ಕೋಮು ಗಲಭೆಗೆ ಆರಗ ಕಾರಣ

ಗುಡ್ಡೆ ಕೊಪ್ಪದಿಂದ ಶಿವಮೊಗ್ಗದವರೆಗೆ ಕಿಮ್ಮನೆ ನೇತೃತ್ವದಲ್ಲಿ ಪಾದಯಾತ್ರೆ

Team Udayavani, May 7, 2022, 3:21 PM IST

aaraga

ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ನಡೆದ ಎಲ್ಲಾ ಕೋಮು ಗಲಭೆಯಲ್ಲಿ ಆರಗ ಜ್ಞಾನೇಂದ್ರ ಮುಂಚೂಣಿಯಲಿದ್ದು ಕ್ಷೇತ್ರದಲ್ಲಿ ಕೋಮು ಗಲಭೆ ನಡೆಯಲು ಅವರೇ ನೇರ ಕಾರಣ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಹೇಳಿದರು.

ಆರಗ ಜ್ಞಾನೇಂದ್ರ ವೈಫಲ್ಯ, ಗೃಹ ಇಲಾಖೆಯಲ್ಲಿ ಅಸಮರ್ಥ ನಿರ್ವಹಣೆ, ಕ್ಷೇತ್ರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಮೇಲಿನ ದೌರ್ಜನ್ಯ ಹೀಗೆ ಹತ್ತು -ಹಲವು ಸಮಸ್ಯೆಗಳನ್ನು ಖಂಡಿಸಿ ಶುಕ್ರವಾರ ಗುಡ್ಡೇಕೊಪ್ಪದಿಂದ ಶಿವಮೊಗ್ಗದವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಜಾಲನೆ ನೀಡಿ ಅವರು ಮಾತನಾಡಿದರು.

ಆರಗ ಜ್ಞಾನೇಂದ್ರ ಗೃಹ ಮಂತ್ರಿ ಯಾದ ಮೇಲೆ ಅವರ ಹೇಳಿಕೆಗಳಿಂದ ಕ್ಷೇತ್ರದ ಜನರಿಗೆ ಮುಜುಗರ ಆಗುತ್ತಿದೆ. ಕ್ಷೇತ್ರದಲ್ಲಿ ಬಿಜೆಪಿಯವರಿಗೆ ಒಂದು ನ್ಯಾಯ ಉಳಿದವರಿಗೆ ಒಂದು ನ್ಯಾಯ ಎಂಬ ಸ್ಥಿತಿ ಇದೆ. ಗೃಹ ಸಚಿವ ಆರಗ ರಾಜೀನಾಮೆಗೆ ಕಿಮ್ಮನೆ ಆಗ್ರಹ ಒಂದು ನ್ಯಾಯ ಆಗಿದೆ. ಪೊಲೀಸ್‌, ಕಂದಾಯ, ಗಣಿ ಮತ್ತು ಭೂ ವಿಜ್ಞಾನ, ಅರಣ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಜ್ಞಾನೇಂದ್ರ ಅವರ ಹಿಂಬಾಲಕರು ಹೇಳಿದಂತೆ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.

ತೀರ್ಥಹಳ್ಳಿಯಲ್ಲಿ ಮರಳು, ಕಲ್ಲು, ಮಣ್ಣು ಅಕ್ರಮ ಸಾಗಾಟ ನಿರಂತರವಾಗಿದೆ. ಬಿಜೆಪಿಯವರು ಮರಳು ಹೊಡೆಯುತ್ತಿದ್ದರೂ ಸಂಬಂಧ ಪಟ್ಟ ಇಲಾಖೆಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಆರಗ ಜ್ಞಾನೇಂದ್ರ ನೇಮಕಾತಿ ಹಗರಣದಲ್ಲಿ ಭಾಗಿಯಾಗಿದ್ದರೆ, ಕಲಬುರಗಿಯ ಬಿಜೆಪಿ ಅಧ್ಯಕ್ಷೆ ದಿವ್ಯಾ ಹಾಗರಗಿ ತೀರ್ಥಹಳ್ಳಿಗೆ ಬಂದು ಹೋಗಿದ್ದು, ತಾಪಂ ಮಾಜಿ ಸದಸ್ಯರು ಹಗರಣದಲ್ಲಿ ಭಾಗಿಯಾಗಿರುವ ಶಂಕೆಯಿದೆ. ಹಾಗಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯದ ಹೊಣೆ ಹೊತ್ತು ಸರ್ಕಾರ ವಿಸರ್ಜನೆ ಮಾಡಿ ಚುನಾವಣೆಗೆ ಹೋಗಲಿ ಎಂದರು.

ಪಾದಯಾತ್ರೆಯಲ್ಲಿ ಕೆಪಿಸಿಸಿ ಸದಸ್ಯ ನಾರಾಯಣರಾವ್‌, ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ಕಸ್ತೂರು ಮಂಜುನಾಥ್‌, ಜಿಪಂ ಮಾಜಿ ಅಧ್ಯಕ್ಷ ಬಿ.ಎಸ್. ಯಲ್ಲಪ್ಪ, ಸದಸ್ಯರಾದ ಹಾರೋಗೊಳಿಗೆ ಪದ್ಮನಾಭ್‌, ಕಲ್ಪನಾ ಪದ್ಮನಾಭ್‌, ಪಪಂ ಅಧ್ಯಕ್ಷೆ ಶಬ್ನಂ, ಉಪಾಧ್ಯಕ್ಷ ಜಯಪ್ರಕಾಶ ಶೆಟ್ಟಿ, ಸದಸ್ಯರಾದ ಸುಶೀಲಾ ಶೆಟ್ಟಿ, ಗೀತಾ ರಮೇಶ್‌ ಅನೇಕ ಕಾಂಗ್ರೆಸ್‌ ಮುಖಂಡರು ಇದ್ದರು.

ಟಾಪ್ ನ್ಯೂಸ್

ನಾವು ಯಾವತ್ತೂ ಅಫ್ಘಾನಿಗರ ಪರ; ಎನ್‌ಎಸ್‌ಎ ದೊವಾಲ್‌

ನಾವು ಯಾವತ್ತೂ ಅಫ್ಘಾನಿಗರ ಪರ; ಎನ್‌ಎಸ್‌ಎ ಅಜಿತ್‌ ದೊವಾಲ್‌

ಡಿ.ಕೆ.ಶಿವಕುಮಾರ್‌ ಅವರನ್ನು ಬಿಜೆಪಿಗೆ ಕರೆದವರು ಯಾರು: ಮುನಿರತ್ನ ಸವಾಲು

ಡಿ.ಕೆ.ಶಿವಕುಮಾರ್‌ ಅವರನ್ನು ಬಿಜೆಪಿಗೆ ಕರೆದವರು ಯಾರು: ಮುನಿರತ್ನ ಸವಾಲು

ಅತ್ಯುತ್ತಮ ವಿಧಾನಪರಿಷತ್ತು-ವಿಧಾನಸಭೆ ಪ್ರಶಸ್ತಿ: ಮಾನದಂಡ ಸಮಿತಿಗೆ ಕಾಗೇರಿ ಅಧ್ಯಕ್ಷ

ಅತ್ಯುತ್ತಮ ವಿಧಾನಪರಿಷತ್ತು-ವಿಧಾನಸಭೆ ಪ್ರಶಸ್ತಿ: ಮಾನದಂಡ ಸಮಿತಿಗೆ ಕಾಗೇರಿ ಅಧ್ಯಕ್ಷ

1-df-dfsdfsd

ಕೊರಟಗೆರೆ : ಹೆಜ್ಜೇನು ದಾಳಿಗೆ ನಿವೃತ್ತ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸಾವು

ನಮ್ಮ ಸರ್ಕಾರ ರೈತರನ್ನು ಕೈಬಿಡುವುದಿಲ್ಲ: ಸಚಿವ ಮುನಿರತ್ನ

ನಮ್ಮ ಸರ್ಕಾರ ರೈತರನ್ನು ಕೈಬಿಡುವುದಿಲ್ಲ: ಸಚಿವ ಮುನಿರತ್ನ

1-dfffsdf

ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ನೇಮಕ

ಸ್ಟಾಲಿನ್‌ ವಿರುದ್ಧ ಅಣ್ಣಾಮಲೈ ಗುಡುಗು; ಮೋದಿ ಭೇಟಿ ವೇಳೆ ಸಿಎಂ ನಡವಳಿಕೆ ಕುರಿತು ಆಕ್ರೋಶ

ಸ್ಟಾಲಿನ್‌ ವಿರುದ್ಧ ಅಣ್ಣಾಮಲೈ ಗುಡುಗು; ಮೋದಿ ಭೇಟಿ ವೇಳೆ ಸಿಎಂ ನಡವಳಿಕೆ ಕುರಿತು ಆಕ್ರೋಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

shivmogga

ಮಳೆಹಾನಿ ಮರುಕಳಿಸದಂತೆ ಮುನ್ನೆಚ್ಚರಿಕೆ ಕೈಗೊಳ್ಳಿ

outrage

ಪಪಂ ಸಿಬ್ಬಂದಿ ಕಾರ್ಯ ವೈಖರಿಗೆ ಆಕ್ರೋಶ

ಕೆ.ಎಸ್.ಈಶ್ವರಪ್ಪ

ಮುಸಲ್ಮಾನರ ಮನಸ್ಥಿತಿ ಬದಲಾಗಬೇಕು, ಇಲ್ಲವಾದರೆ ನಾವು ಒಪ್ಪಲ್ಲ: ಕೆ.ಎಸ್.ಈಶ್ವರಪ್ಪ

layout1

ಮಳೆ ಬಂದರೆ ಶಾಂತಮ್ಮ ಲೇಔಟ್‌ ಮಂದಿಗೆ ಭೀತಿಯೋ ಭೀತಿ!

kirloskar

ಕಿರ್ಲೋಸ್ಕರ್‌ ಕಂಪನಿ ಜತೆ ಕುವೆಂಪು ವಿವಿ ಒಪ್ಪಂದ

MUST WATCH

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

udayavani youtube

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

udayavani youtube

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

ಹೊಸ ಸೇರ್ಪಡೆ

1-dfdffsf

ಭಟ್ಕಳ: ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಕೋಣಗಳ ರಕ್ಷಣೆ; ಮೂವರ ಬಂಧನ

ನಾವು ಯಾವತ್ತೂ ಅಫ್ಘಾನಿಗರ ಪರ; ಎನ್‌ಎಸ್‌ಎ ದೊವಾಲ್‌

ನಾವು ಯಾವತ್ತೂ ಅಫ್ಘಾನಿಗರ ಪರ; ಎನ್‌ಎಸ್‌ಎ ಅಜಿತ್‌ ದೊವಾಲ್‌

ಡಿ.ಕೆ.ಶಿವಕುಮಾರ್‌ ಅವರನ್ನು ಬಿಜೆಪಿಗೆ ಕರೆದವರು ಯಾರು: ಮುನಿರತ್ನ ಸವಾಲು

ಡಿ.ಕೆ.ಶಿವಕುಮಾರ್‌ ಅವರನ್ನು ಬಿಜೆಪಿಗೆ ಕರೆದವರು ಯಾರು: ಮುನಿರತ್ನ ಸವಾಲು

ಅತ್ಯುತ್ತಮ ವಿಧಾನಪರಿಷತ್ತು-ವಿಧಾನಸಭೆ ಪ್ರಶಸ್ತಿ: ಮಾನದಂಡ ಸಮಿತಿಗೆ ಕಾಗೇರಿ ಅಧ್ಯಕ್ಷ

ಅತ್ಯುತ್ತಮ ವಿಧಾನಪರಿಷತ್ತು-ವಿಧಾನಸಭೆ ಪ್ರಶಸ್ತಿ: ಮಾನದಂಡ ಸಮಿತಿಗೆ ಕಾಗೇರಿ ಅಧ್ಯಕ್ಷ

1-df-dfsdfsd

ಕೊರಟಗೆರೆ : ಹೆಜ್ಜೇನು ದಾಳಿಗೆ ನಿವೃತ್ತ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.