Udayavni Special

ಸೇನಾ ಹೆಲಿಕಾಪ್ಟರ್‌ ಹುಡುಕಿಕೊಟ್ಟವರಿಗೆ ಸಿಗದ ಭೂಮಿ

ಸರ್ಕಾರದ ಭರವಸೆ ನಂಬಿ ಕೆಟ್ಟ ಪುಟ್ಟಸ್ವಾಮಿ ಗೌಡ „ಕಳೆದ 27 ವರ್ಷಗಳಿಂದ ಸೌಲಭ್ಯಕ್ಕಾಗಿ ಕಚೇರಿಗೆ ತಪ್ಪದ ಅಲೆದಾಟ

Team Udayavani, Jul 4, 2019, 3:40 PM IST

04-July-32

1992ರ ಜೂನ್‌ ತಿಂಗಳಿನಲ್ಲಿ ಸಕಲೇಶಪುರಕ್ಕೆ ಆಗಮಿಸಿದ್ದ ಅಂದಿನ ನೌಕಾಪಡೆ ಮುಖ್ಯಸ್ಥ ಸಿಕ್ವೇರಾ ಪುಟ್ಟಸ್ವಾಮಿ ಗೌಡರನ್ನು ಸನ್ಮಾನಿಸಿದ್ದರು.

ಸುಧೀರ್‌ ಎಸ್‌.ಎಲ್
ಸಕಲೇಶಪುರ:
ಕಾಣೆಯಾಗಿದ್ದ ಭಾರತೀಯ ನೌಕ ಪಡೆಯ ಹೆಲಿಕಾಪ್ಟರ್‌ನ್ನು ಹುಡುಕಿಕೊಟ್ಟ ವ್ಯಕ್ತಿ ಯೋರ್ವರು ಸರ್ಕಾರ ನೀಡುತ್ತದೆಂದು ಕನಸು ಕಂಡಿದ್ದ 4 ಎಕರೆ ಭೂಮಿಗಾಗಿ ಕಳೆದ 27 ವರ್ಷಗಳಿಂದ ಇಂದಿಗೂ ಸಹ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ.

1992ರಲ್ಲಿ ಕಾಪ್ಟರ್‌ ಪತನ: 1992 ನೇ ಇಸವಿ ಡಿಸೆಂಬರ್‌ 22 ರಂದು ಬೆಂಗಳೂರಿನಿಂದ ಮಂಗಳೂರಿ ನೆಡೆಗೆ ಮೂವರು ಯೋಧರನ್ನು ಹೊತ್ತೂಯ್ಯುತ್ತಿದ್ದ ಕೇರಳದ ಕೊಚ್ಚಿನ್‌ ವಿಭಾಗಕ್ಕೆ ಸೇರಿದ ಚೇತಕ್‌ ಕೊಚ್ಚಿನ್‌ ಹೆಲಿಕಾಪ್ಟರ್‌ ಅತಿಯಾದ ಮಂಜಿನಿಂದಾಗಿ ತಾಲೂಕಿನ ಪಶ್ಚಿಮಘಟ್ಟದ ತಪ್ಪಲಿನಲ್ಲಿ ಪತನ ಗೊಂಡಿತ್ತು. ಈ ವೇಳೆ ಹೆಲಿಕಾಪ್ಟರ್‌ ಪತ್ತೆ ಕಾರ್ಯಕ್ಕಾಗಿ ಸೇನಾ ಪಡೆ ಐದು ಹೆಲಿಕಾಪ್ಟರ್‌ಗಳ ಸಹಾಯ ದೊಂದಿಗೆ ಸ್ಥಳೀಯ ಅಧಿಕಾರಿಗಳನ್ನು ಬಳಸಿಕೊಂಡು 120 ಸೈನಿಕರು ಸತತ 45 ದಿನಗಳ ಕಾಲ ಹುಡುಕಾಟ ನಡೆಸಿದರೂ ಸಹ ಹೆಲಿಕಾಪ್ಟರ್‌ ಪತ್ತೆಯಾಗಿರಲಿಲ್ಲ. ಅಂತಿಮವಾಗಿ ಜಿಲ್ಲಾಡಳಿತ ಪತ್ರಿಕೆಯಲ್ಲಿ ಜಾಹೀರಾತು ನೀಡಿ ಹೆಲಿಕಾಪ್ಟರ್‌ ಹುಡುಕಿಕೊಟ್ಟವರಿಗೆ ಒಂದು ಲಕ್ಷ ನಗದು, ಸರ್ಕಾರಿ ಕೆಲಸದೊಂದಿಗೆ ನಾಲ್ಕು ಎಕರೆ ಜಮೀನು ನೀಡುವುದಾಗಿ ಘೋಷಿಸಿತ್ತು.

15 ದಿನಗಳ ಪರಿಶ್ರಮ: ಈ ಹಿನ್ನೆಲೆಯಲ್ಲಿ ಕಾಡುಮನೆ ಟೀ ಎಸ್ಟೇಟ್ ಸಮೀಪ ಕೂಲಿ ಕೆಲಸ ಮಾಡುತ್ತಿದ್ದ ಪುಟ್ಟಸ್ವಾಮಿಗೌಡ ಜೀವ ಪಣಕ್ಕಿಟ್ಟು ಸತತ 15 ದಿನಗಳ ಕಾಲ ಪಶ್ಚಿಮಘಟ್ಟ ಅಲೆದ ನಂತರ ಅರೆಮನೆಗುಡ್ಡದ ಸಮೀಪದಲ್ಲಿ ಹೆಲಿಕಾಪ್ಟರ್‌ ಪತ್ತೆ ಮಾಡಿದ್ದರು. ಇದನ್ನು ಜಿಲ್ಲಾಡಳಿತಕ್ಕೆ ತಿಳಿಸಿದ ನಂತರ ಕೇರಳದ ಕೊಚ್ಚಿನ್‌ ನೌಕತಂಡ ಸ್ಥಳಕ್ಕೆ ಬಂದು ಹೆಲಿಕಾಪ್ಟರ್‌ ಅವಶೇಷ ಗಳನ್ನು ಸಂಗ್ರಹಿಸಿದ್ದಲ್ಲದೇ ಅಂದಿನ ನೌಕಪಡೆ ಮುಖ್ಯ ಸ್ಥರಾಗಿದ್ದ ಸಿಕ್ವೇರಾ ಅವರು ಪುಟ್ಟಸ್ವಾಮಿಗೌಡರಿಗೆ ಇವರಿಗೆ 10 ಸಾವಿರ ರೂ. ಬಹುಮಾನ ನೀಡಿ ಸನ್ಮಾನಿಸಿದ್ದರು.

ಪುರಸಭೆಯಿಂದ ಸಿಗದ ಹಕ್ಕುಪತ್ರ: ಪಟ್ಟಣದ ಚಂಪಕನಗರ ಬಡಾವಣೆಯಲ್ಲಿ 40×50 ನಿವೇಶನ ನೀಡಿದ ಅಂದಿನ ಉಪವಿಭಾಗಾಧಿಕಾರಿ ಪುರಸಭೆ ಅಧಿಕಾರಿಗಳಿಗೆ ಹಕ್ಕುಪತ್ರ ನೀಡುವಂತೆ ಸೂಚಿಸಿದ್ದರು. ಆದರೆ ಪುರಸಭೆ ಅಧಿಕಾರಿಗಳು ಹಕ್ಕುಪತ್ರ ನೀಡದ ಕಾರಣ ರಾಜಸ್ವ ನಿರೀಕ್ಷರ ಮಾತಿನಂತೆ ಈ ನಿವೇಶನ ದಲ್ಲಿ ಗುಡಿಸಲು ನಿರ್ಮಿಸಿಕೊಂಡಿದ್ದರು. ಆದರೆ ಕೆಲವೊಂದು ಕಾರಣಗಳಿಂದ ಅಂದಿನ ಶಾಸಕರು ಈ ಜಾಗದಲ್ಲಿ ನಿರ್ಮಿಸಿರುವ ಗುಡಿಸಲು ತೆರವುಗೊಳಿ ಸುವಂತೆ ಸೂಚಿಸಿದ್ದರು. ಆದರೆ, ಕಾಕತಾಳೀಯ ಎಂಬಂತೆ ಶಾಸಕರು ಸೂಚಿಸಿದ ರಾತ್ರಿಯೆ ಗುಡಿಸಿಲಿಗೆ ಬೆಂಕಿ ಬಿದ್ದು ಗುಡಿಸಿಲು ಸಂಪೂರ್ಣ ಸುಟ್ಟುಹೋಗಿ ದ್ದರಿಂದ ಗುಡಿಸಲಿನಲ್ಲಿದ್ದ ಬಹುತೇಕ ಕಡತಗಳು ಬೆಂಕಿಯಿಂದ ನಾಶಗೊಂಡವು. ಈ ಹಿನ್ನೆಲೆಯಲ್ಲಿ ಪುಟ್ಟಸ್ವಾಮಿ ಗೌಡರು ಅನಿವಾರ್ಯವಾಗಿ ಮತ್ತೆ ಹಳ್ಳಿಗೆ ಹೋಗಿ ವಾಸಿಸುವಂತಾಗಿದೆ.

ಕಚೇರಿಗೆ ಅಲೆದಾಟ: ಹೆಲಿಕಾಪ್ಟರ್‌ ಹುಡುಕಿ ಕೊಟ್ಟಿ ದ್ದಕ್ಕೆ ಜಿಲ್ಲಾಡಳಿತ ನೀಡಿದ್ದ ಭರವಸೆ ಈಡೇರಿಸುವಂತೆ ಕಚೇರಿಯಿಂದ ಕಚೇರಿಗೆ ಅಲೆದು ಸುಸ್ತಾಗಿರುವ ಪುಟ್ಟಸ್ವಾಮಿಗೌಡ ಆಲೂರು ತಾಲೂಕು ಸಿಂಗಾಪುರ ಗ್ರಾಮದ ಸಮೀಪ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದಾರೆ. ಬಡತನದಲ್ಲೇ ಕಾಲಕಳೆಯುತ್ತಿರುವ ಪುಟ್ಟಸ್ವಾಮಿ ಗೌಡರ ಪತ್ನಿ ,ಪುತ್ರ ಅಂಧರಾಗಿದ್ದು ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ.

ಭಸ್ಮವಾದ ದಾಖಲೆಗಳು: ಬಹುತೇಕ ದಾಖಲೆಗಳು ಗುಡಿಸಲಿಗೆ ಬೆಂಕಿ ಬಿದ್ದಾಗ ಸುಟ್ಟು ಹೋಗಿದ್ದು, ಕೇವಲ ನೌಕ ಪಡೆಯ ಅಧಿಕಾರಿಗಳಿಂದ ಸನ್ಮಾನಿತ ರಾದ ಪೋಟೋವೊಂದು ಮಾತ್ರ ಇವರ ಬಳಿ ಉಳಿದಿದೆ. ಬಹುತೇಕ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್‌ಗಳು ಹೋಗಿ ದಾಖಲೆ ತೆಗೆದು ಕೊಂಡು ಬನ್ರಿ ಎಂದು ಇವರನ್ನು ಸಾಗು ಹಾಕು ವುದರಿಂದ ವೃದ್ಧಾಪ್ಯದಲ್ಲಿ 4 ಎಕರೆ ಜಮೀನಿಗಾಗಿ ಕಚೇರಿಯಿಂದ ಕಚೇರಿಗೆ ತಿರುಗಾಡುತ್ತಲೆ ಇದ್ದಾರೆ.

ತಾಲೂಕಿನಲ್ಲಿ ಬೇರೆ ಬೇರೆ ಯೋಜನೆಗಳ ಹೆಸರಿ ನಲ್ಲಿ ಪ್ರಭಾವಿಗಳು ಸಾವಿರಾರು ಎಕರೆ ಜಮೀನನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಆದರೆ ಪ್ರಾಮಾಣಿಕವಾಗಿ ನೌಕಪಡೆಯ ಹೆಲಿಕಾಪ್ಟರ್‌ ಹುಡುಕಿಕೊಟ್ಟ ಪುಟ್ಟಸ್ವಾಮಿಗೌಡರು ಮಾತ್ರ 4 ಎಕರೆ ಭೂಮಿಗಾಗಿ ಹೋರಾಟ ಮಾಡುತ್ತಲೇ ಇರುವುದು ದುರಂತವಾಗಿದೆ. ನನಗೇನು ಭೂಮಿ ಬೇಡ ಮನೆ ಯಲ್ಲಿರುವ ನನ್ನ ಅಂಧ ಮಗನಿ ಗಾಗಿ ಭೂಮಿ ನೀಡಲಿ ಎಂದು ಪುಟ್ಟಸ್ವಾಮಿಗೌಡರು ಕಣ್ಣೀರು ಹಾಕುತ್ತಾರೆ.

ಸ್ಥಳೀಯ ಭಜರಂಗದಳದ ಮುಖಂಡರು ಅಂದು ಸೇನಾ ಪಡೆಯಲ್ಲಿದ್ದ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನ ವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಾನವೀಯತೆಯ ಆಧಾರದ ಮೇಲೆ ಜಿಲ್ಲಾಡಳಿತ ಈ ವೃದ್ಧರಿಗೆ ಜಮೀನು ನೀಡಲು ಮುಂದಾಗಬೇಕಾಗಿದೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಶ್ರೀರಂಗಪಟ್ಟಣ: ಕಾರಿಗೆ ಅಡ್ಡಗಟ್ಟಿ ಕಣ್ಣಿಗೆ ಖಾರದಪುಡಿ ಎರಚಿ ಯುವಕನ ಬರ್ಬರ ಹತ್ಯೆ

ಶ್ರೀರಂಗಪಟ್ಟಣ: ಕಾರಿಗೆ ಅಡ್ಡಗಟ್ಟಿ ಕಣ್ಣಿಗೆ ಖಾರದಪುಡಿ ಎರಚಿ ಯುವಕನ ಬರ್ಬರ ಹತ್ಯೆ

jee main exam in regional languages

ಇನ್ನು ಮುಂದೆ ಪ್ರಾದೇಶಿಕ ಭಾಷೆಗಳಲ್ಲೂ ಜೆಇಇ ಮೈನ್: ಕನ್ನಡದಲ್ಲೂ ಸಿಗುತ್ತಾ ಅವಕಾಶ?

ಭಾರತದಲ್ಲಿ ಗಾಳಿ ಕಲುಷಿತವಾಗಿದೆ: ಹವಾಮಾನ ಬದಲಾವಣೆ ಸಮರ್ಥನೆಗೆ ಭಾರತವನ್ನು ಟೀಕಿಸಿದ ಟ್ರಂಪ್

ಭಾರತದಲ್ಲಿ ಗಾಳಿ ಕಲುಷಿತವಾಗಿದೆ: ಹವಾಮಾನ ಬದಲಾವಣೆ ಸಮರ್ಥನೆಗೆ ಭಾರತವನ್ನು ಟೀಕಿಸಿದ ಟ್ರಂಪ್

swachh bharat mission

ಸ್ವಚ್ಛ ಭಾರತ್‌: ಪ್ರತಿ ಕುಟುಂಬಕ್ಕೆ 53000 ರೂ. ಉಳಿತಾಯ

ಭಾರತ-ಆಸೀಸ್‌ ಪಂದ್ಯಗಳಿಗೆ ಸಿಡ್ನಿ ಸಮ್ಮತಿ: ಆಸೀಸ್ ಗೆ ತೆರಳಲಿದೆ 32 ಸದಸ್ಯರ ಜಂಬೋ ತಂಡ

ಭಾರತ-ಆಸೀಸ್‌ ಪಂದ್ಯಗಳಿಗೆ ಸಿಡ್ನಿ ಸಮ್ಮತಿ: ಆಸೀಸ್ ಗೆ ತೆರಳಲಿದೆ 32 ಸದಸ್ಯರ ಜಂಬೋ ತಂಡ

ಮುಂಬೈ ಸಿಟಿ ಸೆಂಟರ್ ಮಾಲ್ ನಲ್ಲಿ ಅಗ್ನಿ ಅವಗಢ: 20 ಅಗ್ನಿಶಾಮಕ ವಾಹನಗಳು ದೌಡು

ಮುಂಬೈ ಸಿಟಿ ಸೆಂಟರ್ ಮಾಲ್ ನಲ್ಲಿ ಅಗ್ನಿ ಅವಗಢ: 20 ಅಗ್ನಿಶಾಮಕ ವಾಹನಗಳು ದೌಡು

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶ್ರೀರಂಗಪಟ್ಟಣ: ಕಾರಿಗೆ ಅಡ್ಡಗಟ್ಟಿ ಕಣ್ಣಿಗೆ ಖಾರದಪುಡಿ ಎರಚಿ ಯುವಕನ ಬರ್ಬರ ಹತ್ಯೆ

ಶ್ರೀರಂಗಪಟ್ಟಣ: ಕಾರಿಗೆ ಅಡ್ಡಗಟ್ಟಿ ಕಣ್ಣಿಗೆ ಖಾರದಪುಡಿ ಎರಚಿ ಯುವಕನ ಬರ್ಬರ ಹತ್ಯೆ

Fishಕೋವಿಡ್‌ ವೇಳೆ ಕೈಹಿಡಿದ ಮತ್ಸ್ಯಗಂಧ

ಕೋವಿಡ್‌ ವೇಳೆ ಕೈಹಿಡಿದ ಮತ್ಸ್ಯಗಂಧ

Kud

ಉಪ್ಪು ನೀರಿನ ದಾಂಗುಡಿಗೆ ಎಕರೆಗಟ್ಟಲೆ ಗದ್ದೆ ಹಡಿಲು

ಕೈಗೂಡದ ಕೋಡಿ ಹೊಸಬೆಂಗ್ರೆ ನಿವಾಸಿಗಳ ಹಕ್ಕುಪತ್ರದ ಕನಸು

ಕೈಗೂಡದ ಕೋಡಿ ಹೊಸಬೆಂಗ್ರೆ ನಿವಾಸಿಗಳ ಹಕ್ಕುಪತ್ರದ ಕನಸು

ತಲಕಾವೇರಿಯಲ್ಲಿ ತೀರ್ಥೋದ್ಭವ: ನೈಜ ಭಕ್ತರಿಗೆ ಅಡ್ಡಿ

ತಲಕಾವೇರಿಯಲ್ಲಿ ತೀರ್ಥೋದ್ಭವ: ನೈಜ ಭಕ್ತರಿಗೆ ಅಡ್ಡಿ

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

ಶ್ರೀರಂಗಪಟ್ಟಣ: ಕಾರಿಗೆ ಅಡ್ಡಗಟ್ಟಿ ಕಣ್ಣಿಗೆ ಖಾರದಪುಡಿ ಎರಚಿ ಯುವಕನ ಬರ್ಬರ ಹತ್ಯೆ

ಶ್ರೀರಂಗಪಟ್ಟಣ: ಕಾರಿಗೆ ಅಡ್ಡಗಟ್ಟಿ ಕಣ್ಣಿಗೆ ಖಾರದಪುಡಿ ಎರಚಿ ಯುವಕನ ಬರ್ಬರ ಹತ್ಯೆ

jee main exam in regional languages

ಇನ್ನು ಮುಂದೆ ಪ್ರಾದೇಶಿಕ ಭಾಷೆಗಳಲ್ಲೂ ಜೆಇಇ ಮೈನ್: ಕನ್ನಡದಲ್ಲೂ ಸಿಗುತ್ತಾ ಅವಕಾಶ?

ಭಾರತದಲ್ಲಿ ಗಾಳಿ ಕಲುಷಿತವಾಗಿದೆ: ಹವಾಮಾನ ಬದಲಾವಣೆ ಸಮರ್ಥನೆಗೆ ಭಾರತವನ್ನು ಟೀಕಿಸಿದ ಟ್ರಂಪ್

ಭಾರತದಲ್ಲಿ ಗಾಳಿ ಕಲುಷಿತವಾಗಿದೆ: ಹವಾಮಾನ ಬದಲಾವಣೆ ಸಮರ್ಥನೆಗೆ ಭಾರತವನ್ನು ಟೀಕಿಸಿದ ಟ್ರಂಪ್

swachh bharat mission

ಸ್ವಚ್ಛ ಭಾರತ್‌: ಪ್ರತಿ ಕುಟುಂಬಕ್ಕೆ 53000 ರೂ. ಉಳಿತಾಯ

ಭಾರತ-ಆಸೀಸ್‌ ಪಂದ್ಯಗಳಿಗೆ ಸಿಡ್ನಿ ಸಮ್ಮತಿ: ಆಸೀಸ್ ಗೆ ತೆರಳಲಿದೆ 32 ಸದಸ್ಯರ ಜಂಬೋ ತಂಡ

ಭಾರತ-ಆಸೀಸ್‌ ಪಂದ್ಯಗಳಿಗೆ ಸಿಡ್ನಿ ಸಮ್ಮತಿ: ಆಸೀಸ್ ಗೆ ತೆರಳಲಿದೆ 32 ಸದಸ್ಯರ ಜಂಬೋ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.