ಪ್ರಕೃತಿ ವಿಕೋಪ ನಿಧಿಯಡಿರೂ.39.54 ಲಕ್ಷ ಪರಿಹಾರ ವಿತರಣೆ

Team Udayavani, Sep 3, 2018, 5:04 PM IST

ಹೊಸನಗರ: ತಾಲೂಕಿನಲ್ಲಿ ಅಕಾಲಿಕ ಮಳೆಯಿಂದಾಗಿ ಪ್ರಕೃತಿ ವಿಕೋಪದ ನಿಧಿಯಲ್ಲಿ ಸುಮಾರು ರೂ.39.54
ಲಕ್ಷ ರೂ. ಪರಿಹಾರ ಧನ ನೀಡಲಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತಾಪಂ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ನಿಧಿಯಲ್ಲಿ ಫಲಾನುಭವಿಗಳಿಗೆ ಪರಿಹಾರ ಧನದ ಚೆಕ್‌ ವಿತರಿಸಿ
ಅವರು ಮಾತನಾಡಿದರು. ನಗರ ಹೋಬಳಿಯಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು, 44 ಮನೆಗಳು, 180 ಎಕರೆ ಕೃಷಿ ಜಮೀನು, 161 ಎಕರೆ ಅಡಕೆ ತೋಟ ಹಾನಿ. 4 ಪ್ರಾಣಿ ನಾಶ ಸೇರಿದಂತೆ ಒಟ್ಟು ರೂ.22.24 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದರು.

ಹುಂಚಾ ಹೋಬಳಿಯಲ್ಲಿ 7 ಮನೆ, 28 ಎಕರೆ ಕೃಷಿ ಜಮೀನು, 2 ಎಕರೆ ಅಡಕೆ ತೋಟ, 4 ಪ್ರಾಣಿನಾಶ ಎಲ್ಲಾ
ಸೇರಿ ಒಟ್ಟು ರೂ.2.17 ಲಕ್ಷ ನೀಡಲಾಗಿದೆ ಎಂದರು. ಶಾಸಕ ಹರತಾಳು ಹಾಲಪ್ಪ ಮಾಹಿತಿ ನೀಡಿ, ಕಸಬಾ
ಹೋಬಳಿಯಲ್ಲಿ ಕಾಲು ಸಂಕ ದಾಟುವಾಗ ಕಾಲು ಜಾರಿ ಆಕಸ್ಮಿಕ ಮರಣ ಹೊಂದಿದ ಎರಡು ಕುಟುಂಬಕ್ಕೆ ರೂ.10 ಲಕ್ಷ ಪರಿಹಾರ ಸೇರಿದಂತೆ ಒಟ್ಟು 10.69 ಲಕ್ಷ ನೆರೆ ಹಾನಿ ಸಂತ್ರಸ್ತರಿಗೆ ಪರಿಹಾರ ವಿತರಸಲಾಗಿದೆ ಎಂದು
ತಿಳಿಸಿದರು. ಕೆರೆಹಳ್ಳಿ ಹೋಬಳಿಯಲ್ಲಿ 20ಮನೆ ಹಾನಿ, ಒಂದು ಪ್ರಾಣಿ ಹಾನಿ ಸೇರಿದಂತೆ ಸುಮಾರು ರೂ.5.1 ಲಕ್ಷ
ಪರಿಹಾರ ನೀಡಲಾಗಿದೆ ಎಂದರು.

ನೆರೆ ಹಾನಿ ಸಮೀಕ್ಷೆಯನ್ನು ಪ್ರಾಮಾಣಿಕವಾಗಿ ಎಲ್ಲಾ ಇಲಾಖೆಗಳ ಸಹಕಾರದಿಂದ ಮಾಡಿ. ಲೋಪವಾದರೆ
ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಸಿದರು. ಜಿಪಂ ಸದಸ್ಯರಾದ ಸುರೇಶ ಸ್ವಾಮಿರಾವ್‌, ಶ್ವೇತಾ ಬಂಡಿ, ತಾಪಂ ಅಧ್ಯಕ್ಷ ವಾಸಪ್ಪ ಗೌಡ, ಉಪಾಧ್ಯಕ್ಷೆ ಸುಶೀಲಮ್ಮ, ತಹಶೀಲ್ದಾರ್‌ ಚಂದ್ರಶೇಖರ ನಾಯ್ಕ, ಕಾರ್ಯ ನಿರ್ವಾಹಕ ಅಧಿಕಾರಿ ರಾಮಚಂದ್ರ ಭಟ್‌ ಮತ್ತಿತರರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

  • ಶಿವಮೊಗ್ಗ: ಕುಂದಾಪುರದಲ್ಲಿ ಡಿ.28 ಮತ್ತು 29 ರಂದು ನಡೆಯಲಿರುವ ಬ್ರಾಹ್ಮಣರ ರಾಜ್ಯ ಸಮ್ಮೇಳನದ ಮೂಲಕ ಸಮುದಾಯಕ್ಕೆ ಆಗಬೇಕಾಗಿರುವ ಕೆಲಸಗಳ ಬಗ್ಗೆ ಸರ್ಕಾರದ ಮುಂದೆ...

  • ಶರತ್‌ ಭದ್ರಾವತಿ ಶಿವಮೊಗ್ಗ: ಜಿಲ್ಲೆಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಇಳಿಮುಖವಾಗುತ್ತಿದ್ದರೂ ಅಪ್ರಾಪ್ತೆಯರ ಮೇಲಿನ ದೌರ್ಜನ್ಯದ ಪ್ರಮಾಣ...

  • „ಶರತ್‌ ಭದ್ರಾವತಿ ಶಿವಮೊಗ್ಗ: ತಮಿಳುನಾಡು ಬಾಳೆ ಜಿಲ್ಲೆಗೆ ಕಾಲಿಟ್ಟ ಕಾರಣ ಗ್ರಾಹಕರ ಜೇಬಿಗೆ ಹೊರೆಯಾಗಿದ್ದು ಪುಟ್ಟ ಬಾಳೆ (ಏಲಕ್ಕಿ ಬಾಳೆ) ಈಗ ಭಾರೀ ಇಳಿಕೆಯಾಗಿದ್ದು...

  • ಸಾಗರ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ ವತಿಯಿಂದ ಪ್ರತಿಭಟನೆ ನಡೆಸಿ ಶಾಸಕರು ಹಾಗೂ ಉಪವಿಭಾಗಾಧಿ ಕಾರಿಗಳ...

  • ಶಿವಮೊಗ್ಗ: ಹೊಸನಗರ ತಾಲೂಕು ಆಹಾರ ನಿರೀಕ್ಷಕ ಐ.ಡಿ.ದತ್ತಾತ್ರೆಯ ಅವರ ಆತ್ಮಹತ್ಯೆಗೆ ಅಧಿಕಾರಿಗಳೇ ಕಾರಣ, ಅವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ...

ಹೊಸ ಸೇರ್ಪಡೆ