ಮಕ್ಕಳಲ್ಲಿರುವ ಪ್ರತಿಭೆ ಹೊರತರಲು ಯತ್ನಿಸಿ: ಶಿಕಾರಿಪುರ
ಜಿಲ್ಲಾ ಮಟ್ಟದ 14ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಬಾಲ ಸಾಹಿತಿ ಕುಮಾರ ಸಾತ್ವಿಕ್ ಬಿ.ಎಂ. ಶಿಕಾರಿಪುರ ಸಲಹೆ
Team Udayavani, Feb 11, 2021, 4:20 PM IST
ಶಿವಮೊಗ್ಗ: ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗುವ ರೀತಿಯಲ್ಲಿ ರೂಪಿಸಲಾದ ನಮ್ಮ ಶೈಕ್ಷಣಿಕ ವ್ಯವಸ್ಥೆ ಮಕ್ಕಳಲ್ಲಿರುವ ಪ್ರತಿಭೆಗೆ ಸರಿಯಾದ ಅವಕಾಶ ಇಲ್ಲದೇ ಅವರ ಸೃಜನಶೀಲತೆ ಮಾಯವಾಗುವಂತೆ ಮಾಡುತ್ತಿದೆ. ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತರುವ ಕೆಲಸ ನಿರಂತರವಾಗಿ ಆಗಬೇಕಾದ ಅವಶ್ಯಕತೆಯಿದೆ ಎಂದು ಬಾಲ ಸಾಹಿತಿ ಕುಮಾರ ಸಾತ್ವಿಕ್ ಬಿ.ಎಂ. ಶಿಕಾರಿಪುರ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಮತ್ತು ಅದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ಇಲ್ಲಿನ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ 14ನೇ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಬಗ್ಗೆ ಸಾಕಷ್ಟು ಅಸಡ್ಡೆ ಮಾಡಲಾಗುತ್ತಿದೆ. ಅವರಿಗೆ ಸರಿಯಾದ ಮಾರ್ಗದರ್ಶನ ಇಲ್ಲದೆ ಪ್ರತಿಭೆ ಕಮರಿ ಹೋಗುತ್ತಿದೆ. ಸರ್ಕಾರದ ನೀತಿಗಳಿಂದಾಗಿ ಶೈಕ್ಷಣಿಕವಾಗಿ ಹಿಮ್ಮುಖವಾಗುತ್ತಿದೆ. ಅನೇಕ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ಬಂದಿರುವುದು ವಿಪರ್ಯಾಸ. ಶ್ರೀಮಂತಿಕೆಯಿಂದಿರುವ ನಾಡಿನ ಸಾಹಿತ್ಯ ಪರಂಪರೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಆಗಬೇಕಿದೆ. ಮಕ್ಕಳ ಅಭಿವ್ಯಕ್ತಿಗೆ ಹೆಚ್ಚಿನ ಅವಕಾಶ ನೀಡುವ ಮೂಲಕ ಅವರ ಬೆಳವಣಿಗೆಗೆ ವಿಶೇಷ ಗಮನ ಹರಿಸಬೇಕೆಂದರು.
ಸಮ್ಮೇಳನದ ಸರ್ವಾಧ್ಯಕ್ಷೆ ನಿಶ್ಚಿತ ಎಂ.ಶೆಟ್ಟಿ ಕಾರ್ಗಲ್ ಮಾತನಾಡಿ, ವಿಶ್ವಮಾನ್ಯತೆ ಸಾರಿದ ಕುವೆಂಪುಗೆ ಜನ್ಮ ನೀಡಿದ ಕರ್ಮಭೂಮಿ ಮಲೆನಾಡು. ಕನ್ನಡದ ಉಳಿವಿಗಾಗಿ ಹಾಗೂ ಅದನ್ನು ಎತ್ತರಕ್ಕೆ ಕೊಂಡೊಯ್ದ ಅನೇಕರ ತವರು ಭೂಮಿಯಾಗಿದೆ. ಇದು ಕೇವಲ ಮಲೆನಾಡಿಗೆ ಸೀಮಿತವಾಗಿದ್ದಲ್ಲ. ನಾಡಿಗೆ ಹೆಮ್ಮೆ ತರುವಂತಹದ್ದಾಗಿದೆ. ಕನ್ನಡ ನಾಡಿಗೆ ತನ್ನದೇ ಆದ ಶ್ರೀಮಂತ ಪರಂಪರೆ ಇದೆ. ಇಂತಹ ಸಿರಿನಾಡಿನಲ್ಲಿ ಇರುವ ನಾವು ಪುಣ್ಯವಂತರಾಗಿದ್ದೇವೆ ಎಂದರು.
ಇದನ್ನೂ ಓದಿ :ಸ್ವಚ್ಛ ಕಲಬುರಗಿಗೆ ಬೃಹತ್ ಕಾಲ್ನಡಿಗೆ ಜಾಥಾ
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಸಾನ್ನಿದ್ಯ ವಹಿಸಿದ್ದರು. ಜಿಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರೈತ ಮುಖಂಡ ಕೆ.ಟಿ.ಗಂಗಾಧರ್, ಶಿವಮೊಗ್ಗ ಪದವಿಧರರ ಸಹಕಾರ ಸಂಘದ ಅಧ್ಯಕ್ಷಎಸ್.ಪಿ.ದಿನೇಶ್, ರಾಮಕೃಷ್ಣವಿದ್ಯಾ ಸಂಸ್ಥೆ ಕಾರ್ಯದರ್ಶಿ ಶೋಭಾ ವೆಂಕಟರಮಣ, ಕೋಟಿಪುರ ಎವರನ್ ಶಾಲೆ ಅಧ್ಯಕ್ಷ ಕಾರ್ತಿಕ್‌ಎಂ.ಎಸ್., ಕ.ಜಾ.ಪ ಸಾಗರ ತಾಲೂಕು ಅಧ್ಯಕ್ಷ ವಿ.ಟಿ. ಸ್ವಾಮಿ, ಶಿಕಾರಿಪುರದ ಬಿ.ಪಾಪಯ್ಯ, ಭದ್ರವಾತಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಶಿಕಾರಿಪುರದ ಕೆ.ಎಸ್. ಹುಚ್ಚರಾಯಪ್ಪ, ತೀರ್ಥಹಳ್ಳಿಯ ಮಂಜುನಾಥ ಶಿರೂರು, ರಿಪ್ಪನ್‌ಪೇಟೆಯ ಮಂಜುನಾಥಕಾಮತ್, ಸಾಗರದ ಉಮೇಶ್ ಹಿರೇನೆಲ್ಲೂರು, ಕುಮಾರಿ, ಸಮೃತಜಿ ಎಸ್., ಭುವನಶ್ರೀ, ಅಚಿಂತ ಆರ್.ಎಸ್., ನಿಧಿ ಹೊಸಮನೆ, ಇರಾಮ್ ನಾಜ್, ಶಿಶಿರ ವರ್ಷ ಎಂ.ಎಚ್ ಉಪಸ್ಥಿತರಿದ್ದರು.
ಆರಂಭದಲ್ಲಿ ಆದಿಚುಂಚನಗಿರಿ ಮಕ್ಕಳು ನಾಡಗೀತೆ ಹಾಡಿದರು. ಶಿಫಾ ಮಲ್ಲಿಕ್ ಸ್ವಾಗತಿಸಿ, ಭೂಮಿಕ ಎಂ. ವಂದಿಸಿ, ಕೌಸ್ತುಭ ಕೆ.ಎಸ್. ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜೆಇಇ ಮುಖ್ಯ ಫಲಿತಾಂಶ ಪ್ರಕಟ
ಶಿಡ್ಲಘಟ್ಟ ತಾಲೂಕಿನ ಕರಿಯಪ್ಪನಹಳ್ಳಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ ಗ್ರಾಮಸ್ಥರಲ್ಲಿ ಆತಂಕ!
ದಂಪತಿಗಳನ್ನು ತಡೆದು ಚಿನ್ನದ ಸರ ದೋಚಿದ ದುಷ್ಕರ್ಮಿಗಳು: ಒಂದು ವಾರದಲ್ಲಿ ನಡೆದ 5 ನೇ ಪ್ರಕರಣ
ಯುವತಿಯ ರುಂಡಮುಂಡ ಕತ್ತರಿಸಿ ಕೊಲೆ ಪ್ರಕರಣ : ಐದು ತಿಂಗಳ ಬಳಿಕ ಆರೋಪಿಗಳ ಸೆರೆ
ಮಲ್ಪೆ ಬೀಚ್ನಿಂದ ಸೈಂಟ್ಮೇರಿ ದ್ವೀಪಕ್ಕೆ ಸಮುದ್ರದಲ್ಲಿ ಮಹಿಳೆಯರ ಕಯಾಕಿಂಗ್ ಸಾಹಸ ಯಾನ