ಸರ್ಕಾರಿ ನೌಕರರ ಮೌನ ಪ್ರತಿಭಟನೆ

Team Udayavani, Jul 11, 2020, 6:37 AM IST

sarkari-mouna

ರಾಮನಗರ: ಬಂಗಾರಪೇಟೆ ತಾಲೂಕು ತಹಶೀಲ್ದಾರ್‌ ಚಂದ್ರಮೌಳೇಶ್ವರ ಹತ್ಯೆ ಖಂಡಿಸಿ ನಗರದಲ್ಲಿ ಕರ್ನಾಟಕ ಸರ್ಕಾರಿ ನೌಕರರ ಸಂಘ ಹಾಗೂ ಕರ್ನಾಟಕ ಕಂದಾಯ ನೌಕರರ ಸಂಘದ ಜಿಲ್ಲಾ ಘಟಕ ಗಳು ಮೌನ ಪ್ರತಿಭಟನೆ  ನಡೆಸಿದವು. ನಗರದ ಸರ್ಕಾರಿ ಕಚೇರಿಗಳ ಸಂಕೀರ್ಣದ (ಡೀಸಿ ಕಚೇರಿ) ಆವರಣದಲ್ಲಿ ಜಮಾಯಿಸಿ ದ ಜಿಲ್ಲಾ ಸಂಘದ ಪದಾಧಿಕಾರಿಗಳು ತಮ್ಮ ಆಕ್ರೋಶ ಹೊರಹಾಕಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿ ಕಾರಿಗಳು ಮೃತ  ತಹಶೀಲ್ದಾರ್‌ ಚಂದ್ರ ಮೌಳೇಶ್ವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ವೇಳೆ ತೋಳಿಗೆ ಕಪ್ಪುಬಟ್ಟೆ ಕಟ್ಟಿದ್ದ ನೂರಾರು ಸರ್ಕಾರಿ ನೌಕರರು ಅಗಲಿ ದ ಅಧಿಕಾರಿಗೆ ಶ್ರದಾಂಜಲಿ ಅರ್ಪಿಸಿದರು. ನಂತರ ಸುದ್ದಿಗಾರರೊಂದಿಗೆ  ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಕೆ.ಬೈರಲಿಂಗಯ್ಯ ಮಾತನಾಡಿದರು.

ಕೋಲಾರ ಜಿಲ್ಲೆಯ ಬಂಗಾರುಪೇಟೆ ತಾಲೂಕು ತಹಶೀಲ್ದಾರ್‌ ಬಿ.ಕೆ.ಚಂದ್ರಮೌಳೇಶ್ವರ ಅವರು ಬಂಗಾರುಪೇಟೆ ತಾಲೂಕು ಕಾಮಸಮುದ್ರ  ಹೋಬಳಿ, ತೋಪನಹಳ್ಳಿ ಗ್ರಾಮದ ರಾಮಮೂರ್ತಿ ಹಗೂ ವೆಂಕಟಾ ಪತಿ ಎಂಬುವರ ಜಮೀನು ವ್ಯಾಜ್ಯದ ಸಂಬಂಧ ಪೊಲೀಸ್‌ ರಕ್ಷಣೆಯಲ್ಲಿ ಜಂಟಿ ಸರ್ವೇ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಆರೋಪಿ ವೆಂಕಟಪತಿ, ಪೊಲೀಸರ ಸಮ್ಮುಖದಲ್ಲೇ ಏಕಾಏಕಿ ತಹಶೀಲ್ದಾರರನ್ನು ಚಾಕುವಿ ನಿಂದ ಇರಿದು ಹತ್ಯಗೈದಿದ್ದಾರೆ.

ಈ ಕೃತ್ಯವನ್ನು ರಾಜ್ಯದ ಎಲ್ಲ ಸರ್ಕಾರಿ ನೌಕರರು ತೀವ್ರವಾಗಿ ಖಂಡಿಸಿರುವುದಾಗಿ ತಿಳಿಸಿದರು. ರಾಜ್ಯದಲ್ಲಿ ಕಂದಾಯ, ಭೂ ಮಾಪನ,  ಗ್ರಾಮೀಣಾಭಿವೃದಿಟಛಿ ಮತ್ತು ಪಂಚಾಯತ್‌  ರಾಜ್‌ ಇಲಾಖೆ, ಆರೋಗ್ಯ ಇಲಾಖೆ ಸೇರಿ ದಂತೆ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿ ಗಳು ಕರ್ತವ್ಯ ನಿರ್ವಹಿಸುವ ವೇಳೆ ಇಂತಹ ಘಟನೆಗಳು ಆಗಿಂದಾಗ್ಗೆ ನಡೆಯುತ್ತಿದೆ. ಇಂತಹ ಘಟನೆ  ತಡೆಯಲು ರಾಜ್ಯದಲ್ಲಿ ಕಠಿಣ ಕಾನೂನು ಜಾರಿಯಾಗಬೇಕಾಗಿದೆ ಎಂದು ಆಗ್ರಹಿಸಿದರು.

ಕೃತ್ಯ ಎಸಗಿದ ಅಪರಾಧಿಯನ್ನು ತಕ್ಷಣ ಬಂಧಿಸಬೇಕು. ಮೃತರ ಕುಟುಂಬಕ್ಕೆ ಗರಿಷ್ಠ ಮಟ್ಟದ ಪರಿಹಾರ ನೀಡಬೇಕು. ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದ  ನೇಮಕಾತಿ ನೀಡಬೇಕು. ಸರ್ಕಾರಿ ನೌಕರರು ನಿರ್ಭೀತಿಯಿಂದ ಕಾರ್ಯ ನಿರ್ವಹಿಸುವ ವಾತಾವರಣ ನಿರ್ಮಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು. ಜಿಲ್ಲಾ ಸರ್ಕಾರಿ  ನೌಕರರ ಸಂಘದ ಪದಾಧಿ ಕಾರಿಗಳು ನೀಡಿದ ಮನವಿಯನ್ನು ಜಿಲ್ಲಾಧಿ ಕಾರಿ ಎಂ.ಎಸ್‌.ಅರ್ಚನಾ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸರ್ಕಾರಿ ನೌರಕರರ ಸಮಘದ ಕಾರ್ಯದರ್ಶಿ ಎಂ. ರಾಜೇಗೌಡ, ಖಜಾಂಚಿ ಟಿ.ನರಸಯ್ಯ, ರಾಜ್ಯ  ಪರಿಷತ್‌ ಸದಸ್ಯ ಕೆ.ಸತೀಶ್‌  ಪದಾಧಿಕಾರಿ ಗಳಾದ ಶಿವಸ್ವಾಮಿ, ರಾಜಶೇಖರ್‌, ಕರ್ನಾಟಕ ಕಂದಾಯ ಇಲಾಖಾ ನೌಕರರ ಸಂಘದ ಜಿಲ್ಲಾ ಸಂಘದ ಅಧ್ಯಕ್ಷ ಎನ್‌.ರಮೇಶ್‌, ಪ್ರಮುಖರಾದ ಹರ್ಷ ಎಂ, ಹೆಚ್‌. ಜಗದೀಶ್‌, ಎ.ಎಸ್‌. ಧರೇಶ್‌ಗೌಡ, ಮೋಹನ್‌ ಎಂ.ಎನ್‌.,  ಚಂದ್ರೇಗೌಡ ಸಿ. ಎಸ್‌.ತಂಗರಾಜು, ವೆಂಕಟೇಶ್‌ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

ಟಾಪ್ ನ್ಯೂಸ್

ಪ್ರೇಯಸಿ ಜತೆ ಮದುವೆ ಮಾಡಿಸಿದ ಪತ್ನಿ!

ಪ್ರೇಯಸಿ ಜತೆ ಮದುವೆ ಮಾಡಿಸಿದ ಪತ್ನಿ!

ನೇರ ನಗದು ವರ್ಗಕ್ಕೆ ಆಧಾರ್‌ ಸೀಡಿಂಗ್‌ ಸಮಸ್ಯೆ! ಕೆವೈಸಿ ಬೇರೆ, ಸೀಡಿಂಗ್‌ ಬೇರೆ

ನೇರ ನಗದು ವರ್ಗಕ್ಕೆ ಆಧಾರ್‌ ಸೀಡಿಂಗ್‌ ಸಮಸ್ಯೆ! ಕೆವೈಸಿ ಬೇರೆ, ಸೀಡಿಂಗ್‌ ಬೇರೆ

ತಲೆಗೆ ಧರಿಸಿದ್ದ ಸ್ಕಾರ್ಫ್ ಕಿತ್ತೊಗೆದು ಹಿಜಾಬ್ ವಿರುದ್ಧ ಪ್ರತಿಭಟಿಸಿದ್ದ ಮಹಿಳೆಯ ಹತ್ಯೆ

ತಲೆಗೆ ಧರಿಸಿದ್ದ ಸ್ಕಾರ್ಫ್ ಕಿತ್ತೊಗೆದು ಹಿಜಾಬ್ ವಿರುದ್ಧ ಪ್ರತಿಭಟಿಸಿದ್ದ ಯುವತಿಯ ಹತ್ಯೆ

ಲಂಡನ್‌ ಹೊಟೇಲ್‌ ವಿರುದ್ಧ ತನಿಯಾ ಭಾಟಿಯಾ ಆಕ್ರೋಶ

ಲಂಡನ್‌ ಹೊಟೇಲ್‌ ವಿರುದ್ಧ ತನಿಯಾ ಭಾಟಿಯಾ ಆಕ್ರೋಶ

“ಶಿಕ್ಷಕರ ನೇಮಕಾತಿ ಅಕ್ರಮ ಬಿಎಸ್‌ವೈ, ಸುರೇಶ್‌ ಕಾಲದ್ದು’: ಸಿದ್ದರಾಮಯ್ಯ

“ಶಿಕ್ಷಕರ ನೇಮಕಾತಿ ಅಕ್ರಮ ಬಿಎಸ್‌ವೈ, ಸುರೇಶ್‌ ಕಾಲದ್ದು’: ಸಿದ್ದರಾಮಯ್ಯ

ಯುವಕರನ್ನು “ಉಗ್ರವಾದ’ಕ್ಕೆ ಪ್ರಚೋದಿಸುತ್ತಿದ್ದ ಪಿಎಫ್ಐ ಮುಖಂಡರು

ಯುವಕರನ್ನು “ಉಗ್ರವಾದ’ಕ್ಕೆ ಪ್ರಚೋದಿಸುತ್ತಿದ್ದ ಪಿಎಫ್ಐ ಮುಖಂಡರು

ಸಂಪೂರ್ಣ ಸಾಕ್ಷರತೆಯತ್ತ ಸಾವಿರ ಗ್ರಾ.ಪಂ.ಗಳು; ದ.ಕ., ಉಡುಪಿಯ 51 ಗ್ರಾ.ಪಂ.ಗಳಲ್ಲಿ ಸಿದ್ಧತೆ

ಸಂಪೂರ್ಣ ಸಾಕ್ಷರತೆಯತ್ತ ಸಾವಿರ ಗ್ರಾ.ಪಂ.ಗಳು; ದ.ಕ., ಉಡುಪಿಯ 51 ಗ್ರಾ.ಪಂ.ಗಳಲ್ಲಿ ಸಿದ್ಧತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಿಎಫ್ಐ ವಿರುದ್ಧ ದಾಖಲೆಗಳಿದ್ದರೆ ಜನರ ಮುಂದೆ ಇಡಿ : ಸರಕಾರಕ್ಕೆ ಹೆಚ್.ಡಿ.ಕೆ ಒತ್ತಾಯ

ಪಿಎಫ್ಐ ವಿರುದ್ಧ ದಾಖಲೆಗಳಿದ್ದರೆ ಜನರ ಮುಂದೆ ಇಡಿ : ಸರಕಾರಕ್ಕೆ ಹೆಚ್.ಡಿ.ಕೆ ಒತ್ತಾಯ

ಸಂತ್ರಸ್ತರ ಖಾತೆಗೆ ಇನ್ನೂ ಬಂದಿಲ್ಲ ಪರಿಹಾರ

ಸಂತ್ರಸ್ತರ ಖಾತೆಗೆ ಇನ್ನೂ ಬಂದಿಲ್ಲ ಪರಿಹಾರ

ಜೋಡೋ ಯಾತ್ರೆಗೆ ಸರ್ವರೂ ಕೈ ಜೋಡಿಸಿ

ಜೋಡೋ ಯಾತ್ರೆಗೆ ಸರ್ವರೂ ಕೈ ಜೋಡಿಸಿ

tdy-11

ಪತನದಂಚಿನ ಪತಂಗ ಪ್ರತ್ಯಕ್ಷ! 

ಸಹಕಾರ ಸಂಘದಿಂದ ರೈತರ ಏಳಿಗೆ

ಸಹಕಾರ ಸಂಘದಿಂದ ರೈತರ ಏಳಿಗೆ

MUST WATCH

udayavani youtube

ಮಂಗಳೂರು ಶ್ರೀ ಶಾರದಾ ಮಹೋತ್ಸವ – 100 ವರ್ಷಗಳ ಪಯಣ ಹೇಗಿತ್ತು ?

udayavani youtube

ದಸರಾ ಆನೆಗಳ ತೂಕವನ್ನು ಹೆಚ್ಚಿಸಲು ಏನೆಲ್ಲಾ ತಿನ್ನಿಸುತ್ತಾರೆ ನೋಡಿ !

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

ಹೊಸ ಸೇರ್ಪಡೆ

ಪ್ರೇಯಸಿ ಜತೆ ಮದುವೆ ಮಾಡಿಸಿದ ಪತ್ನಿ!

ಪ್ರೇಯಸಿ ಜತೆ ಮದುವೆ ಮಾಡಿಸಿದ ಪತ್ನಿ!

ನೇರ ನಗದು ವರ್ಗಕ್ಕೆ ಆಧಾರ್‌ ಸೀಡಿಂಗ್‌ ಸಮಸ್ಯೆ! ಕೆವೈಸಿ ಬೇರೆ, ಸೀಡಿಂಗ್‌ ಬೇರೆ

ನೇರ ನಗದು ವರ್ಗಕ್ಕೆ ಆಧಾರ್‌ ಸೀಡಿಂಗ್‌ ಸಮಸ್ಯೆ! ಕೆವೈಸಿ ಬೇರೆ, ಸೀಡಿಂಗ್‌ ಬೇರೆ

ತಲೆಗೆ ಧರಿಸಿದ್ದ ಸ್ಕಾರ್ಫ್ ಕಿತ್ತೊಗೆದು ಹಿಜಾಬ್ ವಿರುದ್ಧ ಪ್ರತಿಭಟಿಸಿದ್ದ ಮಹಿಳೆಯ ಹತ್ಯೆ

ತಲೆಗೆ ಧರಿಸಿದ್ದ ಸ್ಕಾರ್ಫ್ ಕಿತ್ತೊಗೆದು ಹಿಜಾಬ್ ವಿರುದ್ಧ ಪ್ರತಿಭಟಿಸಿದ್ದ ಯುವತಿಯ ಹತ್ಯೆ

ಲಂಡನ್‌ ಹೊಟೇಲ್‌ ವಿರುದ್ಧ ತನಿಯಾ ಭಾಟಿಯಾ ಆಕ್ರೋಶ

ಲಂಡನ್‌ ಹೊಟೇಲ್‌ ವಿರುದ್ಧ ತನಿಯಾ ಭಾಟಿಯಾ ಆಕ್ರೋಶ

“ಶಿಕ್ಷಕರ ನೇಮಕಾತಿ ಅಕ್ರಮ ಬಿಎಸ್‌ವೈ, ಸುರೇಶ್‌ ಕಾಲದ್ದು’: ಸಿದ್ದರಾಮಯ್ಯ

“ಶಿಕ್ಷಕರ ನೇಮಕಾತಿ ಅಕ್ರಮ ಬಿಎಸ್‌ವೈ, ಸುರೇಶ್‌ ಕಾಲದ್ದು’: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.