ಜಿಲ್ಲೆಯಲ್ಲಿ ಶಿಕ್ಷಕರ ಸಸ್ಪೆಂಡ್‌ ದಂಧೆ: ಆರೋಪ


Team Udayavani, Jun 27, 2020, 6:15 AM IST

aropa gilla

ರಾಮನಗರ: ವರ್ಗಾವಣೆ ದಂಧೆ ಕೇಳಿದ್ದೀರಿ, ಸಸ್ಪೆಂಡ್‌ ಕೂಡ ಒಂದು ದಂಧೆ ಅಂತ ಕೇಳಿದ್ದೀರಾ? ಆಶ್ಚರ್ಯ ಬೇಡ! ಸಸ್ಪೆಂಡ್‌ ಒಂದು ದಂಧೆ ಅಂತ ನೇರಾನೇರ ಆರೋಪಿಸಿ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಜಿಪಂ ಸದಸ್ಯ ಶಿವಕುಮಾರ್‌  ತರಾಟೆಗೆ ತೆಗೆದುಕೊಂಡರು. ನಗರದ ಜಿಪಂ ಭವನದ ಸಭಾಂಗಣದಲ್ಲಿ ಶುಕ್ರವಾರ ನಡೆದ 17ನೇ ಸಾಮಾನ್ಯ ಸಭೆ ಯಲ್ಲಿ ಕನಕಪುರದ ದೊಡ್ಡಾಲಹಳ್ಳಿ ಕ್ಷೇತ್ರದ ಸದಸ್ಯ ಶಿವಕುಮಾರ್‌, ಶಿಕ್ಷಣ ಇಲಾಖೆಯಲ್ಲಿ ಸಸ್ಪೆಂಡ್‌  ಡೋದು ಮತ್ತು ರಿಇನ್‌ಸ್ಟೆಟ್‌ ಮಾಡೋದು ಒಂದು ದಂಧೆಯಾಗಿದೆ.

ಯಾವುದೋ ಕಾರಣಕ್ಕೆ ಸಸ್ಪೆಂಡ್‌ ಆದ ಶಿಕ್ಷ ಕನನ್ನು ಅದೇ ಶಾಲೆಯಲ್ಲಿ ಮುಂದುವರಿಸುವಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ಶಿಕ್ಷಕ ಕೇಳಿದ ಕ್ಷೇತ್ರಕ್ಕೆ  ನಿಯೋಜಿಸುವುದು ನಡೆ ದಿದೆ ಎಂದು ದೂರಿದರು. ಮಾಗಡಿ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯ ಶಿಕ್ಷ ಕರೊಬ್ಬರು ಕನಕಪುರ ತಾಲೂಕಿನ ಹುಲಿಮಲೆ ಸರ್ಕಾರಿ ಶಾಲೆಗೆ ಮುಖ್ಯಶಿಕ್ಷಕನಾಗಿ ವರ್ಗಾವಣೆಯಾಗಿದ್ದರು. ಅವರು  ಸಮಯಕ್ಕೆ ಸರಿ ಯಾಗಿ ಬರ್ತಿಲ್ಲ ಅಂತ ಸಸ್ಪೆಂಡ್‌ ಆಗಿದ್ದರು.

ಕೆಲ ದಿನಗಳ ನಂತರ ರಿಇನ್‌ಸ್ಟೆàಟ್‌ ಆಗಿದ್ದರು. ಆಗ ಅವರನ್ನು ಮತ್ತೆ ಮಾಗಡಿಯ ಸರ್ಕಾರಿ ಶಾಲೆಗೆ ವರ್ಗಾವಣೆ ಮಾಡಲಾಗಿದೆ. ಜಿಲ್ಲೆ ಯಲ್ಲಿ 105 ಸಸ್ಪಂಡ್‌ ಪ್ರಕರಣಗಳಿವೆ.  ಈ ಪೈಕಿ 98 ಪ್ರಕರಣಗಳನ್ನು ನಿರ್ದೋಷಿ ಎಂದು ಪರಿ ಗಣಿಸಲಾಗಿದೆ ಎಂದು ವಿವರಿಸಿದರು. ಅದಕ್ಕೆ ದನಿಗೂಡಿಸಿದ ಸದಸ್ಯೆ ಬಿ.ಎನ್‌. ದಿವ್ಯಾ, ಸದರಿ ಮುಖ್ಯ ಶಿಕ್ಷಕ ಈಗ ಮಾಗಡಿಯಲ್ಲಿ ತನ್ನ ಮನೆಯಿಂದ ಕೇವಲ 100 ಮೀ. ಅಂತರದ  ಶಾಲೆಯಲ್ಲಿ ಕರ್ತವ್ಯಕ್ಕೆ ಹೋಗ್ತಿದ್ದಾರೆ ಎಂದರು.

ಸಭೆಯಲ್ಲಿ ಹಾಜರಿ ದ್ದ ಶಾಸಕ ಎ.ಮಂಜುನಾಥ್‌ ಸಹ ಸದರಿ ಶಿಕ್ಷಕನನ್ನು ವರ್ಗಾವಣೆಯಾದ ಸ್ಥಳಕ್ಕೆ ಮತ್ತೆ ಕಳುಹಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.  ಅದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ಸೋಮಶೇಖರಯ್ಯ, ಸದರಿ ಮುಖ್ಯ ಶಿಕ್ಷಕರನ್ನು ಎಸ್‌ ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರ ಶಿಪಾರಸಿನ ಮೇರೆಗೆ ಸಸ್ಪೆಂಡ್‌ ಮಾಡಲಾಗಿದೆ. ತಮ್ಮ ಅವಧಿಯಲ್ಲಿ ಕೇವಲ 4 ಸಸ್ಪೆಂಡ್‌ ಪ್ರಕರಣಗಳಿವೆ. ರಿಇನ್‌ಸ್ಟೆàಟ್‌  ಆದ ನಂತರ ಅವರನ್ನು ಮಾಗಡಿಗೆ ತತ್ಕಾಲಿಕವಾಗಿ ನಿಯೋಜಿಸಲಾಗಿದೆ ಎಂದರು.

ಕರ್ನಾಟಕ ಪಬ್ಲಿಕ್‌ ಶಾಲೆ ಅವ್ಯವಸ್ಥೆ ಪ್ರತಿಧ್ವನಿ: ಕೆಪಿಎಸ್‌ಗಳ ಅವ್ಯವಸ್ಥೆ ಬಗ್ಗೆ ಜಿಪಂ ಸಭೆಯಲ್ಲಿ ಪ್ರತಿಧ್ವನಿಸಿತು. ಸದಸ್ಯ ಶಿವಕುಮಾರ್‌ ತಮ್ಮ ಕ್ಷೇತ್ರದ ಪಬ್ಲಿಕ್‌ ಶಾಲೆಯಲ್ಲಿ ಖಾಲಿಯಿರುವ ಶಿಕ್ಷಕರ ಬಗ್ಗೆ ಪ್ರಸ್ತಾಪಿಸಿದರು. 32 ಕೊಠಡಿಯಿರುವ ಬೃಹತ್‌ ಪಬ್ಲಿಕ್‌ ಶಾಲೆಯಲ್ಲಿ ಕೇವಲ 400 ವಿದ್ಯಾರ್ಥಿಗಳಿದ್ದಾರೆ. ಪಕ್ಕದ ಖಾಸಗಿ ಶಾಲೆಯಲ್ಲಿ 700 ವಿದ್ಯಾರ್ಥಿಗಳಿದ್ದಾರೆ.

ಕಾರಣ ಪಬ್ಲಿಕ್‌ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದೆ ಎಂದು ಶಿಕ್ಷಣ ಇಲಾಖೆಯನ್ನು ಮತ್ತೆ  ತರಾಟೆಗೆ ತೆಗೆದು ಕೊಂಡರು. ಪಬ್ಲಿಕ್‌ ಶಾಲೆಯಲ್ಲಿ ಪಿಯೂಸಿಯಲ್ಲಿ ಕಲೆ ಮತ್ತು ವಾಣಿಜ್ಯ ತರಗತಿಗಳು ಮಾತ್ರ ಮಂಜೂರಾಗಿದೆ. ಆದರೆ ಸದರಿ ವಿಷಯ ಬೋಧಿಸಲು ಶಿಕ್ಷಕರನ್ನೇ ನಿಯೋಜಿಸಿಲ್ಲ ಎಂದು ದೂರಿದರು. ಕೆ.ಪಿ. ಶಾಲೆಗಳಲ್ಲಿ  ಪ್ರಾಂಶುಪಾಲರು ಪಿಯು ಶಿಕ್ಷಣ ಇಲಾಖೆಗೆ ಒಳಪಡುತ್ತಾರೆ. ಹೀಗಾಗಿ ಅವರನ್ನು ಕರೆಸಿ ಚರ್ಚಿಸಿ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಜಿಪಂ ಉಪಾಧ್ಯಕ್ಷೆ ಉಷಾರವಿ ಇದ್ದರು.

ಶಿಕ್ಷೆ ಕೊಟ್ಟಂಗೆ ಆಗಿಲ್ಲ: ಸಿಇಒ ಸಸ್ಪೆಂಡ್‌ ದಂಧೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಿಇಒ ಇಕ್ರಂ ಮಾತನಾಡಿ, ಶಿಕ್ಷಕ ತಾನು ಕೇಳಿದ ಸ್ಥಳಕ್ಕೆ ನಿಯೋಜನೆ ಮಾಡಿದರೆ ಸಸ್ಪೆಂಡ್‌ಗೆ ಅರ್ಥವೇ ಇಲ್ಲ. ಶಿಕ್ಷೆ ತಪ್ಪಿಸಿ ಅನುಕೂಲ  ಮಾಡಿಕೊಟ್ಟಂಗೆ ಆಗಿದೆ ಎಂದರು.

ಸಿಇಒ ಬಳಿ ಚರ್ಚಿಸಲು ಅಧ್ಯಕ್ಷರ ಸೂಚನೆ: ಜಿಪಂ ಅಧ್ಯಕ್ಷ ಎಚ್‌.ಬಸಪ್ಪ, ಸಸ್ಪೆಂಡ್‌ನ‌ಂತರ ರಿಇನ್‌ಸ್ಟೇಟ್‌ ಆಗುವ ಶಿಕ್ಷಕರನ್ನು ಎಲ್ಲಿ ನಿಯೋಜಿಸಬೇಕು ಎಂಬ ವಿಚಾರದಲ್ಲಿ ಸಿಇಒ ಅಥವಾ ಶಿಕ್ಷಣ  ಸ್ಥಾಯಿ ಸಮಿತಿಯ ಸಲಹೆ ಪಡೆದು ನಿಯೋಜಿಸಿ ಎಂದು ಸೂಚನೆ ಕೊಟ್ಟರು.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

ramangar

Ramanagara: ಬೈಕ್ ಅಪಘಾತ, ಕೆಎಸ್ಆರ್ ಟಿಸಿ ಕಂಡಕ್ಟರ್ ಸಾವು

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.