Udayavni Special

ಸಮಸ್ಯೆ ಬಗೆಹರಿಸದೆ ಕಾಲ ಕಳೆಯುತ್ತಿರುವ ಬಿಜೆಪಿ: ಆರೋಪ

Team Udayavani, Nov 29, 2020, 11:34 AM IST

ಸಮಸ್ಯೆ ಬಗೆಹರಿಸದೆ ಕಾಲ ಕಳೆಯುತ್ತಿರುವ ಬಿಜೆಪಿ: ಆರೋಪ

ರಾಮನಗರ: 20 ದಿನಗಳಿಂದ 3 ಸಾವಿರಕ್ಕೂ ಅಧಿಕ ಕಾರ್ಮಿಕರು ಬೀದಿಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರ ಸಂಪುಟ ವಿಸ್ತರಣೆ, ಜಾತಿ ಆಧಾರದಲ್ಲಿ ನಿಗಮ, ಮಂಡಳಿ ಸ್ಥಾಪನೆಯಲ್ಲೇ ಮುಳುಗಿದೆ ಎಂದು ಮಂಡ್ಯ ಜಿಲ್ಲೆ ನಾಗಮಂಗಲ ಶಾಸಕ ಸುರೇಶ್‌ ಗೌಡ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.

ತಾಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಟೊಯೋಟ ಕಿರ್ಲೋಸ್ಕರ್ ‌ಮೋಟಾರ್‌ ಕಂಪನಿಯ ನೌಕರರು ನಡೆಸುತ್ತಿರುವ ಬೆಂಬಲ ವ್ಯಕ್ತಪ ಡಿಸಿ ಅವರು ಮುಷ್ಕರ ಸ್ಥಳಕ್ಕೆ ಭೇಟಿ ಕೊಟ್ಟು ಮಾತನಾಡಿದರು. ಬಿಜೆಪಿ ಸರ್ಕಾರ ಕಾರ್ಮಿಕರ ಹಿತ ಕಾಪಾಡುವಲ್ಲಿ ವಿಫ‌ಲವಾಗಿದೆ ಎಂದರು.

ರಾಜ್ಯ ಕಾರ್ಮಿಕ ಮತ್ತು ಕೈಗಾರಿಕಾ ಸಚಿವರು ಮೌನಕ್ಕೆ ಜಾರಿದ್ದಾರೆ. ಡಿಸಿಎಂ ಅಶ್ವಥ್‌ನಾರಾಯಣ ಅವರು ಕಾಟಾಚಾರಕ್ಕೆ ಸಂಧಾನ ಸಭೆ ನಡೆಸಿ ಕೈತೊಳೆದುಕೊಂಡಿದ್ದಾರೆ. ಕಾರ್ಮಿಕರು ಮತ್ತು ಕಂಪೆನಿಯ ಆಡಳಿತ ವರ್ಗದ ನಡುವೆ ಸಾಮರಸ್ಯ ಮೂಡುತ್ತಿಲ್ಲ. ತಾವು ಸಚಿವರಾಗಲು ಬಿಜೆಪಿ ಶಾಸಕರು ದುಂಬಾಲು ಬಿದ್ದು ಲಾಬಿ ನಡೆಸುತ್ತಿರುವುದರಿಂದ ಬಿಎಸ್‌ವೈ ಸರ್ಕಾರ ಗೊಂದಲದಲ್ಲಿ ಮುಳು ಗಿದೆ. ಇನ್ನು ಕಾರ್ಮಿಕರು ಇವರಿಗೆ ನೆನೆಪು ಹೇಗೆ ಬರಬೇಕು ಎಂದರು.

ಇದನ್ನೂ ಓದಿ : ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

ಟೊಯೋಟಾ ತನ್ನ ಕಾರ್ಮಿಕರನ್ನು ಅಮಾನತ್ತಿಲ್ಲಿಟ್ಟಿರುವುದು ಸರಿಯಲ್ಲ. ಕಾರ್ಮಿಕ ಸಂಘದಒಗ್ಗಟ್ಟನ್ನುಮುರಿಯಲುಆಡಳಿತ ಮಂಡಳಿಗೆ ಸಾಧ್ಯವಾಗಿಲ್ಲ. ಟೊಯೋಟಾಗೆ ಕಾರ್ಮಿಕರ ಶಕ್ತಿ ಏನೆಂದು ಅರಿವಾಗಿದೆ ಎಂದರು. ಇನ್ನಾದರೂ ಆಡಳಿತ ವರ್ಗ ಹಠಮಾರಿ ಧೋರಣೆಯನ್ನು ಬಿಟ್ಟು ಕಾರ್ಮಿಕರ ಕನಿಷ್ಠಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.

ಮಂಡ್ಯ ಕಾರ್ಮಿಕರೂ ಇದ್ದಾರೆ: ಕಾರ್ಮಿಕರ ಹೋರಾಟದ ಬಗ್ಗೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಈಗಾಗಲೇ ಸಭೆ ನಡೆದಿದೆ. ಮುಂದಿನ ದಿನಗಳಲ್ಲಿ ಕಾರ್ಮಿಕರ ಹೋರಾಟಕ್ಕೆ ನಮ್ಮ ಪಕ್ಷ ಕೈಜೋಡಿಸಲಿದೆ. ಕಾರ್ಖಾನೆಯಲ್ಲಿ ಮಂಡ್ಯ ಜಿಲ್ಲೆಯ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಅವರಿಗೆ ಅನ್ಯಾಯವಾದರೆ ಮಂಡ್ಯದ ಜನ ಕ್ಷಮಿಸುವುದಿಲ್ಲ. ಕಾರ್ಮಿಕರ ಕುಟುಂಬಗಳ ಜತೆಗೆ ಜನರು ಬೀದಿಗಿಳಿದರೆ ಮುಂದಾಗುವ ಸಮಸ್ಯೆಗೆ ಆಡಳಿತ ಮಂಡಳಿ ಹೊಣೆಯಾಗಲಿದೆ ಎಂದು ಎಚ್ಚರಿಸಿದರು. ಟಿಕೆಎಂ ಕಾರ್ಮಿಕ ಸಂಘದ ಅಧ್ಯಕ್ಷ

ಪ್ರಸನ್ನ ಕುಮಾರ್‌ ಚಕ್ಕೆರೆ ಮಾತನಾಡಿ, ನವ ಜೀವನ ಎಂಬ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೆತಂದಿರುವ ಕಂಪೆನಿ ಈಗಾಗಲೇ 1 ಸಾವಿರಕ್ಕೂ ಅಧಿಕನೌಕರರನ್ನು ಮನೆಗೆ ಕಳುಹಿಸಿದೆ. ಕಾರ್ಮಿಕರನ್ನು ಹಿಂಡಿ ಹಿಪ್ಪೆ ಮಾಡಿ ನಂತರ ಬೀದಿಗೆ ತಳ್ಳುವ ಹೊಸ ಪದ್ದತಿಯನ್ನು ಹುಟ್ಟುಹಾಕಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ರಾಜ್ಯೋತ್ಸವ ಆಚರಣೆ: ಮುಷ್ಕರ ನಿರತ ಕಾರ್ಮಿಕರು ಕನ್ನಡ ರಾಜ್ಯೋತ್ಸವ ಆಚರಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಸುರೇಶ್‌ಗೌಡ ಧ್ವಜಾರೋಹಣ ನೆರವೇರಿಸಿದರು. ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಎಚ್‌ ಎಎಲ್‌ ಕಾರ್ಮಿಕ ಸಂಘದ ಪದಾಧಿಕಾರಿಗಳು, ಕರವೇ ಪದಾಧಿಕಾರಿಗಳು ಹಾಗೂ ಕಾರ್ಮಿಕರು ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕುಂಭಾಸಿ ಆನೆಗುಡ್ಡೆ ಶ್ರೀವಿನಾಯಕ ದೇಗುಲಕ್ಕೆ ಸಿಎಂ ಭೇಟಿ

ಕುಂಭಾಸಿ ಆನೆಗುಡ್ಡೆ ಶ್ರೀವಿನಾಯಕ ದೇಗುಲಕ್ಕೆ ಸಿಎಂ ಭೇಟಿ

ಉಪಚುನಾವಣೆಗೆ ನಾನು ಸ್ಪರ್ಧಿಸುದಿಲ್ಲ: ಜಗದೀಶ ಶೆಟ್ಟರ್‌

ಉಪಚುನಾವಣೆಗೆ ನಾನು ಸ್ಪರ್ಧಿಸುದಿಲ್ಲ: ಜಗದೀಶ ಶೆಟ್ಟರ್‌

GST ನೊಂದವಣಿಗಾಗಿ ಲಂಚ ಸ್ವೀಕರಿಸುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ ಎಸಿಬಿ ಬಲೆಗೆ

GST ನೋಂದಣಿಗಾಗಿ ಲಂಚ ಸ್ವೀಕರಿಸುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ ಎಸಿಬಿ ಬಲೆಗೆ

ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಭರ್ಜರಿ 834 ಅಂಕ ಏರಿಕೆ: ನಿಫ್ಟಿ 14,500

ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಭರ್ಜರಿ 834 ಅಂಕ ಏರಿಕೆ: ನಿಫ್ಟಿ 14,500

ಈಗಿರುವ ಎಲ್ಲಾ ಸಚಿವರನ್ನು ಕೈಬಿಟ್ಟು, ಹೊಸ ಸಂಪುಟ ರಚಿಸಿ: ಬಿಜೆಪಿ ಶಾಸಕ ಶಿವನಗೌಡ ನಾಯಕ್

ಈಗಿರುವ ಎಲ್ಲಾ ಸಚಿವರನ್ನು ಕೈಬಿಟ್ಟು, ಹೊಸ ಸಂಪುಟ ರಚಿಸಿ: ಬಿಜೆಪಿ ಶಾಸಕ ಶಿವನಗೌಡ ನಾಯಕ್

ರಾಷ್ಟ್ರ ರಾಜಧಾನಿಯಲ್ಲಿ ಇಂಧನ ಬೆಲೆ ದುಪ್ಪಟ್ಟು, ಮುಂಬೈಯಲ್ಲಿ ಪೆಟ್ರೋಲ್ ಲೀಟರ್ ಗೆ  92ರೂ.

ರಾಷ್ಟ್ರ ರಾಜಧಾನಿಯಲ್ಲಿ ಇಂಧನ ಬೆಲೆ ದುಪ್ಪಟ್ಟು, ಮುಂಬೈಯಲ್ಲಿ ಪೆಟ್ರೋಲ್ ಲೀಟರ್ ಗೆ  92ರೂ.

ಹೊಸ ಫೀಚರ್‌ ಜತೆಗೆ ಟಾಟಾ ಅಲ್ಟೋಸ್‌ ಐ ಟರ್ಬೋ

ಹೊಸ ಫೀಚರ್‌ ಜತೆಗೆ ಟಾಟಾ ಅಲ್ಟೋಸ್‌ ಐ ಟರ್ಬೋಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಧವ್‌ ಠಾಕ್ರೆ ಹೇಳಿಕೆ ಹಿಂಪಡೆಯಬೇಕು : ಸಾಮ್ರಾಟ್‌ ಗೌಡ ಎಚ್ಚರಿಕೆ

ಉದ್ಧವ್‌ ಠಾಕ್ರೆ ಹೇಳಿಕೆ ಹಿಂಪಡೆಯಬೇಕು : ಸಾಮ್ರಾಟ್‌ ಗೌಡ ಎಚ್ಚರಿಕೆ

ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತನ ತಂದೆಯನ್ನ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ

ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತನ ತಂದೆಯನ್ನ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ

RAMANAGARA

ಸೇನಾಅಧಿಕಾರಿಗೆ ಅಭಿನಂದನೆ

NEWS-TDY-1

ರಾಮನಗರ ಉಪವಿಭಾಗಾಧಿಕಾರಿಗಳಿಂದ ಮೂರು ಕೋಟಿ ರೂ ಆಮಿಷ – ಎಚ್.ಡಿ.ಕೆ.ಬಾಂಬ್!

Gangadharachar unanimous selection

ಗಂಗಾಧರಾಚಾರ್‌ ಅವಿರೋಧ ಆಯ್ಕೆ

MUST WATCH

udayavani youtube

ಮಂಗಳೂರು ಗೋಲಿಬಾರ್ ಗೆ ಪ್ರತೀಕಾರ: ಪೊಲೀಸ್ ಸಿಬ್ಬಂದಿ ಕೊಲೆ ಯತ್ನದ ಹಿಂದೆ ‘ಮಾಯಾ ಗ್ಯಾಂಗ್’

udayavani youtube

ಪಾರ್ಕಿಂಗ್ ಪರದಾಟ ಅಭಿಯಾನ; ಸುದಿನ ಸಂವಾದ

udayavani youtube

ಕಂದಮ್ಮನೆಡೆ ಮನೆಯವರನ್ನು ಕರೆದೊಯ್ದ ಗೋಮಾತೆ….

udayavani youtube

KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani

udayavani youtube

Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??

ಹೊಸ ಸೇರ್ಪಡೆ

ಸೈದಾಪುರ ಗ್ರಾಮ ಪಂಚಾಯತ್‌ ಅಧಿಕಾರಕ್ಕೆ ಪೈಪೋಟಿ

ಸೈದಾಪುರ ಗ್ರಾಮ ಪಂಚಾಯತ್‌ ಅಧಿಕಾರಕ್ಕೆ ಪೈಪೋಟಿ

ಬಸವಕಲ್ಯಾಣ-ಹುಲಸೂರ ಮೀಸಲಾತಿ ಪಟ್ಟಿ

ಬಸವಕಲ್ಯಾಣ-ಹುಲಸೂರ ಮೀಸಲಾತಿ ಪಟ್ಟಿ

ಕುಂಭಾಸಿ ಆನೆಗುಡ್ಡೆ ಶ್ರೀವಿನಾಯಕ ದೇಗುಲಕ್ಕೆ ಸಿಎಂ ಭೇಟಿ

ಕುಂಭಾಸಿ ಆನೆಗುಡ್ಡೆ ಶ್ರೀವಿನಾಯಕ ದೇಗುಲಕ್ಕೆ ಸಿಎಂ ಭೇಟಿ

ಬಸವಣ್ಣ ಜಗತ್ತಿನ ಶ್ರೇಷ್ಠ ಆರ್ಥಿಕ ತಜ್ಞ; ಸಿಎ ರುದ್ರಮೂರ್ತಿ

ಬಸವಣ್ಣ ಜಗತ್ತಿನ ಶ್ರೇಷ್ಠ ಆರ್ಥಿಕ ತಜ್ಞ; ಸಿಎ ರುದ್ರಮೂರ್ತಿ

ಉಪಚುನಾವಣೆಗೆ ನಾನು ಸ್ಪರ್ಧಿಸುದಿಲ್ಲ: ಜಗದೀಶ ಶೆಟ್ಟರ್‌

ಉಪಚುನಾವಣೆಗೆ ನಾನು ಸ್ಪರ್ಧಿಸುದಿಲ್ಲ: ಜಗದೀಶ ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.