Udayavni Special

ಜಮೀನಿನಲ್ಲಿ ರಸ್ತೆಗೆ ಜಾಗ ಬಿಡುವ ವಿಚಾರಕ್ಕೆ ಕಲಹ

ಚಿಕ್ಕಹಳ್ಳಿ ಗ್ರಾಪಂ ವ್ಯಾಪ್ತಿಯ ಮಾಯಸಂದ್ರ ಗ್ರಾಮದಲ್ಲಿ ಘಟನೆ • ಕುದೂರು ರಾಣೆಗೆ ದೂರು ದಾಖಲು

Team Udayavani, Jul 29, 2019, 12:13 PM IST

RN-TDY-2

ತಿಪ್ಪಸಂದ್ರ ಹೋಬಳಿಯ ವಿರೂಪಾಪುರ ಗಾಮದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಜಯಲಕ್ಷ್ಮಮ್ಮ ಅವರ ಜಮೀನಿನಲ್ಲಿ ಬೆಳೆ ನಾಶ ಮಾಡಿರುವ ಬಗ್ಗೆ ದಲಿತ ಮುಖಂಡರು ಕುದೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರು.

ಕುದೂರು: ಜಮೀನಿನಲ್ಲಿ ದಾರಿ ಬಿಡುವ ವಿಚಾರದಲ್ಲಿ ಸವರ್ಣಿಯರು ಪ.ಜಾತಿಗೆ ಸೇರಿದ ಜಯಲಕ್ಷ್ಮಮ್ಮ ಎಂಬುವವರ ಜಮೀನಿನಲ್ಲಿ ಬೆಳೆದ ಬೆಳೆ ಮತ್ತು ಕಲ್ಲು ಕಂಬಗಳನ್ನು ಕಿತ್ತು ನಾಶ ಮಾಡಿದ್ದಾರೆ ಎಂದು ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ರಸ್ತೆ ಬಿಡಲು ಒತ್ತಾಯ: ತಿಪ್ಪಸಂದ್ರ ಹೋಬಳಿಯ ಚಿಕ್ಕಹಳ್ಳಿ ಗ್ರಾಪಂ ವ್ಯಾಪ್ತಿಯ ಮಾಯಸಂದ್ರ ಗ್ರಾಮದ ಸರ್ವೆ ನಂ. 44 ಪಿ.1 ರಲ್ಲಿ 2.10 ಎಕರೆ ಜಮೀನನ್ನು ಜಯಲಕ್ಷ್ಮಮ್ಮ ಹೊಂದಿದ್ದಾರೆ. ಇವರ ಸಂಬಂಧಿ ಸಾಕಮ್ಮ ಎಂಬುವರು ಸರ್ವೆ ನಂ 44 ರಲ್ಲಿ 1.10 ಎಕರೆ ಜಮೀನು ಹೊಂದಿದ್ದಾರೆ. ಈ ಜಮೀನಿನಲ್ಲಿ ರಸ್ತೆ ಬಿಡಬೇಕೆಂದು ವಿರುಪಾಪುರ ಗ್ರಾಮದ ವೆಂಕಟೇಶ್‌, ಬೆಟ್ಟಯ್ಯ, ಜಯಣ್ಣ ಹಾಗೂ ಮುದ್ದರಂಗಯ್ಯ ಎಂಬುವವರು ಒತ್ತಾಯಿಸಿದ್ದಾರೆ. ಈ ವಿಚಾರವಾಗಿ ಎರಡು ಕಡೆಯವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಒತ್ತುವರಿ ತೆರವಿಗೆ ತಹಶೀಲ್ದಾರ್‌ಗೆ ಮನವಿ: ಜಯಲಕ್ಷ್ಮಮ್ಮ ಎಂಬುವವರಿಗೆ ಸರ್ಕಾರದಿಂದ 2.10 ಎಕರೆ ಜಮೀನು ಮಂಜೂರಾಗಿದೆ. ಅವರು ಸುಮಾರು ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಗ್ರಾಮಸ್ಥರಿಗೆ ಓಡಾಡಲು ರಸ್ತೆ ಬಿಟ್ಟಿರಲಿಲ್ಲ. ಜಾನುವಾರುಗಳು ಮೇಯಲು ಸ್ಥಳವಿಲ್ಲ. ಒತ್ತುವರಿ ಜಮೀನನ್ನು ತೆರವುಗೊಳಿಸಿ ಎಂದು ವಿರೂಪಾಪುರದ ಗ್ರಾಮಸ್ಥರು ಶುಕ್ರವಾರ ಮಾಗಡಿಯ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್‌ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು.

ಜಮೀನಿನಲ್ಲಿ ಬೆಳೆದಿದ್ದ ಬೆಳೆ ನಾಶ: ದಾರಿಯ ವಿಷಯವಾಗಿ ಗ್ರಾಮಸ್ಥರು ಹಾಗೂ ಜಯಲಕ್ಷ್ಮಮ್ಮ ಕುಟುಂಬದ ನಡುವೆ ಜಗಳ ತಾರಕ್ಕೇರಿ ಜಯಣ್ಣ, ಬೆಟ್ಟಯ್ಯ, ವೆಂಕಟೇಶ್‌ ಹಾಗೂ ಮುದ್ದರಂಗಯ್ಯ ನವರು ಗುಂಪು ಕಟ್ಟಿಕೊಂಡು ಬಂದು ಕೆಂಪಮ್ಮ ಅವರ ಜಮೀನಿನಲ್ಲಿ ಬೆಳೆದಿದ್ದ ಸುಮಾರು ತೆಂಗಿನ ಮರ, ಟಮೊಟೋ, ಬದನೆಕಾಯಿ ಗಿಡಗಳನ್ನು ಕಿತ್ತು ನಾಶ ಪಡಿಸಿದ್ದಾರೆ. ಇದರ ಜೊತೆಗೆ ಬೇಲಿ ಹಾಕಲು ನೆಟ್ಟಿದ್ದ ಸುಮಾರು 170 ಕಲ್ಲು ಕಂಬಗಳನ್ನು ಹಾರೆ ಯಿಂದ ಮುರಿದು ಹಾಕಿದ್ದಾರೆ. ಕೊಳವೆ ಬಾವಿಗೆ ಅಳವಡಿಸ ಲಾಗಿದ್ದ ಮೋಟಾರ್‌ ಸ್ಟಾರ್ಟರ್‌ರನ್ನು ಎತ್ತುಕೊಂಡು ಹೋಗಿದ್ದಾರೆ. ಇದರಿಂದ ದಲಿತ ಕುಟುಂಬಕ್ಕೆ ಸಾವಿ ರಾರು ರೂ. ನಷ್ಟವಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಹಾಗೂ ದಲಿತ ಮುಖಂಡರು ಕುದೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಲ್ಲದೆ ದಲಿತರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಸಿಗಬೇಕು ಹಾಗೂ ನಷ್ಟಕ್ಕೆ ಪರಿಹಾರ ಒದಗಿಸಬೇಕು ಎಂದು ಜಮೀನಿನ ಒಡತಿ ಜಯಲಕ್ಷ್ಮಮ್ಮ ಮನವಿ ಮಾಡಿದ್ದಾರೆ.

ಪದೇ ಪದೆ ಜಗಳ- ಆರೋಪ: ನಂತರ ಸುದ್ದಿಗಾರ ರೊಂದಿಗೆ ಮಾತನಾಡಿ, ಜಮೀನಿನಲ್ಲಿ ರಸ್ತೆ ಬಿಡುತ್ತಿಲ್ಲ ಎಂದು ಕೆಲವು ಸವರ್ಣಿಯರು ತಮ್ಮ ಕುಟುಂಬದ ಮೇಲೆ ಪದೇ ಪದೆ ಜಗಳ ತೆಗೆಯುತ್ತಿದ್ದು. ಕೈ, ಕಾಲು ಮುರಿಸುತ್ತೇವೆ, ಕೊಲೆ ಮಾಡಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಶುಕ್ರವಾರ ಸಾವಿರಾರು ರೂ. ಬೆಲೆ ಬಾಳುವ ತೆಂಗು ಹಾಗೂ ಇತರೆ ಗಿಡಗಳನ್ನು ನಾಶ ಪಡಿಸಿದ್ದಾರೆ. ದಲಿತ ಮೇಲೆ ಇನ್ನೂ ಸಹ ದೌರ್ಜನ್ಯ ನಿಂತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.

ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು: ದಲಿತ ಮುಖಂಡ ಸಿ.ಜಯರಾಂ ಮಾತನಾಡಿ, ಸುಮಾರು 20 ವರ್ಷಗಳ ಹಿಂದೆ ತಾಲೂಕಿನಲ್ಲಿ ದಲಿತರು ಹಾಗೂ ಸವರ್ಣಿಯರ ನಡುವೆ ಕಿತ್ತಾಟ ನಡೆಯುತ್ತಿತ್ತು. 20 ವರ್ಷಗಳಿಂದ ಯವುದೇ ಗಲಾಟೆ ನಡೆದಿರಲಿಲ್ಲ ಆದರೆ ಈಗ ವಿರೂಪಾಪುರ ಗ್ರಾಮದಲ್ಲಿ ದಲಿತ ಕುಟುಂಬದ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

10 ಗ್ರಾ.ಪಂ.ಗಳಲ್ಲಿ ಆಧಾರ್‌ ನೋಂದಣಿ, ತಿದ್ದುಪಡಿ

10 ಗ್ರಾ.ಪಂ.ಗಳಲ್ಲಿ ಆಧಾರ್‌ ನೋಂದಣಿ, ತಿದ್ದುಪಡಿ

IPL-22 ಅಂಕದ ಹುಡುಕಾಟದಲ್ಲಿ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್‌

2 ಅಂಕದ ಹುಡುಕಾಟದಲ್ಲಿ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್‌

ಕ್ರೈಂ ಶೋ ನೋಡಿ ತಂದೆ ಕೊಂದ

ಕ್ರೈಂ ಶೋ ನೋಡಿ ತಂದೆ ಕೊಂದ

Vote for Indian origin, mood for donation!

ಭಾರತೀಯ ಮೂಲದವರ ಮತ, ದೇಣಿಗೆಯತ್ತ ಚಿತ್ತ!

ಪೇಜಾವರ ಶ್ರೀಗಳು ಇಂದು ಅಯೋಧ್ಯೆಗೆ

ಪೇಜಾವರ ಶ್ರೀಗಳು ಇಂದು ಅಯೋಧ್ಯೆಗೆ

ಮುಂದೂಡಲ್ಪಟ್ಟಿದ್ದ ಸಪ್ತಪದಿಗೆ ಕೂಡಿಬಂತು ಮುಹೂರ್ತ!

ಮುಂದೂಡಲ್ಪಟ್ಟಿದ್ದ ಸಪ್ತಪದಿಗೆ ಕೂಡಿಬಂತು ಮುಹೂರ್ತ!

IPLಪಂಜಾಬ್‌ಗ ಸೋಲಿನ ಪಂಚ್‌ ನೀಡಿದ ರಾಜಸ್ಥಾನ್‌

ಪಂಜಾಬ್‌ಗ ಸೋಲಿನ ಪಂಚ್‌ ನೀಡಿದ ರಾಜಸ್ಥಾನ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್: ಕಂಗಾಲಾದ ಕಲಾವಿದರು

ಕೋವಿಡ್: ಕಂಗಾಲಾದ ಕಲಾವಿದರು

ಚುನಾವಣೆ ನಿಯಮ ಉಲ್ಲಂಘನೆ : ಪುಟ್ಟಣ್ಣ ಬೆಂಬಲಿಗನ ಬಂಧನ 85 ಸಾವಿರ ರೂ. ವಶ

ಚುನಾವಣೆ ನಿಯಮ ಉಲ್ಲಂಘನೆ : ಪುಟ್ಟಣ್ಣ ಬೆಂಬಲಿಗನ ಬಂಧನ 85 ಸಾವಿರ ರೂ. ವಶ

rn-tdy-3

ಕನ್ನಡ ಕಲಿತರಷ್ಟೇ ಸವಲತ್ತು ನೀಡಿ

ಪುರಸಭೆ ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ

ಪುರಸಭೆ ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ

rn-tdy-1

ಪ್ರಸಕ್ತ ಶೈಕ್ಷಣಿಕ ವರ್ಷ ವಿಸ್ತರಣೆ ಬೇಡ

MUST WATCH

udayavani youtube

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಎರಡು ತಿಂಗಳ ಆನೆ ಮರಿ

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

ಹೊಸ ಸೇರ್ಪಡೆ

10 ಗ್ರಾ.ಪಂ.ಗಳಲ್ಲಿ ಆಧಾರ್‌ ನೋಂದಣಿ, ತಿದ್ದುಪಡಿ

10 ಗ್ರಾ.ಪಂ.ಗಳಲ್ಲಿ ಆಧಾರ್‌ ನೋಂದಣಿ, ತಿದ್ದುಪಡಿ

IPL-22 ಅಂಕದ ಹುಡುಕಾಟದಲ್ಲಿ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್‌

2 ಅಂಕದ ಹುಡುಕಾಟದಲ್ಲಿ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್‌

ಕ್ರೈಂ ಶೋ ನೋಡಿ ತಂದೆ ಕೊಂದ

ಕ್ರೈಂ ಶೋ ನೋಡಿ ತಂದೆ ಕೊಂದ

ಎಲ್‌ಟಿಸಿ ನಗದು ವಿಸ್ತರಣೆ

ಎಲ್‌ಟಿಸಿ ನಗದು ವಿಸ್ತರಣೆ

Vote for Indian origin, mood for donation!

ಭಾರತೀಯ ಮೂಲದವರ ಮತ, ದೇಣಿಗೆಯತ್ತ ಚಿತ್ತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.