ಪೊಲೀಸರ ಕಾರ್ಯದಕ್ಷತೆ ಶ್ಲಾಘನೀಯ


Team Udayavani, Jun 20, 2020, 6:42 AM IST

police-shlaganiya

ರಾಮನಗರ: ಜಿಲ್ಲೆಯಲ್ಲಿ ನಡೆದಿದ್ದ ಕೊಲೆ ಪ್ರಕರಣ ಶೇ.90ರಷ್ಟು ಹಾಗೂ ದರೋಡೆ ಪ್ರಕರಣಗಳ ಶೇ.100ರಷ್ಟು ಆರೋಪಿಗಳನ್ನು ಪತ್ತೆಹಚ್ಚಿ ದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲೂ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ  ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಜಿಲ್ಲಾ ಪೊಲೀಸರನ್ನು ಮುಕ್ತಕಂಠದಿಂದ ಪ್ರಶಂಸಿದ್ದಾರೆ.

ಶುಕ್ರವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿ, ಜಿಲ್ಲೆ ಬಹಳ ದಿನಗಳವರೆಗೆ ಹಸಿರು ವಲಯವಾಗಿ ಉಳಿಯುವಲ್ಲಿ ಅವರ ಪಾಲು ಹೆಚ್ಚಿದೆ. ಸೋಂಕು ಇರುವುದರಿಂದ 50 ವರ್ಷ ಮೇಲ್ಪಟ್ಟ ಸಿಬ್ಬಂದಿಯನ್ನು ಕಚೇರಿ ಕೆಲಸಕ್ಕೆ ಸೀಮಿತಗೊಳಿಸಲಾಗಿದೆ. 1:3 ಸಿಬ್ಬಂದಿಯನ್ನು  ಮಾತ್ರ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್‌ ಚಟುವಟಿಕೆಗೆ ಸಂಬಂಧಿಸಿದ ಪ್ರಕರಣಗಳು, ಸೈಬರ್‌ ಕ್ರೈಂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಸಿಂಥೆಟಿಕ್‌ ಡ್ರಗ್ಸ್‌ ಸೇವನೆಗೆ ಯುವ ಸಮು ದಾಯ  ದಾಸರಾಗುತ್ತಿದ್ದಾರೆ. ಈ ಬಗ್ಗೆ ಎಚ್ಚರವಹಿಸಿ ಎಂದು ಸೂಚಿಸಿರುವುದಾಗಿ ಹೇಳಿದರು. ಸಿಮರಳು ದಂಧೆ, ಜೂಜು ಮೊದಲಾದ ಪ್ರಕರಣಗಳನ್ನು ಸಿಬ್ಬಂದಿ ಸೂಕ್ತವಾಗಿ ನಿರ್ವಹಿ ಸುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆಯಲ್ಲಿ  ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆದಿದೆ. ಜಿಲ್ಲೆಯಲ್ಲಿ 99 ಸಿವಿಲ್‌ ಕಾನ್‌ ಸ್ಟೆಬಲ್‌ ಹುದ್ದೆಗಳು, 135 ಪಿಎಸ್‌ಐ ಹುದ್ದೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ 69, ವೈರ್‌ಲೆಸ್‌ ವಿಭಾಗದಲ್ಲಿ 9, ಮಿನಿಸ್ಟರ್‌ ಸ್ಟಾಫ್ ವಿಭಾಗದಲ್ಲಿ 7 ಹುದ್ದೆ  ಖಾಲಿಯಿದೆ. ಜನಸಂಖ್ಯೆಗೆ ಅನುಗುಣವಾಗಿ ಠಾಣೆಗಳಲ್ಲಿ ಸಿಬ್ಬಂದಿ ಹೆಚ್ಚಳ, ಔರಾದ್ಕರ್‌ ಸಮಿತಿ ವರದಿ ಜಾರಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಗಳ ವ್ಯಾಪ್ತಿಗೆ ಸೇರಿಸುವ ಕುರಿತು ಪ್ರಸ್ತಾವ: ಭೌಗೋಳಿಕವಾಗಿ ಜಿಲ್ಲೆಯ ಹೊರಗಿರುವ ಠಾಣೆಗಳನ್ನು ಆಯಾ ಜಿಲ್ಲೆಗಳ ವ್ಯಾಪ್ತಿಗೆ ಸೇರಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಬೊಮ್ಮಾಯಿ ಐಜಿಪಿ ಶರತ್‌ಚಂದ್ರ ಅವರಿಗೆ ಸೂಚಿಸಿದರು. ಬೆಂಗಳೂರು ದಕ್ಷಿಣ ಹಾಗೂ ಉತ್ತರ ತಾಲ್ಲೂಕಿನ ತಾವರೆಕೆರೆ, ಕುಂಬಳಗೂಡು, ಕಗ್ಗಲಿಪುರ ಠಾಣೆಗಳು ರಾಮನಗರ ಜಿಲ್ಲಾ ವ್ಯಾಪ್ತಿಗೆ ಬರುತ್ತಿದ್ದು, ಇದನ್ನು ಆಯಾ ಜಿಲ್ಲೆಗಳ ವ್ಯಾಪ್ತಿಗೆ ಸೇರಿಸುವ ಬಗ್ಗೆ ವರದಿ ನೀಡುವಂತೆ  ಅವರು ಹೇಳಿದರು.

ಟಾಪ್ ನ್ಯೂಸ್

10-karge

ಆರ್ ಎಸ್ ಎಸ್ ಪಕ್ಕಾ ದೇಶದ್ರೋಹಿ ಸಂಘಟನೆ : ಪ್ರಿಯಾಂಕ್ ಖರ್ಗೆ

prahlad-joshi

ಮೊಟ್ಟೆ ಎಸೆದಿರುವುದನ್ನು ಒಪ್ಪಲಾಗದು: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ದೇಶದ ಬಗ್ಗೆ ಕಾಳಜಿ ಹೊಂದದ ಜನರಿಂದ ಏನನ್ನೂ ನಿರೀಕ್ಷಿಸಬೇಡಿ: ವಿಪಕ್ಷಗಳ ವಿರುದ್ಧ ಪ್ರಧಾನಿ

ದೇಶದ ಬಗ್ಗೆ ಕಾಳಜಿ ಹೊಂದದ ಜನರಿಂದ ಏನನ್ನೂ ನಿರೀಕ್ಷಿಸಬೇಡಿ: ವಿಪಕ್ಷಗಳ ವಿರುದ್ಧ ಪ್ರಧಾನಿ

1-sddsad

ನಾವು ಶಶಿಕಲಾ‌ ಜೊಲ್ಲೆಗೆ ಹುಟ್ಟಿದವರಲ್ಲ: ನಲಪಾಡ್ ವಿವಾದಾತ್ಮಕ ಹೇಳಿಕೆ

eshu 2

ಶಿವಮೊಗ್ಗ, ಭದ್ರಾವತಿಯಲ್ಲಿ ಗಲಾಟೆ ನಾನೇ ಮಾಡಿದ್ದು!: ಈಶ್ವರಪ್ಪ ಕಿಡಿ

4araga

ರಾಜ್ಯದ ಸಂಸ್ಕೃತಿ, ಭಾಷೆಯ ರಕ್ಷಣೆಗೆ ನಮ್ಮ ಸರಕಾರ ಕಟಿಬದ್ದವಾಗಿದೆ: ಆರಗ ಜ್ಞಾನೇಂದ್ರ

24

ಕುಣಿಗಲ್: ಭಿಕ್ಷಾಟನೆ; ಮೂರು ಮಂದಿ ರಕ್ಷಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವರ್ಷ ಕಳೆದ್ರೂ ರಸ್ತೆ ಅಭಿವೃದ್ಧಿ ಪಡಿಸಿಲ್ಲ 

ವರ್ಷ ಕಳೆದ್ರೂ ರಸ್ತೆ ಅಭಿವೃದ್ಧಿ ಪಡಿಸಿಲ್ಲ 

ಬೆಳೆ ವಿಮೆ ನೋಂದಾಯಿಸಿ

ಬೆಳೆ ವಿಮೆ ನೋಂದಾಯಿಸಿ

ವಿದ್ಯಾರ್ಥಿಗಳೇ ರಾಷ್ಟ್ರಧ್ವಜದ ಮೌಲ್ಯ ತಿಳಿದುಕೊಳ್ಳಿ

ವಿದ್ಯಾರ್ಥಿಗಳೇ ರಾಷ್ಟ್ರಧ್ವಜದ ಮೌಲ್ಯ ತಿಳಿದುಕೊಳ್ಳಿ

ಮಾಜಿ ಎಂಎಲ್ ಸಿ ಮರಿಲಿಂಗೇಗೌಡ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆ

ಮಾಜಿ ಎಂಎಲ್ ಸಿ ಮರಿಲಿಂಗೇಗೌಡ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆ

ಭೂಸ್ವಾಧೀನ ಪ್ರಕ್ರಿಯೆ: ಸಚಿವರ ಕಾಲಿಗೆ ಬಿದ್ದ ರೈತರು!

ಭೂಸ್ವಾಧೀನ ಪ್ರಕ್ರಿಯೆ: ಸಚಿವರ ಕಾಲಿಗೆ ಬಿದ್ದ ರೈತರು!

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

ನೆಲಮಂಗಲ; ಗ್ರಾಪಂ ಅಭಿವೃದ್ಧಿಗೆ ಶಾಪವಾದ ಪಿಡಿಒ

ನೆಲಮಂಗಲ; ಗ್ರಾಪಂ ಅಭಿವೃದ್ಧಿಗೆ ಶಾಪವಾದ ಪಿಡಿಒ

1-asddad

ಜಪಾನಂದ ಶ್ರೀಗಳ  ದಿನಸಿ ಕಿಟ್ ಹಾಗೂ ಟಾರ್ಪಲ್  ನೆರೆ ಸಂತ್ರಸ್ತರಿಗೆ ವಿತರಣೆ

1-asdsadad

ಮಹಿಳಾ ಸ್ವಸಹಾಯ ಗುಂಪುಗಳಿಗೆ 61 ಲಕ್ಷ ರೂ. ಗಳ ಚೆಕ್‌ ವಿತರಣೆ

10-karge

ಆರ್ ಎಸ್ ಎಸ್ ಪಕ್ಕಾ ದೇಶದ್ರೋಹಿ ಸಂಘಟನೆ : ಪ್ರಿಯಾಂಕ್ ಖರ್ಗೆ

9cost

4 ಕೋಟಿ ವೆಚ್ಚದಲ್ಲಿ ಭವನ ನವೀಕರಣ: ಗಂದಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.