ಪರಿಸರ ಪ್ರೇಮಿಗಳಿಂದ ಅರಣ್ಯ ಸಂರಕ್ಷಣೆ: ಅಶೀಸರ

Team Udayavani, Jun 6, 2018, 5:01 PM IST

shivo-1.jpg

ಸಾಗರ: ಪಶ್ಚಿಮ ಘಟ್ಟದ ಪರಿಸರವನ್ನು ಉಳಿಸಲು 80ರ ದಶಕದಿಂದಲೇ ಆಂದೋಲನವನ್ನು ಪ್ರಾರಂಭಿಸಲಾಗಿದ್ದು ಈ ಹೋರಾಟಕ್ಕೆ ಸಾಗರ ಪ್ರಾಂತ್ಯದ ಪರಿಸರ ಪ್ರೇಮಿಗಳು ತುಂಬಾ ಸಹಕಾರ ನೀಡಿದ್ದರು. ಇವರ ನೇತೃತ್ವದಲ್ಲಿಯೇ ನಾರಗೋಡು ಅರಣ್ಯ ಖಾಸಗಿ ವ್ಯಕ್ತಿಗಳ ಪಾಲಾಗದಂತೆ ಉಳಿಸಲು ಸಾಧ್ಯವಾಗಿದೆ ಎಂದು ವೃಕ್ಷಲಕ್ಷ ಆಂದೋಲನದ ಸಂಚಾಲಕ ಅಶೀಸರ ಅನಂತ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ನಾರಗೋಡಿನಲ್ಲಿ ಮಂಗಳವಾರ ವೃಕ್ಷಲಕ್ಷ ಆಂದೋಲನ ಹಾಗೂ ಕಾನು ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಜಾಗತಿಕ ಪರಿಸರ ದಿನಾಚರಣೆ ಅಂಗವಾಗಿ ನಡೆದ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅರಣ್ಯ ಹಾಗೂ ಕೆರೆಗಳ ಸಂರಕ್ಷಣೆಗೆ ಹೊಸದಾಗಿ ಯಾರೂ ಅತಿಕ್ರಮಣ ಮಾಡುವುದಿಲ್ಲ  ಎಂದು ನಾವು ಶಪಥ ಮಾಡಬೇಕು.  ಮುಂದಿನ ದಿನಗಳಲ್ಲಿ ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಕಾನು ಅರಣ್ಯ, ಸೊಪ್ಪಿನ ಬೆಟ್ಟ, ಜಾಡಿಗಳ ರಕ್ಷಣೆಗೆ ತೊಡಗಿಕೊಳ್ಳಬೇಕು. ಇಂಗು ಗುಂಡಿಗಳನ್ನು ನಿರ್ಮಿಸಿ ಅಂತರ್ಜಲ ಸಂರಕ್ಷಣೆಗೆ ಆಧ್ಯತೆ
ನೀಡಬೇಕು. ಪರಿಸರ ಸಂರಕ್ಷಣೆಗೆ ಜನಪ್ರತಿನಿಗಳು ವಿಧಾನ ಸೌಧದಲ್ಲಿ ಧ್ವನಿ ಎತ್ತಬೇಕು. ಅರಣ್ಯ ಸಂಪತ್ತನ್ನು ರಕ್ಷಿಸಿಕೊಳ್ಳಲು ನಾವು ಸಿದ್ಧರಾಗದಿದ್ದರೆ ಮುಂದೆ ಭೀಕರ ಪರಿಣಾಮ ಎದುರಾಗುತ್ತದೆ ಎಂದು ಹೇಳಿದರು.

ಪ್ರೊ| ಬಿ.ಎಂ. ಕುಮಾರಸ್ವಾಮಿ ಮಾತನಾಡಿ, ಅತಿಕ್ರಮಣದ ವಿರುದ್ಧ ಹೋರಾಟ ಮಾಡಿ ಯಶಸ್ಸು ಕಂಡಿದ್ದು ಇದು ಸಂಭ್ರಮಾಚರಣೆಯಾಗಬೇಕು. ಪರಿಸರ ಪ್ರೇಮಿಗಳು, ಸರ್ಕಾರಿ ಅಧಿಕಾರಿಗಳು ಒಟ್ಟುಗೂಡಿದರೆ ಅರಣ್ಯ ಅತಿಕ್ರಮಣವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ನಾರಗೋಡು ಗ್ರಾಮದಲ್ಲಿ ತೋರಿಸಿಕೊಟ್ಟಂತಾಗಿದೆ. ಹುಲ್ಲು
ಗರಿಕೆಯೂ ಕೂಡಾ ನೀರನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  ಆದ್ದರಿಂದ ಕುರುಚಲು ಗಿಡಗಳನ್ನು ನಾಶ ಮಾಡದೇ ಅರಣ್ಯವನ್ನು ಸಂರಕ್ಷಿಸಿಕೊಳ್ಳಬೇಕು ಎಂದರು. ಶಾಸಕ ಹರತಾಳು ಹಾಲಪ್ಪ ಮಾತನಾಡಿ, ನಮ್ಮ ಹೋರಾಟ ಅಭಿವೃದ್ಧಿಗೆ ಮಾರಕವಾಗಬಾರದು. ಜಿಲ್ಲೆಯಲ್ಲಿ 75 ಸಾವಿರ ಎಕರೆ ಜಮೀನು ಎಂಪಿಎಂಗೆ ಕೊಟ್ಟಿದ್ದರಿಂದ ಅಕೇಶಿಯಾ ಗಿಡಗಳನ್ನು ಬೆಳೆದು ನೈಸರ್ಗಿಕ ಅರಣ್ಯ ನಾಶಕ್ಕೆ ಕಾರಣವಾಗಿದೆ.

ಅರಣ್ಯ ಸಂರಕ್ಷಣೆಗೆ ಬ್ರಿಟಿಷರ ಕಾಲದ ಕಾನೂನು ಈಗ ಬದಲಾಗಬೇಕಾಗಿದೆ. ಜನರ ಅನುಕೂಲಕ್ಕಾಗಿ ಕಾನೂನು ಜಾರಿಯಾಗಬೇಕು. ರೈತರ ಜಮೀನಿನಲ್ಲಿ ಒಣಗಿದ ಮರಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಇದನ್ನು ಬಳಸಿಕೊಳ್ಳಲು ಕಾನೂನಿನಲ್ಲಿ ಅವಕಾಶ ಸಿಗಬೇಕು. ಅರಣ್ಯ ಅಧಿಕಾರಿಗಳು ಇಂತಹ ಮರಗಳನ್ನು ಡಿಪೋಗಳಿಗೆ ಹಾಕಿ ಮಾರಾಟ
ಮಾಡಿದರೆ ಅದರಿಂದ ಇಲಾಖೆಗೆ ಆದಾಯ ದೊರಕುತ್ತದೆ ಎಂದರು.

ನಾರಗೋಡು ಗ್ರಾಮದಲ್ಲಿ ಅತಿಕ್ರಮಣ ಮಾಡಿ ಮರಗಳನ್ನು ಕಡಿದು ನಾಶ ಮಾಡಿದ್ದ ಜಾಗದಲ್ಲಿ ವಿವಿಧ ಜಾತಿಯ ಅರಣ್ಯ ಸಸ್ಯಗಳನ್ನು ನೆಡಲಾಯಿತು. ಡಿಎಫ್‌ಒ ಮೋಹನ್‌  ಕುಮಾರ್‌, ಎಸಿಎಫ್‌ ಶಿವಮೂರ್ತಿ, ಆರ್‌ ಎಫ್‌ಒ ರಾಘವೇಂದ್ರ, ರೈತ ಸಂಘದ ತಾಲೂಕು ಅಧ್ಯಕ್ಷ ಗುರುಮೂರ್ತಿ, ವೃಕ್ಷಲಕ್ಷ ಆಂದೋಲನದ ಕವಲಕೋಡು  ಕಟೇಶ್‌, ಮಹಾಬಲೇಶ್ವರ ಗೌಡ, ಶರಾವತಿ ನಾಗರಾಜ್‌, ಗೀತಾ ಪರಶುರಾಮ್‌, ಸುಬ್ರಮಣ್ಯ ನೀಚಡಿ, ಮಹಾಬಲಗಿರಿ ಎನ್‌.ಟಿ., ಟಿ.ಕೆ.ಹನುಮಂತಪ್ಪ, ಇಂದೂಧರ ಗೌಡ್ರು, ಕಾನು ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ, ಜಗದೀಶ ಗೌಡ ಇತರರು ಇದ್ದರು.

ಟಾಪ್ ನ್ಯೂಸ್

ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ

ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ

ಬಿಹಾರದ ದೇಗುಲಗಳಿಗೆ ಶೇ. 4 ತೆರಿಗೆ! ರಾಜ್ಯ ಸರ್ಕಾರದ ನಿರ್ಧಾರ

ಬಿಹಾರದ ದೇಗುಲಗಳಿಗೆ ಶೇ. 4 ತೆರಿಗೆ! ರಾಜ್ಯ ಸರ್ಕಾರದ ನಿರ್ಧಾರ

ಅಮೆರಿಕ : ಶಾಲಾ ವಿದ್ಯಾರ್ಥಿಯಿಂದ ಸಹಪಾಠಿಗಳ ಮೇಲೆ ಗುಂಡಿನ ದಾಳಿ , 3 ಸಾವು

ಅಮೆರಿಕ : ಶಾಲಾ ವಿದ್ಯಾರ್ಥಿಯಿಂದ ಸಹಪಾಠಿಗಳ ಮೇಲೆ ಗುಂಡಿನ ದಾಳಿ , 3 ಸಾವು

ಕಾಶಿ ವಿಶ್ವನಾಥನ “ಸುಗಮ ದರ್ಶನ’ದ ಅಡ್ಡಿ ನಿವಾರಣೆ

ಕಾಶಿ ವಿಶ್ವನಾಥನ “ಸುಗಮ ದರ್ಶನ’ದ ಅಡ್ಡಿ ನಿವಾರಣೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ 8 ರೂ. ಇಳಿಕೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ 8 ರೂ. ಇಳಿಕೆ

ಶಬರಿಮಲೆಯಲ್ಲಿ ಇ-ಹುಂಡಿ : ಭಕ್ತಾದಿಗಳು ಗೂಗಲ್‌ ಪೇ ಮೂಲಕವೂ ಕಾಣಿಕೆ ಸಲ್ಲಿಸಬಹುದು

ಶಬರಿಮಲೆಯಲ್ಲಿ ಇ-ಹುಂಡಿ : ಭಕ್ತಾದಿಗಳು ಗೂಗಲ್‌ ಪೇ ಮೂಲಕವೂ ಕಾಣಿಕೆ ಸಲ್ಲಿಸಬಹುದು

ಟ್ವಿಟರ್‌ ಸಂಸ್ಥೆಯಿಂದ ಟಫ್ ರೂಲ್ಸ್‌ ಜಾರಿ : ವೈಯಕ್ತಿಕ ಫೋಟೋ, ವಿಡಿಯೋಕ್ಕೆ ಕಡಿವಾಣ

ಟ್ವಿಟರ್‌ ಸಂಸ್ಥೆಯಿಂದ ಟಫ್ ರೂಲ್ಸ್‌ ಜಾರಿ : ವೈಯಕ್ತಿಕ ಫೋಟೋ, ವಿಡಿಯೋಕ್ಕೆ ಕಡಿವಾಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾನುವಾರುಗಳಿಗೆ ಕಾಡಿಸುತ್ತಿರುವ ಕಾಲುಬಾಯಿ ರೋಗ; ಲಸಿಕೆ 2 ತಿಂಗಳು ವಿಳಂಬ

ಜಾನುವಾರುಗಳಿಗೆ ಕಾಡುತ್ತಿರುವ ಕಾಲುಬಾಯಿ ರೋಗ; ಲಸಿಕೆ 2 ತಿಂಗಳು ವಿಳಂಬ

ಗೋ ಶಾಲೆ ನಿರ್ಮಾಣಕ್ಕೆ ಭೀಮನಕಟ್ಟೆ ಮಠದಿಂದ ಜಾಗ: ಗೋ ಪ್ರೇಮಿಗಳಲ್ಲಿ ಸಂತಸ

ಗೋ ಶಾಲೆ ನಿರ್ಮಾಣಕ್ಕೆ ಭೀಮನಕಟ್ಟೆ ಮಠದಿಂದ ಜಾಗ: ಗೋ ಪ್ರೇಮಿಗಳಲ್ಲಿ ಸಂತಸ

1-sfdsf

ಮಣಿಪಾಲ: ಹಲ್ಲೆಗೊಳಗಾದ ಗೋರಕ್ಷಕರ ಆರೋಗ್ಯ ವಿಚಾರಿಸಿದ ಗೃಹ ಸಚಿವರು

ಅಕ್ರಮ ಗೋ ಸಾಗಾಣಿಕೆ ವಿರುದ್ಧ ಕಠಿಣ ಕ್ರಮ: ಗೃಹ ಸಚಿವ  ಆರಗ ಜ್ಞಾನೇಂದ್ರ

ಅಕ್ರಮ ಗೋ ಸಾಗಾಣಿಕೆ ವಿರುದ್ಧ ಕಠಿಣ ಕ್ರಮ: ಗೃಹ ಸಚಿವ  ಆರಗ ಜ್ಞಾನೇಂದ್ರ

ಕೊರೊನಾ ಅಪಾಯ ಭತ್ಯೆ ನೀಡಲು ಒತ್ತಾಯ

ಕೊರೊನಾ ಅಪಾಯ ಭತ್ಯೆ ನೀಡಲು ಒತ್ತಾಯ

MUST WATCH

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

udayavani youtube

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ! ಜನರಲ್ಲಿ ಆತಂಕ

udayavani youtube

ದಾಂಡೇಲಿ :ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

udayavani youtube

ಮನೆ ಮಂದಿ ಬರುವಿಕೆಗಾಗಿ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಯೋವೃದ್ದೆ

ಹೊಸ ಸೇರ್ಪಡೆ

ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ

ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ

ಬಿಹಾರದ ದೇಗುಲಗಳಿಗೆ ಶೇ. 4 ತೆರಿಗೆ! ರಾಜ್ಯ ಸರ್ಕಾರದ ನಿರ್ಧಾರ

ಬಿಹಾರದ ದೇಗುಲಗಳಿಗೆ ಶೇ. 4 ತೆರಿಗೆ! ರಾಜ್ಯ ಸರ್ಕಾರದ ನಿರ್ಧಾರ

ಅಮೆರಿಕ : ಶಾಲಾ ವಿದ್ಯಾರ್ಥಿಯಿಂದ ಸಹಪಾಠಿಗಳ ಮೇಲೆ ಗುಂಡಿನ ದಾಳಿ , 3 ಸಾವು

ಅಮೆರಿಕ : ಶಾಲಾ ವಿದ್ಯಾರ್ಥಿಯಿಂದ ಸಹಪಾಠಿಗಳ ಮೇಲೆ ಗುಂಡಿನ ದಾಳಿ , 3 ಸಾವು

ಕಾಶಿ ವಿಶ್ವನಾಥನ “ಸುಗಮ ದರ್ಶನ’ದ ಅಡ್ಡಿ ನಿವಾರಣೆ

ಕಾಶಿ ವಿಶ್ವನಾಥನ “ಸುಗಮ ದರ್ಶನ’ದ ಅಡ್ಡಿ ನಿವಾರಣೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ 8 ರೂ. ಇಳಿಕೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ 8 ರೂ. ಇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.