ಮಾಗಡಿ: ಚುರುಕುಗೊಂಡ ಬಿತ್ತನೆ ಕಾರ್ಯ


Team Udayavani, Jul 13, 2020, 11:28 AM IST

ಮಾಗಡಿ: ಚುರುಕುಗೊಂಡ ಬಿತ್ತನೆ ಕಾರ್ಯ

ಮಾಗಡಿ: ತಾಲೂಕಿನಲ್ಲಿ ವಾಡಿಕೆಗಿಂತ ಉತ್ತಮ ಮಳೆ ಸುರಿಯುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜತೆಗೆ ತಾಲೂಕಿನಲ್ಲಿ ವಿವಿಧ ತಳಿಯ ರಾಗಿ, ಭತ್ತದ ಬಿತ್ತನೆ ಕಾರ್ಯ ಚುರುಕುಗೊಂಡಿದೆ.

ಜನವರಿಯಿಂದ ಜುಲೈ 10ರವರೆಗೆ ವಾರ್ಷಿಕ 278.4 ಮಿ.ಮೀ. ಮಳೆಯಾಗಿದೆ. ರಾಗಿ ಎಂಆರ್‌-1(250 ಕ್ವಿಂಟಾಲ್‌), ಎಂ. ಆರ್‌.-6(143 ಕ್ವಿಂಟಲ್‌ ), ಭತ್ತ ಐಅರ್‌ 64 ಮತ್ತು ಐಆರ್‌ 67(29 ಕ್ವಿಂಟಲ್‌) ತಳಿಗಳನ್ನು ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ವಿತರಣೆ ಮಾಡಲಾಗಿದೆ. ತಾಲೂಕಿನಲ್ಲಿ 28 ಸಾವಿರ ಹೆಕ್ಟೇರ್‌ ರಾಗಿ ಪ್ರದೇಶವಿದ್ದು, 9 ಸಾವಿರ ಹೆಕ್ಟೇರ್‌ ಭತ್ತ ಬೆಳೆವ ಪ್ರದೇಶವಿದೆ. ಬಿತ್ತನೆಯಲ್ಲಿ ತೊಡಗಿರುವ ರೈತರು, ತಮ್ಮ ಹೊಲ ಸ್ವಚ್ಛಗೊಳಿಸಿ, ಹದಗೊಳಿಸುವಲ್ಲಿ ನಿರತ ರಾಗಿದ್ದಾರೆ. ಈಗಾಗಲೇ ಕೆಲ ರೈತರು ಬಿತ್ತನೆ ಆರಂಭಿಸಿದ್ದು, ಸಾಂಪ್ರದಾಯಿಕ ಹಾಗೂ ಯಂತ್ರಗಳ ಮೂಲಕ ಬಿತ್ತನೆ ಕಾರ್ಯ ಮಾಡುತ್ತಿದ್ದಾರೆ. ಶ್ರೀ ಧರ್ಮಸ್ಥಳದ ಗ್ರಾಮಾಭಿ ವೃದ್ಧಿ ಸಂಸ್ಥೆ ಬಹುತೇಕ ತಾಲೂಕು ಕೇಂದ್ರ ಗಳಲ್ಲಿ ಆಧುನಿಕ ಯಂತ್ರ ಬಳಸಲು ಕಡಿಮೆ ಬಾಡಿಗೆ ದರದಲ್ಲಿ ನೀಡಿ ರೈತರನ್ನು ಕೃಷಿ ಚಟುವಟಿಕೆಗೆ ಪ್ರೋತ್ಸಾಹಿಸುತ್ತಿದೆ.

ಸಾಂಪ್ರದಾಯಿಕ ಬಿತ್ತನೆ: ಭಾರತದಲ್ಲಿ ಈಗಲೂ ಸಾಂಪ್ರದಾಯಿಕ ಬಿತ್ತನೆಗೆ ಮಹತ್ವ ವಿದ್ದು, ಎತ್ತುಗಳಿಂದಲೇ ಬಿತ್ತನೆ ಮಾಡಲಾಗು ತ್ತದೆ. ಎತ್ತುಗಳಿಂದ ಅರ್ಧ ಎಕರೆ ಉಳುಮೆಗೆ 1200 ರಿಂದ 1400 ರೂ.ಗಳವರೆಗೆ ಕೊಡ ಬೇಕಾ ಗ ‌ುತ್ತದೆ. ಟ್ರ್ಯಾಕ್ಟರ್‌ನಿಂದ ಒಂದು ಎಕರೆಗೆ 700 ರಿಂದ 800 ಖರ್ಚು ಬರುತ್ತದೆ. ಟ್ರ್ಯಾಕ್ಟರ್‌ನಿಂದ ದಿನಕ್ಕೆ 10 ಎಕರೆ ಉಳಿಮೆ ಮಾಡಬಹುದು. ಹೊಲದಲ್ಲಿ ಒಂದು ಎಕರೆ ಕಳೆ ತೆಗೆಯ ಬೇಕಾದರೆ 6 ರಿಂದ 8 ಕೂಲಿ ಆಳುಗಳು ಬೇಕಾಗುತ್ತದೆ. ಕಳೆ ಯಂತ್ರದಿಂದ ಕನಿಷ್ಠ 2 ಗಂಟೆಗೆ ಎರಡು ಒಂದು ಎಕರೆ ಕಳೆ ತೆಗೆಯಬಹುದು. ಇದರಿಂದಲೂ ಸಮಯ, ಕೂಲಿ ಉಳಿ ತಾಯವಾಗುತ್ತದೆ ಎಂಬುದು ರೈತರ ಅಭಿಪ್ರಾಯವಾಗಿದೆ.

ಬಿತ್ತನೆ ನಂತರ ಅಗತ್ಯ ಮಳೆ ಬಿದ್ದರೆ ಬಿತ್ತನೆ ಕಾಳು ಮೊಳಕೆ ಯೊಡೆದು ಉತ್ತಮ ಫ‌ಸಲು ದೊರೆಯುತ್ತದೆ. ಇಲ್ಲದಿದ್ದರೆ ಬದುಕು ಬದುಕು ನಾಶವಾಗುತ್ತದೆ. ಇಂತಹ ಪರಿಸ್ಥಿತಿ ನಡುವೆ ರೈತರು ಬದುಕಬೇಕು. ಕೃಷಿ ಇಲಾಖೆ ಅಧಿಕಾರಿಗಳು ಹೆಚ್ಚೆಚ್ಚು ಕೃಷಿ ಯಂತ್ರಗಳ ಜೊತೆಗೆ ಸಮಗ್ರ ಕೃಷಿ ಬೇಸಾಯ ಕುರಿತು ರೈತ ಯುವಕರಲ್ಲಿ ಜನ ಜಾಗೃತಿ ಮೂಡಿಸಬೇಕು. ಆಹಾರ ಭದ್ರತೆಗೆ ನಾಂದಿಯಾಗಬೇಕಿದೆ ಎಂಬುದು ನಮ್ಮೆಲ್ಲರ ಆಶಯ ಎಂದು ರೈತರು ತಿಳಿಸಿದ್ದಾರೆ.

ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ರೈತರಿಗೆ ಬಿತ್ತನೆ ಬೀಜ ಒದಗಿಸಲಾಗಿದೆ. ರೈತರು ಕೋವಿಡ್ ಸಂಕಷ್ಟದ ನಡುವೆಯೂ ಕೃಷಿ ಚಟಿವಟಿಕೆಯಲ್ಲಿ ನಿರತರಾಗಿದ್ದು, ಉತ್ತಮ ಬೆಳವಣಿಗೆಯಾಗಿದೆ. ಉತ್ತಮ ಫ‌ಸಲಿನ ನಿರೀಕ್ಷೆಯಿದೆ.  ಶಿವಶಂಕರ್‌, ಕೃಷಿ ಸಹಾಯಕ ನಿರ್ದೇಶಕ

 

 ತಿರುಮಲೆ ಶ್ರೀನಿವಾಸ್‌

ಟಾಪ್ ನ್ಯೂಸ್

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.