Udayavni Special

ಕಚೇರಿಗಳನ್ನು ಸ್ವಚ್ಛವಾಗಿಡುವುದು ಅಧಿಕಾರಿಗಳ ಕರ್ತವ್ಯ

ಜಿಲ್ಲಾಧಿಕಾರಿಗಳಿಂದ ತಾಲೂಕಿಗೆ ಪ್ರಥಮ ಭೇಟಿ: ವಿವಿಧ ಸರ್ಕಾರಿ ಕಚೇರಿಗಳ ವೀಕ್ಷಣೆ

Team Udayavani, Jul 25, 2019, 3:11 PM IST

25-JUly-31

ಸಕಲೇಶಪುರ ಪಟ್ಟಣದ ಮಿನಿವಿಧಾನಸೌಧ ಕಚೇರಿಯನ್ನು ಡೀಸಿ ಅಕ್ರಮ್‌ ಪಾಷಾ ಪರಿಶೀಲಿಸಿದರು.

ಸಕಲೇಶಪುರ: ಜನಸಾಮಾನ್ಯರು ತಿರುಗಾಡುವ ಕಚೇರಿಗಳನ್ನು ಸ್ವಚ್ಛತವಾಗಿಟ್ಟುಕೊಳ್ಳುವುದು ಅಧಿಕಾರಿ ಗಳ ಕರ್ತವ್ಯ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಹೇಳಿದರು.

ಮಿನಿ ವಿಧಾನಸೌಧ, ಉಪವಿಭಾಗಾಧಿಕಾರಿ ಕಚೇರಿ, ಪುರಸಭಾ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದ ನಂತರ ಮಾತನಾಡಿದರು.

ಮೂಲ ಸೌಕರ್ಯ ಕಲ್ಪಿಸಿ: ನಾನು ಹಾಸನ ಜಿಲ್ಲಾಧಿ ಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ತಾಲೂ ಕಿಗೆ ಪ್ರಪ್ರಥಮವಾಗಿ ಭೇಟಿ ನೀಡಿದ್ದೇನೆ. ಸರ್ಕಾರಿ ಕಚೇರಿಗಳು ಜನ ಸ್ನೇಹಿಯಾಗಿರಬೇಕು ಹಾಗೂ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಹೊಂದಿರ ಬೇಕು ಇದರಿಂದ ಮಾತ್ರ ಆಡಳಿತಕ್ಕೆ ವೇಗ ನೀಡಲು ಸಾಧ್ಯ ಎಂದರು.

ಮಿನಿ ವಿಧಾನಸೌಧ ಕಟ್ಟಡ ವಿಸ್ತರಣೆ: ಈ ಹಿನ್ನೆಲೆ ಯಲ್ಲಿ ಪ್ರಮುಖ 3 ಸರ್ಕಾರಿ ಕಚೇರಿಗಳನ್ನು ನಾನು ಪರಿಶೀಲಿಸಿದ್ದೇನೆ. ಮಿನಿವಿಧಾನಸೌಧ ಕಟ್ಟಡ ಸುಸಜ್ಜಿತ ವಾಗಿದೆ ಆದರೆ ರೆಕಾರ್ಡ್‌ ರೂಮ್‌, ಮೀಟಿಂಗ್‌ ಹಾಲ್ ಸೇರಿದಂತೆ ಇನ್ನು ಹಲವು ಬೇಡಿಕೆಗಳು ಇಲ್ಲಿದ್ದು, ಅಗತ್ಯಕ್ಕೆ ತಕ್ಕಂತೆ ಕಟ್ಟಡದ ವಿಸ್ತೀರ್ಣ ಸಾಕಾ ಗಾದ ಹಿನ್ನೆಲೆಯಲ್ಲಿ ಅಂತಸ್ತಿನಲ್ಲಿ ಕಟ್ಟಡ ವಿಸ್ತರಣೆ ಮಾಡಲು ಯೋಜಿಸಲಾಗಿದೆ. ಈಗಾಗಲೇ ಹಾಸನ ತಾಲೂಕಿನ ಮಿನಿವಿಧಾನಸೌಧ ಕಟ್ಟಡ ವಿಸ್ತರಣೆಗೆ ಸರ್ಕಾರ ಹಣ ಬಿಡುಗಡೆ ಮಾಡಿದ್ದು ಸಕಲೇಶಪುರ ಹಾಗೂ ಆಲೂರಿನಲ್ಲಿ ಎರಡನೇ ಹಂತದ ಕಟ್ಟಡವನ್ನು ವಿಸ್ತರಣೆ ಮಾಡಲು ಸರ್ಕಾರಕ್ಕೆ ನೀಲನಕ್ಷೆ ಕಳುಹಿಸ ಲಾಗಿದೆ. ಸರ್ಕಾರದಿಂದ ಅನುಮತಿ ಹಾಗೂ ಅನು ದಾನ ಬಿಡುಗಡೆಯಾದ ನಂತರ ಎರಡನೇ ಹಂತದ ಕಟ್ಟಡವನ್ನು ಆರಂಭಿಸಲಾಗುವುದು. ಉಪವಿಭಾಗಾ ಧಿಕಾರಿ ಕಚೇರಿ ಹಾಗೂ ಪುರಸಭಾ ಕಟ್ಟಡಕ್ಕೂ ಹೆಚ್ಚಿನ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಭೂ ಮಂಜೂರಾತಿ ಅಕ್ರಮ ತನಿಖೆ: ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಪ್ರಕರಣ ನ್ಯಾಯಾಲಯ ದಲ್ಲಿದ್ದು ನ್ಯಾಯಾಲಯದ ತೀರ್ಪಿನಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಎಚ್.ಆರ್‌.ಪಿ ಭೂ ಮಂಜೂರಾತಿಯ ಅಕ್ರಮದ ಕುರಿತು ತನಿಖಾ ಸಮಿತಿ ವತಿಯಿಂದ ತನಿಖೆ ಮಾಡಿಸಲಾಗಿದ್ದು ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ವರ್ತಕರಿಗೆ ನಿರಾಸೆ: ಪಟ್ಟಣದ ಮುಖ್ಯರಸ್ತೆ ಅಗಲೀಕರಣದ ಕುರಿತು ವರ್ತಕರು ಜಿಲ್ಲಾಧಿಕಾರಿ ಗಳನ್ನು ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ಭೇಟಿ ಮಾಡಲು ಕಾದು ಕುಳಿತಿದ್ದರು. ಆದರೆ ಪ್ರಕರಣ ನ್ಯಾಯಾಲಯದಲ್ಲಿದ್ದು ಜಿಲ್ಲಾಧಿಕಾರಿಗಳು ಭೇಟಿಗೆ ನಿರಾಕರಿಸಿದ ಕಾರಣ ವರ್ತಕರು ನಿರಾಸೆಯಿಂದ ಹಿಂತಿರುಗಿದರು.

ಮನವಿ ಸ್ವೀಕಾರ: ಪಟ್ಟಣದ ಮಿನಿವಿಧಾನಸೌಧದಲ್ಲಿ ನಿವೃತ್ತ ಮಾಜಿ ಸೈನಿಕರ ಸಂಘ ಹಾಗೂ ಹಾಸನ ಜಿಲ್ಲಾ ಬೆಳೆಗಾರರ ಸಂಘದ ವತಿಯಿಂದ ನೀಡಿದ ಮನವಿ ಯನ್ನು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಕವಿತಾ ರಾಜಾರಾಂ, ತಹಶೀಲ್ದಾರ್‌ ರಕ್ಷಿತ್‌, ಪುರಸಭಾ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ, ಪುರಸಭಾ ಮುಖ್ಯಾಧಿಕಾರಿ ವಿಲ್ಸನ್‌, ಶಿರಸ್ತೇದಾರ್‌ ರಮೇಶ್‌ ಹಾಜರಿದ್ದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಲಾಡ್ಜ್ ನಲ್ಲಿ ಯುವಕ, ಯುವತಿ ಆತ್ಮಹತ್ಯೆ; ಪ್ರೇಮ ಪ್ರಕರಣ ಶಂಕೆ

ಸುಳ್ಯ: ಲಾಡ್ಜ್ ನಲ್ಲಿ ಯುವಕ, ಯುವತಿ ಆತ್ಮಹತ್ಯೆ

.0.

ಹಬ್ಬದ ಸಮಯದಲ್ಲಿ ಕಡ್ಡಾಯವಾಗಿ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಿ : ಸಚಿವ ಡಾ.ಕೆ.ಸುಧಾಕರ್

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

ರಾಜ್ಯದಲ್ಲಿ ಸೋಮವಾರ 5018 ಸೋಂಕು ದೃಢ; 8005 ಬಿಡುಗಡೆಯಾದವರ ಸಂಖ್ಯೆ ; 64 ಸಾವು

ರಾಜ್ಯದಲ್ಲಿ ಸೋಮವಾರ 5018 ಸೋಂಕು ದೃಢ; 8005 ಬಿಡುಗಡೆಯಾದವರ ಸಂಖ್ಯೆ ; 64 ಸಾವು

101

ಚೆನ್ನೈ-ರಾಜಸ್ಥಾನ್ ಮುಖಾಮುಖಿ : ಟಾಸ್ ಗೆದ್ದ ಧೋನಿ ಪಡೆ ಬ್ಯಾಟಿಂಗ್ ಆಯ್ಕೆ

ಸಾಮಾಜಿಕ ಜಾಲತಾಣದ ಎಫೆಕ್ಟ್: ಮುತ್ತಯ್ಯ ಮುರಳೀಧರನ್ ಬಯೋಪಿಕ್ ಗೆ ಸೇತುಪತಿ ಗುಡ್ ಬೈ

ಸಾಮಾಜಿಕ ಜಾಲತಾಣದ ಎಫೆಕ್ಟ್: ಮುತ್ತಯ್ಯ ಮುರಳೀಧರನ್ ಬಯೋಪಿಕ್ ಗೆ ಸೇತುಪತಿ ಗುಡ್ ಬೈ

ಏನಿದು ನಿತೀಶ್ ಲೆಕ್ಕಾಚಾರ:ಬಿಹಾರ ಚುನಾವಣಾ ಕಣದಲ್ಲಿ ಈ ಬಾರಿ ಯುವ ಮಹಿಳಾ ಅಭ್ಯರ್ಥಿಗಳ ಸದ್ದು

ಏನಿದು ನಿತೀಶ್ ಲೆಕ್ಕಾಚಾರ:ಬಿಹಾರ ಚುನಾವಣಾ ಕಣದಲ್ಲಿ ಈ ಬಾರಿ ಯುವ ಮಹಿಳಾ ಅಭ್ಯರ್ಥಿಗಳ ಸದ್ದು…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಾಡ್ಜ್ ನಲ್ಲಿ ಯುವಕ, ಯುವತಿ ಆತ್ಮಹತ್ಯೆ; ಪ್ರೇಮ ಪ್ರಕರಣ ಶಂಕೆ

ಸುಳ್ಯ: ಲಾಡ್ಜ್ ನಲ್ಲಿ ಯುವಕ, ಯುವತಿ ಆತ್ಮಹತ್ಯೆ

.0.

ಹಬ್ಬದ ಸಮಯದಲ್ಲಿ ಕಡ್ಡಾಯವಾಗಿ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಿ : ಸಚಿವ ಡಾ.ಕೆ.ಸುಧಾಕರ್

news-tdy-01

ಭೀಮಾ ನದಿ ಪ್ರವಾಹ ಸಂತ್ರಸ್ತರಿಗೆ ಆಹಾರ ಧಾನ್ಯ ಕಿಟ್ ವಿತರಣೆ

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

sm-tdy-1

ಹಳ್ಳಿಗಳಲ್ಲಿ ಉದ್ಯಮ ಚಟುವಟಿಕೆಗೆ ವಿರೋಧ

MUST WATCH

udayavani youtube

Mudipu‌ illegal quarrying allegations ವಿಚಾರ; ನನಗೆ ಯಾವುದೇ ಸಂಬಂದ ಇಲ್ಲ:Rajesh Naik

udayavani youtube

ಹಡಿಲು ಗದ್ದೆಯಲ್ಲಿ ಭತ್ತ ಬೆಳೆದು ಯಶಸ್ವಿಯಾದ ಕೃಷಿ !

udayavani youtube

ಕೃಷಿಯಲ್ಲಿ ಲಾಭಗಳಿಸಬೇಕಾದರೆ ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸಿ | Udayavani

udayavani youtube

ಹಸುವಿನ ಸಗಣಿ ಬಳಸಿ ಧೂಪ ತಯಾರಿಸುವುದು ಹೇಗೆ?

udayavani youtube

45 years journey of Pot maker from Karkala | Annumuli Pot maker | Udayavaniಹೊಸ ಸೇರ್ಪಡೆ

ಲಾಡ್ಜ್ ನಲ್ಲಿ ಯುವಕ, ಯುವತಿ ಆತ್ಮಹತ್ಯೆ; ಪ್ರೇಮ ಪ್ರಕರಣ ಶಂಕೆ

ಸುಳ್ಯ: ಲಾಡ್ಜ್ ನಲ್ಲಿ ಯುವಕ, ಯುವತಿ ಆತ್ಮಹತ್ಯೆ

.0.

ಹಬ್ಬದ ಸಮಯದಲ್ಲಿ ಕಡ್ಡಾಯವಾಗಿ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಿ : ಸಚಿವ ಡಾ.ಕೆ.ಸುಧಾಕರ್

MallaKhamba

ಭಾರತದ ಹೆಮ್ಮೆಯ ಕ್ರೀಡೆ ಮಲ್ಲಕಂಬ; ಮರಾಠ ದೊರೆ ಎರಡನೇ ಪೇಶ್ವೆ ಬಾಜಿರಾವ್ ಕಾಲದ ಇತಿಹಾಸ

news-tdy-01

ಭೀಮಾ ನದಿ ಪ್ರವಾಹ ಸಂತ್ರಸ್ತರಿಗೆ ಆಹಾರ ಧಾನ್ಯ ಕಿಟ್ ವಿತರಣೆ

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.