Udayavni Special

ನೋಡಲ್‌ ಅಧಿಕಾರಿ ಬದಲಾವಣೆಗೆ ಖಂಡನೆ


Team Udayavani, Jun 5, 2021, 2:54 PM IST

ನೋಡಲ್‌ ಅಧಿಕಾರಿ ಬದಲಾವಣೆಗೆ ಖಂಡನೆ

ಶಿವಮೊಗ್ಗ: ನಗರದ ಮೆಗ್ಗಾನ್‌ ಬೋಧನಾ ಆಸ್ಪತ್ರೆ ಕೋವಿಡ್‌ ಲಸಿಕಾ ಕೇಂದ್ರದಲ್ಲಿ ನಿಷ್ಪಕ್ಷಪಾತ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ನೋಡಲ್‌ ಅಧಿ  ಕಾರಿಯಾದ ಡಾ.ಪ್ರವೀಣಕುಮಾರ್‌ ಅವರನ್ನು ಏಕಾಏಕಿ ಬದಲಾವಣೆ ಮಾಡಿರುವುದನ್ನು ಖಂಡಿಸಿ ಸಿಮ್ಸ್‌ ನಿರ್ದೇಶಕರಿಗೆ ಮತ್ತು ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವ ಕುಮಾರ್‌ ಅವರಿಗೆ ಜಿಲ್ಲಾ ಯುವ ಕಾಂಗ್ರೆಸ್‌ ಮನವಿ ಸಲ್ಲಿಸಿತು.

ನಿತ್ಯ ಕೋವಿಡ್‌ ಲಸಿಕೆಗಾಗಿ ಜನ ಬೆಳ್ಳಂಬೆಳಗ್ಗೆ ಸರತಿ ಸಾಲಿನಲ್ಲಿಬಂದು ಟೋಕನ್‌ಗಳನ್ನು ಪಡೆದುಲಸಿಕೆ ಪಡೆಯುತ್ತಿದ್ದರು. ಇಂತಹ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿಸಾರ್ವಜನಿಕರಿಗೆ ಅನುಕೂಲವಾಗುವರೀತಿಯಲ್ಲಿ ಯಾವುದೇ ಒತ್ತಡಗಳಿಗೆಮಣಿಯದೆ ನಿತ್ಯ ಸಾರ್ವಜನಿಕರಿಗೆ ಲಸಿಕೆ ಕೊಡುವುದರಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ನೋಡಲ್‌ ಅಧಿಕಾರಿಯನ್ನು ಏಕಾಏಕಿ ಬದಲಾವಣೆಯ ಅವಶ್ಯಕತೆ ಏನಿತ್ತು? ಎಂದು ಪ್ರಶ್ನಿಸಿದೆ.

ಜನಪ್ರತಿನಿಧಿಗಳು ಹಾಗೂ ಸಿಮ್ಸ್ ನ ಕೆಲವು ಅಧಿಕಾರಿಗಳು ತಮ್ಮಬೆಂಬಲಿಗರಿಗೆ ಕುಟುಂಬದವರಿಗೆ ಹಾಗೂ ಆತ್ಮೀಯರಿಗೆ ಟೋಕನ್‌ ಕೊಡಲಿಲ್ಲ ಎಂಬ ಕಾರಣಕ್ಕೆರಾಜಕೀಯ ಹಾಗೂ ಮೇಲಾಧಿಕಾರಿಗಳ ಪ್ರಭಾವವನ್ನು ಬಳಸಿ ತಮಗೆ ಬೇಕಾದಂತಹ ಅಧಿಕಾರಿಯನ್ನು ನೇಮಿಸಿರುತ್ತಾರೆ. ಮುಂದಿನ ದಿನಗಳಲ್ಲಿ ಬಡವರು ಮಧ್ಯಮ ವರ್ಗದವರು,ವಯೋವೃದ್ಧರು ಬೆಳಗಿನಿಂದಲೇಸರತಿ ಸಾಲಿನಲ್ಲಿ ನಿಂತರೂ ಸಹ ಟೋಕನ್‌ ಪಡೆಯುವುದು ಅಸಾಧ್ಯವಾಗಿರುತ್ತದೆ. ಪ್ರಭಾವಿಗಳು ಒಬ್ಬೊಬ್ಬರೂ ಹತ್ತರಿಂದ ಹದಿನೈದುಟೋಕನ್‌ಗಳನ್ನು ಒಳಗಿಂದೊಳಗೆ ಪಡೆದು ಲಸಿಕೆ ಹಾಕಿಸಿಕೊಳ್ಳುವುದರಲ್ಲಿಸಫಲರಾಗುತ್ತಾರೆ. ಇದರಿಂದ ಸರತಿಸಾಲಿನಲ್ಲಿ ನಿಂತವರಿಗೆ ದೈಹಿಕ ಹಾಗೂಮಾನಸಿಕವಾಗಿ ಕುಗ್ಗು ಹೋಗುವಸಂಭವವೇ ಹೆಚ್ಚಾಗಿರುತ್ತದೆ ಎಂದು ತಿಳಿಸಿದ್ದಾರೆ.

ಕೂಡಲೇ ನೋಡಲ್‌ ಅಧಿಕಾರಿಯ ಬದಲಾವಣೆ ಮಾಡಿರುವಆದೇಶವನ್ನು ಹಿಂಪಡೆದು ಈಗಿರುವ ನೋಡಲ್‌ ಅಧಿಕಾರಿಯುಯಥಾಸ್ಥಿತಿಯಾಗಿ ಕರ್ತವ್ಯ ನಿರ್ವಹಿಸಲು ಆದೇಶಿಸಬೇಕೆಂದು ಈ ಮೂಲಕ ಯುವ ಕಾಂಗ್ರೆಸ್‌ಆಗ್ರಹಿಸಿದೆ.

ಯುವ ಕಾಂಗ್ರೆಸ್‌ ಮನವಿಗೆ ಸ್ಪಂದಿಸಿ ಅಧಿಕಾರಿಯವರ ಬದಲಾವಣೆ ಆದೇಶವನ್ನು ಹಿಂಪಡೆಯದೇ ಇದ್ದಲ್ಲಿ ಹೋರಾಟ ಅನಿವಾರ್ಯ ಎಂದು ಜಿಲ್ಲಾ ಯುವ ಕಾಂಗ್ರೆಸ್‌ ಈ ಮೂಲಕಎಚ್ಚರಿಸಿದೆ. ಜಿಲ್ಲಾ ಕಾಂಗ್ರೆಸ್‌ ಪ್ರಧಾನಕಾರ್ಯದರ್ಶಿ ಕೆ.ರಂಗನಾಥ್‌, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಪಿ. ಗಿರೀಶ್‌, ಉತ್ತರ ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ಲೋಕೇಶ್‌ ಗ್ರಾಮಾಂತರ ಅಧ್ಯಕ್ಷಈ.ಟಿ. ನಿತಿನ್‌, ದಕ್ಷಿಣ ಬ್ಲಾಕ್‌ ಯುವಕಾಂಗ್ರೆಸ್‌ ಎಸ್‌. ಕುಮರೇಶ್‌, ಪದಾಧಿ  ಕಾರಿಗಳಾದ ವೆಂಕಟೇಶ್‌ ಕಲ್ಲೂರು,ಕೆ.ಎಲ್‌. ಪವನ್‌, ರಾಹುಲ್‌, ಗಗನ್‌ ಗೌಡ ಇತರರು ಇದ್ದರು.

ಟಾಪ್ ನ್ಯೂಸ್

ಅಮೆರಿಕನ್‌ ನಕಲಿ ಡಾಲರ್‌ ದಂಧೆ-ಇಬ್ಬರು ಕ್ಯಾಮರೂನ್‌ ದೇಶದ ಪ್ರಜೆಗಳ ಬಂಧನ

ಅಮೆರಿಕನ್‌ ನಕಲಿ ಡಾಲರ್‌ ದಂಧೆ-ಇಬ್ಬರು ಕ್ಯಾಮರೂನ್‌ ದೇಶದ ಪ್ರಜೆಗಳ ಬಂಧನ

ಆಂಧ್ರ ಹೈಕೋರ್ಟ್‌ನಿಂದಲೇ ಸಿಎಂ ಜಗನ್‌ ವಿರುದ್ಧ 11 ಪ್ರಕರಣ!

ಆಂಧ್ರ ಹೈಕೋರ್ಟ್‌ನಿಂದಲೇ ಸಿಎಂ ಜಗನ್‌ ವಿರುದ್ಧ 11 ಪ್ರಕರಣ!

j14srs4

ಅನ್‌ಲಾಕ್‌ಗೂ ಮೊದಲೇ ಮುಂಡಿಗೆಕೆರೆಗೆ ಬಂದವು ಬೆಳ್ಳಕ್ಕಿಗಳು!

ವಿಜಯಪುರ ಮರ್ಯಾದಾ ಹತ್ಯೆ: ನಾಲ್ವರು ಆರೋಪಿಗಳ ಬಂಧನ

ವಿಜಯಪುರ ಮರ್ಯಾದಾ ಹತ್ಯೆ: ನಾಲ್ವರು ಆರೋಪಿಗಳ ಬಂಧನ

23msk04 (1)

ಬೀಜ ಮಾತ್ರವಲ್ಲ ಗೊಬ್ಬರವೂ ನಕಲಿ!

Delimitation, peaceful polls important milestones in restoring statehood: Amit Shah after all-party meet on Jammu and Kashmir

ಜಮ್ಮು ಮತ್ತು ಕಾಶ್ಮೀರದ ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಬದ್ಧ : ಅಮಿತ್ ಶಾ

Committed to restoring statehood: PM Narendra Modi tells J&K leaders after all-party meet

ಜಮ್ಮು ಕಾ‍ಶ್ಮೀರಕ್ಕೆ ಶೀಘ್ರ ರಾಜ್ಯ ಸ್ಥಾನಮಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24-18

ಮಹಿಳಾ ಪಾಲಿಟೆಕ್ನಿಕ್‌ ಅಭಿವೃದ್ಧಿಗೆ ನೀಲನಕ್ಷೆ ರೂಪಿಸಿ

24-17

ಮೈದುಂಬಿದ ತುಂಗೆಗೆ ಸಚಿವ ಈಶ್ವರಪ್ಪ ಬಾಗಿನ

24-16

ಈ ಕೊಳೆಗೇರಿ ಕಂಡರೆ ಕೊರೊನಾಕ್ಕೂ ಭಯ!

shivamogga airport design

ಶಿವಮೊಗ್ಗ ಏರ್ ಪೋರ್ಟ್ ನೀಲ ನಕ್ಷೆ ವಿವಾದ: ಕಾಂಗ್ರೆಸ್ ಟೀಕೆಗೆ ಕಿಡಿಕಾರಿದ ಸಚಿವ ಈಶ್ವರಪ್ಪ

23-23

ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಪೀಠಾರೋಹಣ

MUST WATCH

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

udayavani youtube

ನೇಗಿಲು ಹಿಡಿದು ಉಳುಮೆ ಮಾಡಿದ ಶಾಸಕ ರೇಣುಕಾಚಾರ್ಯ

udayavani youtube

ಖಾಸಗಿ TECHIE, ದೇಸಿ ದನ ಸಾಕಣೆಯಲ್ಲಿ ಯಶಸ್ಸು ಕಂಡಿದ್ದು ಹೇಗೆ ?

ಹೊಸ ಸೇರ್ಪಡೆ

ಅಮೆರಿಕನ್‌ ನಕಲಿ ಡಾಲರ್‌ ದಂಧೆ-ಇಬ್ಬರು ಕ್ಯಾಮರೂನ್‌ ದೇಶದ ಪ್ರಜೆಗಳ ಬಂಧನ

ಅಮೆರಿಕನ್‌ ನಕಲಿ ಡಾಲರ್‌ ದಂಧೆ-ಇಬ್ಬರು ಕ್ಯಾಮರೂನ್‌ ದೇಶದ ಪ್ರಜೆಗಳ ಬಂಧನ

24-23

ಆಧುನಿಕ ತಂತ್ರಜ್ಞಾನ ಸದ್ಬಳಕೆಯಾಗಲಿ

24-22

ದೇಶಕ್ಕೆ ಶ್ಯಾಮಪ್ರಸಾದ್‌ ಮುಖರ್ಜಿ ಕೊಡುಗೆ ಅಪಾರ

24-22

ರೈತರಿಗೆ ಬೆಳೆ ವಿಮೆ ಕೊಡಿಸಲು ಪ್ರಾಮಾಣಿಕ ಯತ್ನ : ಶ್ರೀರಾಮುಲು

24-21

ಅಗಲಿದ ಗಣ್ಯರಿಗೆ ಕಸಾಪ ನುಡಿ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.