ಕಾಡಾನೆ ದಾಳಿಗೆ ನಲುಗಿದ ರೈತರು

ಕೈಲಾಂಚ ಹೋಬಳಿಯ ತೆಂಗಿನ ಕಲ್ಲು ಗ್ರಾಮದಲ್ಲಿ ಸುಮಾರು 8 ಆನೆಗಳ ಹಿಂಡಿನಿಂದ ದಾಳಿ !

Team Udayavani, May 14, 2021, 1:50 PM IST

1305rmnp2_1305bg_2

ರಾಮನಗರ: ತಾಲೂಕಿನ ಕೈಲಾಂಚ ಹೋಬಳಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಆನೆ ದಾಳಿಗೆ ರೈತರು ಹೈರಾಣಾಗಿದ್ದಾರೆ. ಕೈಲಾಂಚ ಹೋಬಳಿಯ ತೆಂಗಿನ ಕಲ್ಲು ಗ್ರಾಮದಲ್ಲಿ ಸುಮಾರು 8 ಆನೆಗಳ ಹಿಂಡು ಬುಧವಾರ ರಾತ್ರಿ ದಾಳಿ ನಡೆಸಿ ಮಾವು, ತೆಂಗಿನಮರಗಳನ್ನು ನಾಶ ಮಾಡಿವೆ.

ಕಟಾವಿಗೆ ಬಂದಿದ್ದ ಮಾವಿನ ಫ‌ಸಲು ನಾಶವಾಗಿದೆ. ಕಾವೇರಿ ವನ್ಯ ಜೀವಿಧಾಮದಿಂದ ಕನಕಪುರದ ಕಬ್ಟಾಳು ಅರಣ್ಯದ ಮೂಲಕ ಆಗಮಿಸಿ ರುವ ಆನೆಗಳ ಹಿಂಡು ಕಳೆದೊಂದು ತಿಂಗಳಿನಿಂದ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿವೆ. ಪದೇ ಪದೆ ಆನೆಗಳ ಹಿಂಡು ಸುತ್ತ ಮುತ್ತಲ ಗ್ರಾಮಗಳಲ್ಲಿ ದಾಳಿ ನಡೆಸಿ ರೈತರ ಫ‌ಸಲನ್ನು ನಾಶ ಮಾಡುತ್ತಿವೆ ಎಂಬ ದೂರುಗಳು ವ್ಯಕ್ತವಾಗುತ್ತಿವೆ. ಆಹಾರ ಅರಸಿ ಬಂದ ಆನೆಗಳು ಬುಧವಾರ ರಾತ್ರಿ ಮತ್ತೆ ತೋಟಗಳ ಮೇಲೆ ದಾಳಿ ಮಾಡಿವೆ.

ಪುಟ್ಟ ಸ್ವಾಮಿ ಅವರ 8 ಮಾವಿನ ಮರ, ವೆಂಕಟೇಶ್‌ ಎಂಬುವರಿಗೆ ಸೇರಿದ 7 ಮಾವಿನ ಮರ, ಕರಿ ತಿಮ್ಮಣ್ಣ ಎಂಬುವರಿಗೆ ಸೇರಿದ 6 ಮಾವಿನ ಮರಗಳಿಗೆ ಹಾನಿಯಾಗಿದ್ದು ಮಾವಿನ ಫ‌ಸಲು ಕೈತಪ್ಪಿದೆ. ಬಾದಾಮಿ, ರಸಪೂರಿ ಮಾವಿನ ಹಣ್ಣುಗಳು ಕಟಾವಿಗೆ ಬಂದಿತ್ತು. ಕೈಗೆ ಬಂದ ತುತ್ತು ಬಾಯಿಗೆ ಸಿಗಲಿಲ್ಲ ಎಂಬಂತಾಗಿದೆ ಎಂದು ಈ ರೈತರು ಅಳಲು ತೋಡಿಕೊಂಡಿದ್ದಾರೆ. ಕರಿ ತಿಮ್ಮಣ್ಣ ಎಂಬು ವರ ತೋಟ ದಲ್ಲಿ ಆನೆಗಳು 5 ತೆಂಗಿನ ಮರಗಳನ್ನು ನೆಲಸಮ ಮಾಡಿವೆ.

ಹೊಸ ದೊಡ್ಡಿ ಗ್ರಾಮದಲ್ಲೂ ಇದೇ ಕಥೆ: ಕೈಲಾಂಚ ಹೋಬ ಳಿಯ ಹೊಸ ದೊಡ್ಡಿ ಗ್ರಾಮ ¨ಲ್ಲಿ ‌ ಯೂ ಇದೇ ಕಥೆ. ಕಳೆದ ಸೋಮ ವಾರ ರಾತ್ರಿ ಬಹುಶಃ ಇದೇ ಆನೆ ಗಳ ಹಿಂಡು ಯೋಗೇಶ್‌ ಎಂಬ ರೈತ ರಿಗೆ ಸೇರಿದ 25 ಮಾವಿನ ಮರಗಳು, ಕಾಡೇಗೌಡ ಎಂಬು ವ ರಿಗೆ ಸೇರಿದ 8 ಮಾವಿನ ಮರ ಗಳು, ನೀರಾವರಿ ಪರಿಕರಗಳು, ಚಂದ್ರೇ ಗೌಡರ 12 ಮಾವಿನ ಮರ ಗಳು, ಲೋಕೇಶ್‌ ಅವರಿಗೆ ‌ ಸೇರಿದ 5 ತೆಂಗಿನ ಮರ, ರಾಜು ಎಂಬು ವ ರಿಗೆ ಸೇರಿದ 6 ಮಾವಿನ ಮರ ಗಳು, ವಿಷಕಂಟ ಅವರ 12 ಮಾವಿನ ಮರಗಳು ಆನೆ ದಾಳಿಗೆ ನಾಶವಾ ಗಿವೆ. ಇದರೊಟ್ಟಿಗೆ ಮಾವಿನ ಫ‌ಸಲು ಸಹ ಕೈತಪ್ಪಿದಂತಾಗಿದೆ.

ತೆಂಗಿನ ಕಲ್ಲು ಅರಣ್ಯಕ್ಕೆ ಆನೆ ಬರುವುದನ್ನು ತಡೆಯಿರಿ:

ಆನೆ ದಾಳಿಯಿಂದ ಹೈರಾಣಾಗಿರುವ ತೆಂಗಿನ ಕಲ್ಲು ಅರಣ್ಯ ಪ್ರದೇಶದ ಅಂಚಿನಲ್ಲಿರುವ ಗ್ರಾಮಸ್ಥರು ಮತ್ತು ರೈತರು ತೆಂಗಿನ ಕಲ್ಲು ಅರಣ್ಯ ಪ್ರದೇ ಶಕ್ಕೆ ಆನೆ ಬರುವುದನ್ನು ತಡೆಯಿರಿ ಎಂದು ಅರಣ್ಯ ಇಲಾಖೆಗೆ ಪದೇ ಪದೆ ಮನವಿ ಮಾಡಿದರು ಉಪಯೋಗವಾಗಿಲ್ಲ ಎಂದು ದೂರಿದ್ದಾರೆ. ತಮಗಾಗಿರುವ ನಷ್ಟ ವನ್ನು ವೈಜ್ಞಾನಿಕವಾಗಿ ಅಂದಾಜಿಸಿ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಅಧಿಕಾರಿಗಳ ಭೇಟಿ ಪರಿಶೀಲನೆ: ತೆಂಗಿನ ಕಲ್ಲು ಗ್ರಾಮ ಮತ್ತು ಹೊಸ ದೊಡ್ಡಿ ಗ್ರಾಮಗಳಲ್ಲಿ ಆನೆ ದಾಳಿ ಪ್ರಕರಣಗಳನ್ನು ಚನ್ನಪಟ್ಟಣ ಉಪವಲಯ ಅರಣ್ಯಾಧಿಕಾರಿಗಳಾದ ಶಿವಶಂಕರ್‌, ಮಧು ಕುಮಾರ್‌, ಅರಣ್ಯ ರಕ್ಷಕರಾದ ಪುಟ್ಟ ಸ್ವಾಮಿ, ವೆಂಕಟ ಸ್ವಾಮಿ ಮತ್ತಿತರರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ಮಾವಿನ ಹಣ್ಣುಗಳ ರುಚಿ ಸವಿದಿರುವ ಆನೆಗಳು ಮತ್ತೆ ಮತ್ತೆ ದಾಳಿ ಮಾಡುವ ಸಾಧ್ಯತೆಗಳಿವೆ ಎಂದು ರೈತರು ಅರಣ್ಯ ಅಧಿಕಾರಿಗಳ ಬಳಿ ತಮ್ಮ ನೋವು ತೋಡಿಕೊಂಡಿದ್ದಾರೆ. ಹೀಗಾಗಿ ಇಲಾಖೆ ತಕ್ಷಣ ಕ್ರಮ ವಹಿಸಿ ಆನೆ ದಾಳಿಯನ್ನು ತಡೆಯ ಬೇಕು ಎಂದು ಮನವಿ ಮಾಡಿ ಕೊಂಡಿ ದ್ದಾರೆ.

ಟಾಪ್ ನ್ಯೂಸ್

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.