Udayavni Special

ವಿದ್ಯುತ್‌ ಪೂರೈಕೆಗೆ ರೈತರಿಂದ ಬೆಸ್ಕಾಂಗೆ ಗಡುವು


Team Udayavani, Mar 26, 2021, 12:53 PM IST

ವಿದ್ಯುತ್‌ ಪೂರೈಕೆಗೆ ರೈತರಿಂದ ಬೆಸ್ಕಾಂಗೆ ಗಡುವು

ಮಾಗಡಿ: ಏಪ್ರಿಲ್‌ 1ರೊಳಗೆ ಬೆಸ್ಕಾಂ ಎಂಜಿನಿಯರ್‌ ಗಳು ಸಮಸ್ಯೆ ಬಗೆಹರಿಸದಿದ್ದರೆ ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ನೇತೃತ್ವದಲ್ಲಿ ಉಗ್ರ ಹೋರಾಟನಡೆಸಲಾಗುವುದು ಎಂದು ಜಿಪಂ ಮಾಜಿ ಸದಸ್ಯಎಂ.ಕೆ.ಧನಂಜಯ್ಯ ಎಚ್ಚರಿಕೆ ನೀಡಿದರು.

ತಾಲೂಕಿನ ಹೊಸಪಾಳ್ಯದಲ್ಲಿ ಬೆಸ್ಕಾಂ ಅಧಿಕಾರಿಗಳುಮತ್ತು ಶಾಸಕ ಎ.ಮಂಜುನಾಥ್‌ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಉಗ್ರ ಹೋರಾಟ: ತಾಲೂಕಿನ ಶಿವನಸಂದ್ರ ಗ್ರಾಮದಬಳಿ ವಿದ್ಯುತ್‌ ಸರಬರಾಜು ಕೇಂದ್ರದ ಕಾಮಗಾರಿ ಶೇ.95 ಪೂರ್ಣಗೊಂಡಿದೆ. ಆದರೆ, ದೊಡ್ಡ ಸೋಮನಹಳ್ಳಿಗ್ರಾಮದ ವ್ಯಕ್ತಿಯೊಬ್ಬರ ಜಮೀನಲ್ಲಿದ್ದ ಮರ ಕಡಿಯಬೇಕಿದ್ದು, ಅವರಿಗೆ 2 ವರ್ಷವಾದರೂ ಪರಿಹಾರನೀಡಿಲ್ಲ, ಈ ಸಂಬಂಧ ರೈತ ಶಾಸಕರ ಗಮನಕ್ಕೆತಂದರೂ ಪ್ರಯೋಜನ ವಾಗಿಲ್ಲ, ಇದರಿಂದ ಕಾಮಗಾರಿ ಸ್ಥಗಿತವಾಗಿದ್ದು, ಹೊಸಪಾಳ್ಯ, ಚಿಕ್ಕಮುದಿಗೆರೆ ಭಾಗದ ರೈತರಿಗೆ ಸಮರ್ಪಕವಾಗಿ ವಿದ್ಯುತ್‌ ಸರಬರಾಜು ಆಗದೇ ತೊಂದರೆಯಾಗುತ್ತಿದೆ. ಇನ್ನೊಂದು ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ನಿಶ್ಚಿತ ಎಂದು ತಿಳಿಸಿದರು.

ಅಧಿಕಾರಿಗಳೇ ಹೊಣೆ: ತಾಪಂ ಸದಸ್ಯ ಎಂ.ಎಚ್‌.ಸುರೇಶ್‌ ಮಾತನಾಡಿ, ಸಾಲ ಮಾಡಿ ರೈತರು ಕೊಳವೆಬಾವಿ ಕೊರೆಸಿದ್ದಾರೆ. ಅವರ ಪಂಪ್‌ಸೆಟ್‌ಗಳಿಗೆಸಮರ್ಪಕವಾಗಿ ವಿದ್ಯುತ್‌ ಸರಬರಾಜು ಆಗದೇತುಂಬ ತೊಂದರೆ ಅನುಭವಿಸುತ್ತಿದ್ದಾರೆ. ಇತ್ತಬಡ್ಡಿಯೂ ಕಟ್ಟಲಾಗದ ಪರಿಸ್ಥಿತಿ ಎದುರಿಸುತ್ತಿದ್ದಾರೆ.ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲ,ಬೆಸ್ಕಾಂ ಎಂಜಿನಿಯರ್‌ ನೀಡುವ 3 ಗಂಟೆ ವಿದ್ಯುತ್‌ ನಲ್ಲಿ 40 ರಿಂದ 50 ಬಾರಿ ವಿದ್ಯುತ್‌ ಕಡಿತಗೊಳ್ಳುತ್ತಿರುತ್ತದೆ. ಪಂಪ್‌ ಮೋಟಾರ್‌ಗಳು ಸುಟ್ಟು ಹೋಗುತ್ತಿವೆ. ತಾಲೂಕಿನ ಆಡಳಿತದ ಜವಾಬ್ದಾರಿ ಹೊತ್ತವರುವಿದ್ಯುತ್‌ ಸಮಸ್ಯೆ ಕುರಿತು ವಿಧಾನಸಭೆಯಲ್ಲಿಚರ್ಚಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರೈತರವಿದ್ಯುತ್‌ ಸಮಸ್ಯೆಗಳನ್ನು ಕೂಡಲೇ ಎಂಜಿನಿಯರ್‌ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಾಗುವಅನಾಹುತ ಗಳಿಗೆ ಅಧಿಕಾರಿಗಳೇ ನೇರ ಹೊಣೆ ಹೊರಬೇಕಾಗುತ್ತದೆ ಎಂದರು.

ಲೈನ್‌ಮೆನ್‌ಗಳು ಬರಲ್ಲ: ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ಮಾತನಾಡಿ, ರೈತರಜಮೀನುಗಳಲ್ಲಿ ಸುಟ್ಟು ಹೋಗಿರುವ ಟೀಸಿಗಳನ್ನುಬದಲಾವಣೆ ಮಾಡಿ ಎಂದು ತಿಳಿಸಿದ್ದರೂ ಬೆಸ್ಕಾಂಅಧಿಕಾರಿಗಳು ಟೀಸಿ ಬದಲಾವಣೆ ಮಾಡದೇ ಬೆಳೆಗಳು ನಾಶವಾಗುತ್ತಿವೆ. ವಿದ್ಯುತ್‌ ಸಂಪರ್ಕ ಕಡಿತವಾಗಿ2-3 ದಿನವಾದರೂ ಲೈನ್‌ಮೆನ್‌ಗಳು ಬರುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಲೇವಡಿ ಮಾಡಿದರು ಬೆಸ್ಕಾಂ ಇ.ಇ.ಮಂಜುನಾಥ್‌ ಮಾತನಾಡಿ,ವಿದ್ಯುತ್‌ ಲೈನ್‌ ಕಾಮಗಾರಿ ಕೊರೊನಾದಿಂದಸ್ಥಗಿತಗೊಂಡಿತ್ತು. ರೈತರ ಜಮೀನಿನಲ್ಲಿ ಕಾಮಗಾರಿಸಮಸ್ಯೆಯಾಗಿದೆ. ಸರಿಪಡಿಸಲಾಗುವುದು, ಬೇಸಿಗೆಆಗಿರುವುದರಿಂದ ವಿದ್ಯುತ್‌ ಸರಬರಾಜಿನ ಲೋಡ್‌ನಲ್ಲಿ ಸಮಸ್ಯೆ ಇತ್ತು. ಬೇರೆಡೆ ಲೈನ್‌ ಮೂಲಕ ತರಲುಪ್ರಯತ್ನಿಸಿದ್ದೇವೆ. 3 ದಿನಗಳಲ್ಲಿ ಇಲ್ಲಿನ ವಿದ್ಯುತ್‌ ಸಮಸ್ಯೆಬಗೆಹರಿಸುವ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಸ್ಥಗಿತಗೊಳಿಸಿದರು.

ತಾಪಂ ಸದಸ್ಯ ಕೆ.ಎಚ್‌.ಶಿವರಾಜು, ಟಿಎಪಿಸಿಎಂ ಎಸ್‌ ನಿರ್ದೇಶಕ ಸಿ.ಬಿ.ರವೀಂದ್ರ, ಗ್ರಾಪಂ ಅಧ್ಯಕ್ಷ ರವಿಕುಮಾರ್‌, ಗಂಗರಾಜು,ಮಾಜಿ ಸದಸ್ಯರಾದ ಜಾನಿಗೆರೆ ರವೀಶ್‌, ಪಾಪಣ್ಣಗೌಡ, ಕುಲುಮೆಪಾಳ್ಯದ ವಿಶ್ವನಾಥ್‌, ಸಿ.ವಿ. ರಾಜಣ್ಣ,ಸುರೇಶ್‌, ಗಂಗಾಧರ್‌, ಯತೀಶ್‌, ಕಿರಣ್‌, ಗಂಗರಾಜು, ಬಿಳಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

ಅಧಿಕಾರಿಗಳ ವಿರುದ್ಧ ಆಕ್ರೋಶ :

ಶಾಸಕರು ರೈತರ ಸಮಸ್ಯೆ ಬಗೆಹರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಬೆಸ್ಕಾಂ ಎಂಜಿನಿಯರ್‌ಗಳು ರೈತರಿಂದ 28ಸಾವಿರ ಹಣ ಕಟ್ಟಿಸಿಕೊಂಡು 2 ವರ್ಷವಾದರೂ ಇದುವರೆಗೂ ರೈತರ ಪಂಪ್‌ಸೆಟ್‌ಗಳಿಗೆ ಟೀಸಿ ಅಳವಡಿಸಿಲ್ಲ, ಇದರಿಂದ ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ತುಂಬ ತೊಂದರೆಯಾಗಿದೆ. ಜತೆಗೆ ಕಷ್ಟಪಟ್ಟುಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿ ರೈತರು ತೀರಾ ಕಷ್ಟದಲ್ಲಿದ್ದು, ಆರ್ಥಿಕವಾಗಿ ಸಂಕಷ್ಟಅನುಭವಿಸುವಂತಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಜಿಪಂ ಮಾಜಿ ಸದಸ್ಯ ಎಂ.ಕೆ.ಧನಂಜಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

Migrants fear 2020 replay, say may run out of work and resources if lockdown extended

ಲಾಕ್ ಡೌನ್ ಭೀತಿ : ರಾಷ್ಟ್ರ ರಾಜಧಾನಿಯಿಂದ ಮತ್ತೆ ಗುಳೆ ಹೊರಟ ವಲಸೆ ಕಾರ್ಮಿಕರು..!?

ಮಂಡ್ಯ:  413 ಮಂದಿಗೆ ಸೋಂಕು ದೃಢ: 113 ಮಂದಿ ಬಿಡುಗಡೆ

ಮಂಡ್ಯ:  413 ಮಂದಿಗೆ ಕೋವಿಡ್ ಸೋಂಕು ದೃಢ: 113 ಮಂದಿ ಬಿಡುಗಡೆ

ಕಲಬುರಗಿ : ಅಪಘಾತದಲ್ಲಿ ಗಂಭೀರ ಗಾಯಗೊಂಡ 6 ವರ್ಷದ ಬಾಲಕನಿಗೆ ವೆಂಟಿಲೇಟರ್ ಸಿಗದೆ ಸಾವು

ಕಲಬುರಗಿ : ಅಪಘಾತದಲ್ಲಿ ಗಂಭೀರ ಗಾಯಗೊಂಡ 6 ವರ್ಷದ ಬಾಲಕನಿಗೆ ವೆಂಟಿಲೇಟರ್ ಸಿಗದೆ ಸಾವು

hjkhku

‘ಸಂಪೂರ್ಣ ಲಾಕ್‍ಡೌನ್‍’ ಹೇರುವಂತೆ ಸಿಎಂಗೆ ಸಚಿವರುಗಳಿಂದ ಮನವಿ

ಹಳೆಯಂಗಡಿ: ಸಿಡಿಲು ಬಡಿದು ಇಬ್ಬರು ಮಕ್ಕಳು ಗಂಭೀರ

ಹಳೆಯಂಗಡಿ: ಸಿಡಿಲು ಬಡಿದು ಇಬ್ಬರು ಮಕ್ಕಳು ಗಂಭೀರ

ಜಹಗ್ದಸ಻ಧಶಧ‍್್

ರಾಜ್ಯಪಾಲರು ಸರ್ವ ಪಕ್ಷ ಸಭೆಯಲ್ಲಿ ಭಾಗಿಯಾಗಿದ್ದು ಸಂವಿಧಾನ ಬಾಹಿರ : ಸಿದ್ದರಾಮಯ್ಯ

ಮಂಡ್ಯ ಜಿಲ್ಲೆಯಲ್ಲಿಕೋವಿಡ್ ಟೆಸ್ಟಿಂಗ್ ಪ್ರಮಾಣ ಹೆಚ್ಚಾಗಬೇಕು –  ಸಚಿವ ಡಾ. ನಾರಾಯಣಗೌಡ

ಮಂಡ್ಯ ಜಿಲ್ಲೆಯಲ್ಲಿಕೋವಿಡ್ ಟೆಸ್ಟಿಂಗ್ ಪ್ರಮಾಣ ಹೆಚ್ಚಾಗಬೇಕು –  ಸಚಿವ ಡಾ. ನಾರಾಯಣಗೌಡಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಿಲ್ಲೆಯಲ್ಲಿ ರೆಮಿಡಿಸಿವರ್‌, ಆಮ್ಲಜನಕ ಕೊರತೆ ಇಲ್ಲ

ಜಿಲ್ಲೆಯಲ್ಲಿ ರೆಮಿಡಿಸಿವರ್‌, ಆಮ್ಲಜನಕ ಕೊರತೆ ಇಲ್ಲ

Court decision

ಕೋರ್ಟ್‌ ತೀರ್ಪಿನಂತೆ ಮಳಿಗೆ ಗ್ರಾಪಂ ವಶಕ್ಕೆ ಪಡೆಯಿರಿ

Give frist priority to covidine control

ಕೋವಿಡ್ ನಿಯಂತ್ರಣಕ್ಕೆ ಪ್ರಥಮ ಆದ್ಯತೆ ನೀಡಿ

Deputy Superintendent’s Office seal down

ಉಪನೋಂದಣಾಧಿಕಾರಿ ಕಚೇರಿ ಸೀಲ್‌ ಡೌನ್‌

Bed on the floor

ನೆಲದ ಮೇಲೆ ಬೆಡ್‌, ಬಿಸಿ ನೀರಿಗೂ ಗೋಗರಿಯಬೇಕು

MUST WATCH

udayavani youtube

ಮಾದರಿ ಕೋವಿಡ್ ಠಾಣೆಯಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ

udayavani youtube

ಕರ್ನಾಟಕದಲ್ಲಿ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೇ ಪಾಸ್

udayavani youtube

ಅರ್ಧ ದಾರಿಯಲ್ಲಿ ಹೀಗೆ ಮಾಡಿದ್ರೆ ನಮಗ್ಯಾರು ಗತಿ?

udayavani youtube

ಬಿಯರಿಗಾಗಿ ಮುಗಿಬಿದ್ದು ಜನರ ಕಿತ್ತಾಟ

udayavani youtube

ಚಿಕ್ಕಮಗಳೂರು: 9 ವರ್ಷದ ಹಳೇ ಗ್ಲೂಕೋಸ್ ನೀಡಿದ ಮೆಡಿಕಲ್ ಸ್ಟೋರ್; ಕಂಗಾಲಾದ ಗ್ರಾಹಕ !

ಹೊಸ ಸೇರ್ಪಡೆ

ಜಿಲ್ಲೆಯಲ್ಲಿ ರೆಮಿಡಿಸಿವರ್‌, ಆಮ್ಲಜನಕ ಕೊರತೆ ಇಲ್ಲ

ಜಿಲ್ಲೆಯಲ್ಲಿ ರೆಮಿಡಿಸಿವರ್‌, ಆಮ್ಲಜನಕ ಕೊರತೆ ಇಲ್ಲ

Migrants fear 2020 replay, say may run out of work and resources if lockdown extended

ಲಾಕ್ ಡೌನ್ ಭೀತಿ : ರಾಷ್ಟ್ರ ರಾಜಧಾನಿಯಿಂದ ಮತ್ತೆ ಗುಳೆ ಹೊರಟ ವಲಸೆ ಕಾರ್ಮಿಕರು..!?

ಮಂಡ್ಯ:  413 ಮಂದಿಗೆ ಸೋಂಕು ದೃಢ: 113 ಮಂದಿ ಬಿಡುಗಡೆ

ಮಂಡ್ಯ:  413 ಮಂದಿಗೆ ಕೋವಿಡ್ ಸೋಂಕು ದೃಢ: 113 ಮಂದಿ ಬಿಡುಗಡೆ

ಕೋವಿಡ್  ನಿಯಂತ್ರಣದಲ್ಲಿ  ಲೋಪವಾಗದಿರಲಿ

ಕೋವಿಡ್ ನಿಯಂತ್ರಣದಲ್ಲಿ ಲೋಪವಾಗದಿರಲಿ

Bega

ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.