ಗುಂಡಿ ರಸ್ತೆಯಲ್ಲಿ ಸಂಚಾರ ನರಕಯಾತನೆ

ಜಿಲ್ಲಾ ಗಡಿ ಗ್ರಾಮದ ರಸ್ತೆ ಅಭಿವೃದ್ಧಿ ಮರಿಚಿಕೆ • 20 ವರ್ಷಗಳು ಕಳೆದರೂ ಡಾಂಬರೀಕರಣವಾಗಿಲ್ಲ

Team Udayavani, May 7, 2019, 3:50 PM IST

ramanagar-tdy-2..

ಕುದೂರು ಹೋಬಳಿಯ ಶ್ರೀಗಿರಿಪುರ ಗ್ರಾಪಂ ವ್ಯಾಪ್ತಿಯ ಹೊಸಹಳ್ಳ ರಸ್ತೆಯಲ್ಲಿ ಗುಂಡಿ ಬಿದ್ದಿದೆ.

ಕುದೂರು: ರಾಮನಗರ ಜಿಲ್ಲೆಯ ಗಡಿ ಗ್ರಾಮವಾದ ಹೊಸಹಳ್ಳಿ ಗ್ರಾಮದಿಂದ ಶಿವಗಂಗೆ ಮತ್ತು ಕುದೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಮಯವಾಗಿದೆ. ಪ್ರತಿ ನಿತ್ಯ ಸಂಚಾರ ಮಾಡುವ ಸಾರ್ವಜನಿಕರು ನರಕಯಾತನೆ ಅನುಭವಿಸುವಂತಾಗಿದೆ.

ಕುದೂರು ಹೋಬಳಿಯ ಶ್ರೀಗಿರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮವು ಬೆಂಗಳೂರು ಗ್ರಾಮಾಂತರ ಹಗೂ ರಾಮನಗರ ಜಿಲ್ಲೆಯ ಗಡಿ ಅಂಚಿನಲ್ಲಿರುವುದರಿಂದ ಅಭಿವೃದ್ಧಿ ಮರಿಚಿಕೆಯಾಗಿದೆ. ಸುಮಾರು 70 ಮನೆಗಳಿರುವ ಈ ಗ್ರಾಮಕ್ಕೆ ಸೂಕ್ತ ರಸ್ತೆ ಸಮಪರ್ಕವಿಲ್ಲ. ಸುಮಾರು ಮೂರುವರೆ ಕಿ.ಮೀ ರಸ್ತೆಯುದ್ದಕ್ಕೂ ದಪ್ಪ ಜಲ್ಲಿಕಲ್ಲು ಹಾಗೂ ಗುಂಡಿಗಳದ್ದೇ ಕಾರುಬಾರು. ಇದರಿಂದಾಗಿ ವಯೋವೃದ್ದರು, ರೈತರು, ವಿದ್ಯಾರ್ಥಿಗಳು ನಿತ್ಯ ಸಂಚಾರಿಸಲಾಗದೇ ತೊಂದರೆ ಅನುಭವಿಸುತ್ತಿದ್ದಾರೆ. ಆದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಅಭಿವೃದ್ಧಿಗೆ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಗ್ರಾಮಸ್ಥರಿಂದ ಕೇಳಿಬರುತ್ತಿದೆ.

ಹಳೇ ರಸ್ತೆ ಅವಲಂಬನೆ: ಶಿವಗಂಗೆ ರಸ್ತೆ ಮಾರ್ಗದಿಂದ ಹೊಸಹಳ್ಳಿ ಮಾರ್ಗವಾಗಿ ಚಿಕ್ಕಮಸ್ಕಲ್, ನಾಗನಹಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಅನೇಕ ವರ್ಷಗಳ ಹಿಂದೆ ಡಾಂಬರೀಕರಣ ಮಾಡಲಗಿದ್ದು, ಸುಮಾರು ಇಪ್ಪತ್ತು ವರ್ಷಗಳು ಕಳೆದರೂ ಅದೇ ರಸ್ತೆಯನ್ನೂ ಅಲಂಬಿಸುವಂತಾಗಿದೆ. ಇದೀಗ ರಸ್ತೆ ಡಾಂಬರೀಕರಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಶಾಸಕರು ಶಂಕುಸ್ಥಾಪನೆ ನೇರವೆರಿಸಿದ್ದಾರೆ. ಶಂಕುಸ್ಥಾಪನೆ ನೇರವೇರಿಸಿ ಸುಮಾರು 3 ತಿಂಗಲು ಕಳೆದರೂ ಕೆಲಸ ಇನ್ನೂ ಆರಂಭಗೊಂಡಿಲ್ಲ. ರಸ್ತೆಯ ಕಿತ್ತು ಹೋಗಿದ್ದು, ಮಾರು ಉದ್ದದ ಗುಂಡಿಗಳಾಗಿವೆ. ಇದಲ್ಲದೆ ರಸ್ತೆಯಲ್ಲಿನ ಜಲ್ಲಿಕಲ್ಲುಗಳು ಎದ್ದು ಕಾಣುತ್ತಿದ್ದು, ಪ್ರತಿ ನಿತ್ಯ ಎರಡರಿಂದ ಮುರು ವಾಹನಗಳು ಪಂಚರ್‌ ಆಗಿ ದಿನ ಐದಾರು ಕಿ.ಮೀ ತಳ್ಳುವಂತಾಗಿದೆ. ಅದಷ್ಟು ಬೇಗ ರಸ್ತೆ ಡಾಂಬರೀಕರಣಗೊಳಿಸ ಬೇಕು ಎಂದು ಮನವಿ ಮಾಡಿದ್ದಾರೆ.

ರೈತರಿಗೂ ತಪ್ಪದ ಗೋಳು: ರೈತರು ಶ್ರಮವಹಿಸಿ ಬೆಳೆದ ಬೆಳೆಗಳನ್ನು ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ಸಂಚರಿಸಲಾಗದೆ ಹಿಡಿ ಶಾಪವಾಕುತ್ತಿದ್ದಾರೆ. ಒಂದು ವೇಳೆ ಬೆಳೆ ಸಾಗಿಸಲು ಮುಂದಾದರೂ ಸಾಮಾನ್ಯಕ್ಕಿಂತ ಮೂರು ಪಟ್ಟು ಹಣ ನೀಡಬೇಕು.

ಮಳೆ ಬಂದರಂತೂ ಇನ್ನೂ ತೊಂದರೆ: ಮಳೆ ಬಂದರಂತೂ ಮಂಡಿಯುದ್ದದ ಗುಂಡಿಗಳು ಇರುವುದರಿಂದ ನೀರು ನಿಲ್ಲುತ್ತದೆ. ನೀರು ನಿಲ್ಲುವುದರಿಂದ ರಸ್ತೆಯಾವುದು? ಗುಂಡಿ ಯಾವುದು ಗೊತ್ತಾಗದೇ ಬಿದ್ದು ಗಾಯಗೊಂಡಿರುವ ಸಾಕಷ್ಟು ಉದಾಹರಣೆಗಳಿವೆ.

ರಸ್ತೆಗಳು ಅಭಿವೃದ್ಧಿಯ ಸಂಕೇತ: ಗ್ರಾಮಗಳು ಅಭಿವೃದ್ಧಿಯಾಗಬೇಕು ಎಂದರೆ ಮೊದಲು ಸಮರ್ಪಕ ರಸ್ತೆ ಇರಬೇಕು. ಆಗ ಮಾತ್ರ ಹಳ್ಳಿಗಳ ಪ್ರಗತಿ ಕಾಣಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಗ್ರಾಮೀಣಾಭಿವೃದ್ಧಿ ಕೇವಲ ಕನಸಿನ ಮಾತಾಗುತ್ತದೆ. ಪ್ರತಿ ನಿತ್ಯ ಸಾವಿರಾರು ಮಂದಿ ಸಂಚರಿಸುವ ರಸ್ತೆಯ ನಿರ್ವಹಣೆಯಲ್ಲೇ ನಿರ್ಲಕ್ಷ್ಯವಹಿಸಿದ್ದರೆ ಇನ್ನೇನು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ಜನರು ತಾಳ್ಮೆ ಕಳೆದುಕೊಳ್ಳುವ ಮುನ್ನ ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕಾಗಿದೆ.

● ಕೆ.ಎಸ್‌.ಮಂಜುನಾಥ್‌

ಟಾಪ್ ನ್ಯೂಸ್

ಪರಿಷತ್‌: 17 ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

Karnataka ಪರಿಷತ್‌: 17 ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

HD Revanna ಕುಟುಂಬದ ವಿರುದ್ಧ ಷಡ್ಯಂತ್ರವಿಲ್ಲ: ಪರಮೇಶ್ವರ್‌

HD Revanna ಕುಟುಂಬದ ವಿರುದ್ಧ ಷಡ್ಯಂತ್ರವಿಲ್ಲ: ಪರಮೇಶ್ವರ್‌

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು

ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು

1-BP

BJP vs BJP; ವಿಜಯೇಂದ್ರ ವಿರುದ್ಧ ಕಿಡಿ ಕಾರಿದ ಹರಿಹರ ಶಾಸಕ ಬಿ.ಪಿ.ಹರೀಶ್

Mamatha

West Bengal: ಬಾಂಗ್ಲಾ ಜೊತೆ ನೀರು ಹಂಚಿಕೆ ಮಾತುಕತೆಗೆ ಸಿಎಂ ಮಮತಾ ಆಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಪ್ಪು ಮಾಡಿ ಎಂದು ಮಕ್ಕಳಿಗೆ ನಾವು ಹೇಳುತ್ತೇವಾ: ಎಚ್‌ಡಿಕೆತಪ್ಪು ಮಾಡಿ ಎಂದು ಮಕ್ಕಳಿಗೆ ನಾವು ಹೇಳುತ್ತೇವಾ: ಎಚ್‌ಡಿಕೆ

HDK; ತಪ್ಪು ಮಾಡಿ ಎಂದು ಮಕ್ಕಳಿಗೆ ನಾವು ಹೇಳುತ್ತೇವಾ…

HDK 2

By-Election; ನಿಖಿಲ್ ನನ್ನು ಕಣಕ್ಕಿಳಿಸುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನುಡಿ

Nikhil contest for Channapatna by-election?: HDK openly announced the decision

Channapatna ಉಪಚುನಾವಣೆಗೆ ನಿಖಿಲ್ ಸ್ಪರ್ಧೆ?: ಬಹಿರಂಗವಾಗಿ ನಿರ್ಧಾರ ಪ್ರಕಟಿಸಿದ ಎಚ್ ಡಿಕೆ

Untitled-1

Fraud: ಫೋನ್‌ ಪೇ ಹ್ಯಾಕ್‌ ಮಾಡಿ ಉದ್ಯಮಿಗೆ 1.94 ಲಕ ವಂಚನೆ

Ramanagar: ಪತ್ನಿ, ಪ್ರಿಯಕರ ಸೇರಿ ಮಗುವಿನ ಮೇಲೆ ಹಲ್ಲೆ: ದೂರು ದಾಖಲು

Ramanagar: ಪತ್ನಿ, ಪ್ರಿಯಕರ ಸೇರಿ ಮಗುವಿನ ಮೇಲೆ ಹಲ್ಲೆ: ದೂರು ದಾಖಲು

MUST WATCH

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

ಹೊಸ ಸೇರ್ಪಡೆ

ಪರಿಷತ್‌: 17 ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

Karnataka ಪರಿಷತ್‌: 17 ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

HD Revanna ಕುಟುಂಬದ ವಿರುದ್ಧ ಷಡ್ಯಂತ್ರವಿಲ್ಲ: ಪರಮೇಶ್ವರ್‌

HD Revanna ಕುಟುಂಬದ ವಿರುದ್ಧ ಷಡ್ಯಂತ್ರವಿಲ್ಲ: ಪರಮೇಶ್ವರ್‌

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

1–ncxcx.

Bantwal; ಧಾರ್ಮಿಕ ಕೇಂದ್ರಗಳು, ಶಿಶುಮಂದಿರದಿಂದ ಸಾವಿರಾರು ರೂ. ಕಳವು

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.