ಭಣಗುಟ್ಟಿದ ಪ್ರವಾಸಿ ತಾಣಗಳು


Team Udayavani, Jan 24, 2022, 12:19 PM IST

ಭಣಗುಟ್ಟಿದ ಪ್ರವಾಸಿ ತಾಣಗಳು

ರಾಮನಗರ: ವೀಕ್‌ಎಂಡ್‌ ಕರ್ಫ್ಯೂ ಸರ್ಕಾರ ರದ್ಧು ಮಾಡಿರುವ ಬೆನ್ನಲ್ಲೆ ಜಿಲ್ಲಾಡಳಿತ ಸಹ ಇಲ್ಲಿನ ಪ್ರವಾಸಿತಾಣಗಳಲ್ಲಿ ಹೇರಿದ್ದ ನಿರ್ಬಂಧ ತೆಗೆದುಹಾಕಿದೆ. ವಾರಾಂತ್ಯದಲ್ಲಿಸಾಮಾನ್ಯವಾಗಿ ತುಂಬಿ ತುಳುಕುತ್ತಿದ್ದ ಜಿಲ್ಲೆಯ ಪ್ರವಾಸಿ ತಾಣಗಳ ಪೈಕಿ ಬಹುತೇಕ ತಾಣಗಳಲ್ಲಿ ಭಾನುವಾರ ಜನಸಂದಣಿ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ.

ಪ್ರವಾಸಿ ತಾಣಗಳ ನಿರ್ಬಂಧ ತೆರವು: ಜಿಲ್ಲೆಯ ಪ್ರವಾಸಿ ತಾಣಗಳಾದ ರಾಮನಗರದ ಶ್ರೀ ರಾಮ ದೇವರ ಬೆಟ್ಟ, ರೇವಣ ಸಿದ್ದೇಶ್ವರ ಬೆಟ್ಟ, ಚನ್ನಪಟ್ಟಣದ ಕಣ್ವ ಡ್ಯಾಂ, ಮಾಗಡಿಯ ಮಂಚನಬೆಲೆ ಡ್ಯಾಂ, ಸಾವನದುರ್ಗ, ಕನಕಪುರ ತಾಲೂಕಿನ ಸಂಗಮ,ಮೇಕೆದಾಟು, ಚುಂಚಿ ಜಲಪಾತ ಈ ತಾಣಗಳಲ್ಲಿ ಜಿಲ್ಲಾಡಳಿತ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಆದರೆ ಸರ್ಕಾರ ವೀಕ್‌ಎಂಡ್‌ ಕರ್ಫ್ಯೂ ಹಿಂಪಡೆದ ಕಾರಣ ಡೀಸಿ ಡಾ.ರಾಕೇಶ್‌ ಕುಮಾರ್‌ ನಿಷೇಧಾಜ್ಞೆ ಹಿಂಪಡೆದಿದರು.

ಆದರೆ ಕೋವಿಡ್‌ ಮತ್ತು ಒಮಿಕ್ರಾನ್‌ಸೋಂಕಿನ 3ನೇ ಅಲೆ ತೀವ್ರವಾಗಿರುವ ಕಾರಣ ಪ್ರವಾಸಿಗರು ಪ್ರವಾಸಿ ತಾಣಗಳಿಂದ ದೂರವೇ ಉಳಿದಿದ್ದಾರೆ.

ಸಂಗಮದಲ್ಲಿ ಭಣಭಣ, ಸಾವನದುರ್ಗದಲ್ಲಿ ಜನ: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು ಕನಕಪುರ ಸಂಗಮ, ಮೇಕೆದಾಟು, ಚುಂಚಿ ಫಾಲ್ಸ್‌ನಲ್ಲಿ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಪ್ರವಾಸಿಗರು ಸೇರುತ್ತಿದ್ದರು. ಆದರೆ ಭಾನುವಾರ ನಿರೀಕ್ಷಿಸಿದ ಜನಸಂಖ್ಯೆ ಇಲ್ಲಿ ಕಂಡುಬರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಾಗಡಿ ತಾಲೂಕಿನ ಸಾವನದುರ್ಗ ಸಹ ಭಕ್ತರು ಮತ್ತು ನಿಸರ್ಗ ಪ್ರಿಯರಿಗೆ ಮೆಚ್ಚಿನತಾಣ. ಇಲ್ಲಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿದೇವಾಲಯ ಮತ್ತು ಶ್ರೀ ವೀರಭದ್ರಸ್ವಾಮಿದೇವಾಲಯಗಳಿವೆ. ಹರಿ-ಹರರ ದೇವಾಲಗಳಿರುವ ಈ ತಾಣ ಭಕ್ತರ ನೆಚ್ಚಿನ ಸ್ಥಳ. ಇಲ್ಲಿರುವಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ಯುವ ಸಮುದಾಯ ರಜಾದಿನಗಳಲ್ಲಿ ಪ್ಲಾನ್‌ ಮಾಡುವುದು ಸಹಜ. ಇಲ್ಲಿರುವ ದುರ್ಗಮವಾದ ಕಾಡುಮತ್ತು ನಿಸರ್ಗ ಸೌಂದರ್ಯ ಸಹ ಕಣ್ಮನ ಸೆಳೆಯುತ್ತದೆ. ಭಾನುವಾರ ಸಾವನದುರ್ಗದಲ್ಲಿ ಚಾರಣಿಗರಿಗಿಂತ ಭಕ್ತ ಸಮೂಹವೇ ಹೆಚ್ಚಾಗಿತ್ತು ಎಂದು ಗೊತ್ತಾಗಿದೆ.

ಮೀನೂಟಕ್ಕೆ ಮುಗಿಬಿದ್ದ ಪ್ರವಾಸಿಗರು: ಮಾಗಡಿ ತಾಲೂಕಿನಲ್ಲಿ ಪ್ರವಾಸಿಗರ ಮತ್ತೂಂದು ನೆಚ್ಚಿನ ತಾಣ ಮಂಚನಬೆಲೆ. ಇಲ್ಲಿ ಮೀನು ಖಾದ್ಯಗಳಿಗೆ ಪ್ರವಾಸಿಗರು ಮುಗಿ ಬೀಳುವುದು ಸಹಜ. ಭಾನುವಾರವೂಸಹ ಮೀನು ಖಾದ್ಯಗಳಿಗೆ ಪ್ರವಾಸಿಗರುಮುಗಿ ಬಿದ್ದಿದ್ದರು ಎಂದು ಕೆಲವು ಪ್ರವಾಸಿಗರು ತಿಳಿಸಿದ್ದಾರೆ.

ಶ್ರೀ ರಾಮದೇವರ ಬೆಟ್ಟದಲ್ಲೂ ಖಾಲಿ-ಖಾಲಿ: ರಾಮನಗರ ಬಳಿಯ ಶ್ರೀ ರಾಮ ದೇವರ ಬೆಟ್ಟ ಕೂಡ ಬೆಂಗಳೂರುನಗರ ನಿವಾಸಿಗಳಿಗೆ ನೆಚ್ಚಿನ ತಾಣ. ವಿಶೇಷವಾಗಿ ಯುವಕ-ಯುವತಿಯರಿಗೆ ಹರಟೆಯ ಸ್ಥಳ. ಇಲ್ಲಿರುವ ಬಂಡೆಗಳನ್ನು ಹತ್ತು ಇಳಿಯುವುದು, ಒನಕಂಬಿ ಎಂಬ ಎತ್ತರದಸ್ಥಳಕ್ಕೆ ಹೋಗಿ ಬರುವುದೇ ರೋಚಕ. ಯುವಸಮುದಾಯಕ್ಕೆ ಕಲ್ಲು-ಬಂಡೆಗಳ ಸೆಳೆತ.

ಸ್ಥಳೀಯರು ಇಲ್ಲಿ ನೆಲಸಿರುವ ಶ್ರೀರಾಮನದರ್ಶನಕ್ಕೆ ಧಾವಿಸುವುದುಂಟು. ನಿರ್ಬಂಧಗಳ ತೆರವಿನ ಪ್ರಥಮ ವಾರ ಇಲ್ಲಿಯೂ ನಿರೀಕ್ಷಿಸಿದಷ್ಟು ಜನ ಕಂಡು ಬರಲಿಲ್ಲ. ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಗಾಗಿ ತೆರೆದಿರುವ ವಿಚಾರ ಈಗಷ್ಟೆ ಜನಸಮುದಾಯಕ್ಕೆ ಗೊತ್ತಾಗಿದ್ದು, ಬಹುಶಃ ಮುಂದಿನವಾರದಿಂದ ಇಲ್ಲಿ ಜನ ಎಂದಿನಂತೆ ಬರಬಹುದು ಎಂದು ಪ್ರವಾಸಿ ತಾಣಗಳಲ್ಲಿನ ಸಿಬ್ಬಂದಿ ಹೇಳಿದ್ದಾರೆ.

ನಿಯಮ ಪಾಲಿಸದ ಜನ! ಜಿಲ್ಲೆಯಲ್ಲಿ ಜನರಿಗಾಗಿ ತೆರೆದುಕೊಂಡಿರುವ ಪ್ರವಾಸಿ ತಾಣಗಳತ್ತ ಎಂದಿನ ಪ್ರಮಾಣದ ಜನ ಸಂಖ್ಯೆ ಮುಖಮಾಡಲಿಲ್ಲ. ಆದರೆ ಶನಿವಾರ ಮತ್ತು ಭಾನುವಾರ ಭೇಟಿ ಕೊಟ್ಟಿದ್ದ ಪ್ರವಾಸಿಗರ ಪೈಕಿ ಬಹಳಷ್ಟು ಮಂದಿ ಕೋವಿಡ್‌ ನಿಯಮ ಪಾಲಿಸಲಿಲ್ಲ. ಕೆಲವರು ಮಾಸ್ಕ್ ಧರಿಸಿರಲೇಇಲ್ಲ. ಬೆರಳಣಿಕೆಯಷ್ಟು ಮಂದಿ ಮಾತ್ರಮಾಸ್ಕ್ ಸರಿಯಗಿ ಧರಿಸಿದ್ದರು. ಈ ವಿಚಾರಗಳನ್ನು ಕಂಡ ಪ್ರವಾಸಿ ಮಿತ್ರರು ಮತ್ತು ಪೊಲೀಸರು ಕೇವಲ ಎಚ್ಚರಿಕೆ ನೀಡಿದರೆ ವಿನಃ ಕಾನೂನು ಕ್ರಮ ಕೈಗೊಳ್ಳಲಿಲ್ಲ.

ಟಾಪ್ ನ್ಯೂಸ್

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೆ ಧನ್ಯವಾದ ಹೇಳಿದ ಲಂಕಾ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೆ ಧನ್ಯವಾದ ಹೇಳಿದ ಲಂಕಾ

ಕಾರು ಚಾಲಕನ ಆಟಾಟೋಪ: ಮಹಿಳೆಯರು ಕಕ್ಕಾಬಿಕ್ಕಿ; ಆರೋಪಿ ಪೊಲೀಸರ ವಶ

ಕಾರು ಚಾಲಕನ ಆಟಾಟೋಪ: ಮಹಿಳೆಯರು ಕಕ್ಕಾಬಿಕ್ಕಿ; ಆರೋಪಿ ಪೊಲೀಸರ ವಶ

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಜಾನುವಾರುಗಳ ಹಾನಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್‌

ಜಾನುವಾರುಗಳ ಹಾನಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್‌

“ಅಭ್ಯುದಯಕ್ಕೆ ಸಾಧು, ಸಂತರು ಪ್ರೇರಣೆ’

“ಅಭ್ಯುದಯಕ್ಕೆ ಸಾಧು, ಸಂತರು ಪ್ರೇರಣೆ’

ರೈತರಿಗೆ ಸರ್ಕಾರವನ್ನೇ ಬದಲಿಸುವ ತಾಕತ್ತಿದೆ’: ಚಂದ್ರಶೇಖರ್‌ ರಾವ್‌

ರೈತರಿಗೆ ಸರ್ಕಾರವನ್ನೇ ಬದಲಿಸುವ ತಾಕತ್ತಿದೆ’: ಚಂದ್ರಶೇಖರ್‌ ರಾವ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನ-ರೇವಣ್ಣ ನಡುವೆ ತಂದೆ-ಮಗುವಿನ ಸಂಬಂಧ

ನನ್ನ-ರೇವಣ್ಣ ನಡುವೆ ತಂದೆ-ಮಗುವಿನ ಸಂಬಂಧ

ರೇಷ್ಮೆ ಗೂಡಿನ ಹಣ ಕೇಳಿದ ರೈತನ ಮೇಲೆ ಹಲ್ಲೆ

ರೇಷ್ಮೆ ಗೂಡಿನ ಹಣ ಕೇಳಿದ ರೈತನ ಮೇಲೆ ಹಲ್ಲೆ

ಅಧಿಕಾರದ ಆಸೆಗಾಗಿ ಯಾವತ್ತು  ಕೆಲಸ ಮಾಡಿಲ್ಲ 

ಅಧಿಕಾರದ ಆಸೆಗಾಗಿ ಯಾವತ್ತು  ಕೆಲಸ ಮಾಡಿಲ್ಲ 

ಗುತ್ತಿಗೆ ಪೌರ ಕಾರ್ಮಿಕರಿಂದ ಪ್ರತಿಭಟನೆ

ಗುತ್ತಿಗೆ ಪೌರ ಕಾರ್ಮಿಕರಿಂದ ಪ್ರತಿಭಟನೆ

1dgfdgdf

ಮಾಗಡಿ ಕಾಂಗ್ರೆಸ್ ನಲ್ಲಿ ಶುರುವಾದ ಜಟಾಪಟಿ: ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ

MUST WATCH

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

ಹೊಸ ಸೇರ್ಪಡೆ

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೆ ಧನ್ಯವಾದ ಹೇಳಿದ ಲಂಕಾ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೆ ಧನ್ಯವಾದ ಹೇಳಿದ ಲಂಕಾ

ಕಾರು ಚಾಲಕನ ಆಟಾಟೋಪ: ಮಹಿಳೆಯರು ಕಕ್ಕಾಬಿಕ್ಕಿ; ಆರೋಪಿ ಪೊಲೀಸರ ವಶ

ಕಾರು ಚಾಲಕನ ಆಟಾಟೋಪ: ಮಹಿಳೆಯರು ಕಕ್ಕಾಬಿಕ್ಕಿ; ಆರೋಪಿ ಪೊಲೀಸರ ವಶ

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಜಾನುವಾರುಗಳ ಹಾನಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್‌

ಜಾನುವಾರುಗಳ ಹಾನಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.