ಅಭಿವೃದ್ಧಿ ಮಾಡಿದ್ರೂ ಸೋತಿದ್ದು ದುರಂತ: ಖರ್ಗೆ

ಯುವ ಜನತೆ ಮೋದಿ ಪರ ವಾಲಿದ್ದು ದುರದೃಷ್ಟಕರ•ನನ್ನ ಸೋಲು ದೇಶಕ್ಕೆ ಸ್ವಾತಂತ್ರ್ಯ ತಂದ ಕಾಂಗ್ರೆಸ್‌ ಸೋಲು

Team Udayavani, Jun 12, 2019, 1:14 PM IST

ಶಹಾಬಾದ: ಕಾರ್ಯಕರ್ತರ ಕೃತಜ್ಞತಾ ಸಮಾರಂಭದಲ್ಲಿ ಸಾಹಿತಿ ಗಿರೀಶ ಕಾರ್ನಾಡ ಅವರಿಗೆ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು.

ಶಹಾಬಾದ: ಎಷ್ಟೋ ಸಂಸದರು ಗೆದ್ದು ಜನತೆಗೆ ಮುಖ ತೋರಿಸಿಲ್ಲ. ಅಭಿವೃದ್ಧಿ ಮಾಡಿಲ್ಲ. ನಾನು ರಾಷ್ಟ್ರೀಯ ಹೆದ್ದಾರಿ, ಇಎಸ್‌ಐ ಆಸ್ಪತ್ರೆ, 371 (ಜೆ) ಕಲಂ, ಕೇಂದ್ರೀಯ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ರೂ ಮತ ನೀಡದೇ ಸೋಲಿಸಿದ್ದು ದುರಂತ. ನಾನು ಮುಖ ತೋರಿಸುವುದೇ ತಪ್ಪಾಯ್ತಾ ಎಂದು ಮಾಜಿ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಪಾರ್ವತಿ ಸಭಾಂಗಣದಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕರ್ತರ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ನನ್ನ ಈ ಸೋಲು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್‌ ಪಕ್ಷದ ಸೋಲು. ದೇಶದ ಸ್ವಾತಂತ್ರ್ಯಕ್ಕಾಗಿ ಅಗಲಿ ಹೋದ ಆ ಮಹಾತ್ಮರ ಸೋಲು. ನನ್ನ ಸೋಲಿಗೆ ಕಾರಣವೇ ಇಲ್ಲ ಎಂದು ಹೇಳಿದರು.

ನಾನು ಒಬ್ಬ ಸಂಸದನಾಗಿ ಕೆಲಸ ಮಾಡಿಲ್ಲವೇ? ಸಂಸತ್‌ನಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡಿಲ್ಲವೇ? ಯಾವತ್ತಿಗೂ ಕೆಟ್ಟ ಹೆಸರು ತರುವಂಥ ಕೆಲಸವನ್ನು ನಾನು ಮಾಡಿಲ್ಲ. ಎಲ್ಲೂ ನನ್ನಿಂದ ಲೋಪ ಆಗಿಲ್ಲ. ಆದರೂ ನನಗೆ ಸೋಲು ಉಂಟಾಗಿದೆ. ಇದಕ್ಕೆ ಕಾರಣ ಬಿಜೆಪಿಯವರು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸಿದ್ದು. ಕಾಂಗ್ರೆಸ್‌ ಪಕ್ಷದ ಬಗ್ಗೆ ಹಾಗೂ ನನ್ನ ಬಗ್ಗೆ ಅಪಪ್ರಚಾರ ಮಾಡಿ ಮೋಸದಿಂದ ಗೆದ್ದಿದ್ದಾರೆ. ಮುಗ್ದ ಜನರಿಗೆ ಸುಳ್ಳಿನ ಭಾವಾನಾತ್ಮಕ ಮಾತಿನಿಂದ ಸೆಳೆದು ಮೋಸ ಮಾಡಿದ್ದಾರೆ ಎಂದರು.

ಧರ್ಮ, ಜಾತಿ ಹೆಸರಿನಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಸಂಸತ್‌ನಲ್ಲಿ ಮೋದಿ ವಿರುದ್ಧ ಮಾತನಾಡಿದಕ್ಕೆ ಸಹಿಸದ ಅಮಿತ್‌ ಶಾ ಹಾಗೂ ಮೋದಿ ನನಗೆ ಧಮಕಿ ಹಾಕಿದ್ದರು.ಅದನ್ನು ನಾನು ಎಲ್ಲರ ಮುಂದೆ ಹೇಳಿದ್ದೇನೆ. ಅಲ್ಲದೇ ನನ್ನನ್ನೇ ಟಾರ್ಗೆಟ್ ಮಾಡಿದರು. ನನ್ನ ವಿರುದ್ಧ ವಾಟ್ಸ ಆ್ಯಪ್‌, ಫೇಸ್‌ಬುಕ್‌ನಲ್ಲಿ ಇಲ್ಲ ಸಲ್ಲದ ವಿಷಯಗಳನ್ನು ಹಾಕಿ ಷಡ್ಯಂತ್ರ ರೂಪಿಸಿ, ಮೋಸದಿಂದ ಗೆದ್ದರು. ಮೆಡಿಕಲ್ ಕಾಲೇಜು, ಇಂಜಿನಿಯರ್‌ ಕಾಲೇಜು ಸೇರಿದಂತೆ 371(ಜೆ)ನೇ ಕಲಂ ಮಾಡಿದ್ದು ಕಾಂಗ್ರೆಸ್‌ ಪಕ್ಷ. ಇದರ ಉಪಯೋಗ ಪಡೆದ ಯುವ ಜನರೇ ಮೋದಿ ಪರವಾಗಿ ನಿಂತಿದ್ದು ದುರಂತ ಎಂದು ಕಳವಳ ವ್ಯಕ್ತಪಡಿಸಿದರು.

ವಾಟ್ಸ ಆ್ಯಪ್‌ನಲ್ಲಿ ನಾನು ಲಿಂಗಾಯತರ ವಿರೋಧಿ ಎಂದು ಬಣ್ಣಿಸಿದ್ದಾರೆ. ನಾನು ಲಿಂಗಾಯತರ ವಿರೋಧಿಯಲ್ಲ. ರಾಜಕೀಯ ಜೀವನದಲ್ಲಿ ನಾನು ಯಾವ ಸಮಾಜದೊಂದಿಗೂ ವಿರೋಧ ಕಟ್ಟಿಕೊಂಡಿಲ್ಲ. ಕಾಂಗ್ರೆಸ್‌ ಪಕ್ಷದ ವಿಚಾರಧಾರೆಯೇ ಎಲ್ಲರೊಂದಿಗೆ ಒಂದುಗೂಡುವುದು.ಆ ತತ್ವದ ಮೇಲೆ ನಡೆಯುತ್ತೇನೆ. ಅದನ್ನು ಬಿಟ್ಟು ಇಲ್ಲಸಲ್ಲದ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯವರೇ ಹಾಕಿದ್ದಾರೆ. ಬಿಜೆಪಿಯದ್ದು ಒಡೆದಾಳುವ ನೀತಿಯಾದರೆ, ಕಾಂಗ್ರೆಸ್‌ ಪಕ್ಷದ ವಿಚಾರಧಾರೆ ಎಲ್ಲರನ್ನೂ ಒಂದುಗೂಡಿಸುವುದು. ಆ ವಿಚಾರಧಾರೆಗಳನ್ನು ಹಳ್ಳಿ ಯುವಕರಿಗೆ ತಲುಪಿಸುವ ಕೆಲಸವಾಗಿಲ್ಲ.ಅದನ್ನು ಬೇರು ಮಟ್ಟದಿಂದ ಮಾಡಬೇಕಾಗಿದೆ. ಯಾವೊಬ್ಬ ಕಾರ್ಯಕರ್ತರು ಸೋಲಿನಿಂದ ಧೃತಿಗೆಡದೆ ಮತ್ತೇ ಪಕ್ಷವನ್ನು ಬಲಪಡಿಸುವತ್ತ ಮುಂದಾಗಬೇಕಿದೆ. ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದರು.

ಮುಖಂಡ ವಿಜಯಕುಮಾರ ರಾಮಕೃಷ್ಣ ಮಾತನಾಡಿ, ಹೈದ್ರಾಬಾದ ಕರ್ನಾಟಕ ಭಾಗದ ಅಭಿವೃದ್ಧಿಯ ಶ್ರೀ ಮುಕುಟದಂತಿರುವ ಮಲ್ಲಿಕಾರ್ಜುನ ಸಾಹೇಬರು ಕೆಲಸ ಮಾಡಿದರೂ ಮತ ಹಾಕದೇ ಸೋಲಿಸಿದ್ದರಿಂದ ಅತೀವ ನಿರಾಸೆಯಾಗಿದೆ. ಯುವಕರು ಬಿಜೆಪಿ ಕಡೆಗೆ ಅರಿಯದೇ ವಾಲುತ್ತಿದ್ದಾರೆ. ಈ ಭಾಗದ ಎಷ್ಟೋ ಯುವಕರು 371(ಜೆ) ಕಲಂ ಅಡಿಯಲ್ಲಿ ಉಪಯೋಗ ತೆಗೆದುಕೊಂಡಿದ್ದಾರೆ. ಈ 371 (ಜೆ) ಕಲಂ ತಂದದ್ದು ಮಲ್ಲಿಕಾರ್ಜುನ ಖರ್ಗೆ ಎನ್ನುವುದನ್ನು ಯುವಕರು ಮರೆಯಬಾರದಿತ್ತು. ಯಾರು ಕೆಲಸ ಮಾಡಿದ್ದಾರೆಯೋ ಅವರಿಗೆ ಬೆಂಬಲ ನೀಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ ಕೆಲಸ ನೋಡಿ ಯಾರೂ ಅವರು ಸೋಲುತ್ತಾರೇ ಎಂದು ಊಹಿಸಿರಲಿಲ್ಲ. ಮುಂಬರುವ ದಿನಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಸಾಹೇಬರ ಮಾರ್ಗದರ್ಶನದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಾರ್ಯ ಕೈಗೊಳ್ಳುತ್ತೇವೆ ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವಪ್ಪ ಗುತ್ತೇದಾರ, ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಜಗನ್ನಾಥ ಗೋಧಿ, ಸಿ.ಎ. ಪಾಟೀಲ, ದೇವೆಂದ್ರಪ್ಪ ಮರತೂರ, ಚಂದ್ರಿಕಾ ಪರಮೇಶ್ವರ, ಲತಾ ರಾಠೊಡ, ಸುಭಾಷ ರಾಠೊಡ, ಜಿಪಂ ಸದಸ್ಯ ಶಿವಾನಂದ ಪಾಟೀಲ, ಅಜೀತ್‌ ಪಾಟೀಲ, ವಿಜಯಕುಮಾರ ಮುಟ್ಟತ್ತಿ, ಗಿರೀಶ ಕಂಬಾನೂರ, ಸುಭಾಷ ಪವಾರ, ಯಾಕೂಬ ಮರ್ಚಂಟ್, ಸುರೇಶ ನಾಯಕ, ಸಾಹೇಬಗೌಡ ಬೋಗುಂಡಿ, ಸುಭಾಷ ಪಂಚಾಳ ಹಾಗೂ ಮತ್ತಿತರರು ಇದ್ದರು. ಮೃತ್ಯಂಜಯ ಹಿರೇಮಠ ನಿರೂಪಿಸಿದರು, ಡಾ| ರಶೀದ ಮರ್ಚಂಟ್ ಸ್ವಾಗತಿಸಿದರು, ಡಾ| ಅಹ್ಮದ್‌ ಪಟೇಲ್ ವಂದಿಸಿದರು. ಕಾರ್ಯಕ್ರಮಕ್ಕೂ ಮುಂಚೆ ಸಾಹಿತಿ ಗಿರೀಶ ಕಾರ್ನಾಡ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸುಳ್ಳಿಗೆ ಜಯ ಸಿಕ್ಕಿದೆ. ಜನರು ಸುಳ್ಳಿಗೆ ಮಣೆ ಹಾಕಿದ್ದಾರೆ. ಮೋಸದ ಗಾಳಿಗೆ ನಾವು ಸೋತಿರಬಹುದು. ಯಾವುದಕ್ಕೂ ಕಾರ್ಯಕರ್ತರು ಆತ್ಮವಿಶ್ವಾಸ ಕಳೆದುಕೊಳ್ಳದಿರಿ. ಧರ್ಮದ ಕಾಲ ಬಂದೇ ಬರುತ್ತದೆ.
ಅಲ್ಲಮ ಪ್ರಭು ಪಾಟೀಲ,
ಮಾಜಿ ವಿಧಾನ ಪರಿಷತ್‌ ಸದಸ್ಯ

ವಿಚಾರವಂತ, ನಿಷ್ಠುರವಾದಿ ಗಿರೀಶ ಕಾರ್ನಾಡ ಪ್ರಗತಿಪರ ವಿಚಾರಧಾರೆ ಮೂಲಕ, ನಾಟಕ, ಸಿನಿಮಾ ರಂಗ ಮೂಲಕ ದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರ ಅಗಲಿಕೆಯಿಂದ ಕನ್ನಡ ಶ್ರೀಮಂತಿಕೆಗೆ ಬಹುದೊಡ್ಡ ನಷ್ಟವಾಗಿದೆ. ಇಂತಹ ವಿಚಾರವಂತರು ಬೆಳೆದು ಬಂದರೆ ಸಮಾಜದಲ್ಲಿ ಸಮಾನತೆ ತರಲು ಸಾಧ್ಯವಾಗುತ್ತದೆ. ಆದರಿಂದು ಇಂತಹ ವಿಚಾರಧಾರೆ ಮೇಲೆ ದೊಡ್ಡ ಕೊಡಲಿ ಪೆಟ್ಟು ಬಿದ್ದಿದೆ.
ಡಾ| ಮಲ್ಲಿಕಾರ್ಜುನ ಖರ್ಗೆ,
 ಮಾಜಿ ಸಂಸದ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಬಾಗಲಕೋಟೆ: ಜಿಲ್ಲಾ ಕಾಂಗ್ರೆಸ್‌ ನಾಯಕತ್ವ ಬದಲಾವಣೆಗೆ ಕೈ ನಾಯಕರು ಈಗ ಗಂಭೀರ ಚಿಂತನೆ ನಡೆಸಿದ್ದು, ಜಿಲ್ಲಾ ಅಧ್ಯಕ್ಷರ ಬದಲಾವಣೆಗಾಗಿಯೇ ಕೆಪಿಸಿಸಿಯಿಂದ ನೇಮಕಗೊಂಡಿದ್ದ...

  • ಬೆಳಗಾವಿ: ಸಹೋದರ ಲಖನ್ ಜಾರಕಿಹೊಳಿಗೆ ಒಳ್ಳೆಯದಾಗಲಿ. ಅವನು ಸತೀಶ್ ಜಾರಕಿಹೊಳಿ ಜೊತೆಗೆ ಸೇರಿ ಹಾಳಾಗುವುದು ಬೇಡ. ಲಖನ್ ಶಾಸಕ ಆದ್ರೆ ಮೊದಲು ಸಂತೋಷ ನಾನು ಪಡುತ್ತೇನೆ...

  • ಕುಂದಗೋಳ: ಸರ್ಕಾರಿ ಕಾರ್ಯಕ್ರಮಕ್ಕೆ ನಮ್ಮನ್ನು ಏಕೆ ಕರೆಯುತ್ತಿಲ್ಲ ಎಂದು ತಾಪಂ ಸರ್ವ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ತಾಪಂ...

  • ಧಾರವಾಡ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ತಂಬಾಕು ತನಿಖಾ ದಳ ದಿಂದ 21ಕ್ಕೂ ಹೆಚ್ಚು ದಿಢೀರ್‌ ದಾಳಿ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ...

  • ಧಾರವಾಡ: ಕೋಟಿ ಕೋಟಿ ರೂಪಾಯಿ ಸುರಿದು ಕಟ್ಟಿದ ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ. ಆದರೆ ಅಲ್ಲಲ್ಲಿ ಸೋರುತ್ತಿದೆ. ನೆಲ ಮಹಡಿಯಲ್ಲಿಯೋ ಚರಂಡಿ ನೀರು ಮತ್ತು ಮಳೆ...

ಹೊಸ ಸೇರ್ಪಡೆ

  • ಬಾಗಲಕೋಟೆ: ಜಿಲ್ಲಾ ಕಾಂಗ್ರೆಸ್‌ ನಾಯಕತ್ವ ಬದಲಾವಣೆಗೆ ಕೈ ನಾಯಕರು ಈಗ ಗಂಭೀರ ಚಿಂತನೆ ನಡೆಸಿದ್ದು, ಜಿಲ್ಲಾ ಅಧ್ಯಕ್ಷರ ಬದಲಾವಣೆಗಾಗಿಯೇ ಕೆಪಿಸಿಸಿಯಿಂದ ನೇಮಕಗೊಂಡಿದ್ದ...

  • ಬೆಳಗಾವಿ: ಸಹೋದರ ಲಖನ್ ಜಾರಕಿಹೊಳಿಗೆ ಒಳ್ಳೆಯದಾಗಲಿ. ಅವನು ಸತೀಶ್ ಜಾರಕಿಹೊಳಿ ಜೊತೆಗೆ ಸೇರಿ ಹಾಳಾಗುವುದು ಬೇಡ. ಲಖನ್ ಶಾಸಕ ಆದ್ರೆ ಮೊದಲು ಸಂತೋಷ ನಾನು ಪಡುತ್ತೇನೆ...

  • ಕುಂದಗೋಳ: ಸರ್ಕಾರಿ ಕಾರ್ಯಕ್ರಮಕ್ಕೆ ನಮ್ಮನ್ನು ಏಕೆ ಕರೆಯುತ್ತಿಲ್ಲ ಎಂದು ತಾಪಂ ಸರ್ವ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ತಾಪಂ...

  • ಧಾರವಾಡ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ತಂಬಾಕು ತನಿಖಾ ದಳ ದಿಂದ 21ಕ್ಕೂ ಹೆಚ್ಚು ದಿಢೀರ್‌ ದಾಳಿ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ...

  • ಧಾರವಾಡ: ಕೋಟಿ ಕೋಟಿ ರೂಪಾಯಿ ಸುರಿದು ಕಟ್ಟಿದ ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ. ಆದರೆ ಅಲ್ಲಲ್ಲಿ ಸೋರುತ್ತಿದೆ. ನೆಲ ಮಹಡಿಯಲ್ಲಿಯೋ ಚರಂಡಿ ನೀರು ಮತ್ತು ಮಳೆ...