ಹಂಪಿಯಲ್ಲಿ ವೈಭವದ ಜೋಡಿ ರಥೋತ್ಸವ

Team Udayavani, Apr 20, 2019, 3:37 PM IST

ಹೊಸಪೇಟೆ: ಐತಿಹಾಸಿಕ ಹಂಪಿ ಶ್ರೀವಿರೂಪಾಕ್ಷೇಶರಸ್ವಾಮಿ ಹಾಗೂ ಚಂದ್ರಮೌಳೀಶ್ವರ ಸ್ವಾಮಿ ಜೋಡಿ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ರಥೋತ್ಸವದ ಅಂಗವಾಗಿ ವಿರೂಪಾಕ್ಷೇಶ್ವರ ಸ್ವಾಮಿ ಹಾಗೂ ಪಂಪಾಂಬಿಕೆ ದೇವಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು.

ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ವಿಜಯ ನಗರ ಅರಸರ ಕಾಲದ ರತ್ನಖಚಿತ ಸ್ವರ್ಣ ಕಿರೀಟ ಹಾಗೂ ಧಿರಿಸು ಧರಿಸಿ ಶ್ರೀ ವಿದ್ಯಾರಣ್ಯ ಭಾರತೀ ಶ್ರೀಗಳನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು. ವಿರೂಪಾಕ್ಷ ದೇವಸ್ಥಾನದಿಂದ ಎದುರು ಬಸವಣ್ಣ ಮಂಟ ಪದವರೆಗೆ ಭಕ್ತರು ರಥ  ಎಳೆದರು. ಬ್ರಹ್ಮರಥೋತ್ಸವದ ಅಂಗವಾಗಿ ರಥ ಬೀದಿಯ ಎದುರು ಬಸ ವ ಣ್ಣನ ಬೃಹತ್‌ ಪ್ರತಿ
ಮೆಗೆ ಬೆಳಗ್ಗೆ ಎಣ್ಣೆ ಮಜ್ಜನ, ಕ್ಷೀರಾಭಿಷೇಕ ನೆರವೇರಿಸಿದರು.

1509ರಲ್ಲಿ ಶ್ರೀಕೃಷ್ಣದೇವರಾಯ ಕೊಡ ಮಾಡಿದ ಶ್ರೀವಿರೂಪಾಕ್ಷಸ್ವಾಮಿ ನವರತ್ನ ಖಚಿತ ಸ್ವರ್ಣಮುಖ ಕಿರೀಟವನ್ನು ಪ್ರತಿಮೆಗೆ ತೊಡಿಸಿ ಅಲಂಕರಿಸಲಾಗಿತ್ತು. ರಾಜ್ಯ,ಆಂಧ್ರ, ತೆಲಂಗಾಣ
ಸೇರಿ ದಂತೆ ವಿವಿಧೆಡೆಗಳಿಂದ ಭಕ್ತರು ಭಾಗವಹಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

  • ಶಿವಮೊಗ್ಗ:ತೀರ್ಥಹಳ್ಳಿಯ ಬಳಿಯ ತುಂಗಾನದಿ ಸೇತುವೆ ಬಳಿ ಫುಡ್ ಇನ್ಸ್ ಪೆಕ್ಟರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ. ಹೊಸನಗರದ ಫುಡ್ ಇನ್ಸ್...

  • ಶಿವಮೊಗ್ಗ: ನೂತನವಾಗಿ ರೂಪಿಸಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದಲ್ಲಿ, ಈಗಿನ ಏಕಶಿಸ್ತೀಯ ಉನ್ನತ ಶಿಕ್ಷಣ ತೆರೆಮರಿಗೆ ಸರಿದು, ಬಹುಶಿಸ್ತೀಯ ಶಿಕ್ಷಣ...

  • ವೆಂಕೋಬಿ ಸಂಗನಕಲ್ಲು ಬಳ್ಳಾರಿ: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಮತಸಮರ ಗುರುವಾರ ಮುಗಿದಿದ್ದು, ಕ್ಷೇತ್ರದ ಜನರ ಚಿತ್ತ ಡಿ.9 ರ ಮತ ಎಣಿಕೆಯತ್ತ ನೆಟ್ಟಿದೆ. ಚುನಾವಣೆಯಲ್ಲಿ...

  • ಶ್ರೀರಂಗಪಟ್ಟಣ: ಕೂಡಲಕುಪ್ಪೆ ಹಾಗೂ ಕಿರಂಗೂರು ಗ್ರಾಮದ ಎಲ್ಲೆಗೆ ಸೇರಿದ ಎರೆಮಣೆ ನಾಲೆಯ ಏರಿ ಮೇಲಿರುವ ರಸ್ತೆ ಒತ್ತುವರಿ ಮಾಡಿಕೊಂಡಿದ್ದು, ಇದರಿಂದ ಸುತ್ತಮುತ್ತಲ...

  • ಮಂಡ್ಯ: ರೈತರು ಹಾಗೂ ಯುವ ಸಮುದಾಯ ಕೃಷಿಯನ್ನು ಅವಲಂಬಿಸಲು ಹಾಗೂ ಬೇಸಾಯವನ್ನು ಲಾಭದಾ ಯಕ ಮಾಡಿಕೊಳ್ಳುವುದಕ್ಕೆ ಕೃಷಿ ಮೇಳ ಹೆಚ್ಚು ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ...

ಹೊಸ ಸೇರ್ಪಡೆ