Udayavni Special

ಜಿಲ್ಲಾಧಿಕಾರಿಗಳ ನಡೆ ಮೆಚ್ಚಿದ ಹಳ್ಳಿಗರು

ಅಧಿಕಾರಿ, ಗ್ರಾಮಸ್ಥರಲ್ಲಿ ಸಾರ್ಥಕತೆ ಮೂಡಿಸಿದ ಸರ್ಕಾರದ ನೂತನ ಕಾರ್ಯಕ್ರಮ

Team Udayavani, Feb 25, 2021, 7:58 PM IST

Ramangara Dc

ರಾಮನಗರ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎಂಬ ಸರ್ಕಾರದ ನೂತನ ಕಾರ್ಯಕ್ರಮ ಕಳೆದ ಫೆ.20ರಂದು ತಾಲೂಕಿನ ಕೈಲಾಂಚ ಹೋಬಳಿಯ ಲಕ್ಕೋಜನಹಳ್ಳಿಯಲ್ಲಿ ನಡೆದಿತ್ತು. ನೂತನ ಕಾರ್ಯ ಕ್ರಮ ಅಧಿಕಾರಿಗಳು ಮತ್ತು ಗ್ರಾಮಸ್ಥರು ಇಬ್ಬರಲ್ಲೂ ಸಾರ್ಥಕತೆ ಮನೆ ಮಾಡಿದೆ.

ನಾಗರಿಕರ ಮನೆ ಬಾಗಿಲಿಗೆ ಹೋಗಿದ್ದರಿಂದ ಪ್ರತಿಯೊಬ್ಬ ಅರ್ಜಿದಾರನೊಂದಿಗೂ ಮಾತನಾಡಲು ಅವ ಕಾಶವಾಗಿದೆ. ಅಲ್ಲದೆ ಕಾನೂನಿನ ಸೂಕ್ಷ್ಮ ಅಂಶಗಳ ಬಗ್ಗೆಯೂ ನಾಗರಿಕರಲ್ಲಿ ತಿಳವಳಿಕೆ ಮೂಡಿಸಲು ಸಹಾಯಕವಾಗಿದೆ ಎಂಬ ಅಭಿಪ್ರಾಯ ಅಧಿಕಾರಿವಲಯದಿಂದ ಬಂದರೆ, ತಾಲೂಕು ಕೇಂದ್ರಗಳಿಗೆ ಅಲೆ ಯುವುದು ತಪ್ಪಿದೆ ಎಂಬ ಅಭಿಪ್ರಾಯ ನಾಗರಿಕ ವಲಯದಿಂದ ವ್ಯಕ್ತವಾಗಿದೆ.

ಕೈಲಾಂಚ ಹೋಬಳಿಯ ಬನ್ನಿ ಕುಪ್ಪೆ(ಕೆ) ಗ್ರಾಪಂ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ 241 ಮನೆಗಳಿವೆ. 971  ಜನಸಂಖ್ಯೆ ಇದೆ. ಲಕ್ಕೋಜನಹಳ್ಳಿ ರೆವೆನ್ಯು ಗ್ರಾಮಕ್ಕೆ ನಂಜಾ ಪುರ ಹ್ಯಾಮ್ಲೆಟ್‌ ಗ್ರಾಮವೂ ಸೇರಿಕೊಳ್ಳು ತ್ತದೆ. ಇಲ್ಲಿ 72 ಮನೆಗಳಿದ್ದು, 861 ಮಂದಿ ವಾಸವಿದ್ದಾರೆ.

ಕಾರ್ಯಕ್ರಮದಲ್ಲಿ ಒಟ್ಟು 62 ಅರ್ಜಿಗಳು ಸ್ವೀಕೃತವಾಗಿದ್ದವು. ಹೆಚ್ಚಿನ ಅರ್ಜಿಗಳು ಪಿಂಚಣಿ ಮತ್ತು ಇ-ಖಾತೆಗೆ ಸಂಬಂಧಿಸಿದ್ದು, ತಮ್ಮ ವಯಸ್ಸು 65ಕ್ಕಿಂತ ಹೆಚ್ಚಾಗಿದೆ, ಹೀಗಾಗಿ ಪಿಂಚಣಿಯನ್ನು 600 ರಿಂದ 1000 ರೂ.ಗೆ ಏರಿಕೆ ಮಾಡಿಕೊಡಿ ಎಂಬ ಅರ್ಜಿ ಬಂದಿವೆ. ಇಂತಹ 6 ಅರ್ಜಿಗಳನ್ನು ತಹಸೀಲ್ದಾರರು ಸ್ಥಳದಲ್ಲೇ ಮಂಜೂರು ಮಾಡಿದ್ದಾರೆ. ಉಳಿದವನ್ನು ಒಂದು ವಾರದಲ್ಲಿ ವಿಲೇ ಮಾಡುವ ಭರವಸೆ ನೀಡಿದ್ದಾರೆ.

ಇ-ಖಾತೆ ವಿಳಂಬ ದೂರು, ಮನವರಿಕೆ: ಹೆಚ್ಚಿನ ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿದ್ದು, ಅರ್ಜಿ ಗಳು ಸ್ವೀಕೃತವಾಗಿವೆ. ಕೆಲವು ಅರ್ಜಿಗಳು ಇ-ಖಾತೆ ವಿಳಂಬವಾಗುತ್ತಿದೆ ಎಂದು ದೂರಲಾಗಿದೆ. ಈ ವಿಚಾರ ದಲ್ಲಿ ತಹಶೀಲ್ದಾರ್‌ ನರಸಿಂಹ ಮೂರ್ತಿ ಮತ್ತು ಬನ್ನಿಕುಪ್ಪೆ (ಕೆ) ಗ್ರಾಪಂ ಪಿಡಿಒ ಜಯಶಂಕರ್‌ ಪರಿಶೀ ಲನೆ ನಡೆಸಿದಾಗ ಪಹಣಿ ಇತ್ಯಾದಿ ದಾಖಲೆಗಳಲ್ಲಿ ಸದರಿ ಅರ್ಜಿದಾರರ ಹೆಸರು ಇರಲಿಲ್ಲ.

ಎರಡು-ಮೂರು ತಲೆಮಾರು ಹಿಂದೆ ಖರೀದಿಸಿದ್ದ ಭೂಮಿಯ ಒಡೆತನವನ್ನು ಆಗಲೆ ಬದಲಾಯಿಸಿಕೊಳ್ಳ ದಿರುವುದರಿಂದ ಹಾಲಿ ಅರ್ಜಿದಾರರ ಹೆಸರಾಗಲಿ, ಅಜ್ಜ, ತಂದೆ ಹೆಸರುಗಳು ದಾಖಲೆಗಳಲ್ಲಿ ಕಾಣದ ಕಾರಣ ಇ-ಖಾತೆ ಸಾಧ್ಯವಾಗುತ್ತಿಲ್ಲ.

ಅರ್ಜಿ ಸಲ್ಲಿಸಿದರೆ ಶೀಘ್ರ ಸ್ಪಂದನೆ: ಭೂಮಿಯ ಬಗೆಗಿನ ದಾಖಲೆಗಳನ್ನು ತಾಲೂಕು ಕಂದಾಯ ಇಲಾ ಖೆಗೆ ಮೊದಲು ಸಲ್ಲಿಸಿ ಖಾತೆ ಬದಲಾವಣೆ ಮಾಡಿಸಿದ ನಂತರ ಇ-ಖಾತೆ ಸಾಧ್ಯವಾಗುತ್ತದೆ ಎಂದು ಕಂದಾಯ ಅಧಿಕಾರಿಗಳು ಅರ್ಜಿದಾರರಿಗೆ ಮನವರಿಕೆ ಮಾಡಿಕೊಟ್ಟರು. ತಾಲೂಕು ಕಚೇರಿಗೆ ಅರ್ಜಿ ಸಲ್ಲಿ ಸಿದರೆ ಶೀಘ್ರದಲ್ಲೇ ಸ್ಪಂದಿಸುವುದಾಗಿ ತಹಶೀಲ್ದಾರರು ಭರವಸೆ ನೀಡಿದರು.

ಸರ್ವೆಗೆ ಸಂಬಂಧಿಸಿದಂತೆ ಕೆಲವು ಅರ್ಜಿಸಲ್ಲಿಕೆಯಾಗಿವೆ. ಈ ವಿಚಾರದಲ್ಲೂ ಅಧಿಕಾರಿಗಳು ಸಮಾಧಾನ ಚಿತ್ತದಿಂದಲೇ ಪರಿಶೀಲಿಸಿ, ಸರ್ವೆ ಸಂಬಂಧ ವಿಳಂಬಕ್ಕೆ ಸಮಜಾಯಿಷಿಯನ್ನು ನೀಡಿದ್ದಾರೆ.

ಟಾಪ್ ನ್ಯೂಸ್

ಧರ್ಮಶಾಲಾದಲ್ಲಿ ಪಾಕ್‌ ಮೊಬೈಲ್‌ ಸಿಗ್ನಲ್‌ ಪತ್ತೆ!

ಧರ್ಮಶಾಲಾ : ಕರೇರಿಯ ಬೆಟ್ಟ ಪ್ರದೇಶದಲ್ಲಿ ಪಾಕ್‌ ಮೊಬೈಲ್‌ ಸಿಗ್ನಲ್‌ ಪತ್ತೆ!

ರಾಮನವಮಿ ಉತ್ಸವ ಪ್ರಯುಕ್ತ ಶ್ರೀಕೃಷ್ಣಮಠದಲ್ಲಿ ಐದು ರಾಜ್ಯಗಳ 9 ಕಲಾವಿದರಿಂದ ಚಿತ್ರಕಲಾ ಶಿಬಿರ

ರಾಮನವಮಿ ಉತ್ಸವ ಪ್ರಯುಕ್ತ ಶ್ರೀಕೃಷ್ಣಮಠದಲ್ಲಿ ಐದು ರಾಜ್ಯಗಳ 9 ಕಲಾವಿದರಿಂದ ಚಿತ್ರಕಲಾ ಶಿಬಿರ

gjjsddgdf

ಮರಾಠಿಗರು ಪಾಕ್‌ನವರಲ್ಲ,ಲಷ್ಕರಿಗಳಲ್ಲ : ಸಂಜಯ ರಾವುತ್‌

ಸದವದ್

ರಾಜ್ಯದಲ್ಲಿ ಕೋವಿಡ್ ಮಹಾಸ್ಪೋಟ : ಇಂದು 14738 ಪ್ರಕರಣಗಳು

ಖಾಸಗೀಕರಣದ ಹೆಸರಿನಲ್ಲಿ ಮಂಗಳೂರು ವಿಮಾನ ನಿಲ್ದಾಣದ ನಿರ್ಲಕ್ಷ್ಯ : ಐವನ್‌ ಡಿ’ಸೋಜಾ ಆರೋಪ

ಖಾಸಗೀಕರಣದ ಹೆಸರಿನಲ್ಲಿ ಮಂಗಳೂರು ವಿಮಾನ ನಿಲ್ದಾಣದ ನಿರ್ಲಕ್ಷ್ಯ : ಐವನ್‌ ಡಿ’ಸೋಜಾ ಆರೋಪ

ಉಡುಪಿ-ಮಣಿಪಾಲವನ್ನು ದೇಶಕ್ಕೆ ಮಾದರಿ ನಗರವನ್ನಾಗಿಸಲು ಯತ್ನ: ಅನುಮೋದನೆಯೊಂದೇ ಬಾಕಿ

ಉಡುಪಿ-ಮಣಿಪಾಲವನ್ನು ದೇಶಕ್ಕೆ ಮಾದರಿ ನಗರವನ್ನಾಗಿಸಲು ಯತ್ನ : ಅನುಮೋದನೆಯೊಂದೇ ಬಾಕಿ

ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರನ್ನು ಸರ್ವನಾಶ ಮಾಡಲು ಹುನ್ನಾರ ನಡೆಸಿದೆ :ಬೈರೇಗೌಡ

ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರನ್ನು ಸರ್ವನಾಶ ಮಾಡಲು ಹುನ್ನಾರ ನಡೆಸಿದೆ :ಬೈರೇಗೌಡಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-9

ಪ್ರತಿಷ್ಠೆ ಕೈಬಿಟ್ಟು ಸಮಸ್ಯೆ ಬಗೆಹರಿಸಲಿ

15-8

ಬೇಡಿಕೆ ಈಡೇರಿಸದಿದ್ದರೆ ರಾಜೀನಾಮೆ ಕೊಡಿ

ghfhryhr

ಹಾವೇರಿ ಜಿಲ್ಲೆಯಲ್ಲಿ ಈ ಸಲ ಕುಡಿವ ನೀರಿಗಿಲ್ಲ  ಹಾಹಾಕಾರ

15-7

ಸಾಮಾಜಿಕ ನ್ಯಾಯದ ಮಹಾನ್‌ ಗ್ರಂಥ

ghjfghjtr

ಹಾವೇರಿ ಜಿಲ್ಲಾದ್ಯಂತ ಯುಗಾದಿ ಸಂಭ್ರಮ

MUST WATCH

udayavani youtube

ಮಂಗಳೂರು : ಐಟಿ ಕಛೇರಿಯಲ್ಲಿ ಆಕಸ್ಮಿಕವಾಗಿ ಬೆಂಕಿ

udayavani youtube

Covid 2ನೇ ಅಲೆನಾವು ಬೀದಿಗೆ ಬೀಳಬೇಕಾ?

udayavani youtube

ಚಾರುಕೊಟ್ಟಿಗೆ: ಸಂಪೂರ್ಣ ಬತ್ತಿ ಹೋದ ಕುರುವಾಡಿ ಮದಗ

udayavani youtube

ಭಾರತದಲ್ಲಿ 10 ದಿನಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಮತ್ತಷ್ಟು ಹೆಚ್ಚಳ

udayavani youtube

ವಾಹನ ಅಡ್ಡಗಟ್ಟಿ ಸುಲಿಗೆ ಪ್ರಕರಣ: ಮಂಗಳೂರಿನಲ್ಲಿ ಮತ್ತೆ ಆರು ಖದೀಮರ ಬಂಧನ

ಹೊಸ ಸೇರ್ಪಡೆ

15-9

ಪ್ರತಿಷ್ಠೆ ಕೈಬಿಟ್ಟು ಸಮಸ್ಯೆ ಬಗೆಹರಿಸಲಿ

15-8

ಬೇಡಿಕೆ ಈಡೇರಿಸದಿದ್ದರೆ ರಾಜೀನಾಮೆ ಕೊಡಿ

ಧರ್ಮಶಾಲಾದಲ್ಲಿ ಪಾಕ್‌ ಮೊಬೈಲ್‌ ಸಿಗ್ನಲ್‌ ಪತ್ತೆ!

ಧರ್ಮಶಾಲಾ : ಕರೇರಿಯ ಬೆಟ್ಟ ಪ್ರದೇಶದಲ್ಲಿ ಪಾಕ್‌ ಮೊಬೈಲ್‌ ಸಿಗ್ನಲ್‌ ಪತ್ತೆ!

ghfhryhr

ಹಾವೇರಿ ಜಿಲ್ಲೆಯಲ್ಲಿ ಈ ಸಲ ಕುಡಿವ ನೀರಿಗಿಲ್ಲ  ಹಾಹಾಕಾರ

15-7

ಸಾಮಾಜಿಕ ನ್ಯಾಯದ ಮಹಾನ್‌ ಗ್ರಂಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.