ಸೀಲ್ಡೌನ್ ವಿಸ್ತೀರ್ಣದಲ್ಲಿ ಕಡಿತ
Team Udayavani, Jun 18, 2020, 1:30 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಭದ್ರಾವತಿ: ಚೆನ್ನಗಿರಿ ರಸ್ತೆಯಲ್ಲಿನ ಗರ್ಭಿಣಿಯಲ್ಲಿ ಕಂಡುಬಂದ ಕೋವಿಡ್ ಸೋಂಕಿನ ಕಾರಣ ಜೂನ್ ಮೊದಲ ವಾರದಲ್ಲಿ ನಿವಾಸದ ನಾಲ್ಕು ದಿಕ್ಕಿನ ನೂರು ಮೀಟರ್ ವ್ಯಾಪ್ತಿಯವರಗೆ ಮಾಡಲಾಗಿದ್ದ ಸೀಲ್ಡೌನ್ ವಿಸ್ತೀರ್ಣವನ್ನು ಐವತ್ತು ಮೀಟರ್ ವ್ಯಾಪ್ತಿಗೆ ಸಂಕುಚಿತಗೊಳಿಸಿ ಸೀಲ್ಡೌನ್ ವ್ಯಾಪ್ತಿಯನ್ನು ಸಡಿಲಗೊಳಿಸಲಾಗಿದೆ.
ಸೀಲ್ ಡೌನ್ ಮಾಡಲಾಗಿರುವ ರಸ್ತೆಯು ವ್ಯಾಪಾರ- ವಹಿವಾಟಿನ ಪ್ರದೇಶವಾಗಿರುವ ಕಾರಣ ಸೀಲ್ ಡೌನ್ ಮಾಡಿರುವುದರಿಂದ ವ್ಯಾಪಾರ- ವಹಿವಾಟಿಗೆ ತೊಂದರೆಯಾಗುತ್ತಿದೆ ಎಂದು ಆಕ್ಷೇಪಿಸಿ ಅಲ್ಲಿನ ಕೆಲವರು ಜಿಲ್ಲಾಧಿಕಾರಿಗಳಿಗೆ ಸೀಲ್ಡೌನ್ ತೆರವುಗೊಳಿಸುವಂತೆ ಮನವಿ ಸಲ್ಲಿಸಿದ್ದರ ಮೇರೆಗೆ ನಗರಾಡಳಿತ ಸೀಲ್ಡೌನ್ ವಿಸ್ತೀರ್ಣವನ್ನು ಅರ್ಧಕ್ಕೆ ಇಳಿಸಿದೆ. ಸೋಂಕಿತ ಮಹಿಳೆಯ ತಂದೆ- ತಾಯಿಯ ವೈದ್ಯಕೀಯ ವರದಿ ಬರಬೇಕಿದ್ದು ಅದು ನೆಗೆಟಿವ್ ಬಂದರೆ ಸೀಲ್ಡೌನ್ ಅನ್ನು ಸಂಪೂರ್ಣವಾಗಿ ತೆರವುಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು