ಸಾಗರ: ಅಧಿಕೃತ ದಾಖಲೆ ತೋರಿಸಿ; ಗುರುಮೂರ್ತಿ ಅವರಿಗೆ ಚಿನ್ನಯ್ಯ ಸವಾಲು

Team Udayavani, Jun 28, 2022, 5:08 PM IST

tdy-21

ಸಾಗರ: ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ತಾವೇ ಎಂದು ಬಿಂಬಿಸಿಕೊಳ್ಳುತ್ತಿರುವ ಗುರುಮೂರ್ತಿ ಶಿವಮೊಗ್ಗ ಅವರು ಅಧಿಕೃತ ದಾಖಲೆ ತಂದು ತೋರಿಸಲಿ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚಿನ್ನಯ್ಯ ಸವಾಲು ಹಾಕಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಚೆಗೆ ಗುರುಮೂರ್ತಿ ಎಂಬುವವರು ಭದ್ರಾವತಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ 2021 ನೇ ಸಾಲಿನಲ್ಲಿ ದಲಿತ ಸಂಘರ್ಷ ಸಮಿತಿಯ ಪ್ರೊ. ಬಿ. ಕೃಷ್ಣಪ್ಪ ಬಣದ ರಾಜ್ಯ ಸಂಚಾಲಕ ಎಂದು ತೀರ್ಮಾನವಾಗಿದೆ ಎಂದು ನೀಡಿರುವ ಹೇಳಿಕೆ ಶುದ್ಧ ಸುಳ್ಳಾಗಿದ್ದು, ಹಾಲಿ ಪ್ರಕರಣ ಭದ್ರಾವತಿ ಹಿರಿಯ ನ್ಯಾಯಾಲಯದಲ್ಲಿ ಇನ್ನೂ ನಡೆಯುತ್ತಿದೆ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿ ಹೆಸರನ್ನು ಗುರುಮೂರ್ತಿ ತಮ್ಮ ರಿಯಲ್ ಎಸ್ಟೆಟ್ ಸೇರಿದಂತೆ ಇತರ ಕೆಲಸಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರಾಮಾಣಿಕವಾಗಿ ದಲಿತರ ಪರ ಹೋರಾಟ ಮಾಡುತ್ತಿರುವವರ ವಿರುದ್ಧ ಸುಳ್ಳು ದೂರುಗಳನ್ನು ದಾಖಲಿಸಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಅಧಿಕೃತ ಸಮಿತಿ ಕುರಿತ ವಿಚಾರಣೆ ಸಂದರ್ಭದಲ್ಲಿ ದಾಖಲೆಯೊಂದಿಗೆ ಪೊಲೀಸ್ ಠಾಣೆಗೆ ಹಾಜರಾಗಿ ಎಂದರೆ ಗುರುಮೂರ್ತಿ ಹಾಜರಾಗುತ್ತಿಲ್ಲ. ಗುರುಮೂರ್ತಿ ಅವರೇ ಸಮಿತಿಯ ರಾಜ್ಯ ಸಂಚಾಲಕನೆಂದು ತಿಳಿಸಲು ಅಗತ್ಯವಾದ ಯಾವುದೇ ದಾಖಲೆ ಅವರ ಬಳಿ ಇಲ್ಲ ಎಂದು ಹೇಳಿದರು.

ಇತರರು ಗಂಜಿ ಗಿರಾಕಿಗಳೆಂದು ಹೇಳುವ ಗುರುಮೂರ್ತಿಯವರು ತಾವೇ ರಾಜ್ಯ ಸಂಚಾಲಕ ಎಂದು ಸಾಬೀತುಪಡಿಸುವ ಆದೇಶ ಪ್ರತಿಯನ್ನು ತೋರಿಸಲಿ. ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ದಲಿತ ಜನಾಂಗದ ಏಳಕ್ಕೂ ಹೆಚ್ಚು ಜನರ ಮೇಲೆ ದಬ್ಬಾಳಿಕೆ, ಕೊಲೆ, ಅತ್ಯಾಚಾರದಂತಹ ಘಟನೆ ನಡೆದಿದೆ. ಈ ಬಗ್ಗೆ ಗುರುಮೂರ್ತಿ ಧ್ವನಿ ಎತ್ತಿದ ಒಂದು ದಾಖಲೆಯಿಲ್ಲ. ಕನಿಷ್ಠ ಸಂತ್ರಸ್ತ ಕುಟುಂಬ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ. ಕಾರ್ಯಕರ್ತರನ್ನು ಪ್ರಚೋದಿಸಿ ಗಲಾಟೆ ಮಾಡಿಸುವ ಗುರುಮೂರ್ತಿ ಮತ್ತಿರರ ವಿರುದ್ಧ ಸೊರಬ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದರು.

ನ್ಯಾಯಾಲಯದ ಆದೇಶವನ್ನು ತಪ್ಪಾಗಿ ಪ್ರಚಾರ ಮಾಡುತ್ತಾ, ದಲಿತ ಸಂಘರ್ಷ ಸಮಿತಿ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಗುರುಮೂರ್ತಿ ಕಳೆದ ಮೂರ‍್ನಾಲ್ಕು ದಶಕಗಳಿಂದ ದಲಿತರ ಧ್ವನಿಯಾಗಿ ಕೆಲಸ ಮಾಡುತ್ತಿರುವ ರಾಜೇಂದ್ರ ಬಂದಗದ್ದೆಯಂತಹ ಮುಖಂಡರನ್ನು ಗಂಜಿ ಗಿರಾಕಿ ಎಂದು ಹೇಳಿದ್ದು ಖಂಡನೀಯ. 2006-07 ರಲ್ಲಿ ಜೈಭೀಮ್ ಕೋ. ಆಪರೇಟಿವ್ ಸೊಸೈಟಿ ಸ್ಥಾಪಿಸಿ ದಲಿತರಿಂದ ಲಕ್ಷಾಂತರ ರೂಪಾಯಿ ಷೇರು ಹಣ ಸಂಗ್ರಹಿಸಿ ಅದನ್ನು ಸ್ವಬಳಕೆ ಮಾಡಿಕೊಂಡು ದಲಿತರನ್ನು ವಂಚಿಸಿದ್ದಾರೆ. ಪೊಲೀಸ್ ಇಲಾಖೆ ಇಂತಹ ವಂಚಕರನ್ನು ಕೂಡಲೇ ಬಂಧಿಸಿ, ಜನಸಾಮಾನ್ಯರು ಮತ್ತು ದಲಿತರು ವಂಚನೆಗೊಳಗಾಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಸಮಿತಿ ತಾಲೂಕು ಸಂಚಾಲಕ ಲಕ್ಷ್ಮಣ್ ಸಾಗರ್ ಮಾತನಾಡಿ, ದಲಿತ ಸಂಘರ್ಷ ಸಮಿತಿ ಲಕ್ಷ್ಮೀನಾರಾಯಣ ನಾಗವಾರ ಬಣದ ಜಿಲ್ಲಾ ಸಂಚಾಲಕ ಎಂದು ಹೇಳಿಕೊಳ್ಳುವ ಪರಮೇಶ್ವರ ದೂಗೂರು ಏನೂ ದುಡಿಮೆ ಇಲ್ಲದಿದ್ದರೂ ಐಷಾರಾಮಿ ಜೀವನ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ತಮ್ಮದೇ ಸಂಘಟನೆ ಕಟ್ಟಿಕೊಳ್ಳಲು ಸಾಧ್ಯವಾಗದ ದೂಗೂರು ಬೇರೆಯವರ ಜೊತೆ ಗುರುತಿಸಿಕೊಂಡು ತೇಜೋವಧೆ ಮಾಡುವ ಪ್ರಯತ್ನ ಖಂಡನೀಯ ಎಂದು ಹೇಳಿದರು.

ಗೋಷ್ಠಿಯಲ್ಲಿ ಗುರುರಾಜ್, ರಾಜೇಂದ್ರ ಬಂದಗದ್ದೆ, ಹರೀಶ್, ನಾಗರಾಜ್, ಸುರೇಶ್ ಮಂಡ್ಯ, ವಿಶ್ವನಾಥ್, ಮಹೇಶ್, ರವಿ ಜಂಬಗಾರು, ಎ.ಎ.ಶೇಕ್, ಸತ್ಯನಾರಾಯಣ್, ವಿನ್ಸಂಟ್ ರಾಸ್, ರೋಸಯ್ಯ, ಪ್ರಕಾಶ್, ಅಣ್ಣಪ್ಪ ಇನ್ನಿತರರು ಹಾಜರಿದ್ದರು.

ಟಾಪ್ ನ್ಯೂಸ್

Pralhad Joshi

ನಕಲಿ ಗಾಂಧಿ ಪರಿವಾರವು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ದುರಂತ: ಪ್ರಲ್ಹಾದ್ ಜೋಶಿ

ಪುಟಾಣಿಗಳಿಗಾಗಿ ಅಮ್ಮನಿಗಾಗಿ ಒಂದು ಪುಸ್ತಕ

ಪುಟಾಣಿಗಳಿಗಾಗಿ ಅಮ್ಮನಿಗಾಗಿ ಒಂದು ಪುಸ್ತಕ

ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ : ಟ್ಯಾಂಕರ್ ಗೆ ಬೆಂಕಿ ಹತ್ತಿಕೊಂಡು ಇಬ್ಬರು ಸಜೀವ ದಹನ

ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ : ಟ್ಯಾಂಕರ್ ಗೆ ಬೆಂಕಿ ಹತ್ತಿಕೊಂಡು ಇಬ್ಬರು ಸಜೀವ ದಹನ

ಮುದ್ದೇಬಿಹಾಳ : ಸಿಡಿಲು ಬಡಿದು ಆಕಳು ಸಾವು, ಕಂಗಾಲಾದ ರೈತ

ಮುದ್ದೇಬಿಹಾಳ : ಸಿಡಿಲು ಬಡಿದು ಆಕಳು ಸಾವು, ಕಂಗಾಲಾದ ರೈತ

ನಮನ್ ಶತಕದಾಟ; ರೋಡ್ ಸೇಫ್ಟಿ ಕಪ್ ಉಳಿಸಿಕೊಂಡ ಇಂಡಿಯಾ ಲೆಜೆಂಡ್ಸ್

ನಮನ್ ಶತಕದಾಟ; ರೋಡ್ ಸೇಫ್ಟಿ ಕಪ್ ಉಳಿಸಿಕೊಂಡ ಇಂಡಿಯಾ ಲೆಜೆಂಡ್ಸ್

ಕಾಸರಗೋಡು : ಪಿಎಫ್‌ಐ ಜಿಲ್ಲಾ ಕಚೇರಿಗೆ ಎನ್‌ಐಎಯಿಂದ ಬೀಗ

ಕಾಸರಗೋಡು : ಪಿಎಫ್‌ಐ ಜಿಲ್ಲಾ ಕಚೇರಿಗೆ ಎನ್‌ಐಎಯಿಂದ ಬೀಗ

prabhas

‘ಕಾಂತಾರ’ ಗೆ ಬಹುಪರಾಕ್ ಎಂದ ಬಾಹುಬಲಿ ಸ್ಟಾರ್ ಪ್ರಭಾಸ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಡಕೆ ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರ ದೇಶಿ ಅಡಕೆ ಬೆಳೆಗಾರರ ಭವಿಷ್ಯಕ್ಕೆ ಮಾರಕ

ಅಡಕೆ ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರ ದೇಶಿ ಅಡಕೆ ಬೆಳೆಗಾರರ ಭವಿಷ್ಯಕ್ಕೆ ಮಾರಕ

ಮತ್ತೆ ಅನ್ಯಾಯ; ಹಾಲ್ ಟಿಕೆಟ್ ನೀಡದೆ ಕನ್ನಡ ಪರೀಕ್ಷೆ ನಡೆಸಿದ ಎನ್ ಟಿಎ

ಮತ್ತೆ ಅನ್ಯಾಯ; ಹಾಲ್ ಟಿಕೆಟ್ ನೀಡದೆ ಕನ್ನಡ ಪರೀಕ್ಷೆ ನಡೆಸಿದ ಎನ್ ಟಿಎ

news highcourt

ಶರಾವತಿ ಕೂಲ್ ಡ್ರಿಂಕ್ಸ್ ಎದುರು ನಡೆದ ಕೊಲೆ ಪ್ರಕರಣ; ಜೀವಾವಧಿ ಶಿಕ್ಷೆ

ನಾಗರ ಹಾವಿಗೆ ಮುತ್ತಿಡಲು ಹೋಗಿ ಕಚ್ಚಿಸಿಕೊಂಡ ಉರಗ ರಕ್ಷಕ!

ನಾಗರ ಹಾವಿಗೆ ಮುತ್ತಿಡಲು ಹೋಗಿ ಕಚ್ಚಿಸಿಕೊಂಡ ಉರಗ ರಕ್ಷಕ!

1-sd-dsa

ಸಾಗರ: ಸರಣಿ ಅಪಘಾತದಲ್ಲಿ ನಾಲ್ವರಿಗೆ ಗಂಭೀರ ಗಾಯ

MUST WATCH

udayavani youtube

ದಿನ7 | ಕಾಳರಾತ್ರಿ ದೇವಿ

udayavani youtube

ಮೂಳೂರಿನಲ್ಲಿ ತೊರಕೆ ಮೀನಿನ ಸುಗ್ಗಿ, ಮೀನುಗಾರರು ಫುಲ್ ಖುಷಿ ಮಾರ್ರೆ

udayavani youtube

ಉಚ್ಚಿಲದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಶತವೀಣಾವಲ್ಲರಿ ಕಾರ್ಯಕ್ರಮ

udayavani youtube

ಭಾಷಣ ಮಾಡದೆ… ಜನರ ಬಳಿ ಕ್ಷಮೆ ಕೇಳಿದ ಪ್ರಧಾನಿ ಮೋದಿ… ಕಾರಣ ಇಲ್ಲಿದೆ…

udayavani youtube

ದಿನ6| ಕಾತ್ಯಾಯಿನಿ ದೇವಿ|ಕಾತ್ಯಾಯಿನಿ ದೇವಿ ಪೂಜೆಯ ಪ್ರಯೋಜನವೇನು ಗೊತ್ತೇ. | Udayavani

ಹೊಸ ಸೇರ್ಪಡೆ

Pralhad Joshi

ನಕಲಿ ಗಾಂಧಿ ಪರಿವಾರವು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ದುರಂತ: ಪ್ರಲ್ಹಾದ್ ಜೋಶಿ

ಪುಟಾಣಿಗಳಿಗಾಗಿ ಅಮ್ಮನಿಗಾಗಿ ಒಂದು ಪುಸ್ತಕ

ಪುಟಾಣಿಗಳಿಗಾಗಿ ಅಮ್ಮನಿಗಾಗಿ ಒಂದು ಪುಸ್ತಕ

ರಗಡ್‌ ಲುಕ್‌ನಲ್ಲಿ ಶಿವಣ್ಣ: ‘ವೇದ’ ಹೊಸ ಪೋಸ್ಟರ್‌ ಗೆ ಫ್ಯಾನ್ಸ್‌ ಫಿದಾ

ರಗಡ್‌ ಲುಕ್‌ನಲ್ಲಿ ಶಿವಣ್ಣ: ‘ವೇದ’ ಹೊಸ ಪೋಸ್ಟರ್‌ ಗೆ ಫ್ಯಾನ್ಸ್‌ ಫಿದಾ

ಗ್ರಾಹಕರಿಗೆ ಅಪ್ರತಿಮ ಸೇವೆಯೇ ನಮ್ಮ ಗುರಿ: ಆನಂದ ಬಿ. ಮೂಲ್ಯ

ಗ್ರಾಹಕರಿಗೆ ಅಪ್ರತಿಮ ಸೇವೆಯೇ ನಮ್ಮ ಗುರಿ: ಆನಂದ ಬಿ. ಮೂಲ್ಯ

ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ : ಟ್ಯಾಂಕರ್ ಗೆ ಬೆಂಕಿ ಹತ್ತಿಕೊಂಡು ಇಬ್ಬರು ಸಜೀವ ದಹನ

ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ : ಟ್ಯಾಂಕರ್ ಗೆ ಬೆಂಕಿ ಹತ್ತಿಕೊಂಡು ಇಬ್ಬರು ಸಜೀವ ದಹನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.