Udayavni Special

ಪ್ರವಾಸೋದ್ಯಮದಲ್ಲಿ ಉದ್ಯೋಗ ಸೃಷ್ಟಿಗೆ ಸುಧಾರಣಾ ಕ್ರಮ


Team Udayavani, Oct 22, 2019, 4:17 PM IST

rn-tdy-1

ಚನ್ನಪಟ್ಟಣ: ಪ್ರವಾಸೋದ್ಯಮದಲ್ಲಿ ಅತಿ ಹೆಚ್ಚು ಉದ್ಯೋಗ ನಿರ್ಮಾಣ ಸಾಧ್ಯ ಎಂಬ ಕಲ್ಪನೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗಿದ್ದು ಈ ನಿಟ್ಟಿನಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು.

ಪಟ್ಟಣದಲ್ಲಿ ಗೊಂಬೆ ಕಾರ್ಖಾನೆಗಳಿಗೆ ಸೋಮವಾರ ಭೇಟಿ ನೀಡಿ ಮಾಲೀಕರು ಮತ್ತು ಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದ ಅವರು, ವೀಸಾ ವ್ಯವಸ್ಥೆಯಲ್ಲಿ ಸುಧಾರಣೆ ಆದ ನಂತರ ಪ್ರವಾಸಿಗರ ಸಂಖ್ಯೆಶೇ.50 ಹೆಚ್ಚಿದೆ. ಕೌಶಲ್ಯ ಇರುವ ಜನರು ಹಾಗೂ ಪ್ರವಾಸಿಗರ ನಡುವೆ ಒಂದು ವೇದಿಕೆ ಸೃಷ್ಟಿಸಲಾಗುವುದು ಎಂದರು.

ಇಲ್ಲಿ ಕರಕುಶಲ ಗ್ರಾಮ ನಿರ್ಮಾಣವಾಗಿದೆ. ಉತ್ಪಾದನೆಯೂ ನಡೆಯುತ್ತಿದೆ ಪ್ರದರ್ಶನ ಹಾಗೂ ಮಾರಾಟ ಹೆಚ್ಚಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚು ಒತ್ತು ನೀಡಲಿದೆ. ಮುಖ್ಯವಾಗಿ ನಮ್ಮ ಸಂಸ್ಕ ತಿಯನ್ನು ಮನೆಮನೆಗೆ ತಲುಪಿಸಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ. ಸಂಸ್ಕ ೃತಿ ಉಳಿಸುವುದು ನಮ್ಮ ಕರ್ತವ್ಯ ಎಂದರು.

ಜಿಎಸ್ಟಿಯಿಂದ ತೊಂದರೆ ಆಗಿಲ್ಲ: ಜಿಎಸ್‌ಟಿ ಜಾರಿ ನಂತರ ಹಲವು ಸಣ್ಣ ಗೊಂಬೆಕಾರ್ಖಾನೆಗಳು ಮುಚ್ಚಿವೆ ಎಂಬ ಆರೋಪದಬಗ್ಗೆ ಪ್ರತಿಕ್ರಿಯಿಸಿದ ಅವರು, ವ್ಯಾಟ್‌ ವ್ಯವಸ್ಥೆ ಇದ್ದಾಗ ಶೇ.35- 80 ತೆರಿಗೆ ಇತ್ತು. ಈಗನೇರವಾಗಿ ತೆರಿಗೆ ಪಾವತಿ ಆಗುತ್ತಿದೆ. ಇದು ಸರಳ ದೇಶದುದ್ದಕ್ಕೂ ಈಗ ಮಾರುಕಟ್ಟೆ ಸೃಷ್ಟಿಯಾಗಿದೆ. ಹಿಂದೆ ಕರ್ನಾಟಕದ ವ್ಯಾಪ್ತಿಯಿಂದ ಹೊರಗೆ ಬಂದ ಕೂಡಲೇ ತೆರಿಗೆಪಾವತಿಸಬೇಕಿತ್ತು. ಈಗ ಅಂಥ ವಾತಾವರಣ ಇಲ್ಲ. ಇದು ಕ್ರಾಂತಿಕಾರಿ ತೆರಿಗೆ ಸುಧಾರಣೆ.ಬದಲಾವಣೆ. ಪ್ರಸ್ತುತ ಒಂದು ದೇಶ ಒಂದು ತೆರಿಗೆ ವ್ಯವಸ್ಥೆ ಇದೆ ಎಂದರು.

ಸಮಾಜ ಒಡೆಯುವವರು ನಾವಲ್ಲ: ಕಾಂಗ್ರೆಸ್‌ ಈಗ ಯಾರಿಗೂ ಬೇಡವಾದ ಪಕ್ಷ. ಸಂಪೂರ್ಣ ತಿರಸ್ಕಾರಕ್ಕೊಳಗಾಗಿದೆ. ಪ್ರಗತಿಪರ ಆಡಳಿತವನ್ನು ಅದು ಮಾಡಿಯೇ ಇಲ್ಲ. ಸಮಾಜ ಒಡೆಯುವುದು, ವಿಭಾಗ ಮಾಡೋದು, ಧರ್ಮದ ಮೇಲೆ, ಜಾತಿಯ ಮೇಲೆ ತುಷ್ಟೀಕರಣ ಮಾಡುವುದು, ಒಬ್ಬರ ಮೇಲೊಬ್ಬರನ್ನ ಎತ್ತಿಕಟ್ಟುವಂತಹ ಕೆಲಸಗಳನ್ನೇ ಮಾಡಿಕೊಂಡು ಬಂದಿದೆ. ಸಾಧನೆ ಮತ್ತು ಆಡಳಿತದ ಆಧಾರದ ಮೇಲೆ ಮತ ಕೇಳುವುದನ್ನು ಬಿಟ್ಟು ಬರೀ ಸಮಾಜ ಒಡೆಯುವ ಕೆಲಸದಲ್ಲೇ ಆ ಪಕ್ಷ ತೊಡಗಿದೆ ಎಂದು ಟೀಕಿಸಿದರು.

ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್‌ ಅವರಿಗೆ ಬಿಜೆಪಿ ಪಕ್ಷದಲ್ಲಿ ಒಳ್ಳೆಯ ಸ್ಥಾನಮಾನ ಇದೆ. ಅವರು ನಮ್ಮ ಪಕ್ಷದಲ್ಲೇ ಉನ್ನತ ಸ್ಥಾನದಲ್ಲಿರುತ್ತಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಹೋಗಲ್ಲ ಎಂದು ಪ್ರತಿಕ್ರಿಯಿಸಿದರು. ಯೋಗೇಶ್ವರ್‌ ಯಾವತ್ತೂ ಹಿಂದೆ ಸರಿಯುವ ವ್ಯಕ್ತಿಯಲ್ಲ, ಅವರು ಯಾವಾಗಲೂ ಮುಂದೆ ಇರುವಂಥವರು. ಅವರಿಗೆ ಒಳ್ಳೆಯ ಭವಿಷ್ಯವಿದೆ. ಮುಂದೆ ಒಳ್ಳೆಯ ನಾಯಕ ರಾಗುತ್ತಾರೆ, ದೊಡ್ಡ ಮಟ್ಟಕ್ಕೆ ಹೋಗುತ್ತಾರೆ ಎಂದು ಹೇಳಿದರು. ಜಿಲ್ಲಾ ಹಾಗೂ ತಾಲೂಕು ಬಿಜೆಪಿಯ ವಿವಿಧ ಘಟಕಗಳ ಅಧ್ಯಕ್ಷರು, ಪದಾಕಾರಿಗಳು, ಬೊಂಬೆ ಕಾರ್ಖಾನೆಗಳ ಮಾಲೀಕರು, ಸಿಬ್ಬಂದಿ ಹಾಜರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಚೀನ ಮೇಲೆ ಹದ್ದಿನ ಕಣ್ಣು ; ಲಡಾಖ್‌ನಲ್ಲಿ ರಾತ್ರಿಯಿಡೀ ಗರ್ಜಿಸುತ್ತಿರುವ ವಾಯುಪಡೆ

ಚೀನ ಮೇಲೆ ಹದ್ದಿನ ಕಣ್ಣು ; ಲಡಾಖ್‌ನಲ್ಲಿ ರಾತ್ರಿಯಿಡೀ ಗರ್ಜಿಸುತ್ತಿರುವ ವಾಯುಪಡೆ

ಕೋವಿಡ್‌ ನಿರ್ವಹಣೆಗೆ ಕೇಂದ್ರ ಅಧಿಕಾರಿಗಳ ಮೆಚ್ಚುಗೆ ; ಚಿಕಿತ್ಸೆಗೆ ಆದ್ಯತೆ ನೀಡಲು ಸೂಚನೆ

ಕೋವಿಡ್‌ ನಿರ್ವಹಣೆಗೆ ಕೇಂದ್ರ ಅಧಿಕಾರಿಗಳ ಮೆಚ್ಚುಗೆ ; ಚಿಕಿತ್ಸೆಗೆ ಆದ್ಯತೆ ನೀಡಲು ಸೂಚನೆ

ಗುತ್ತಿಗೆ ವೈದ್ಯರ ಖಾಯಂಗೆ ಸಮ್ಮತಿ ; ರಾಜೀನಾಮೆ ನಿರ್ಧಾರ ತಾತ್ಕಾಲಿಕ ಹಿಂದೆಗೆತ

ಗುತ್ತಿಗೆ ವೈದ್ಯರ ಖಾಯಂಗೆ ಸಮ್ಮತಿ ; ರಾಜೀನಾಮೆ ನಿರ್ಧಾರ ತಾತ್ಕಾಲಿಕ ಹಿಂದೆಗೆತ

ಆನ್‌ಲೈನ್‌ ಪಾಠಕ್ಕೆ ಅಸ್ತು ; ಶ್ರೀಧರ್‌ ನೇತೃತ್ವದ ತಜ್ಞರ ಸಮಿತಿಯಿಂದ 10 ಶಿಫಾರಸು

ಆನ್‌ಲೈನ್‌ ಪಾಠಕ್ಕೆ ಅಸ್ತು ; ಶ್ರೀಧರ್‌ ನೇತೃತ್ವದ ತಜ್ಞರ ಸಮಿತಿಯಿಂದ 10 ಶಿಫಾರಸು

ಕೋವಿಡ್ 19 ಕಡಿವಾಣ: ಕನ್ನಡಿಗ ಸ್ಟಾರ್ಟ್‌ಅಪ್‌ಗಳ ಸಾಧನೆ

ಕೋವಿಡ್ 19 ಕಡಿವಾಣ: ಕನ್ನಡಿಗ ಸ್ಟಾರ್ಟ್‌ಅಪ್‌ಗಳ ಸಾಧನೆ

ನಗರಗಳಿಗೆ 24 ತಾಸು ಕುಡಿಯುವ ನೀರು

ನಗರಗಳಿಗೆ 24 ತಾಸು ಕುಡಿಯುವ ನೀರು

24 ಸಿಐಎಸ್‌ಎಫ್‌ ಜವಾನರಿಗೆ ಸೋಂಕು

24 ಸಿಐಎಸ್‌ಎಫ್‌ ಜವಾನರಿಗೆ ಸೋಂಕು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

si-sonku

ಎಸ್‌ಐಗೆ ಸೋಂಕು, ಠಾಣೆ ಸೀಲ್‌ಡೌನ್‌

coivid-viphala

ಕೋವಿಡ್‌ 19 ನಿಯಂತ್ರಿಸುವಲ್ಲಿ ಸರ್ಕಾರ ವಿಫಲ

kanakapura locj

ಭಾನುವಾರದ ಲಾಕ್‌ಡೌನ್‌ ಯಶಸ್ವಿ

gomala-hrama

ಗೋಮಾಳಕ್ಕಾಗಿ ಗ್ರಾಮಸ್ಥರ ನಡುವೆ ವಿವಾದ

ani-hana

ಗಣಿಗಾರಿಕೆಯ ಹಣ ಮಾತನಾಡುತ್ತಿದೆ!

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani


ಹೊಸ ಸೇರ್ಪಡೆ

assistence

ಅಸಂಘಟಿತ ಕಾರ್ಮಿಕರಿಗೆ ನೆರವು

ಚೀನ ಮೇಲೆ ಹದ್ದಿನ ಕಣ್ಣು ; ಲಡಾಖ್‌ನಲ್ಲಿ ರಾತ್ರಿಯಿಡೀ ಗರ್ಜಿಸುತ್ತಿರುವ ವಾಯುಪಡೆ

ಚೀನ ಮೇಲೆ ಹದ್ದಿನ ಕಣ್ಣು ; ಲಡಾಖ್‌ನಲ್ಲಿ ರಾತ್ರಿಯಿಡೀ ಗರ್ಜಿಸುತ್ತಿರುವ ವಾಯುಪಡೆ

ಪಾಕ್‌ ಕೋವಿಡ್ ಅಸ್ತ್ರ ತಕ್ಕ ಪಾಠ ಕಲಿಸಬೇಕು

ಪಾಕ್‌ ಕೋವಿಡ್ ಅಸ್ತ್ರ ತಕ್ಕ ಪಾಠ ಕಲಿಸಬೇಕು

ugar cane

ಕಬ್ಬು ಬೆಳೆಗಾರರಿಗೆ ತೊಂದರೆ ಆಗಲು ಬಿಡುವುದಿಲ್ಲ

throgh

ದ್ವಿಶತಕ ತಲುಪಿದ ಸೋಂಕಿತರ ಸಂಖ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.