Udayavni Special

ಬಿಸಿಲಿನ ಝಳಕ್ಕೆ ಜಿಲ್ಲೆ ಜನತೆ ಹೈರಾಣ


Team Udayavani, Mar 14, 2019, 9:14 AM IST

ram-1.jpg

ರಾಮನಗರ: ರೇಷ್ಮೆ ಜಿಲ್ಲೆ ರಾಮನಗರದಲ್ಲಿ ಬಿಸಿಲಿನ ತಾಪಮಾನ 36 ಡಿಗ್ರಿ ತಲುಪಿದೆ. ಬೇಸಿಗೆಯ ಆರಂಭದಲ್ಲೇ ಜಿಲ್ಲೆಯ ಜನತೆ ಬಿಸಿಲಿನ ಝಳಕ್ಕೆ ಹೈರಾಣಾಗಿದ್ದಾರೆ. ಎಳೆನೀರು, ಕಲ್ಲಂಗಡಿ ಹಣ್ಣು, ತಂಪು ಪಾನಿಯಗಳಿಗೆ ಮೊರೆ ಹೋಗುತ್ತಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲಿ ಎಳೆನೀರು, ಕಲ್ಲಂಗಡಿ ಹಣ್ಣು, ಕಬ್ಬಿನ ಹಾಲು ಮಾರಾಟ ಬಿರುಸಾಗಿ ನಡೆಯುತ್ತಿದೆ. ನಗರ ಪ್ರದೇಶಗಳಲ್ಲೂ ಎಳೆನೀರು, ಬಗೆಬಗೆಯ ಹಣ್ಣುಗಳು ವಿಶೇಷವಾಗಿ ಕಿತ್ತಳೆ, ಮೋಸಂಬಿ ಹಣ್ಣುಗಳು ಹೆಚ್ಚು ಮಾರಾಟಕ್ಕಿವೆ. ಸೌತೆ ಕಾಯಿಗೆ ಬೇಡಿಕೆ ಹೆಚ್ಚುತ್ತಿದೆ. ನೀರಿನಂಶದ ಹಣ್ಣು, ತರಕಾರಿಗಳಿಗೆ ಜನ ಮೊರೆ ಹೋಗುತ್ತಿದ್ದಾರೆ. 

ಮುಂಜಾನೆಯೇ ತಾಪಮಾನ ಹೆಚ್ಚಳ: ಕಳೆದ ಕೆಲವು ದಿನಗಳಿಂದ ಹಗಲಿನ ವೇಳೆ ತಾಪಮಾನ 36ರಿಂದ 38 ತಲುಪುತ್ತಿದೆ. ಬೆಳಗ್ಗೆ ಸೂರ್ಯೋದಯದ ವೇಳೆಗೆ ತಾಪಮಾನದಲ್ಲಿ ಹೆಚ್ಚಳ ಕಾಣುತ್ತಿದೆ. ರಾತ್ರಿ 25 ರಿಂದ 30 ಡಿಗ್ರಿ ಆಸುಪಾಸಿನಲಿರುವ ತಾಪಮಾನ, ಮುಂಜಾನೆ ಸೂರ್ಯೋದಯದ ವೇಳೆ 32 ರಿಂದ 33 ಡಿಗ್ರಿ ತಲುಪುತ್ತಿದೆ. ಸಂಜೆ 5 ಗಂಟೆ ವೇಳೆಗೂ ತಾಪಮಾನ 33 ಡಿಗ್ರಿ ಆಸುಪಾಸಿನಲ್ಲೇ ಇರುತ್ತಿದೆ. ಸೂರ್ಯ ನೆತ್ತಿ ಮೇಲಿದ್ದಾಗ, ಕೆಲವರು ತಮ್ಮ ಚರ್ಮ ಬಾಧಿಸುವ ಲಕ್ಷಣಗಳ ಬಗ್ಗೆ ಅನುಭವ
ಹಂಚಿಕೊಂಡಿದ್ದಾರೆ. ಇದನ್ನು ವೈದ್ಯರು ಸನ್‌ಬರ್ನ್ಎಂದು ಹೇಳಿದ್ದು, ಕೆಲವು ಮುಲಾಮುಗಳನ್ನು ಉಪಯೋಗಿಸುವಂತೆಯೂ ವೈಯಕ್ತಿಕ ತಪಾಸಣೆಯ ನಂತರ ಸೂಚಿಸುತ್ತಿರುವುದಾಗಿ ಕೇಳಿ ಬಂದಿದೆ.

ಎಳೆ ನೀರಿಗೆ ಹೆಚ್ಚಿದ ಬೇಡಿಕೆ: ಬಿಸಿಲಿನ ಝಳಕ್ಕೆ ಹೈರಾಣಾಗುವ ನಾಗರಿಕರು ತಮ್ಮ ದೇಹದಲ್ಲಿ ನೀರಿನಂಶದ ಕೊರತೆಯನ್ನು ನೀಗಿಸಲು ಎಳೆ ನೀರಿಗೆ ಮೊರೆ ಹೋಗುತ್ತಿರುವುದರಿಂದ ಬೇಡಿಕೆ ಏರುತ್ತಿದೆ. ಕೆಲವು ವಾರಗಳ ಹಿಂದೆ 22ರಿಂದ 25 ರೂಪಾಯಿ ಇದ್ದ ಎಳೆನೀರಿನ ಬೆಲೆ ಈಗ 30 ರೂಪಾಯಿಗೆ ಏರಿದೆ. ಬೇಕರಿಗಳು, ಹೋಟೆಲ್‌ಗ‌ಳಲ್ಲಿ ತಂಪು ಪಾನೀಯ ಮಾರಾಟವು ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಮಜ್ಜಿಗೆಯ ಪಾಕೆಟ್‌ಗಳ ಬೇಡಿಕೆಗೂ ಕೊರತೆ ಏನಿಲ್ಲ.

ವ್ಯಾಪಾರಿಗಳಿಗೆ ಲಾಭ: ಬಿಸಿಲಿನ ತಾಪ ಹೆಚ್ಚಾದಂತೆಲ್ಲ, ರೋಗ ರುಜಿನಗಳು ಮನೆ ಮಾಡುತ್ತವೆ. ರಸ್ತೆ ಬದಿಯಲ್ಲಿ ಮಜ್ಜಿಗೆ ಮಾರಾಟದ ಮಡಿಕೆಗಳು ತಲೆ ಎತ್ತುತ್ತವೆ. ಕತ್ತರಿಸಿಟ್ಟ ಹಣ್ಣುಗಳು ಯಥೇಚ್ಚವಾಗಿ ದೊರೆಯುತ್ತದೆ. ಹೀಗೆ ವ್ಯಾಪಾರ
ಮಾಡುವವರ ಪೈಕಿ ಲಾಭ ಮಾಡಿಕೊಳ್ಳುವ ಮಂದಿಯೇ ಹೆಚ್ಚು, ಬಹುತೇಕರು ಸ್ವತ್ಛತೆಗೆ ಆದ್ಯತೆ ಕೊಡುವುದಿಲ್ಲ, ಎಚ್ಚರ ವಹಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
 
ತಾಜಾ ಹಣ್ಣಿನ ಜ್ಯೂಸ್‌ ಉತ್ತಮ: ಬಿಸಿಲಿನ ಝಳದಿಂದ ದೇಹದಲ್ಲಿನ ನೀರಿನಂಶ ಕೊರತೆಯನ್ನು ನೀಗಿಸಲು ಸಿದ್ಧಪಡಿಸಿದ ತಂಪು ಪಾನಿಯಕ್ಕಿಂದ ತಾಜಾ ಹಣ್ಣಿನ ಜ್ಯೂಸ್‌ ಉತ್ತಮ. ಆದರೆ, ಹೀಗೆ ಜ್ಯೂಸ್‌ ಮಾಡಿಕೊಡುವ ಸ್ಥಳ ಶುಚಿತ್ವವನ್ನು ಕಾಪಾಡಿಕೊಂಡಿದೆಯೇ, ಅವರು ಬಳಸುವ ನೀರು ಶುದ್ಧತೆಯಿಂದ ಇದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಿ. ಪ್ರಕೃತಿ ದತ್ತವಾಗಿ ಸಿಗುವ ಹಣ್ಣು, ತರಕಾರಿಗಳನ್ನು ಅಥವಾ ಇವುಗಳಿಂದ ಮಾಡಿದ ಆಹಾರವನ್ನೇ ಸೇವಿಸಬೇಕಾಗಿದೆ.

ಬಿಸಿಲಿನ ತಾಪಕ್ಕೆ ಬಳಲಿದ ವ್ಯಕ್ತಿಯನ್ನು ಕಂಡಾಕ್ಷಣ ಆತನನ್ನು ನೆರಳಿನಲ್ಲಿ ಮಲಗಿಸಿ, ಬಟ್ಟೆಯನ್ನು ಸಡಲಿಸಿ, ಕುಡಿಯಲು ಶುದ್ಧ ನೀರು ಅಥವಾ ಎಳೆನೀರು ಅಥವಾ ತಾಜಾ ಹಣ್ಣಿನ ರಸ, ಒಆರ್‌ಎಸ್‌ ದ್ರಾವಣವನ್ನು ಕೊಡಿ, ದೇಹದಲ್ಲಿ ಇಂಗಿಹೋಗಿರುವ ನೀರಿನಂಶವನ್ನು ಮರು ತುಂಬಿಸುವ ಅವಶ್ಯಕತೆ ಇರುವುದರಿಂದ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. 

ರಾಮನಗರದಲ್ಲಿ ತಿಂಗಳಿಗೆ ನಾಲ್ಕು ಗಂಟೆ ಮಾತ್ರ ನೀರು ಜಿಲ್ಲಾ ಕೇಂದ್ರ ರಾಮನಗರದಲ್ಲಿ ತಿಂಗಳಿಗೆ ಕೇವಲ ನಾಲ್ಕು ಗಂಟೆ ಮಾತ್ರ ನೀರು ಸರಬರಾಜು ಆಗುತ್ತಿದೆ. ವಾರಕ್ಕೊಮ್ಮೆ ಮಾತ್ರ ಒಂದು ಗಂಟೆ ಸಮಯ ನೀರು ಸರಬರಾಜು ಆಗುತ್ತಿದೆ. ಜಲಮಂಡಳಿ ಪೂರೈಸುತ್ತಿರುವ ನೀರಿನ್ನು ಕುಡಿಯಲು ಬಳಸಬೇಡಿ ಎಂದು ಸ್ವಯಂ ಜಲಮಂಡಳಿಯೇ ನಾಗರಿರನ್ನು ಎಚ್ಚರಿಸಿದೆ. ಹೀಗಾಗಿ ಕುಡಿಯವ ನೀರಿಗಾಗಿ ನಾಗರಿಕರು ಶುದ್ಧ ಕುಡಿಯುವ ನೀರಿನ ಘಟಕಗಳ ಮುಂದೆ ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಹಲವಾರು ತಿಂಗಳುಗಳಿಂದ ಕಾಡುತ್ತಿದೆ.

ಬೇಸಿಗೆಯ ಸಂದರ್ಭದಲ್ಲಿ ಕೃತಕವಾಗಿ ತಯಾರಿಸಿದ ತಂಪು ಪಾನಿಯಕ್ಕಿಂತ ತಾಜಾ ಹಣ್ಣಿನ ರಸ ಅತ್ಯುತ್ತಮ. ನೀರಿನಂಶ ಇರುವ ಕಲ್ಲಂಗಡಿ ಹಣ್ಣು, ಕರ್ಬೂಜ, ಸೌತೆ ಕಾಯಿ ಸೇವಿಸುವುದು ಉತ್ತಮ. ಧಾರಾಳವಾಗಿ ಶುದ್ಧ ನೀರು ಕುಡಿಯಬೇಕು.
 ಡಾ.ವಿಜಯ ನರಸಿಂಹ, ಜಿಲ್ಲಾ ಶಸ್ತ್ರಚಿಕಿತ್ಸಕರು, ರಾಮನಗರ

ಬಿ.ವಿ.ಸೂರ್ಯ ಪ್ರಕಾಶ್‌

ಟಾಪ್ ನ್ಯೂಸ್

ಪೊಲೀಸರ ತ್ಯಾಗ, ಬಲಿದಾನ ಸದಾ ಅವಿಸ್ಮರಣೀಯ :  ಜಿಲ್ಲಾಧಿಕಾರಿ ಕೂರ್ಮಾರಾವ್‌

ಪೊಲೀಸರ ತ್ಯಾಗ, ಬಲಿದಾನ ಸದಾ ಅವಿಸ್ಮರಣೀಯ :  ಜಿಲ್ಲಾಧಿಕಾರಿ ಕೂರ್ಮಾರಾವ್‌

1-www

ಲ್ಯಾಪ್‌ಟಾಪ್‌ಗಳಲ್ಲಿ ಅಡಗಿಸಿಟ್ಟಿದ್ದ 2.19 ಕೋಟಿ ಮೌಲ್ಯದ ಚಿನ್ನ ವಶ !

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ನ.8ರಂದು ರಾಷ್ಟಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ನ.8ರಂದು ರಾಷ್ಟಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ

ಕೋವಿಡ್ : ರಾಜ್ಯದಲ್ಲಿಂದು 365 ಹೊಸ ಪ್ರಕರಣಗಳು ಪತ್ತೆ | 443 ಸೋಂಕಿತರು ಗುಣಮುಖ

ಕೋವಿಡ್ : ರಾಜ್ಯದಲ್ಲಿಂದು 365 ಹೊಸ ಪ್ರಕರಣಗಳು ಪತ್ತೆ | 443 ಸೋಂಕಿತರು ಗುಣಮುಖ

jala

ಉತ್ತರಾಖಂಡದಲ್ಲಿ ಜಲಪ್ರಳಯ : 64 ಮಂದಿ ಬಲಿ, 7,000 ಕೋಟಿ ರೂ ನಷ್ಟ

nirani

ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ, ಉದ್ಯೋಗಗಳ ಸೃಷ್ಟಿ: ನಿರಾಣಿ ವಿಶ್ವಾಸ

28

ವಿಪಕ್ಷಗಳ ಟೀಕೆಗಳಿಗೆ ಲಸಿಕೆ ಮೂಲಕ ಉತ್ತರ ನೀಡಿದ್ದೇವೆ: ಕಟೀಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

ಸುವರ್ಣಮುಖೀ ನದಿಗೆ ವಿಷ

ಕಲ್ಯಾ ಬೆಟ್ಟದಲ್ಲಿರುವ ನಂದಿ ವಿಗ್ರಹ

ಪ್ರವಾಸೋದ್ಯಮ ಇಲಾಖೆಗೆ ಕೈಗೆಟುಕದ ಕಲ್ಯಾ ಬೆಟ್ಟ

magadi news

ಅಲೆಮಾರಿಗಳಿಗೆ ಸೌಲಭ್ಯ ಕೊಡಿ

ದೇವನಹಳ್ಳಿ: ತಾಲೂಕಿನಾದ್ಯಂತ ಸುರಿದ ಮಳೆಯಿಂದಾಗಿ ರೈತರ ತೋಟಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟವಾಗಿರುವುದರಿಂದ ಕೂಡಲೇ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ದಾಖಲೆ ಮಳೆ: ಶನಿವಾರ ಸಂಜೆಯಿಂದ ರಾತ್ರಿವರೆಗೆ ಉತ್ತಮ ಮಳೆಯಾಗಿದೆ. ರೈತರಿಗೆ ಈ ಮಳೆ ನುಂಗಲಾರದ ತುತ್ತಾಗಿದೆ. ಉತ್ತಮ ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ. ತೋಟಗಳಿಗೆ ನೀರು ನುಗ್ಗಿರುವುದರಿಂದ ರೈತರು ಸಾಲಸೋಲ ಮಾಡಿ ಬೆಳೆದಿದ್ದ ಹೂವು ನೀರುಪಾಲಾಗಿದೆ. ತಾಲೂಕಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ನಂತರ ಇದೇ ಮೊದಲ ಭಾರಿಗೆ 56.5 ಮಿ. ಮೀಟರ್‌ ನಷ್ಟು ದಾಖಲೆ ಮಳೆಯಾಗಿದ್ದು, ವಿಮಾನ ನಿಲ್ದಾಣಕ್ಕೂ ನೀರು ನುಗ್ಗಿತ್ತು. ಇದರಿಂದ ಪ್ರಯಾಣಿಕರು ಪರದಾಡಿದ್ದರು. ರಾಜಕಾಲುವೆ ಒತ್ತುವರಿ.. ರೈತರಿಗೆ ಕಿರಿಕಿರಿ: ಮಳೆಯ ನೀರು ಕೆರೆಗಳಿಗೆ ಹರಿದು ಹೋಗುವಂತೆ ಮಾಡಲಿಕ್ಕಾಗಿ ನಿರ್ಮಾಣ ಮಾಡಿರುವ ರಾಜಕಾಲುವೆಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವ ಕಾರಣ, ಮಳೆಯ ನೀರು ಕಾಲುವೆಗಳ ಮುಖಾಂತರ ಕೆರೆಗೆ ಹರಿಯಬೇಕಾಗಿರುವುದರ ಬದಲಾಗಿ ರೈತರ ತೋಟಗಳಿಗೆ ನುಗ್ಗಿವೆ. ಇದರಿಂದ ರೈತರ ಬೆಳೆಗಳು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿ¨ªಾರೆ. ಅಪಾರ ಬೆಳೆ ಹಾನಿ: ತಾಲೂಕಿನ ಅಣ್ಣೇಶ್ವರ, ಬೈಚಾಪುರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರ ಹೂವಿನ ಬೆಳೆಗಳು, ರಾಗಿ ಬೆಳೆ, ಜೋಳದ ಬೆಳೆ, ಸೌತೆಗಿಡ ಸೇರಿದಂತೆ ಬಹುತೇಕ ಬೆಳೆಗಳಿಗೆ ನೀರು ನುಗ್ಗಿದ್ದು, ಹೂವಿನ ಗಿಡಗಳು ಕೊಳೆಯುವಂತಹ ಸ್ಥಿತಿಗೆ ತಲುಪಿವೆ. ಲಕ್ಷಾಂತರ ರೂಪಾಯಿಗಳಷ್ಟು ಬಂಡವಾಳ ಹೂಡಿಕೆ ಮಾಡಿದ್ದೇವೆ. ತೋಟಗಳಲ್ಲಿ ನಿಂತಿರುವ ನೀರನ್ನು ಹೊರಗೆ ಹಾಕಲು ಮೋಟಾರುಗಳನ್ನು ಇಟ್ಟು ನೀರು ಖಾಲಿ ಮಾಡಿದರೂ ಶನಿವಾರ ಸಂಜೆ ಸುರಿದ ಮಳೆಯಿಂದಾಗಿ ಮತ್ತೆ ಜಲಾವೃತವಾಗಿದೆ. ನೀರು ನಿಂತರ ಪರಿಣಾಮ ಹೂ ಬಿಡಿಸಲಿಕ್ಕೂ ಕಾರ್ಮಿಕರು ಬರುತ್ತಿಲ್ಲ. ತೋಟಕ್ಕೆ ನಾವು ಔಷಧಿ ಸಿಂಪಡಣೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಔಷಧಿಯೆÇÉಾ ನೀರು ಪಾಲಾಗಿದೆ. ಒಂದು ಬಾರಿ ಔಷಧ ಸಿಂಪಡಣೆ ಮಾಡಬೇಕೆಂದರೆ 4 ರಿಂದ 5 ಸಾವಿರ ಖರ್ಚು ಮಾಡಬೇಕು. ಹೂವಿನ ಗಿಡಗಳ ಕಾಂಡಗಳು ಕೊಳೆಯುವಂತಾಗಿದ್ದು, ಬೆಳೆ ನಾಶವಾದರೆ ನಮ್ಮ ಕುಟುಂಬ ನಿರ್ವಹಣೆ ಹೇಗೆ ಎನ್ನುವ ಆತಂಕವೂ ಕಾಡುತ್ತಿದೆ. ವಿಮಾನ ನಿಲ್ದಾಣದ ಕಡೆಯಿಂದಲೂ ಕೂಡಾ ನೀರು ನಮ್ಮ ತೋಟಗಳಿಗೆ ನುಗ್ಗುತ್ತವೆ. ಕಾಲುವೆಯನ್ನು ಮಾಡಿ, ಅರ್ಧಕ್ಕೆ ನಿಲ್ಲಿಸಿ¨ªಾರೆ. ಇದರಿಂದಲೂ ನೀರು ಈ ಭಾಗಕ್ಕೆ ಹರಿದು ಬಂದು ತೋಟಗಳಲ್ಲಿ ನಿಲುತ್ತಿವೆ ಎಂದು ರೈತರು ತಮ್ಮ ನೋವನ್ನು ವ್ಯಕ್ತಪಡಿಸಿದರು. ತಾಲೂಕಿನ ಹೋಬಳಿವಾರು ಮಳೆಯ ಅಂಕಿ ಅಂಶ- ದೇವನಹಳ್ಳಿ ಟೌನ್‌- 26.1ಮಿ.ಮಿ., ವಿಜಯಪುರ- 5.2ಮಿ.ಮಿ., ಕುಂದಾಣ- 6.0ಮಿ.ಮಿ., ವಿಶ್ವನಾಥಪುರ- 5.4ಮಿ.ಮಿ., ಚನ್ನರಾಯಪಟ್ಟಣ- 13.8ಮಿ.ಮಿ. ಒಟ್ಟು 56.5ಮಿ.ಮಿ. ಮಳೆಯಾಗಿದೆ.

ತಾಲೂಕಿನಾದ್ಯಂತ ಭಾರಿ ಮಳೆ, ಕೊಚ್ಚಿ ಹೋದ ಬೆಳೆ!

ಆರೋಗ್ಯದ ಅರಿವಿಗೆ ಸಂಚಾರಿ ರಥ

ಆರೋಗ್ಯದ ಅರಿವಿಗೆ ಸಂಚಾರಿ ರಥ

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

ಪೊಲೀಸರ ತ್ಯಾಗ, ಬಲಿದಾನ ಸದಾ ಅವಿಸ್ಮರಣೀಯ :  ಜಿಲ್ಲಾಧಿಕಾರಿ ಕೂರ್ಮಾರಾವ್‌

ಪೊಲೀಸರ ತ್ಯಾಗ, ಬಲಿದಾನ ಸದಾ ಅವಿಸ್ಮರಣೀಯ :  ಜಿಲ್ಲಾಧಿಕಾರಿ ಕೂರ್ಮಾರಾವ್‌

sirsi news

ಅಕ್ರಮ ಗೋ ಹತ್ಯೆ ಆರೋಪ : ಬಂಧನ

1-www

ಲ್ಯಾಪ್‌ಟಾಪ್‌ಗಳಲ್ಲಿ ಅಡಗಿಸಿಟ್ಟಿದ್ದ 2.19 ಕೋಟಿ ಮೌಲ್ಯದ ಚಿನ್ನ ವಶ !

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ನ.8ರಂದು ರಾಷ್ಟಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ನ.8ರಂದು ರಾಷ್ಟಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ

ಕೋವಿಡ್ : ರಾಜ್ಯದಲ್ಲಿಂದು 365 ಹೊಸ ಪ್ರಕರಣಗಳು ಪತ್ತೆ | 443 ಸೋಂಕಿತರು ಗುಣಮುಖ

ಕೋವಿಡ್ : ರಾಜ್ಯದಲ್ಲಿಂದು 365 ಹೊಸ ಪ್ರಕರಣಗಳು ಪತ್ತೆ | 443 ಸೋಂಕಿತರು ಗುಣಮುಖ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.