ಅಕ್ರಮ ಕಾರ್ಖಾನೆಯಿಂದ ಜಲಮೂಲ ಮಾಲಿನ್ಯ

Team Udayavani, Sep 6, 2019, 3:34 PM IST

ಕನಕಪುರ: ತಾಲೂಕಿನ ಮರಳವಾಡಿ ಹೋಬಳಿಯ ದೇವರಕಗ್ಗಲಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸುಮಾರು 2 ವರ್ಷದಿಂದ ಕಾರ್ಖಾನೆ ನಡೆಸುತ್ತಿದ್ದು ಸುತ್ತಮುತ್ತಲ ಗ್ರಾಮಸ್ಥರು ಗಬ್ಬು ವಾಸನೆಯಿಂದ ಹೈರಾಣಾಗಿದ್ದು, ರೋಗ ರುಜಿನ ಹರಡುವ ಭೀತಿಯಲ್ಲಿ ದಿನದೂಡುವಂತಾಗಿದೆ. ಪ್ರಾಣಿ ಪಕ್ಷಿಗಳು ಕಲುಷಿತ ನೀರನ್ನು ಕುಡಿದು ಮರಣ ಹೊಂದುತ್ತಿವೆ ಎಂದು ಆರೋಪಿಸಿ ದೇವರಕಗ್ಗಲಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಚಿಲೂರು ಗ್ರಾಪಂ ವ್ಯಾಪ್ತಿಯ ದೇವರ ಕಗ್ಗಲಹಳ್ಳಿ ಸರ್ವೆ ನಂ 56 ರಲ್ಲಿ ಚೈತ್ರ ಇರಿಗೇಷನ್‌ ಎಂಬ ರಸ ಗೊಬ್ಬರ ಕಾರ್ಖಾನೆ ಎರಡು ವರ್ಷದಿಂದ ಸ್ಥಳೀಯ ಆಡಳಿತದಿಂದ ಯಾವುದೇ ಪರವಾನಗಿ ಪಡೆಯದೆ ಕಾರ್ಖಾನೆ ನಡೆಸುತ್ತಿದೆ ಎಂದು ಆರೋಪಿಸಿದರು.

ಜನಪ್ರತಿನಿಧಿಗಳಿಗೆ ತರಾಟೆ: ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಕಾರ್ಖಾನೆಯು ತ್ಯಾಜ್ಯವನ್ನು ಪಕ್ಕದಲ್ಲಿರುವ ಬನ್ನಿಕುಪ್ಪೆ ಮತ್ತು ದೇವರಕಗ್ಗಲಹಳ್ಳಿ ಕೆರೆಗೆ ಬಿಡುತ್ತಿದ್ದು ರಾಸುಗಳು ನೀರನ್ನು ಸೇವಿಸಿ ಸಾವನ್ನಪ್ಪಿರುವ ಉದಾಹರಣೆಯೂ ಇದೆ ಎಂದು ಗ್ರಾಮಸ್ಥರು ದೂರಿದರು. ಇಷ್ಟು ವಿಷಕಾರಿ ತ್ಯಾಜ್ಯವನ್ನು ಹೊರಸುಸುವ ಕಾರ್ಖಾನೆಯನ್ನು ಜನ ವಸತಿ ಪ್ರದೇಶದಲ್ಲಿ ನಿರ್ಮಾಣ ಮಾಡಲು ಅನುಮತಿ ಕೊಟ್ಟಿದ್ದಾದರೂ ಯಾರು ಎಂದು ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಮಾಲೀಕರಿಗೆ ನೋಟಿಸ್‌: ಇದರಿಂದ ಹೆಚ್ಚೆತ್ತ ಸ್ಥಳೀಯ ಆಡಳಿತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರಸಗೊಬ್ಬರ ಕಾರ್ಖಾನೆ ಎಲ್ಲಿದೆ ಎಂಬುದೆ ಗೊತ್ತಿಲ್ಲ ಕಾರ್ಖಾನೆ ಸ್ಥಾಪಿಸುವ ಮುನ್ನ ನಮಗೆ ಮಾಹಿತಿ ಬಂದಿಲ್ಲ ನಮ್ಮಿಂದ ಯಾವುದೇ ಅನುಮತಿಯನ್ನು ಪಡೆದಿಲ್ಲ ಎಂದ ಅಧಿಕಾರಿಗಳು ಕಾರ್ಖಾನೆ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಮಾಲೀಕರಿಂದ ಬೆದರಿಕೆ: ಅಧಿಕಾರಿಗಳು ನೀಡಿರುವ ನೋಟಿಸ್‌ಗೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡದೆ ಕಾರ್ಖಾನೆ ಮಾಲೀಕರು ದೂರು ನೀಡಿದ್ದ ಗ್ರಾಮಸ್ಥರಿಗೆ ಬೆದರಿಕೆ ಹಾಕಿದ್ದಾರೆ ಎಂದರು.

ಜಾಗ ಖಾಲಿ ಮಾಡಲು ಎಚ್ಚರಿಕೆ: ಕಾರ್ಖಾನೆ ಮಾಲೀಕ ಗ್ರಾಮಸ್ಥರಿಗೆ ಬೆದರಿಕೆಯೊಡ್ಡಿರುವ ವಿಷಯ ತಿಳಿದ ಪಂಚಾಯ್ತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾರ್ಖಾನೆಗೆ ಭೇಟಿ ನೀಡಿ ವಸ್ತು ಸ್ಥಿತಿ ಪರಿಶೀಲಿಸಿ ಬೆಸ್ಕಾಂ ಪರವಾನಗಿ ಪಡೆಯದೇ ಅಕ್ರಮವಾಗಿ ವಿದ್ಯುತ್‌ನ್ನು ಬಳಸುತ್ತಿರುವುದು ಕಂಡು ಬಂದು ಬೆಸ್ಕಾಂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದು ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿ, ಈ ಕೂಡಲೇ ಕಾರ್ಖಾನೆಯನ್ನು ಸ್ಥಗಿತಗೊಳಿಸಿ ಜಾಗ ಖಾಲಿ ಮಾಡಿ ಎಂದು ಎಚ್ಚರಿಸಿದರು.

ಕಾಲಾವಕಾಶ ಕೇಳಿದ ಕಾರ್ಖಾನೆ ಮಾಲೀಕ: ಕಾರ್ಖಾನೆ ಮಾಲೀಕ ಒಂದು ತಿಂಗಳು ಕಾಲಾವಕಾಶ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಪಿಡಿಒ ದಯಾನಂದ ಸಾಗರ್‌ 15 ದಿನಗಳ ಕಾಲಾವಕಾಶ ನೀಡಿ ಇಲ್ಲಿಯವರೆಗಿನ ಕಂದಾಯ ಕಟ್ಟಿ ಜಾಗ ಖಾಲಿ ಮಾಡಿ ಎಂದು ಸೂಚಿಸಿದು. ಚೀಲೂರು ಗ್ರಾಪಂ ಸದಸ್ಯರಾದ ಶೋಭಾ, ರವಿ, ತಿಮಪ್ಪ, ಪಂಚಾಯ್ತಿ ಅಧಿಕಾರಿಗಳು ಗ್ರಾಮಸ್ಥರು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ