ಪಾರಾಯಣ ಮತ್ತು ದೇವರ ನಾಮ ಹಾಗೂ ಪ್ರಕಾರೋತ್ಸವ ನೆರವೇರಲಿದೆ ಎಂದು ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ