Udayavni Special

ಡಿಸಿಎಂ ತವರೂರಲ್ಲಿ ರಸ್ತೆಯದ್ದೇ ಸಮಸ್ಯೆ

Team Udayavani, Oct 20, 2019, 5:55 PM IST

rn-tdy-1

ಕುದೂರು: ತಿಪ್ಪಸಂದ್ರ ಹೋಬಳಿ ಸಮೀಪವಿರುವ ಡಿಸಿಎಂ ಅಶ್ವತ್ಥ ನಾರಾಯಣ್‌ ತವರೂರಾದ ಚಿಕ್ಕಕಲ್ಯಾ ಗ್ರಾಮದ ರಸ್ತೆಯಲ್ಲಿ ಮಳೆ ಬಂದರೆ ಸಾಕು ರಸ್ತೆಯಲ್ಲಿ ನೀರು ನಿಂತು ಕೆಸರು ಗದ್ದೆಯಾಗಿ ಓಡಾಡಲಾಗದ ಪರಿಸ್ಥಿತಿ ಎದುರಾಗುತ್ತದೆ.

ತಿಪ್ಪಸಂದ್ರ ಹೋಬಳಿ ಸಂಕೀಘಟ್ಟ ಗ್ರಾಪಂ ವ್ಯಾಪ್ತಿಯ ಚಿಕ್ಕಕಲ್ಯಾ ಗ್ರಾಮ ಕಂದಾಯ ದಾಖಲೆಗೆ ಸೇರಿದಾಗಿನಿಂದಲೂ ಡಾಂಬರು ಭಾಗ್ಯ ಕಾಣದೆ ದುರ್ಗತಿಗೆ ಬಂದಿದೆ. ಚಿಕ್ಕಕಲ್ಯಾ ಗ್ರಾಮದಿಂದ ಸುಮಾರು 3 ಕಿ.ಮೀ ರಸ್ತೆ ಸ್ಥಿತಿ ಚಿಂತಾಜನಕವಾಗಿದ್ದು ಇಲ್ಲಿನ ಜನರಿಗೆ ರಸ್ತೆ ಸವಾಲಾಗಿ ಮಾರ್ಪಟ್ಟಿದೆ.

ಹೈನುಗಾರಿಕೆ ಕಿರಿಕಿರಿ: ಹೆಚ್ಚಾಗಿ ಹೈನುಗಾರಿಕೆ ನೆಚ್ಚಿಕೊಂಡಿರುವ ಮಹಿಳೆಯರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ಹಾಕಲು ಬರಬೇಕೆಂದರೆ ಕೆಸರು ರಸ್ತೆಯಲ್ಲೇ ಜೀವ ಬಿಗಿ ಹಿಡಿದುಕೊಂಡು ಬರಬೇಕಾದ ಪರಿಸ್ಥಿತಿ ಬಂದೋದಗಿದೆ. ತಲೆ ಮೇಲೆ ಹಾಲಿನ ಕ್ಯಾನ್‌ ಹಿಡಿದು ಒಂದೆರೆಡು ಕಿ.ಮೀ ನಡೆಯುವ ಮಹಿಳೆಯರು ಇಲ್ಲಿನ ರಸ್ತೆಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಾರೆ. ಇನ್ನು ಬೇಸಿಗೆ , ಚಳಿಗಾಲದಲ್ಲೂ ಈ ರಸ್ತೆ ಗುಂಡಿಗಳದ್ದೇ ಕಾರು ಬಾರಾಗಿ ವಾಹನ ಸಂಚಾರಕ್ಕೆ ತಡೆ ತಂದಿದೆ.

ತಲೆ ಕೆಡಿಸಿಕೊಳ್ಳದ ನಾಯಕರು: ಇನ್ನು ರಾತ್ರಿ ವೇಳೆ ವಾಹನಗಳಿಂದ ಬಿದ್ದು ಸವಾರರು ಗಾಯಗೊಂಡಿರುವ ಘಟನೆ ಗಳು ಸಾಕಷ್ಟಿವೆ. ತುರ್ತು ವೇಳೆಯಲ್ಲಿ ಯಥಾಸ್ಥಿತಿ ಗರ್ಭೀಣಿಯರು , ವೃದ್ಧರು, ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲು ನರಕಯಾತನೆ ಪಡಬೇಕಾಗಿದೆ. ಇಲ್ಲಿಯವರೆಗೂ ಯಾವೊಬ್ಬ ಜನಪ್ರತಿನಿಧಿಗಳು ಇದರ ಬಗ್ಗೆ ತಲೆ ಕೆಡೆಸಿಕೊಂಡಿಲ್ಲ.

ಕಾಳಜಿಯೇ ಇಲ್ಲ: ಸಂಕೀಘಟ್ಟ ಗ್ರಾಪಂಗೆ ಸೇರುವ ಈ ಹಳ್ಳಿ ರಸ್ತೆ ರಿಪೇರಿ ಮಾಡುವ ಗೋಜಿಗೆ ಸ್ಥಳೀಯ ಜನ ಪ್ರತಿನಿಧಿಗಳು ಹೋಗಿಲ್ಲ. ಇದೇ ಭಾಗದಿಂದ ಆಯ್ಕೆಯಾದ ಜಿಪಂ ಸದಸ್ಯರು ರಸ್ತೆಯಲ್ಲಿ ದಿನ ನಿತ್ಯ ಓಡಾಡುತ್ತಾರೆ. ಕನಿಷ್ಠ ಪಕ್ಷ ಈ ಭಾಗದಲ್ಲಿ ಜನರು ತನಗೆ ಮತ ಹಾಕಿ ಚುನಾಯಿಸಿದ್ದಾರೆ. ಈ ಭಾಗದ ಜನರ ಅಭಿವೃದ್ಧಿಗೆ ರಸ್ತೆ ಅಭಿವೃದ್ಧಿಪಡಿಸಬೇಕು ಎನ್ನುವ ಕಾಳಜಿಯೇ ಇಲ್ಲದಂತಾಗಿದೆ. ಥ್

ಜೀವ ಬಿಗಿ ಹಿಡಿದು ಸಂಚರಿಸಬೇಕು: ತಿಪ್ಪಸಂದ್ರ ಹೋಬಳಿ ಹಿಂದುಳಿದ ಹೋಬಳಿ ಕೇಂದ್ರ ಕುದೂರಿಗೆ ಹೋಲಿಸಿದ್ದಲ್ಲಿ ಅಷ್ಟೇನು ಪ್ರಗತಿಯಾಗಿಲ್ಲ. ಆದ ಕಾರಣ ಪ್ರತಿ ನಿತ್ಯ ಸಾವಿರಾರು ಮಂದಿ ಶಿಕ್ಷಣ, ವ್ಯಾಪಾರ, ವೈದ್ಯಕೀಯ ಸೌಲಭ್ಯಕ್ಕೆ ಕುದೂರನ್ನೇ ಅವಲಂಬಿಸಿದ್ದಾರೆ. ನಿತ್ಯ ಗುಂಡಿ ರಸ್ತೆಯಲ್ಲಿ ಜೀವ ಬಿಗಿ ಹಿಡಿದು ಸಂಚರಿಸುತ್ತಿದ್ದಾರೆ. ಇನ್ನಾದರೂ ಜಿಪಂ ಆಗಲಿ, ಲೋಕೋಪಯೋಗಿ ಇಲಾಖೆಯಾಗಲಿ ,ಜನ ಪ್ರತಿನಿಧಿಗಳು ಎಚ್ಚೆತ್ತುಕೊಂಡು ಈ ರಸ್ತೆಗೆ ಡಾಂಬರು ಹಾಕಿಸಿ ಮುಕ್ತಿ ಒದಗಿಸುವರೆ ಎಂದು ಕಾದು ನೋಡಬೇಕಾಗಿದೆ.

-ಕೆ.ಎಸ್‌.ಮಂಜುನಾಥ್

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಕಾರು: ಸ್ಥಳದಲ್ಲೇ ಇಬ್ಬರು ಸಾವು

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಕಾರು: ಸ್ಥಳದಲ್ಲೇ ಇಬ್ಬರು ಸಾವು

ಡಿಸಿಎಂ ಗೋವಿಂದ್ ಕಾರಜೋಳ ಪುತ್ರನಿಗೆ ಕೋವಿಡ್ ಸೋಂಕು ದೃಢ

ಡಿಸಿಎಂ ಗೋವಿಂದ್ ಕಾರಜೋಳ ಪುತ್ರನಿಗೆ ಕೋವಿಡ್ ಸೋಂಕು ದೃಢ

priyanka-gandhi-780×470

ರಾಮ ಎಲ್ಲರೊಂದಿಗೂ ಇದ್ದಾನೆ; ಜೈ ಶ್ರೀರಾಮ್‌: ಪ್ರಿಯಾಂಕಾ ಗಾಂಧಿ

ರಾಮ ಮಂದಿರ ಭೂಮಿ ಪೂಜೆ: ಉಡುಪಿ ಜಿಲ್ಲೆಯಲ್ಲಿ ಸೆಕ್ಷನ್ 144, ಮದ್ಯ ಮಾರಾಟಕ್ಕಿಲ್ಲ ಅನುಮತಿ

ರಾಮ ಮಂದಿರ ಭೂಮಿ ಪೂಜೆ: ಉಡುಪಿ ಜಿಲ್ಲೆಯಲ್ಲಿ ಸೆಕ್ಷನ್ 144, ಮದ್ಯ ಮಾರಾಟಕ್ಕಿಲ್ಲ ಅನುಮತಿ

1990ರಲ್ಲಿ ನಡೆದಿದ್ದೇನು? ರಾಮಮಂದಿರ ನಿರ್ಮಾಣ-ಪ್ರಾಣ ತೆತ್ತ “ 16 ಕರಸೇವಕರಿಗೆ” ದೊರೆತ ಗೌರವ

1990ರಲ್ಲಿ ನಡೆದಿದ್ದೇನು? ರಾಮಮಂದಿರ ನಿರ್ಮಾಣ-ಪ್ರಾಣ ತೆತ್ತ “ 16 ಕರಸೇವಕರಿಗೆ” ದೊರೆತ ಗೌರವ

ಚಿಕ್ಕಮಗಳೂರಿನ‌ ನಕ್ಸಲ್ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಚಿಕ್ಕಮಗಳೂರಿನ‌ ನಕ್ಸಲ್ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

parasaran

ಅಯೋಧ್ಯೆಗಾಗಿ ಜೀವನವನ್ನೇ ಮುಡಿಪಾಗಿಟ್ಟ 93 ವರ್ಷದ ಪರಾಶರಣ್‌
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಕ್ಕಳಿಗೆ ದೇಶದ ಪರಂಪರೆ ತಿಳಿಸಿ

ಮಕ್ಕಳಿಗೆ ದೇಶದ ಪರಂಪರೆ ತಿಳಿಸಿ

ದೇಶದ ಜನಸಂಖ್ಯೆ ನಿಯಂತ್ರಣ ಅವಶ್ಯ

ದೇಶದ ಜನಸಂಖ್ಯೆ ನಿಯಂತ್ರಣ ಅವಶ್ಯ

ರೈತರಿಗೆ ಎಣ್ಣೆ ಕಾಳು ಬೇಸಾಯ ತರಬೇತಿ

ರೈತರಿಗೆ ಎಣ್ಣೆ ಕಾಳು ಬೇಸಾಯ ತರಬೇತಿ

ನಿಧಿ ಶೋಧದಲ್ಲಿ ಅಧಿಕಾರಿಗಳು: ಆರೋಪ

ನಿಧಿ ಶೋಧದಲ್ಲಿ ಅಧಿಕಾರಿಗಳು: ಆರೋಪ

ಲಕ್ಷ್ಮೀದೇವಿ ಅಮ್ಮನಿಗೆ ವಿಶೇಷ ಅಲಂಕಾರ

ಲಕ್ಷ್ಮೀದೇವಿ ಅಮ್ಮನಿಗೆ ವಿಶೇಷ ಅಲಂಕಾರ

MUST WATCH

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farm

udayavani youtube

ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ | Sushant Singh Rajput Death Mystery

udayavani youtube

“ಕಟ್ಟಿಹುದು ಬುತ್ತಿ ಉಣಲುಂಟು ತಾಳು” ಎಂದು ಜೀವನ ಪಾಠ | Life Lessons by Farmer

udayavani youtube

ಮಂಗೋಶ್ಟಿನ್ ಬೆಳೆಯುವ ಸೂಕ್ತ ವಿಧಾನ | How To Grow Mangosteen Fruit |FULL INFORMATIONಹೊಸ ಸೇರ್ಪಡೆ

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಕಾರು: ಸ್ಥಳದಲ್ಲೇ ಇಬ್ಬರು ಸಾವು

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಕಾರು: ಸ್ಥಳದಲ್ಲೇ ಇಬ್ಬರು ಸಾವು

ಡಿಸಿಎಂ ಗೋವಿಂದ್ ಕಾರಜೋಳ ಪುತ್ರನಿಗೆ ಕೋವಿಡ್ ಸೋಂಕು ದೃಢ

ಡಿಸಿಎಂ ಗೋವಿಂದ್ ಕಾರಜೋಳ ಪುತ್ರನಿಗೆ ಕೋವಿಡ್ ಸೋಂಕು ದೃಢ

priyanka-gandhi-780×470

ರಾಮ ಎಲ್ಲರೊಂದಿಗೂ ಇದ್ದಾನೆ; ಜೈ ಶ್ರೀರಾಮ್‌: ಪ್ರಿಯಾಂಕಾ ಗಾಂಧಿ

ರಾಮ ಮಂದಿರ ಭೂಮಿ ಪೂಜೆ: ಉಡುಪಿ ಜಿಲ್ಲೆಯಲ್ಲಿ ಸೆಕ್ಷನ್ 144, ಮದ್ಯ ಮಾರಾಟಕ್ಕಿಲ್ಲ ಅನುಮತಿ

ರಾಮ ಮಂದಿರ ಭೂಮಿ ಪೂಜೆ: ಉಡುಪಿ ಜಿಲ್ಲೆಯಲ್ಲಿ ಸೆಕ್ಷನ್ 144, ಮದ್ಯ ಮಾರಾಟಕ್ಕಿಲ್ಲ ಅನುಮತಿ

1990ರಲ್ಲಿ ನಡೆದಿದ್ದೇನು? ರಾಮಮಂದಿರ ನಿರ್ಮಾಣ-ಪ್ರಾಣ ತೆತ್ತ “ 16 ಕರಸೇವಕರಿಗೆ” ದೊರೆತ ಗೌರವ

1990ರಲ್ಲಿ ನಡೆದಿದ್ದೇನು? ರಾಮಮಂದಿರ ನಿರ್ಮಾಣ-ಪ್ರಾಣ ತೆತ್ತ “ 16 ಕರಸೇವಕರಿಗೆ” ದೊರೆತ ಗೌರವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.