ಯಾತ್ರೆಯಿಂದ ಬಂದವರಲ್ಲಿ ಸೋಂಕು ಜಾತ್ರೆ: ಓಂಶಕ್ತಿ ಯಾತ್ರೆಗೆ ಹೋಗಿ ಬಂದ 63 ಜನರಗೆ ಪಾಸಿಟಿವ್!
Team Udayavani, Jan 9, 2022, 1:38 PM IST
ಶಿವಮೊಗ್ಗ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ಭೀತಿ ಎದುರಾಗಿದೆ. ತಮಿಳುನಾಡು ರಾಜ್ಯದ ದೇವಾಲಯಗಳಿಗೆ ಹೋಗಿ ಜಿಲ್ಲೆಗೆ ಮರಳಿ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಓಂ ಶಕ್ತಿ ಯಾತ್ರೆಗೆ ಹೋಗಿ ಬಂದ 63 ಜನರಲ್ಲಿ ರವಿವಾರ ಕೋವಿಡ್ ಸೋಂಕು ಪತ್ತೆಯಾಗಿದೆ. ಶನಿವಾರದವರೆಗೂ ಓಂ ಶಕ್ತಿ ಯಾತ್ರೆಗೆ ಹೋಗಿ ಬಂದಿದ್ದ 20 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಮತ್ತೆ 63 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟಾರೆಯಾಗಿ ಇದುವರೆಗೆ ಓಂ ಶಕ್ತಿ ಯಾತ್ರೆಗೆ ಹೋಗಿ ಬಂದ 83 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಇದನ್ನೂ ಓದಿ:ಒಂದೇ ದಿನ 1.59 ಲಕ್ಷ ಕೋವಿಡ್ ಪ್ರಕರಣಗಳು ಪತ್ತೆ; 3623ಕ್ಕೇರಿದ ಒಮಿಕ್ರಾನ್ ಸಂಖ್ಯೆ
ಶನಿವಾರ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 117 ಕೋವಿಡ್ ಪ್ರಕರಣಗಳು ಪತ್ತೆಯಾಗಿತ್ತು. ಇಂದೂ ನೂರರ ಗಡಿ ದಾಟುವ ಸಾಧ್ಯತೆಯಿದೆ. ಶಿಕಾರಿಪುರ, ಭದ್ರಾವತಿ, ಹೊಸನಗರ ತಾಲೂಕಿನಿಂದ ತಮಿಳುನಾಡಿನ ದೇವಾಲಯಗಳಿಗೆ ಭಕ್ತರು ತೆರಳಿದ್ದು, ಶಿವಮೊಗ್ಗದ ಜೊತೆಗೆ ಈ ತಾಲೂಕುಗಳಿಗೂ ಸೋಂಕು ವ್ಯಾಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದಲ್ಲಿ 24ಗಂಟೆಯಲ್ಲಿ 13,086 ಕೋವಿಡ್ ಪ್ರಕರಣ ದೃಢ, ಸಕ್ರಿಯ ಪ್ರಕರಣ ಹೆಚ್ಚಳ
ಭಾರತದಲ್ಲಿ 24 ಗಂಟೆಯಲ್ಲಿ 16, 135 ಕೋವಿಡ್ ಸೋಂಕು ಪ್ರಕರಣ ದೃಢ; ಸಕ್ರಿಯ ಪ್ರಕರಣ ಏರಿಕೆ
ಭಾರತದಲ್ಲಿ 24 ಗಂಟೆಯಲ್ಲಿ 17,092 ಕೋವಿಡ್ ಪ್ರಕರಣ ದೃಢ, 29 ಮಂದಿ ಸಾವು
ಭಾರತದಲ್ಲಿ 24ಗಂಟೆಯಲ್ಲಿ 17,070 ಕೋವಿಡ್ ಪ್ರಕರಣ ದೃಢ, 23 ಮಂದಿ ಸಾವು
ಕೋವಿಡ್ ಸಂಖ್ಯೆ ಹೆಚ್ಚಳ:24ಗಂಟೆಯಲ್ಲಿ 18,000 ಪ್ರಕರಣ ದೃಢ, ಲಕ್ಷದ ಗಡಿ ದಾಟಿದ ಸಕ್ರಿಯ ಕೇಸ್