ಗ್ರಾಹಕ ಸ್ನೇಹಿ “ನನ್ನ ಮೆಸ್ಕಾಂ’


Team Udayavani, Mar 5, 2021, 6:31 PM IST

Customer friendly “namma Messcom”

ಶಿವಮೊಗ್ಗ: ನಮ್ಮ ಏರಿಯಾದಲ್ಲಿ ಯಾವಾಗ ಕರೆಂಟ್‌ ಹೋಗುತ್ತೆ? ವಿದ್ಯುತ್‌ ಬಿಲ್‌ ಕಳೆದುಹೋಯ್ತು ಏನು ಮಾಡೋದು? ವಿದ್ಯುತ್‌ ಬಿಲ್‌ ಕಟ್ಟೋಕೆ ಕೆಲಸ ಬಿಟ್ಟು ಹೋಗಿ ಕ್ಯೂ ನಿಲ್ಲಬೇಕು. ಪದೇ ಪದೇ ವಿದ್ಯುತ್‌ ಹೋಗುತ್ತೆ ಯಾರಿಗೆ  ಹೇಳೋದು ?

ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ಈಗ ಒಂದೇ ವೇದಿಕೆಯಲ್ಲಿ ಪರಿಹಾರ ಸಿಕ್ಕಿದೆ. ಈ ಎಲ್ಲ ಸಮಸ್ಯೆಗಳಿಗೆ ಮೆಸ್ಕಾಂ ರೂಪಿಸಿರುವ ಗ್ರಾಹಕ ಸ್ನೇಹಿ “ನನ್ನ ಮೆಸ್ಕಾಂ’ ಆ್ಯಪ್‌ನಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಪ್ರಸ್ತುತ ಈ ಆ್ಯಪ್‌ ಆ್ಯಂಡ್ರಾಯ್ಡ ಹಾಗೂ ಐಒಎಸ್‌ನಲ್ಲಿ ಲಭ್ಯವಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ 24.88 ಲಕ್ಷ ಗ್ರಾಹಕರಿಗೆ ಇದು ಅನುಕೂಲವಾಗಲಿದೆ. ಸಾವಿರಾರು  ಲೋಡ್‌ ಮಾಡಿಕೊಂಡು ಅನುಕೂಲ ಪಡೆಯುತ್ತಿದ್ದಾರೆ. ಗೂಗಲ್‌ ಪ್ಲೇ ಸ್ಟೋರ್‌ ನಲ್ಲಿ ಈ ಆ್ಯಪ್‌ ಲಭ್ಯವಿದ್ದು ಡೌನ್‌ಲೋಡ್‌ ಮಾಡಿದ ನಂತರ ವಿದ್ಯುತ್‌ ಬಿಲ್‌ನಲ್ಲಿರುವ 10 ಸಂಖ್ಯೆಗಳ ಅಕೌಂಟ್‌ ನಂಬರ್‌ ಅನ್ನು ನಮೂದಿಸಬೇಕು. ನಂತರ ನಿಮ್ಮ ವೈಯಕ್ತಿಕ ಮಾಹಿತಿ ಲಭ್ಯವಾಗುತ್ತದೆ. ಒಂದಕ್ಕಿಂತ ಹೆಚ್ಚು ಅಕೌಂಟ್‌ಗಳನ್ನು ಲಿಂಕ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಸಿಗಲಿದೆ ಸಂಪೂರ್ಣ ಮಾಹಿತಿ: ಗ್ರಾಹಕರು ತಮ್ಮ ಕನೆಕ್ಷನ್‌ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿಯೇ ವೀಕ್ಷಿಸಬಹುದಾಗಿದೆ. ಈ ತಿಂಗಳ ಬಿಲ್‌ ಬಂದಿಲ್ಲ ಎಂಬ ಕಾರಣಕ್ಕೆ ಕಚೇರಿಗಳಿಗೆ ಓಡಾಡುವ ಕಿರಿಕಿರಿ ತಪ್ಪಲಿದೆ. ತಮ್ಮ ಹಿಂದಿನ ತಿಂಗಳುಗಳ ಬಿಲ್‌ ಮಾತ್ರವಲ್ಲದೇ ವಿದ್ಯುತ್‌ ಬಳಕೆಯ ಆಧಾರದ ಮೇಲೆ ಮುಂಬರುವ ಬಿಲ್‌ ಅನ್ನು ಲೆಕ್ಕಾಚಾರ ಮಾಡಬಹುದಾಗಿದೆ. ಬಾಕಿ ವಿದ್ಯುತ್‌ ಶುಲ್ಕ, ವಿದ್ಯುತ್‌ ನಿರ್ವಹಣೆ ಮತ್ತಿತರ ಮಾಹಿತಿಗಳನ್ನು ಆ್ಯಪ್‌ ನೀಡುತ್ತದೆ. ಗ್ರಾಹಕರು ಸ್ಮಾರ್ಟ್‌ ಆಗಿ ಸೇವೆ ಬಳಸಿದಲ್ಲಿ ಪ್ರತಿಯೊಂದು ಮಾಹಿತಿಯನ್ನು ಮನೆಯಲ್ಲಿ ಕುಳಿತುಕೊಂಡೇ ಪಡೆಯಬಹುದಾಗಿದೆ.

ಏನೆಲ್ಲ ಇದೆ?: ಹೆಚ್ಚುವರಿ ಭದ್ರತಾ ಠೇವಣಿ ಪಾವತಿಗೆ ಅವಕಾಶ, ಬಿಲ್‌ ಮತ್ತು ಪಾವತಿ ರಸೀದಿಗಳನ್ನು ಪಿಡಿಎಫ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಮುಂಬರುವ ಒಂದು ವಾರದ ವಿದ್ಯುತ್‌ ನಿಲುಗಡೆ ಮಾಹಿತಿಯನ್ನೂ ಆ್ಯಪ್‌ನಲ್ಲೇ ಪಡೆಯುಬಹುದಾಗಿದೆ. ಜತೆಗೆ, ಹಿಂದಿನವಿದ್ಯುತ್‌ ಬಳಕೆ, ಪಾವತಿ ಮತ್ತು ಬಾಕಿ ಲೆಕ್ಕಾಚಾರ ಮಾಹಿತಿ ಡ್ಯಾಶ್‌ಬೋರ್ಡ್‌, ದೂರು ನೋಂದಣಿ, ಸ್ಟೇಟಸ್‌ ಟ್ರಾÂಕಿಂಗ್‌, ಟ್ಯಾರಿಫ್‌, ಮೆಸ್ಕಾಂ ಕಚೇರಿಗಳ ಗೂಗಲ್‌ ಮ್ಯಾಪ್‌, ಹೊಸ ವಿದ್ಯುತ್‌ ಸಂಪರ್ಕಕ್ಕೋಸ್ಕರ ಇಲ್ಲಿಯೇ ಪೂರ್ಣ ಮಾಹಿತಿ ಲಭ್ಯವಿದೆ. ವ್ಯಂಗ್ಯಚಿತ್ರಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ಮೆಸ್ಕಾಂನ ಸಾಮಾಜಿಕ ಜಾಲತಾಣಗಳ ಲಿಂಕ್‌ ಸಹ ನೀಡಲಾಗಿದೆ.ವಿದ್ಯುತ್‌ ಉಳಿತಾಯದ ಸಲಹೆಗಳು  ಯೋಜನೆಗಳ ಬಗ್ಗೆ ಮಾಹಿತಿ ಹೀಗೆ ಗ್ರಾಹಕರಿಗೆ ಅಗತ್ಯವಾದ ಎಲ್ಲ ಮಾಹಿತಿಗಳನ್ನು ಕಲ್ಪಿಸಲಾಗಿದೆ.

ಇದನ್ನೂ ಓದಿ:ಮಕ್ಕಳೊಂದಿಗೆ ಬಿಇಒ ಸಂವಾದ

ಪ್ರತಿ ತಿಂಗಳು ಕಚೇರಿಗೆ ಹೋಗುವುದು ಕಷ್ಟವಾಗಿತ್ತು. ಅದಕ್ಕಾಗಿ ಆನ್‌ಲೈನ್‌ ಮೂಲಕ ಬಿಲ್‌ ಪಾವತಿ ಮಾಡುತ್ತಿದ್ದೆ. ಆದರೆ ಅದು ಪರಿಪೂರ್ಣವಾಗಿಲ್ಲ. ಒಂದು ತಿಂಗಳು ಬಿಲ್‌ ಕಟ್ಟಿಲ್ಲವಾದರೆ ಅದು ಮುಂದಿನ ಆನ್‌ಲೈನ್‌ ಬಿಲ್‌ನಲ್ಲಿ ಕಾಣಿಸಬೇಕು. ಆದರೆ ಹಾಗಾಗುತ್ತಿರಲಿಲ್ಲ. ವಿದ್ಯುತ್‌ ನಿಲುಗಡೆ ಬಗ್ಗೆ ಪತ್ರಿಕೆಗಳಿಗೆ ಮಾಹಿತಿ ಕೊಡುತ್ತಿದ್ದರೂ ಎಲ್ಲರೂ ಪತ್ರಿಕೆ ಓದುವುದಿಲ್ಲವಾದ್ದರಿಂದ ಅದು ಸಹ ಪರಿಪೂರ್ಣ ಪರಿಹಾರವಲ್ಲ. ಈಗ ಆ್ಯಪ್‌ನಲ್ಲಿ ಸಾಕಷ್ಟು ಅನುಕೂಲಗಳಿದ್ದು ಕಳೆದ ಬಾರಿಯ ಪಾವತಿಯ ಮಾಹಿತಿ ಸಿಗುತ್ತದೆ. ಮುಂದಿನ ಒಂದು ವಾರದ ವಿದ್ಯುತ್‌ ನಿಲುಗಡೆ ಮಾಹಿತಿಯೂ ಸಿಗುತ್ತದೆ. ದೂರು ಕೊಡಲು ಕಚೇರಿಗೆ ಕರೆ ಮಾಡಿದರೆ ಉಡಾಫೆ ಉತ್ತರಗಳು ಸಿಗುತ್ತಿದ್ದವು. ಈಗ ಇದೆಲ್ಲದಕ್ಕೂ ಪರಿಹಾರ ಸಿಗಲಿದೆ.

ಪ್ರವೀಣ್‌, ಭದ್ರಾವತಿ

ಶರತ್‌ ಭದ್ರಾವತಿ

ಟಾಪ್ ನ್ಯೂಸ್

ರಾಮ ಮಂದಿರ ಅಡಿಪಾಯ ಆಗಸ್ಟ್‌ಗೆ ಸಂಪೂರ್ಣ : ಫೆಬ್ರವರಿಯಲ್ಲಿ ಆರಂಭವಾಗಿದ್ದ ಕಾಮಗಾರಿ

ರಾಮ ಮಂದಿರ ಅಡಿಪಾಯ ಆಗಸ್ಟ್‌ಗೆ ಸಂಪೂರ್ಣ : ಫೆಬ್ರವರಿಯಲ್ಲಿ ಆರಂಭವಾಗಿದ್ದ ಕಾಮಗಾರಿ

1aa

ಜಮ್ಮು& ಕಾಶ್ಮೀರದ ಕುರಿತು ಪಾಕ್‌ ನಿಲುವಳಿಗೆ ಭಾರತ ತಿರಸ್ಕಾರ

ಮೇ 19ರಂದು ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಪ್ರಕಟ

ಮೇ 19ರಂದು ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಪ್ರಕಟ

ರಾಜ್ಯದ ಹಲವೆಡೆ ಧಾರಾಕಾರ ಮಳೆ : ಮೈಸೂರಿನಲ್ಲಿ ಕೊಚ್ಚಿ ಹೋದ ಸೇತುವೆ, ಸಿಡಿಲಿಗೆ ಓರ್ವ ಬಲಿ

ರಾಜ್ಯದ ಹಲವೆಡೆ ಧಾರಾಕಾರ ಮಳೆ : ಮೈಸೂರಿನಲ್ಲಿ ಕೊಚ್ಚಿ ಹೋದ ಸೇತುವೆ, ಸಿಡಿಲಿಗೆ ಓರ್ವ ಬಲಿ

ಚುನಾವಣೆಯಲ್ಲಿ 123 ಸ್ಥಾನ ಗೆಲ್ಲುವ ಗುರಿ : ಯಾರಿಗೂ ಬೆಂಬಲ ಕೊಡುವ ಪ್ರಶ್ನೆಯೇ ಇಲ್ಲ : HDK

ಚುನಾವಣೆಯಲ್ಲಿ 123 ಸ್ಥಾನ ಗೆಲ್ಲುವ ಗುರಿ : ಯಾರಿಗೂ ಬೆಂಬಲ ಕೊಡುವ ಪ್ರಶ್ನೆಯೇ ಇಲ್ಲ : HDK

ಕೋವಿಡ್‌ ಪ್ರಕರಣ : ರಾಜ್ಯದಲ್ಲಿ 109 ಪಾಸಿಟವ್‌ ವರದಿ, 147ಮಂದಿ ಗುಣಮುಖ

ಕೋವಿಡ್‌ ಪ್ರಕರಣ : ರಾಜ್ಯದಲ್ಲಿ 109 ಪಾಸಿಟವ್‌ ವರದಿ, 147ಮಂದಿ ಗುಣಮುಖ

suicide (2)

ಪತ್ನಿಗೆ ಸೀರೆ ಉಡಲು ಬರುವುದಿಲ್ಲ: ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ !ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾಗರ: ಹೊಟ್ಟೆಯೊಳಗಿದ್ದ ಏಳು ಕೆಜಿಯ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆದ ವೈದ್ಯರು

ಸಾಗರ: ಹೊಟ್ಟೆಯೊಳಗಿದ್ದ ಏಳು ಕೆಜಿಯ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆದ ವೈದ್ಯರು

selvamani

ಶಿಕ್ಷಕರ ಹುದ್ದೆ ನೇಮಕ ಪರೀಕ್ಷೆಗೆ ಸಕಲ ಸಿದ್ಧತೆ: ಡಾ| ಸೆಲ್ವಮಣಿ

truck

ಅಕ್ರಮ ಮರಳು ಸಾಗಾಟ: ಲಾರಿ ವಶಕ್ಕೆ

shivamogga

ಅತಿವೃಷ್ಟಿ ಅಪಾಯ ಎದುರಿಸಲು ಸಜ್ಜಾಗಿ

buffalo

ಕಾರು ಗುದ್ದಿ ಏಳು ಎಮ್ಮೆ ಸಾವು

MUST WATCH

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

ಹೊಸ ಸೇರ್ಪಡೆ

ರಾಮ ಮಂದಿರ ಅಡಿಪಾಯ ಆಗಸ್ಟ್‌ಗೆ ಸಂಪೂರ್ಣ : ಫೆಬ್ರವರಿಯಲ್ಲಿ ಆರಂಭವಾಗಿದ್ದ ಕಾಮಗಾರಿ

ರಾಮ ಮಂದಿರ ಅಡಿಪಾಯ ಆಗಸ್ಟ್‌ಗೆ ಸಂಪೂರ್ಣ : ಫೆಬ್ರವರಿಯಲ್ಲಿ ಆರಂಭವಾಗಿದ್ದ ಕಾಮಗಾರಿ

1-assds

ರಾಜ್ಯದಲ್ಲಿ ಕಮಿಷನ್‌ ಪರ್ವ ಆರಂಭ: ಕಾಂಗ್ರೆಸ್‌ ಟೀಕೆ

1aa

ಜಮ್ಮು& ಕಾಶ್ಮೀರದ ಕುರಿತು ಪಾಕ್‌ ನಿಲುವಳಿಗೆ ಭಾರತ ತಿರಸ್ಕಾರ

ಮೇ 19ರಂದು ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಪ್ರಕಟ

ಮೇ 19ರಂದು ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಪ್ರಕಟ

ರಾಜ್ಯದ ಹಲವೆಡೆ ಧಾರಾಕಾರ ಮಳೆ : ಮೈಸೂರಿನಲ್ಲಿ ಕೊಚ್ಚಿ ಹೋದ ಸೇತುವೆ, ಸಿಡಿಲಿಗೆ ಓರ್ವ ಬಲಿ

ರಾಜ್ಯದ ಹಲವೆಡೆ ಧಾರಾಕಾರ ಮಳೆ : ಮೈಸೂರಿನಲ್ಲಿ ಕೊಚ್ಚಿ ಹೋದ ಸೇತುವೆ, ಸಿಡಿಲಿಗೆ ಓರ್ವ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.