ಅಯ್ಯೋ..ತಾಯಿಯ ಶವದ ಜೊತೆ ರಾತ್ರಿಯಿಡೀ 3 ವರ್ಷದ ಮಗುವಿನ ರೋಧನ
Team Udayavani, Apr 26, 2017, 2:08 PM IST
ಶಿವಮೊಗ್ಗ : ಇಲ್ಲಿನ ಹರಿಗೆ ಎಂಬಲ್ಲಿ ಬಿ.ಹೆಚ್.ರಸ್ತೆಯ ಹೊಲದಲ್ಲಿ ಮಹಿಳೆಯೊಬ್ಬಳನ್ನು ಮಂಗಳವಾರ ತಡರಾತ್ರಿ ಬರ್ಬರವಾಗಿ ಇರಿದು ಕೊಲೆ ಮಾಡಲಾಗಿದ್ದು, ಆಕೆಯ ಸುಮಾರು 3 ವರ್ಷದ ಮಗು ರಾತ್ರಿ ಇಡೀ ಶವದ ಬಳಿ ರೋಧಿಸುತ್ತಾ ಇದ್ದ ದೃಶ್ಯ ನೋಡುಗರ ಕರುಳು ಹಿಂಡುವಂತಿತ್ತು.
ಬೆಳಗ್ಗೆ ತಾಯಿಯ ರಕ್ತ ಸಿಕ್ತ ಶವದ ಬಳಿ ಮಗುವಿನ ರೋಧನ ಸ್ಥಳೀಯರು ನೋಡಿದ್ದಾರೆ. ಮಹಿಳೆ ಕೊಲೆಯಾಗಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗುವಿಗೆ ಆರೈಕೆ ಮಾಡಿ ತಿನ್ನಲು ಆಹಾರ ನೀಡಿ, ಏನಾಗಿದೆ ಎಂದು ಕೇಳಿದ್ದಾರೆ. ಈ ವೇಳೆ ನಾವು ಬಸ್‌ನಲ್ಲಿ ಬಂದಿಳಿದಿದ್ದು ಅಪ್ಪನೇ ಅಮ್ಮನಿಗೆ ಇರಿದಿದ್ದಾನೆ ಎಂದು ಹೇಳಿದೆ. ಆದರೆ ಹೆಚ್ಚಿನ ಮಾಹಿತಿ ಮಗುವಿನಿಂದ ಲಭ್ಯವಾಗಿಲ್ಲ.
ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತಳ ಕೈ ಮೇಲೆ ಯಲ್ಲಮ್ಮ-ನಾಗರಾಜ್ ಎಂಬ ಹಚ್ಚೆಯಿದ್ದು, ಈ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ.
ಮಹಿಳೆಗೆ ಸುಮಾರು 25 ವರ್ಷ ಪ್ರಾಯ ಎಂದು ಅಂದಾಜಿಸಲಾಗಿದ್ದು, ಆಕೆಯ ಗಂಡನೇ ಕೊಲೆಗೈದು ಪರಾರಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೊರಬ : ಎಸ್ಸೆಸ್ಸೆಲ್ಸಿ ಯಲ್ಲಿ ಸಮಾನ ಅಂಕ ಗಳಿಸುವ ಮೂಲಕ ಗಮನ ಸೆಳೆದ ಅವಳಿ ಸಹೋದರಿಯರು
ಮಳೆಯಿಂದ ಬೆಳೆ ನಷ್ಟ: ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು; ಮಾಜಿ ಶಾಸಕ ಮಧು ಬಂಗಾರಪ್ಪ
ಸಾಗರ: ನೆಡುತೋಪು ಕಾವಲು ಕಾಯುತ್ತಿದ್ದವನಿಂದಲೇ ಪ್ಲಾಂಟೇಶನ್ನಿಂದ ಮರ ಕಳ್ಳತನ; ಆರೋಪಿಗಳ ಬಂಧನ
ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಅವಾಂತರ ತಪ್ಪಿಸಲು ಮನವಿ
ತೀರ್ಥಹಳ್ಳಿ: ಗೋ ಮಾಂಸ ಮಾರಾಟ ಮಾಡುವ ಅಂಗಡಿ ಮೇಲೆ ಪೊಲೀಸರ ದಾಳಿ