ಮಾರ್ಕೆಟ್‌ಗೆ ಟಿಕೆಟ್‌: ಬನಶಂಕರಿಗೇ ಸ್ಟಾಪ್‌


Team Udayavani, May 10, 2019, 5:21 PM IST

ram-2

ಕನಕಪುರ: ಕನಕಪುರ -ಬೆಂಗಳೂರು ಪ್ರಯಾಣ ಮಾಡುವ ಪ್ರಯಾಣಿಕರಿಗೆ ಕೃಷ್ಣರಾಜೇಂದ್ರ ಮಾರುಕಟ್ಟೆಗೆ ಟಿಕೆಟ್‌ ಪಡೆದು ಬನಶಂಕರಿಯಲ್ಲಿ ನಿಲುಗಡೆ ಮಾಡುತ್ತಿರುವ ಸಾರಿಗೆ ಸಂಸ್ಥೆ, ಮಾರುಕಟ್ಟೆಗೆ ತೆರಳಬೇಕಾದ ಪ್ರಯಾಣಿಕರು ಮತ್ತೆ ನಗರಸಾರಿಗೆ ಬಸ್‌ ಅಥವಾ ಮೆಟ್ರೋದಲ್ಲಿ ಪತ್ಯೇಕ ಹಣ ತೆತ್ತು ಪ್ರಯಾಣಿಸುತ್ತಿದ್ದು, ಸಾರಿಗೆ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿತ್ಯವೂ ಕನಕಪುರದಿಂದ ಬೆಂಗಳೂರು ನಗರಕ್ಕೆ ಸರ್ಕಾರಿ ನೌಕರರು, ಖಾಸಗಿ ಕಂಪನಿಯ ನೌಕರರು, ಉದ್ಯಮಿಗಳು ಹೀಗೆ ನಿತ್ಯದ ತಮ್ಮ ಕೆಲಸಕ್ಕಾಗಿ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಬಹುತೇಕ ಮಾರುಕಟ್ಟೆಗೆ ಹೋಗುವ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದ್ದು, ಈ ಹಿಂದೆ ಎಲ್ಲಾ ಸಾರಿಗೆ ಸಂಸ್ಥೆ ಬಸ್‌ಗಳು ಮಾರುಕಟ್ಟೆಗೆ ತೆರಳುತ್ತಿದ್ದು, ಇತ್ತೀಚಿನ ಕೆಲ ದಿನಗಳಿಂದ ಬನಶಂಕರಿಯಲ್ಲೇ ನಿಲುಗಡೆ ಮಾಡುವ ಮೂಲಕ ಪ್ರಯಾಣಿಕರಿಗೆ ವಂಚಿಸುತ್ತಿವೆ ಎನ್ನುವುದು ಪ್ರಯಾಣಿಕರ ಆರೋಪವಾಗಿದೆ.

ಬದಲಾವಣೆ ಜಾಗೃತಿಯಿಲ್ಲ: ಕನಕಪುರ ನಿಲ್ದಾಣದಲ್ಲಿ ನಿರಂತರವಾಗಿ ಮಾರುಕಟ್ಟೆ ತೆರಳುವವರು, ನಿತ್ಯ ಕಾರ್ಮಿಕರು, ತರಕಾರಿ ಮಾರಾಟಗಾರರು, ಕೆಲವು ಗ್ರಾಹಕರು ಹೀಗೆ ಅನೇಕ ಮಂದಿ ನಿತ್ಯವೂ ಪ್ರಯಾಣಿಸುತ್ತಾರೆ. ಅದರೆ ಇದ್ದಕ್ಕಿದ್ದ ಹಾಗೆ ಟಿಕೆಟ್‌ ದರದ ಜತೆಗೆ ಮಾರುಕಟ್ಟೆಗೆ ಬಸ್‌ ಪ್ರಯಾಣವಿಲ್ಲದಂತೆ ಮಾಡಿರುವುದಕ್ಕೆ ಈ ಭಾಗದ ಜನರಿಗೆ ಯಾವುದೇ ಸೂಚನೆಯನ್ನೂ ನೀಡಿಲ್ಲ. ಹಾಗೊಂದು ಬಾರಿ ಬದಲಾವಣೆ ಮಾಡಬೇಕೆಂದರೆ ಸಾರ್ವಜನಿಕರ ಗಮನಕ್ಕೆ ತರಬೇಕೆಂಬುದನ್ನು ಸಾರಿಗೆ ಇಲಾಖೆ ಮರೆತಿದೆ. ಹೀಗಾಗಿ ಸಾರ್ವಜನರಿಕರು ಟಿಕೆಟ್‌ಗೆ ಹಣ ನೀಡಿ ಬನಶಂಕರಿಯಲ್ಲಿ ಮಾರ್ಗಮಧ್ಯದಲ್ಲಿಯೇ ಇಳಿದು ಸಾರಿಗೆ ಇಲಾಖೆ ಹಿಡಿ ಶಾಪ ಹಾಕುತ್ತಿದ್ದಾರೆ.

ರಾಜ್ಯ ರಾಜದಾನಿಗೆ ನಿತ್ಯವೂ ತೆರಳುವ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆಯ ಬಸ್‌ ಬಿಟ್ಟರೆ ಅನ್ಯ ಮಾರ್ಗವಿಲ್ಲ, ಬೇರೆ ಯಾವುದೇ ಸೌಲಭ್ಯವಿಲ್ಲದ ಇಲ್ಲಿ ಸಾರಿಗೆ ಸಂಸ್ಥೆ ಅಧಿಕಾರಿಗಳು ಮಾಡಿದ್ದೇ ಕಾನೂನು ಅನ್ನುಂತಾಗಿದೆ ಎಂದು ಸಾರ್ವಜನಿಕರು ದೂರಿದ್ದು, ಇದನ್ನು ವಿಚಾರಿಸುವ ಜನಪ್ರತಿನಿಧಿಗಳು ನಾಗರಿಕರಿಗೆ ಆಗುತ್ತಿರುವ ತೊಂದರೆಯನ್ನು ನಿರ್ಲಕ್ಷ್ಯ ಮಾಡಿದ್ದಾರೆ.

ನರಕ ಯಾತನೆ: ವಾರದ ಮೊದಲ ದಿನ ಆರಂಭವಾದರೆ ಸಾಕು ಕನಕಪುರ ಬಸ್‌ ನಿಲ್ದಾಣದಲ್ಲಿ ಬಸ್‌ ಹತ್ತಬೇಕಾದರೆ ನನಗೆ ಎಲ್ಲಿ ಜಾಗ ಸಿಗುವುದಿಲ್ಲ ಎಂದು ತರಾತುರಿಯಲ್ಲಿ ಬಸ್‌ ಹತ್ತಬೇಕು. ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಅಂದುಕೊಂಡ ಸ್ಥಳ ತಲುಪಲು ಅಸಾಧ್ಯ. ಇದರ ಜತೆಗೆ, ಪಿಕ್‌ ಪಾಕೆಟ್‌ ಪ್ರಕರಣಗಳೂ ನಡೆಯುತ್ತಿದ್ದ ಪ್ರಯಾಣಿಸುವವರಿಗೆ ಸೂಕ್ತ ಭದ್ರತೆಯಿಲ್ಲದಂತಾಗಿದೆ. ಹೀಗಾಗಿ, ಜನರು ಪ್ರಯಾಣಿಸಲು ಹರಸಾಹ ಪಡಬೇಕು ಹಣ ಕೊಟ್ಟರೂ ಇಲ್ಲ ನರಕ ನೋಡಬೇಕು ಎನ್ನುತ್ತಾರೆ ಪ್ರಯಾಣಿಕರು.

ಬನಶಂಕರಿಯಿಂದ ಮೆಟ್ರೋದಲ್ಲಿ ತೆರಳಿದರೆ 22 ರೂ , ನಗರ ಸಾರಿಗೆಯಲ್ಲಿ ತೆರಳಿದರೆ 19 ರೂ ನೀಡಬೇಕಿದ್ದು, ಕನಕಪುರದಿಂದ ಟಿಕೆಟ್‌ ಪಡೆಯುವ ಸಾರಿಗೆ ಸಂಸ್ಥೆ ಮಾರುಕಟ್ಟೆಗೆ ನಿಗದಿ ಮಾಡಿದ ಹಣವನ್ನು ಬನಶಂಕರಿಗೆ ಪಡೆದು ಪ್ರಯಾಣಿಕರನ್ನು ವಂಚಿಸುತ್ತಿದ್ದು, ಮಾರುಕಟ್ಟೆಗೆ ತರಳುತ್ತಿದ್ದ ಬಸ್‌ ನಿಲ್ಲಿಸಿ ಈಗ ದೂರು ನೀಡಿ ಎಂದರೆ ತಪ್ಪು ಯಾರದ್ದು ಪ್ರಯಾಣಿಕರಿಗೆ ತೊಂದರೆ ಕೊಟ್ಟು ಈಗ ದೂರು
ಕೊಡಿ ಎಂದರೆ ನಮಗೆ ಸಮಯವೇ ಇಲ್ಲ ಇವರಿಗೆ ಎಲ್ಲಿಂದ ದೂರು ಕೊಡುವುದು ಎನ್ನುತ್ತಾರೆ ಪ್ರಯಾಣಿಕರು.

ಕನಕಪುರದಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರು ಮಾರುಕಟ್ಟೆಗೆ ತೆರಳುವ ಬಸ್‌ನಲ್ಲಿ ತೆರಳಲಿ ಬನಶಂಕರಿಗೆ ಬಸ್‌ನಲ್ಲಿ ಯಾಕೆ ಹೋಗಬೇಕು, ಇತ್ತೀಚಿನ ದಿನಗಳಲ್ಲಿ ಸಂಚಾರ ದಟ್ಟಣೆ ಅಧಿಕವಾಗಿದ್ದು, 1.45 ಗಂಟೆಯಲ್ಲಿ ಸಾಗಲು ಸಾಧ್ಯವಾಗುತ್ತಿಲ್ಲ ಅದರಿಂದ ನಾವು ಬನಶಂಕರಿಯಲ್ಲಿ ನಿಲುಗಡೆ ಮಾಡಿದ್ದೇವೆ, ದರದ ಬಗ್ಗೆ ಮಾತನಾಡುವ ಅಧಿಕಾರಿಗಳು ಅದು ಸ್ಟೇಜ್‌ ಲೆಕ್ಕ ನಾವೇನು ಮಾಡಲು ಬರುವುದಿಲ್ಲ ಅಂತಹ ತೊಂದರೆಯಾಗುತ್ತಿದ್ದರೆ ದೂರು ನೀಡಲಿ ನಂತರ ಪರಿಶೀಲನೆ ನಡೆಸುತ್ತೇವೆ.
●ಸಚಿನ್‌, ಡಿಪೋ ವ್ಯವಸ್ಥಾಪಕ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.