ನೀರಿನಲ್ಲಿ ಆಡುವ ಆಟಗಳು ತಾತಾಲಿಕ ನಿಷೇಧ
Team Udayavani, Apr 8, 2021, 4:17 PM IST
ರಾಮನಗರ: ಜಿಲ್ಲಾದ್ಯಂತ ಕೋವಿಡ್ ವೈರಸ್ ಸೋಂಕು ಹರಡದಂತೆ ತಡೆಯುವ ಸಲುವಾಗಿ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರದ ಆದೇಶದಂತೆ ಮುಂದಿನ ಆದೇಶದವರೆಗೆ ವಂಡರ್ ಲಾ ಅಮ್ಯೂಜ್‌ಮೆಂಟ್ ಪಾರ್ಕಿ ನಲ್ಲಿ ಈಜೂಕೊಳಗಳನ್ನು ಮತ್ತು ನೀರಿನಲ್ಲಿ ಆಡುವ ಎಲ್ಲಾ ರೀತಿಯ ಆಟಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಆದೇಶ ಹೊರಡಿಸಿದ್ದಾರೆ.
ಉಳಿದ ಆಟಗಳನ್ನು ಕೇಂದ್ರ, ರಾಜ್ಯ, ಜಿಲ್ಲಾಡಳಿತದಿಂದ ಕೋವಿಡ್ ತಡೆಗಟ್ಟು ನಿಟ್ಟಿನಲ್ಲಿ ಹೊರಡಿಸಿರುವ ಆದೇಶಗಳ ನ್ವಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಕಾರ್ಯನಿರ್ವಹಿ ಸುವಂತೆ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಇದೇವೇಳೆ ಸರ್ಕಾರದ ನಿರ್ದೇಶನದ ಮೇರೆಗೆ ಹೇಳಿಕೆ ನೀಡಿರುವ ವಂಡರ್ ಲಾ, ತನ್ನಲ್ಲಿರುವ ನೀರಿನ ಸವಾರಿಗಳನ್ನು ಬಂದ್ ಮಾಡಿರುವುದಾಗಿ ತಿಳಿಸಿದೆ. ಸರ್ಕಾರದಿಂದ ಸೂಚನೆ ಬರುವವರೆಗೆ ನೀರಿನ ಸವಾರಿಗಳು ಇರುವುದಿಲ್ಲ. ಎಲ್ಲಾ ಭೂ ಸವಾರಿಗಳು ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಪ್ರಕಟಣೆ ತಿಳಿಸಿದೆ.
ತಮ್ಮ ಗ್ರಾಹಕರಿಗೆ ಸುರಕ್ಷಿತ ವಾತಾವರಣ ಕಾಪಾಡಿಕೊಳ್ಳುವ ಬದ್ಧತೆಯನ್ನು ತಮ್ಮ ಸಂಸ್ಥೆ ಎಂದೂ ಪ್ರದರ್ಶಿಸಿದೆ. ಹೀಗಾಗಿ ಸರ್ಕಾರಿ ಆದೇಶ ಪಾಲಿಸುತ್ತಿರುವುದಾಗಿ ವಂಡರ್ ಲಾ ವ್ಯವಸ್ಥಾಪಕ ನಿರ್ದೇಶಕ ಅರುಣ್ ಚಿಟ್ಟಿ ಲಾಪಿಲ್ಲಿ ತಿಳಿಸಿದ್ದಾರೆ.