ನಗರಸಭೆ ಚುನಾವಣೆ; ಘಟಾನುಘಟಿಗಳ ಮಧ್ಯೆ ಪೈಪೋಟಿ

ಎಲ್ಲೆಡೆ ಸಮಬಲ; ಸಮರ ಕಣ ಇನ್ನಷ್ಟು ಬಿಸಿಯಾಗುವ ಸಂಭವ

Team Udayavani, May 20, 2019, 4:21 PM IST

20-May-30

ಸಾಗರ: ಬಿಜೆಪಿ ಅಭ್ಯರ್ಥಿ ಗಣೇಶ್‌ ಪ್ರಸಾದ್‌ ಪ್ರಚಾರ ಮಾಡಿದರು

ಸಾಗರ: ನಗರಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿರುವ ಬಹುತೇಕ ಘಟಾನುಘಟಿಗಳಿಗೆ ಎದುರಾಳಿಗಳಿಂದ ತೀವ್ರ ಪೈಪೋಟಿ ಎದುರಾಗಲಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಯ ಪ್ರಮುಖ ಸ್ಥಳೀಯ ನಾಯಕರು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಅವರ ಎದುರಾಳಿಗಳಾಗಿರುವವರು ಕೂಡ ಈ ಹಿಂದೆ ಜನಪ್ರನಿಧಿಗಳಾಗಿ, ಅಧಿಕಾರ ನಿರ್ವಹಿಸಿದ ಅನುಭವಿಗಳೇ ಆಗಿರುವುದರಿಂದ ಸಮರ ಕಣದ ಬಿಸಿ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ. ಇದರ ನಡುವೆ ಬಂಡಾಯದ ಅಬ್ಬರವೂ ಉಂಟಾದರೆ ಮತ ಗಳಿಕೆಗೆ ಪ್ರತಿಷ್ಠಿತರು ಏದುಸಿರು ಬಿಡಬೇಕಾಗಬಹುದು. ಪ್ರಮುಖರ ನೇರ ಸ್ಪರ್ಧೆಗಳು ಅಂತಿಮವಾಗಿ ಕೆಲವು ಪ್ರಮುಖರು ನಗರಸಭೆಯ ಕೌನ್ಸಿಲ್ ಸಭೆಯಲ್ಲಿ ಪಾಲ್ಗೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗುವುದರಿಂದ ಸಭಾ ಕಲಾಪ, ಆಡಳಿತ ವ್ಯವಸ್ಥೆಯನ್ನೂ ಪ್ರಭಾವಿಸಲಿದೆ.

ಅವರನ್ನು ಬಿಟ್ಟು ಇವರು!: ಟಿಕೆಟ್ ಪಡೆಯಲೇ ಸಾಹಸ ಪಟ್ಟ ಕಾಂಗ್ರೆಸ್‌ನ ಅನುಭವಿ ಸುಂದರ್‌ಸಿಂಗ್‌ ನಿರಾಳವಾಗಿ ಸ್ಪರ್ಧೆ ಎದುರಿಸುವ ಪರಿಸ್ಥಿತಿ ಇಲ್ಲವಾಗಿದೆ. ಬಿಜೆಪಿಯಿಂದ ಈಗಾಗಲೇ ಕೌನ್ಸಿಲರ್‌ ಆಗಿ ಅನುಭವ ಹೊಂದಿರುವ ಆರ್‌. ಶ್ರೀನಿವಾಸ್‌ ಅವರನ್ನು 5ನೇ ವಾರ್ಡ್‌ನಲ್ಲಿ ಎದುರಿಸುವಂತಾಗಿದೆ. ಪ್ರಸ್ತುತ ಶ್ರೀನಿವಾಸ್‌ ಮೇಸ್ತ್ರಿ ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿರುವುದರಿಂದ ಅವರು ತಮ್ಮದೇ ಆದ ಮತಗಟ್ಟೆಯನ್ನು ಹೊಂದಿರುವುದು ಕಳೆದ ಬಾರಿ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ದಾಖಲಿಸಿದ ದಾಖಲೆ ಹೊಂದಿದ್ದ ಸುಂದರ್‌ಸಿಂಗ್‌ ಅವರ ನಿದ್ದೆಗೆಡಿಸುವಂತಿದೆ.

ಅಧಿಕಾರ ಸಿಕ್ಕರೆ ಅಧ್ಯಕ್ಷರಾಗುವ ಕನಸು ಕಾಣುತ್ತಿರುವ ಬಿಜೆಪಿಯ ಮಾಜಿ ನಗರಸಭಾಧ್ಯಕ್ಷ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಡಿ. ಮೇಘರಾಜ್‌ ಹಾದಿಗೆ ಕಾಂಗ್ರೆಸ್‌ನ ಡಿಷ್‌ ಗುರು ಎಂದೇ ಖ್ಯಾತರಾಗಿರುವ ವಿ. ಗುರು ವಾರ್ಡ್‌ ಸಂಖ್ಯೆ 8ರಲ್ಲಿ ಎದುರಾಳಿಗಳಾಗಿದ್ದಾರೆ. ನಗರದ ಗಣಪತಿ ಅರ್ಬನ್‌ ಕೋ- ಅಪರೇಟಿವ್‌ ಬ್ಯಾಂಕ್‌ನ ನಿರ್ದೇಶಕರಾಗಿರುವ ಗುರು ಅವರ ಸವಾಲನ್ನು ಮೇಘರಾಜ್‌ ಸುಲಭವಾಗಿ ತಳ್ಳಿಹಾಕುವಂತಿಲ್ಲ. ಮೇಘರಾಜ್‌ ಒಂದೊಮ್ಮೆ ಸೋತರೆ ಅವರಿಗೆ ಹಾಲಪ್ಪ ಅವರ ಆಪ್ತ ವಲಯದಲ್ಲಿ ಮುಖಭಂಗವಾಗುವ ಸನ್ನಿವೇಶವಿದೆ.

ಕಳೆದ ಬಾರಿ ಮೊದಲ ಅವಯ ಉಪಾಧ್ಯಕ್ಷರಾಗಿ ಗಮನ ಸೆಳೆದಿದ್ದ ಐ.ಎನ್‌. ಸುರೇಶ್‌ಬಾಬು ಬಿಜೆಪಿಯ ಪ್ರಬಲ ಅಭ್ಯರ್ಥಿ ಗಣೇಶ್‌ ಪ್ರಸಾದ್‌ರಿಂದ 10ನೇ ವಾರ್ಡ್‌ನಲ್ಲಿ ತೀವ್ರ ಸೆಣಸಾಟವನ್ನು ನಿರೀಕ್ಷಿಸಬಹುದು. ಮೂರನೇ ಬಾರಿ ಆಯ್ಕೆ ಬಯಸಿ ಕಣದಲ್ಲಿರುವ ಬಿಜೆಪಿಯ ಎಸ್‌.ಎಲ್. ಮಂಜುನಾಥ್‌ ಅವರಿಗೆ 12ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಮಾಜಿ ಕೌನ್ಸಿಲರ್‌ ಕೆ.ಎನ್‌. ಮೋಹನ್‌ ಅವರನ್ನು ಎದುರಿಸಬೇಕಾಗಿದೆ.

ಈ ಲೆಕ್ಕದಲ್ಲಿ ಈ ಹಿಂದೆ ವಿಜೇತರಾಗಿದ್ದ ಮಹಿಳಾ ಕೌನ್ಸಿಲರ್‌ಗಳು ಅನನುಭವಿಗಳಿಂದ ಹೆಚ್ಚಾಗಿ ಸ್ಪರ್ಧೆ ಅನುಭವಿಸುತ್ತಿದ್ದಾರೆ. ಕಾಂಗ್ರೆಸ್‌ನ ಪರಿಮಳ, ಎನ್‌. ಉಷಾ, ಲಲಿತಮ್ಮ, ಕಳೆದ ಬಾರಿ ವಿರೋಧ ಪಕ್ಷದ ನಾಯಕಿಯಾಗಿದ್ದ ಬಿಜೆಪಿಯ ನಾಗರತ್ನ ಅವರಿಗೆ ಎದುರಾಳಿಗಳು ಹೊಸ ಮುಖಗಳಾಗಿರುವುದು ಅಷ್ಟರ ಮಟ್ಟಿಗೆ ಒಳಿತನ್ನು ಮಾಡಬಹುದು ಎಂದು ಭಾವಿಸುವಂತಾಗಿದೆ.

ಟಾಪ್ ನ್ಯೂಸ್

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.