ಮತ್ತೆ 8 ಮಂದಿಗೆ ಕೋವಿಡ್


Team Udayavani, Jul 6, 2020, 11:18 AM IST

ಮತ್ತೆ 8 ಮಂದಿಗೆ ಕೋವಿಡ್

ಶಿವಮೊಗ್ಗ: ಜಿಲ್ಲೆಯಲ್ಲಿ ಕೋವಿಡ್ ರಣಕೇಕೆ ಮುಂದುವರಿದಿದೆ. ಭಾನುವಾರ ಎಂಟು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 261ಕ್ಕೆ ಏರಿಕೆಯಾಗಿದೆ.

ಇದರೊಂದಿಗೆ ಹೊಸದಾಗಿ ಕೆಲವು ಬಡಾವಣೆಗಳನ್ನು ಕಂಟೈನ್‌ಮೆಂಟ್‌ ಝೋನ್‌ ಎಂದು ಘೋಷಿಸಲಾಗಿದೆ. ಪಾಸಿಟಿವ್‌ ಬಂದಿರುವ ಎಂಟು ಜನರ ಪೈಕಿ ನಾಲ್ವರಲ್ಲಿ ತೀವ್ರ ಶೀತ, ಕೆಮ್ಮು, ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ. ಲ್ಯಾಬ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷದ ಗಾಂಧಿ  ಬಜಾರ್‌ನ ಉಪ್ಪಾರ ಕೇರಿ ಎರಡನೇ ಕ್ರಾಸ್‌ ನಿವಾಸಿಯೊಬ್ಬರಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ.

ಮುಂಜಾಗ್ರತಾ ಕ್ರಮವಾಗಿ ಬಡಾವಣೆಯ ಎರಡನೇ ಕ್ರಾಸ್‌ ಅನ್ನು ಸೀಲ್‌ ಡೌನ್‌ ಮಾಡಿ, ಸ್ಯಾನಿಟೈಸ್‌ಗೊಳಿಸಲಾಗಿದೆ. ಪಿ-9897 ಸೂಳೇಬೈಲು ಸೋಂಕಿತರಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 27 ವರ್ಷ (ಪಿ-21629) ಯುವಕನಿಗ ಸೋಂಕು ದೃಢಪಟ್ಟಿದೆ. ಟಿಪ್ಪುನಗರ ಎ ಬ್ಲಾಕ್‌ನ ಐದನೇ ಕ್ರಾಸ್‌ ನಿವಾಸಿ, ಬೆಂಗಳೂರಿನಿಂದ ವಾಪಸ್‌ ಬಂದಿದ್ದ 40 ವರ್ಷದ ಹೊಸಮನೆ ಬಡಾವಣೆಯ ನಿವಾಸಿಯೊಬ್ಬರಿಗೆ ಕೋವಿಡ್ ದೃಢಪಟ್ಟಿದೆ. ಗೋಪಾಳ ಬಡಾವಣೆಯ ಆದಿ ರಂಗನಾಥ ದೇವಾಲಯದ ರಸ್ತೆಯ ವ್ಯಕ್ತಿಗೂ ಕೋವಿಡ್ ದೃಢಪಟ್ಟಿದ್ದು, ಈ ವ್ಯಕ್ತಿಗೆ ಸೋಂಕು ಹೇಗೆ ಬಂತು ಎಂಬುದರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ.

ಬಳ್ಳಾರಿಯಿಂದ ಬಂದಿದ್ದ ಮೆಸ್ಕಾಂ ಜೆಇ: ಸಾಗರದ ಮೆಸ್ಕಾಂ ಕಚೇರಿಯಲ್ಲಿ ಜೆಇ ಆಗಿ ಕೆಲಸ ಮಾಡುತ್ತಿದ್ದ 27 ವರ್ಷ ಯುವತಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಸಾಗರದ ಮಾರ್ಕೆಟ್‌ ರಸ್ತೆಯ ಲಿಂಬು ಸರ್ಕಲ್‌ ಬಳಿ ವಾಸವಾಗಿದ್ದ ಅವರು ಬಳ್ಳಾರಿಗೆ ಹೋಗಿ ವಾಪಸ್‌ ಬಂದಿದ್ದರು. ಟ್ರಾವೆಲ್‌ ಹಿಸ್ಟರಿ ಇರುವುದರಿಂದ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನೆಯ ಮಾಲೀಕರು ಒತ್ತಾಯಿಸಿದ್ದರು. ಹೀಗಾಗಿ, ಪರೀಕ್ಷೆ ಮಾಡಿಕೊಂಡಿದ್ದರು. ಇವರಲ್ಲಿ ಯಾವುದೇ ಲಕ್ಷಣಗಳು ಇಲ್ಲ. ಆದರೂ ಕೋವಿಡ್ ಪಾಸಿಟಿವ್‌ ಬಂದಿದೆ. ಇವರೊಂದಿಗೆ ಕೆಲಸ ಮಾಡುತ್ತಿದ್ದ ಸಹುದ್ಯೋಗಿಗಳಿಗೂ ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಲಿಂಬು ಸರ್ಕಲ್‌ ಅನ್ನು ಸೀಲ್‌ ಡೌನ್‌ ಮಾಡಿದ್ದು, ಜನರಲ್ಲಿ ಭೀತಿಯಲ್ಲಿದ್ದಾರೆ. ಸೊರಬದ ಓರ್ವ ವ್ಯಕ್ತಿಗೂ ಸೋಂಕು ದೃಢಪಟ್ಟಿದೆ. ಇನ್ನೊಬ್ಬರು ಬಾಳೆಹೊನ್ನೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದು ಅವರಲ್ಲಿ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿವೆ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಟಾಪ್ ನ್ಯೂಸ್

redmi earbuds 3 pro

ರೆಡ್‍ ಮಿ ಇಯರ್ ಬಡ್ಸ್ 3 ಪ್ರೊ: ಕಡಿಮೆ ಬಜೆಟ್‍ನ ಟ್ರೂ ವೈರ್ ಲೆಸ್‍ ಇಯರ್ ಬಡ್‍

chikkaballapura news

ವೃದ್ದ ಮಹಿಳೆಯ ಅನುಮಾನಸ್ಪದ ಸಾವು : ಅತ್ಯಾಚಾರ ಆರೋಪ

h vishwanath and siddaramaiah

ಕುರುಬರಿಗೆ ಸಿದ್ದರಾಮಯ್ಯನ ನೋಡಿದ್ರೆ ಇಂಗ್ಲೀಷ್ ಫಿಲಂ ನೋಡಿದ ಹಾಗೆ: ಎಚ್. ವಿಶ್ವನಾಥ್

vidhana soudha

‘ಅನುಗ್ರಹ ಯೋಜನೆ’ ಮುಂದುವರಿಸಲು ಸರ್ಕಾರದ ಆದೇಶ

ದಾಂಡೇಲಿ:  ಕೊನೆಗೂ ಪತ್ತೆಯಾದ ವಿನಾಯಕ ನಗರದ ಕಾಳಿ ನದಿಯಲ್ಲಿ ಮೊಸಳೆಯ ವಶದಲ್ಲಿದ್ದ ಬಾಲಕನ ಶವ

ದಾಂಡೇಲಿ: ಕೊನೆಗೂ ಪತ್ತೆಯಾದ ವಿನಾಯಕ ನಗರದ ಕಾಳಿ ನದಿಯಲ್ಲಿ ಮೊಸಳೆಯ ವಶದಲ್ಲಿದ್ದ ಬಾಲಕನ ಶವ

ಕಾಂಗ್ರೆಸ್ ಭಯೋತ್ಪಾದಕರನ್ನು ಬೆಂಬಲಿಸುವ ಪಕ್ಷ: ಸಿ.ಟಿ.ರವಿ ವಾಗ್ದಾಳಿ

ಕಾಂಗ್ರೆಸ್ ಭಯೋತ್ಪಾದಕರನ್ನು ಬೆಂಬಲಿಸುವ ಪಕ್ಷ: ಸಿ.ಟಿ.ರವಿ ವಾಗ್ದಾಳಿ

ಕಳ್ಳತನ ಮಾಡ್ತಿರಾ ಗೊತ್ತಿಲ್ಲ:ಆದ್ರೆ ರಸ್ತೆ ದುರಸ್ತಿ ಮಾಡಿ:ಬಿಬಿಎಂಪಿಗೆ ಹೈಕೋರ್ಟ್‌ ತಾಕೀತು

ಕಳ್ಳತನ ಮಾಡ್ತಿರಾ ಗೊತ್ತಿಲ್ಲ:ಆದ್ರೆ ರಸ್ತೆ ದುರಸ್ತಿ ಮಾಡಿ:ಬಿಬಿಎಂಪಿಗೆ ಹೈಕೋರ್ಟ್‌ ತಾಕೀತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

shivamogga news

ಕಪ್ಪು ಪಟ್ಟಿ ಧರಿಸಿ ಶಿಕ್ಷಕರಿಂದ ಸಚಿವರಿಗೆ ಮನವಿ

ಗ್ರಾಮ ಪಂಚಾಯತ್‌ ಸ್ವಚ್ಛತೆಗೆ ಸ್ತ್ರೀ ಸಾರಥ್ಯ

ಗ್ರಾಮ ಪಂಚಾಯತ್‌ ಸ್ವಚ್ಛತೆಗೆ ಸ್ತ್ರೀ ಸಾರಥ್ಯ

gow theft – protest

ಗೋ ಕಳ್ಳಸಾಗಾಣಿಕೆ ತಡೆಯಲು ಕ್ರಮಕ್ಕೆ ಆಗ್ರಹ; ರಸ್ತೆ ತಡೆ ಮಾಡಿ ಪ್ರತಿಭಟನೆ

ಅಕ್ರಮ  ಮರಳುಗಾರಿಕೆ ತಡೆಯದಿದ್ದರೆ ಅಮರಣಾಂತರ ಉಪವಾಸ ಸತ್ಯಾಗ್ರಹ ಎಚ್ಚರಿಕೆ: ಯತಿರಾಜ್

ಅಕ್ರಮ  ಮರಳುಗಾರಿಕೆ ತಡೆಯದಿದ್ದರೆ ಅಮರಣಾಂತರ ಉಪವಾಸ ಸತ್ಯಾಗ್ರಹ ಎಚ್ಚರಿಕೆ: ಯತಿರಾಜ್

ತೋಟ ವಿಸ್ತರಣೆ ಮಾಡದೇ ಅಡಕೆ ಮಾನ ಕಾಪಾಡಿಕೊಳ್ಳಿ

ತೋಟ ವಿಸ್ತರಣೆ ಮಾಡದೇ ಅಡಕೆ ಮಾನ ಕಾಪಾಡಿಕೊಳ್ಳಿ

MUST WATCH

udayavani youtube

ದಾಂಡೇಲಿ :ಕಳೆದ ಎರಡು ದಿನಗಳಿಂದ ಬಾಲಕನನ್ನು ಬಾಯಲ್ಲಿಟ್ಟುಕೊಂಡೇ ಓಡಾಡುತ್ತಿತ್ತು ಮೊಸಳೆ

udayavani youtube

ಎಡೆಬಿಡದೆ ಸುರಿದ ಮಳೆಗೆ ಜಲಾವೃತಗೊಂಡ ಮನೆಗಳು

udayavani youtube

ಮಂಗಳೂರು: ಬಲೆಗೆ ಬಿತ್ತು ಭಾರೀ ಗಾತ್ರದ ಶಾರ್ಕ್ ಮೀನು

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

ಹೊಸ ಸೇರ್ಪಡೆ

ಶ್ಯಾನಡ್ರಹಳಿ ಕೆರೆಗೆ ನೀರು ಹರಿಸಿ: ಶಾಸಕ

ಶ್ಯಾನಡ್ರಹಳಿ ಕೆರೆಗೆ ನೀರು ಹರಿಸಿ: ಶಾಸಕ

chitradurga news

ಕನ್ನಡಿಗರಲ್ಲಿ ಆತ್ಮಾಭಿಮಾನ ಕೊರತೆ: ಲೀಲಾದೇವಿ ಪ್ರಸಾದ್‌

16women

ಮಹಿಳೆಯರ ಸುರಕ್ಷತೆಗೆ ಆಗ್ರಹಿಸಿ ಬೃಹತ್‌ ಪ್ರತಿಭಟನಾ ರ್ಯಾಲಿ

ಕಳಶ ಹೊತ್ತು ಶಾಲೆಗೆ ಬಂದ ಚಿಣ್ಣರು   

ಕಳಶ ಹೊತ್ತು ಶಾಲೆಗೆ ಬಂದ ಚಿಣ್ಣರು   

redmi earbuds 3 pro

ರೆಡ್‍ ಮಿ ಇಯರ್ ಬಡ್ಸ್ 3 ಪ್ರೊ: ಕಡಿಮೆ ಬಜೆಟ್‍ನ ಟ್ರೂ ವೈರ್ ಲೆಸ್‍ ಇಯರ್ ಬಡ್‍

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.