ಗಾರ್ಗಿ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ

ಬಹುಮುಖ ಪ್ರತಿಭೆಯ ಕುಟುಂಬಕ್ಕೆ ಸಂದ ಗೌರವ •23ರಂದು ಸಮ್ಮೇಳನ

Team Udayavani, Sep 15, 2019, 12:45 PM IST

ಸಾಗರ: ತಂದೆ ಶೈಲೇಂದ್ರ, ತಾಯಿ ಸರಸ್ವತಿ ಅವರ ಜೊತೆ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಗಾರ್ಗಿ ಸೃಷ್ಟೀಂದ್ರ.

ಸಾಗರ: ಸೆ. 23ರಂದು ತಾಲೂಕಿನ ಹೊಸಗುಂದದ ಉಮಾಮಹೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯಲಿರುವ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ತಾಲೂಕಿನ ಬಂದಗದ್ದೆ ಗ್ರಾಮದ ಗಾರ್ಗಿ ಸೃಷ್ಟೀಂದ್ರ ಆಯ್ಕೆಯಾಗಿದ್ದಾರೆ. ಈ ಮುನ್ನ ಗಾರ್ಗಿ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ನಗರದ ನಿರ್ಮಲಾ ಬಾಲಿಕಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಗಾರ್ಗಿ ಸಾಹಿತ್ಯದ ಜೊತೆಗೆ ವಿವಿಧ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.

ಗಾರ್ಗಿ ತಂದೆ ಕೃಷಿಕ, ಚಿಂತಕ ಶೈಲೇಂದ್ರ ಬಂದಗದ್ದೆ ಹೆಗ್ಗೋಡಿನ ನೀನಾಸಂ, ಸಾಗರ್‌ ಫೋಟೋಗ್ರಾಫಿಕ್‌ ಸೊಸೈಟಿ, ಬಳಕೆದಾರರ ವೇದಿಕೆ, ಅಡಕೆ ಬೆಳೆಗಾರರ ಸಂಘ, ಕವನ, ಲೇಖನ ಮೊದಲಾದೆಡೆ ತಮ್ಮನ್ನು ಗುರುತಿಸಿಕೊಂಡವರು. ತಾಯಿ ಸರಸ್ವತಿ ಹೆಗಡೆ ಯಕ್ಷಗಾನದ ಹಿನ್ನೆಲೆಯವರು. ಅವರ ತಂದೆ ಪ್ರಸಿದ್ಧ ಯಕ್ಷಗಾನ ಪಾತ್ರಧಾರಿಯಾಗಿ ಹೆಸರು ಮಾಡಿದ್ದರು.

ಸತತ ಮೂರು ವರ್ಷ ಪ್ರಾಥಮಿಕ ಶಾಲಾ ಮಟ್ಟದ ಪ್ರತಿಭಾ ಕಾರಂಜಿಯ ‘ಕಥೆ ಹೇಳುವ ಸ್ಪರ್ಧೆ’ಯಲ್ಲಿ ಶಿವಮೊಗ್ಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿರುವ ಗಾರ್ಗಿ 8ನೇ ವಯಸ್ಸಿನಲ್ಲಿಯೇ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿ, ಪ್ರಸ್ತುತಪಡಿಸಿದ ‘ಅಮ್ಮ’ ಮತ್ತು ‘ಅಕ್ಕ’ ಕವಿತೆಗಳು ಜನಮೆಚ್ಚುಗೆ ಗಳಿಸಿತು. ಶಿವಮೊಗ್ಗದಲ್ಲಿ ನಡೆದ ‘ಚಿಣ್ಣರ ಸಾಹಿತ್ಯ ಚಿಲುಮೆ’ ಕಾರ್ಯಾಗಾರದಲ್ಲಿ ಭಾಗವಹಿಸಿ, ‘ಕನಸು’ ಆಶುಕವನಕ್ಕೆ ಪ್ರಥಮ ಸ್ಥಾನ ಲಭಿಸಿದೆ.

2013 ಮತ್ತು 2014ರಲ್ಲಿ ಸತತ ಎರಡು ವರ್ಷ ಆದಿಚುಂಚನಗಿರಿಯಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಕಥಾ ಗೋಷ್ಠಿಯಲ್ಲಿ ಹೇಳಿದ ಸ್ವರಚಿತ ಕಥೆ ‘ದೇವರು’ ಹಾಗೂ ಕವಿಗೋಷ್ಠಿಯಲ್ಲಿ ಹೇಳಿದ ‘ವಿಸ್ಮಯ’ ಕವನ ಹಂಸಲೇಖ ಹಾಗೂ ಬಿ.ಆರ್‌. ಲಕ್ಷ್ಮಣ ರಾವ್‌ ಅವರ ಪ್ರಶಂಸೆಗೆ ಪಾತ್ರವಾಗಿತ್ತು.

ಗಾರ್ಗಿ ಅವರು ಕರಿಬೇವು ಎಂಬ ನಾಟಕ ಬರೆದಿದ್ದಾರೆ. ದೇವರು, ಕೇಕಿನ ಗೃಹದತ್ತ ನನ್ನ ಚಿತ್ತ, ವಿವಿಧತೆಯಲ್ಲಿ ಏಕತೆ ಎಂಬ ತಲೆಬರಹದ ಕಥೆ ಬರೆದಿದ್ದಾರೆ. ಅಕ್ಕ, ಅಮ್ಮ, ಅಪ್ಪ, ನಮ್ಮ ಶಾಲೆ, ಮಳೆ, ಗುಲಾಬಿ, ಕನಸು, ವಿಸ್ಮಯ, ಪರಿಸರ, ಗಣಪ, ನಮ್ಮ ದೇಶ ಎಂಬ ಕವಿತೆಗಳನ್ನು ಹೆಣೆದಿದ್ದಾರೆ. ಇತೀಚೆಗೆ ನಡೆದ ಪ್ರೌಢಶಾಲಾ ಮಟ್ಟದ ‘ರಾಬಿಯಾ ಕ್ವಿಜ್‌ ಕಾಂಟೆಸ್ಟ್‌’ನಲ್ಲಿ ಇವರ ಶಾಲಾ ತಂಡ ಪ್ರಥಮ ಸ್ಥಾನ ಗಳಿಸಿತ್ತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಕರೆದಿದ್ದ ಸಭೆಗೆ ಗೈರು ಹಾಜರಾಗುವ ಮೂಲಕ ಕಾಂಗ್ರೆಸ್‌ ಹಿರಿಯ ನಾಯಕರು ತಮ್ಮ ಅಸಮಾಧಾನವನ್ನು...

  • ಬೆಂಗಳೂರು: ಶಿರಾಡಿ ಘಾಟಿ ರಸ್ತೆ ಅಭಿವೃದ್ಧಿಗೆ 4 ಸಾವಿರ ಕೋಟಿ ರೂ. ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದ್ದು, ಕೇಂದ್ರದಿಂದ ಅನುಮೋದನೆ...

  • ಪುರಾಣದಲ್ಲಿ ಕಡುಕಷ್ಟ ಅನುಭವಿಸಿದ ಕೆಲವರ ಹೆಸರು ಚೆನ್ನಾಗಿದೆ ಎನಿಸಿದರೂ, ಅದನ್ನು ಮಗನಿಗೆ ಇಡುವುದು ಶೋಭೆಯಲ್ಲ ಅಂತ ಅನ್ನಿಸಿತು. ಕ್ಷ, ಶಿ, ಋ, ಕ್ರೂ, ಹ್ರಂ, ಹ್ರಿಂ...

  • ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನು ಕಾನೂನಿನ ಅರಿವು ಹೊಂದಿರುವುದು ಅಗತ್ಯ. ಮಾನವ ಸಂಘಜೀವಿ ಆಗಿರುವವರೆಗೂ ಕಾನೂನು ಅಸ್ತಿತ್ವ ದಲ್ಲಿರುತ್ತದೆ....

  • ಅಡುಗೆಗೆ ಬಳಸುವ ಕಾಳು, ಹಿಟ್ಟು, ತಾಜಾ ತರಕಾರಿ, ಸೊಪ್ಪು, ಉಪ್ಪು, ಹಣ್ಣು... ಇವನ್ನೆಲ್ಲ ಇಡುವುದೇ ಪ್ಲಾಸ್ಟಿಕ್‌ಡಬ್ಬಿಗಳಲ್ಲಿ/ ಕವರ್‌ಗಳಲ್ಲಿ. ಹೀಗೆ ಮಾಡುವ ಮೂಲಕ,...