ಮಾವಿನಗುಂಡಿ ಫಾಲ್ಸ್ ಸೊಬಗು!

Team Udayavani, Jul 8, 2019, 11:54 AM IST

ಸಾಗರ: ಜೋಗದಲ್ಲಿ ಮಳೆಗಾಲದಲ್ಲಿ ಮಾತ್ರ ಕಾಣುವ ಮಾವಿನಗುಂಡಿ ಫಾಲ್ಸ್.

ಸಾಗರ: ನಿಧಾನವಾಗಿ ಮಲೆನಾಡಿನ ಸಾಗರ ತಾಲೂಕಿನಲ್ಲಿ ಮಳೆರಾಯ ಕೃಪೆ ತೋರಲಾರಂಭಿಸಿದ್ದು, ಜೋಗ ಜಲಪಾತದ ರಾಜಾ, ರಾಣಿ ರೋರರ್‌ ರಾಕೆಟ್ ಎಳೆಗಳಲ್ಲದೆ ಜಲಪಾತದ ಗುಡ್ಡದ ಪ್ರದೇಶದಿಂದ ಹಲವು ಮಳೆಗಾಲದ ಫಾಲ್ಸ್ ಗಳು ಕಾಣಲಾರಂಭಿಸಿವೆ.

ಪ್ರತಿ ಮಳೆಗಾಲದಲ್ಲಿ ವಿಶಿಷ್ಟ ಗಾಂಭೀರ್ಯದಿಂದ ಕಾಣಿಸಿಕೊಳ್ಳುವ ಮಾವಿನಗುಂಡಿ ಜಲಪಾತ ಕೂಡ ಜೋಗ ಜಲಪಾತ ನೋಡುವವರಿಗೆ ಬೋನಸ್‌ ಆಗಿ ಸಿಗಲಾರಂಭಿಸಿದೆ.

ಮಾವಿನಗುಂಡಿ ಫಾಲ್ಸ್ ಪಕ್ಕದ ಉತ್ತರ ಕನ್ನಡದ ಸಿದ್ಧಾಪುರ ತಾಲೂಕಿಗೆ ಸೇರಿರುವಂತದು. ಇದು ಜೂನ್‌ನಿಂದ ನವೆಂಬರ್‌ ಸಮಯದ ಮಳೆಗಾಲದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಈ ವರ್ಷ ಜೂನ್‌ನಲ್ಲಿ ಇದು ದರ್ಶನವನ್ನೇ ಕೊಟ್ಟಿರಲಿಲ್ಲ. ಜೋಗದಲ್ಲಿ ಬ್ರಿಟಿಷ್‌ ಬಂಗ್ಲೋ ಕಡೆಯಿಂದ ಇದರ ಪೂರ್ಣ ವೀಕ್ಷಣೆ ನಡೆಸಬಹುದು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ