ಕಾಂಗ್ರೆಸ್ ನವರಿಂದ ಗಾಂಧಿ ವಿಚಾರಗಳ ಕಗ್ಗೊಲೆ: ಕೆ.ಎಸ್.ಈಶ್ವರಪ್ಪ

Team Udayavani, Oct 21, 2019, 5:39 PM IST

ಶಿವಮೊಗ್ಗ: ಗಾಂಧೀಜಿ ಯವರ ವಿಚಾರಧಾರೆಗಳನ್ನು ಕಾಂಗ್ರೆಸ್​​​ನವರು ಕೊಲ್ಲುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಕಿಡಿ ಕಾರಿದರು.

ಗಾಂಧಿ ಸಂಕಲ್ಪ ಪಾದಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಖಂಡ ಭಾರತ ಒಂದು ಎಂಬುದು ಗಾಂಧೀಜಿಯವರ ಕನಸಾಗಿತ್ತು. ಆ ಕನಸು ನನಸು ಮಾಡಲು ಕಾಂಗ್ರೆಸ್ ನವರು ಬಿಡುತ್ತಿಲ್ಲ ಎಂದು ಆರೋಪಿಸಿದರು.

ನಮ್ಮ ಸರ್ಕಾರ ಇದ್ದ ಸಮಯದಲ್ಲಿ ಗೋ ಹತ್ಯೆ ನಿಷೇಧ ಮಾಡಿದ್ದೇವು.ಅದರೆ ಕಾಂಗ್ರೆಸ್ ನವರು ಅದಕ್ಕೆ ತಡೆ ಹಾಕಿದರು. ಗಾಂಧೀಜಿಯವರ ಕನಸು ಗೋ ಹತ್ಯೆ‌ ನಿಷೇಧ ಆಗಬೇಕು ಅಂತಾ ಇತ್ತು. ಆದರೆ ಕಾಂಗ್ರೆಸ್ ನವರು ಅದಕ್ಕೆ ಬಿಡಲಿಲ್ಲ‌ ಎಂದು ಕೆ ಎಸ್ ಈಶ್ವರಪ್ಪ ಕಿಡಿ ಕಾರಿದರು.

ಮಹಾತ್ಮಾ ಗಾಂಧೀಯನ್ನು ನಾಥೂರಾಮ್ ಗೋಡ್ಸೆ ಕೊಂದರು ಎಂದು ಹೇಳುತ್ತಿದ್ದಾರೆ.

ಕಳೆದ 70 ವರ್ಷದಲ್ಲಿ ಕಾಂಗ್ರೆಸ್ ನವರು, ಶೌಚಾಲಯ ಮುಕ್ತ ಭಾರತದ ಕನಸು ನನಸು ಮಾಡಿಲ್ಲ. ಇದಕ್ಕೆ 70 ವರ್ಷದ ಬಳಿಕ ಪ್ರಧಾನಿಯಗಿರುವ ಮೋದಿಯವರೇ ಬರಬೇಕಾಯಿತು. ಸ್ವಚ್ಛ ಭಾರತ್, ಸೇರಿದಂತೆ ಅನೇಕ ಯೋಜನೆಗಳನ್ನು ಮೋದಿಯವರು ಚಾಲನೆ ನೀಡಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ