ಗ್ರಾಪಂ ಫೈಟ್‌: ಹಳ್ಳಿಗಳಲ್ಲಿ ರಂಗೇರಿದ ಪ್ರಚಾರ

Team Udayavani, Dec 18, 2020, 6:57 PM IST

ಗ್ರಾಪಂ ಫೈಟ್‌: ಹಳ್ಳಿಗಳಲ್ಲಿ ರಂಗೇರಿದ ಪ್ರಚಾರ

ಶಿವಮೊಗ್ಗ: ಮೊದಲ ಹಂತದ ಶಿವಮೊಗ್ಗ, ಭದ್ರಾವತಿ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ನಡೆಯುತ್ತಿರುವಗ್ರಾಪಂಗಳ ಚುನಾವಣೆಯಲ್ಲಿ 82 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಒಟ್ಟಾರೆ 3284 ಮಂದಿಕಣದಲ್ಲಿ ಉಳಿದಿದ್ದಾರೆ.

ಮೂರೂ ತಾಲೂಕುಗಳ 113 ಗ್ರಾಪಂಗಳ1,212 ಸ್ಥಾನಗಳ ಪೈಕಿ ಶಿವಮೊಗ್ಗ ತಾಲೂಕಿನಲ್ಲಿ24, ಭದ್ರಾವತಿ ತಾಲೂಕಿನಲ್ಲಿ 44 ಮತ್ತುತೀರ್ಥಹಳ್ಳಿ ತಾಲೂಕಿನಲ್ಲಿ 14 ಸ್ಥಾನಗಳಿಗೆಅವಿರೋಧ ಆಯ್ಕೆಯಾಗಿದೆ. ಶಿವಮೊಗ್ಗತಾಲೂಕಿನ ಹೊಸಹಳ್ಳಿ ಗ್ರಾಪಂನ ತಟ್ಟಿಕೆರೆ ಮತ್ತು ಕುಂಚೇನಹಳ್ಳಿ ಗ್ರಾಪಂನ ಕುಂಚೇನಹಳ್ಳಿಯಲ್ಲಿ ತಲಾ ಒಂದು ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ, 2 ಸ್ಥಾನಗಳು ಖಾಲಿ ಉಳಿದಿವೆ. ಡಿ.22ರಂದು1,128 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅಂತಿಮವಾಗಿ ಸಾಮಾನ್ಯ ಕ್ಷೇತ್ರದಿಂದ 1,804 ಮತ್ತುಮಹಿಳಾ ಮೀಸಲು ಕ್ಷೇತ್ರದಲ್ಲಿ 1,480 ಸೇರಿದಂತೆ 3,284 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಶಿವಮೊಗ್ಗ ತಾಲೂಕಿನಲ್ಲಿ ಅವಿರೋಧಆಯ್ಕೆಯಾದ 24 ಸ್ಥಾನಗಳಲ್ಲಿ 20 ಮಹಿಳೆಯರೆಇದ್ದಾರೆ. ಶೆಟ್ಟಿಹಳ್ಳಿಯಲ್ಲಿ ಅತಿ ಹೆಚ್ಚು 3 ಸ್ಥಾನಗಳಿಗೆಅವಿರೋಧ ಆಯ್ಕೆಯಾಗಿದ್ದು, ಮೂವರೂಮಹಿಳೆಯರಾಗಿದ್ದಾರೆ. ಅದರಲ್ಲೂ ಮಾಳೇನಹಳ್ಳಿಗ್ರಾಮದ ಎರಡೂ ಸ್ಥಾನಗಳು ಅವಿರೋಧ ಆಯ್ಕೆಯಾಗಿದೆ. ಪಿಳ್ಳಂಗೆರೆ, ತಮ್ಮಡಿಹಳ್ಳಿ,ಮಂಡಘಟ್ಟ, ಮಲ್ಲಾಪುರ, ರಾಮನಗರ, ಹಾಡೋನಹಳ್ಳಿಯಲ್ಲಿ ತಲಾ ಎರಡು,ಗಾಜನೂರು, ಮತ್ತೂರು, ಬಿದರೆ,ಮೇಲಿನಹನಸವಾಡಿ, ಹೊಳಲೂರು,ಅಗಸವಳ್ಳಿ, ಸಿರಿಗೆರೆ, ಅಬ್ಬಲಗೆರೆ, ಹಾರನಹಳ್ಳಿಯಲ್ಲಿ ತಲಾ ಒಂದು ಸ್ಥಾನಗಳು ಅವಿರೋಧ ಆಯ್ಕೆಯಾಗಿವೆ.

2ನೇ ಹಂತದಲ್ಲಿ 4893 ನಾಮಪತ್ರ: ಶಿವಮೊಗ್ಗ ಜಿಲ್ಲೆಯ ಸಾಗರ, ಶಿಕಾರಿಪುರ, ಸೊರಬ ಮತ್ತು ಹೊಸನಗರ ತಾಲೂಕುಗಳ ಗ್ರಾಪಂಗಳಿಗೆನಡೆಯುತ್ತಿರುವ ಎರಡನೇ ಹಂತದ ಚುನಾವಣೆಯಲ್ಲಿ2673 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.ನಾಲ್ಕೂ ತಾಲೂಕುಗಳ 131 ಗ್ರಾಪಂಗಳಲ್ಲಿ 1,397 ಸ್ಥಾನಗಳಿವೆ. ಇದರಲ್ಲಿ ಶಿಕಾರಿಪುರ ತಾಲೂಕಿನ ಒಂದುಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದಿರುವುದರಿಂದಖಾಲಿ ಉಳಿದಿದೆ. ಸಾಮಾನ್ಯ ಕ್ಷೇತ್ರಗಳಲ್ಲಿ 2,801 ಮತ್ತು ಮಹಿಳಾ ಮೀಸಲಿಗೆ 2,092 ಸೇರಿದಂತೆ 4,893 ನಾಮಪತ್ರಗಳು ಸಲ್ಲಿಕೆಯಾಗಿವೆ.

ಗುಂಡು-ತುಂಡಿನ ಗಮ್ಮತ್ತು: ಹಳ್ಳಿಗಳಲ್ಲಿ ಚುನಾವಣೆ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಹಗಲಲ್ಲಿಬಹಿರಂಗ ಪ್ರಚಾರ ಸಂಜೆ ಗುಂಡು, ತುಂಡಿನ ಸಮಾರಾಧನೆ ಜೋರಾಗಿದೆ. ಗ್ರಾಮೀಣ ಭಾಗದಲ್ಲಿ ಮದ್ಯ ಮಾರಾಟಕ್ಕೆ ಯಾವುದೇ ನಿರ್ಬಂಧ ಇಲ್ಲದ ಕಾರಣ ಗುಂಡಿಗೆ ಬರವಿಲ್ಲ.ಹಗಲಲ್ಲಿ ಅಭ್ಯರ್ಥಿಗಳು ಗುಂಪಾಗಿ ಮನೆ ಮನೆಗೆಭೇಟಿ ನೀಡಿ ಮತ ಯಾಚನೆ ಮಾಡಿದರೆ, ಸಂಜೆಬಳಿಕ ಯುವಕರನ್ನು ಮತ್ತಲ್ಲಿ ತೇಲಿಸುತ್ತಿದ್ದಾರೆ. ಮನೆಭೇಟಿ ಸಂದರ್ಭದಲ್ಲಿ ಕರಪತ್ರ ಕೊಟ್ಟು ಮತ ಕೇಳುವನೆಪದಲ್ಲಿ ಕಿವಿಯಲ್ಲಿ ಪಿಸುಗುಟ್ಟಿ ಸಂಜೆ ಪಾರ್ಟಿಗೆಆಹ್ವಾನ ಕೊಡುತ್ತಿದ್ದಾರೆ. ಎಷ್ಟು ಜನ ಸೇರಬಹುದುಎಂಬುದನ್ನು ಖಚಿತಪಡಿಸಿಕೊಂಡು ಬಾಡೂಟದ ವ್ಯವಸ್ಥೆ ಮಾಡಲಾಗುತ್ತಿದೆ. ಅದಕ್ಕಾಗಿ ಈಗ ಬಹಳಷ್ಟು ಯುವಕರು ಮತ್ತು ಪುರುಷರಿಗೆ ರಾತ್ರಿ ಮನೆ ಊಟ ರುಚಿಸುತ್ತಿಲ್ಲ.

ತೋಟದ ಮನೆಗಳು ರಶ್‌: ಹಳ್ಳಿಗಳಲ್ಲಿ ಪಾರ್ಟಿಗಳಿಗೆ ಈಗ ಬರವಿಲ್ಲ. ಆಕಾಂಕ್ಷಿಗಳ ಮತಗಳನ್ನು ಸೆಳೆಯಲು ಊರ ಹೊರಗಿನ ಜಾಗಗಳನ್ನು ಆಯ್ಕೆಮಾಡಿಕೊಂಡಿದ್ದಾರೆ. ಕೋಳಿ ಫಾರಂಗಳು, ತೋಟದಮನೆಗಳು, ದಟ್ಟಡವಿ ನಡುವಿನ ಒಂಟಿ ಮನೆಗಳು, ಕೊಟ್ಟಿಗೆಗಳು ರಂಗೇರತೊಡಗಿವೆ. ಹೆಚ್ಚು ಜನಸೇರಿಸಿದಲ್ಲಿ ಬಯಲಾಗುತ್ತದೆ ಎಂಬ ಕಾರಣಕ್ಕೆ ಪ್ರತಿದಿನನಿಗದಿತ ಜನರನ್ನು ಸೇರಿಸಿ ಪಾರ್ಟಿ ಮಾಡಲಾಗುತ್ತಿದೆ.ಹೀಗಾಗಿ ಹಳ್ಳಿಗಳಲ್ಲಿ ಈಗ ನಿತ್ಯವೂ ಗುಂಡು ತುಂಡಿನಸಮಾರಾಧನೆ ನಡೆಯುತ್ತಿದೆ. ಕೆಲವರು ಆ ಮೂಲಕ ಗುಂಡು ಪ್ರಿಯ ಮತದಾರರನ್ನು ಸಂತೃಪ್ತಿಗೊಳಿಸುವ ಪ್ರಯತ್ನ ನಡೆಸಿದ್ದಾರೆ. ತೋಟದ ಮನೆಗಳಿಗೆ ಒಲ್ಲೆಎನ್ನುವವರನ್ನು ಬಾರ್‌ ಮತ್ತು ರೆಸ್ಟೋರೆಂಟ್‌ಗಳಿಗೆ ಕರೆದೊಯ್ಯಲಾಗುತ್ತಿದೆ.

ಗುಂಡು-ತುಂಡಿನ ಪಾರ್ಟಿ ಸಾಮಾನ್ಯವಾಗಿರುವುದರಿಂದ ಕೋಳಿ ಮತ್ತು ಮದ್ಯಕ್ಕೆ ಭಾರಿ ಬೇಡಿಕೆ ಸೃಷ್ಟಿಸಿದೆ. ಮೊದಲ ಹಂತದ ಮತದಾನಕ್ಕೆ ಇನ್ನೂಆರು ದಿನ ಮತ್ತು ಎರಡನೇ ಹಂತದ ಮತದಾನಕ್ಕೆ 11ದಿನ ಇರುವುದರಿಂದ ಹಳ್ಳಿಗಳಿಗೆ ಮದ್ಯದ ಪೂರೈಕೆ ಹೆಚ್ಚಾಗಿದೆ. ಎಲ್ಲ ಕಡೆ ಬೇಡಿಕೆ ಹೆಚ್ಚಾಗಿರುವುದರಿಂದ ಕೋಳಿ ಮತ್ತು ಎಣ್ಣೆ ವ್ಯಾಪಾರವನ್ನುದ್ವಿಗುಣಗೊಳಿಸಿದೆ.

ಹಳ್ಳೀಲಿ ಫೈಟು- ಪ್ಯಾಟೇಲಿ ಮಂಕು : ರಾಜ್ಯದೆಲ್ಲೆಡೆ ಹಳ್ಳಿಗಳಲ್ಲಿ ಗ್ರಾಪಂ ಚುನಾವಣೆ ನಡೆಯುತ್ತಿದ್ದರೆ ಪೇಟೆ ಜನರಿಗೆ ಮಾತ್ರ ಅದರಅರಿವೇ ಇಲ್ಲ. ಹಳ್ಳಿಗಳಲ್ಲಿ ಪ್ರತಿ ಮನೆ, ಅರಳಿಕಟ್ಟೆ, ಹೋಟೆಲ್‌, ಅಂಗಡಿ ಸೇರಿದಂತೆ ನಾಲ್ಕು ಜನಸೇರಿದ ಕಡೆಗಳಲ್ಲೆಲ್ಲ ಚುನಾವಣೆಯದ್ದೇ ಮಾತು. ಯಾರು ಹೇಗೆ ಪ್ರಚಾರ ಮಾಡುತ್ತಿದ್ದಾರೆ, ಯಾರ ಪರವಾಗಿ ಅಲೆ ಇದೆ, ಯಾರು ಗೆಲ್ಲಬಹುದು, ಅವರೇನು ತಂತ್ರ ನಡೆಸಿದ್ದಾರೆ ಎಂಬುದೇ ಮಾತು. ಗ್ರಾಮಗಳಲ್ಲಿ ಚುನಾವಣೆ ರಂಗೇರಿದ ಬಳಿಕ ಜನರು ಪೇಟೆಯತ್ತ ಸುಳಿಯುವುದೂ ಕಡಿಮೆಯಾಗಿದೆ.

ಟಾಪ್ ನ್ಯೂಸ್

yatnal

ಮತ್ತೆಂದೂ ತಲೆ ಎತ್ತದಂತೆ ಪಿಎಫ್ಐ ನಿಷೇಧಿಸಬೇಕು: ಯತ್ನಾಳ್

ಅಯೋಧ್ಯೆಯಲ್ಲಿ ಲತಾ ಮಂಗೇಶ್ಕರ್‌ ವೃತ್ತ ಉದ್ಘಾಟನೆ

ಅಯೋಧ್ಯೆಯಲ್ಲಿ ಲತಾ ಮಂಗೇಶ್ಕರ್‌ ವೃತ್ತ ಉದ್ಘಾಟನೆ

ಸಿಇಟಿ ಪರಿಷ್ಕೃತ ರ್‍ಯಾಂಕ್‌ ಪಟ್ಟಿ ಅ.1ರಂದು ಪ್ರಕಟ

ಸಿಇಟಿ ಪರಿಷ್ಕೃತ ರ್‍ಯಾಂಕ್‌ ಪಟ್ಟಿ ಅ.1ರಂದು ಪ್ರಕಟ

ಉಡುಪಿ: ಅ.1ರಿಂದ ಇಂದ್ರಾಳಿ ಸೇತುವೆ ರಸ್ತೆ ಕಾಮಗಾರಿ; ಘನ ವಾಹನಗಳಿಗೆ ಬದಲಿ ಮಾರ್ಗ 

ಉಡುಪಿ: ಅ.1ರಿಂದ ಇಂದ್ರಾಳಿ ಸೇತುವೆ ರಸ್ತೆ ಕಾಮಗಾರಿ; ಘನ ವಾಹನಗಳಿಗೆ ಬದಲಿ ಮಾರ್ಗ 

arrested

ಮನೆ ಕಳ್ಳತನ : ಇಬ್ಬರು ಆರೋಪಿಗಳ ಬಂಧನ, ಚಿನ್ನಾಭರಣ ನಗದು ವಶ

ಭೂ ಪರಿವರ್ತನೆ ಸರಳ ಕ್ರಮ: ಸಚಿವ ಆರ್‌.ಅಶೋಕ್‌

ಭೂ ಪರಿವರ್ತನೆ ಸರಳ ಕ್ರಮ: ಸಚಿವ ಆರ್‌.ಅಶೋಕ್‌

ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ರಾಜ್ಯ ಶೀಘ್ರ ಸೇರ್ಪಡೆ

ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ರಾಜ್ಯ ಶೀಘ್ರ ಸೇರ್ಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಿಎಫ್ ಐ ನಿಷೇಧ ಎಲ್ಲ ರಾಷ್ಟ್ರಪ್ರೇಮಿಗಳಿಗೆ ಸಮಾಧಾನ ತಂದಿದೆ:  ಕೆ.ಎಸ್.ಈಶ್ವರಪ್ಪ

ಪಿಎಫ್ ಐ ನಿಷೇಧ ಎಲ್ಲ ರಾಷ್ಟ್ರಪ್ರೇಮಿಗಳಿಗೆ ಸಮಾಧಾನ ತಂದಿದೆ: ಕೆ.ಎಸ್.ಈಶ್ವರಪ್ಪ

ಪಿಎಫ್ಐ ನಿಷೇಧಿಸಲು ಕೇಂದ್ರಕ್ಕೆ ಪ್ರಸ್ತಾವನೆ: ಸಚಿವ ಆರಗ ಜ್ಞಾನೇಂದ್ರ

ಪಿಎಫ್ಐ ನಿಷೇಧಿಸಲು ಕೇಂದ್ರಕ್ಕೆ ಪ್ರಸ್ತಾವನೆ: ಸಚಿವ ಆರಗ ಜ್ಞಾನೇಂದ್ರ

ಹಿಂದೂ-ಮುಸ್ಲಿಂರನ್ನು ಬೇರೆ ಮಾಡೋ ಕೆಲಸ ಎಸ್ ಡಿಪಿಐ- ಪಿಎಫ್ಐ ಮಾಡುತ್ತಿದ್ದವು: ಈಶ್ವರಪ್ಪ

ಹಿಂದೂ-ಮುಸ್ಲಿಂರನ್ನು ಬೇರೆ ಮಾಡೋ ಕೆಲಸ ಎಸ್ ಡಿಪಿಐ- ಪಿಎಫ್ಐ ಮಾಡುತ್ತಿದ್ದವು: ಈಶ್ವರಪ್ಪ

ತೀರ್ಥಹಳ್ಳಿ ದಸರಾ ಉತ್ಸವಕ್ಕೆ ಚಾಲನೆ ನೀಡಿದ ಗೃಹಸಚಿವ ಆರಗ ಜ್ಞಾನೇಂದ್ರ

ತೀರ್ಥಹಳ್ಳಿ ದಸರಾ ಉತ್ಸವಕ್ಕೆ ಚಾಲನೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

1-dsadasw

ಶಿಕಾರಿಪುರ: ಹನ್ನೊಂದು ತಿಂಗಳ ಮಗು ತೊಟ್ಟಿಯಲ್ಲಿ ಬಿದ್ದು ಸಾವು

MUST WATCH

udayavani youtube

ಮಂಗಳೂರು ಶ್ರೀ ಶಾರದಾ ಮಹೋತ್ಸವ – 100 ವರ್ಷಗಳ ಪಯಣ ಹೇಗಿತ್ತು ?

udayavani youtube

ದಸರಾ ಆನೆಗಳ ತೂಕವನ್ನು ಹೆಚ್ಚಿಸಲು ಏನೆಲ್ಲಾ ತಿನ್ನಿಸುತ್ತಾರೆ ನೋಡಿ !

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

ಹೊಸ ಸೇರ್ಪಡೆ

yatnal

ಮತ್ತೆಂದೂ ತಲೆ ಎತ್ತದಂತೆ ಪಿಎಫ್ಐ ನಿಷೇಧಿಸಬೇಕು: ಯತ್ನಾಳ್

ಅಯೋಧ್ಯೆಯಲ್ಲಿ ಲತಾ ಮಂಗೇಶ್ಕರ್‌ ವೃತ್ತ ಉದ್ಘಾಟನೆ

ಅಯೋಧ್ಯೆಯಲ್ಲಿ ಲತಾ ಮಂಗೇಶ್ಕರ್‌ ವೃತ್ತ ಉದ್ಘಾಟನೆ

ಸಿಇಟಿ ಪರಿಷ್ಕೃತ ರ್‍ಯಾಂಕ್‌ ಪಟ್ಟಿ ಅ.1ರಂದು ಪ್ರಕಟ

ಸಿಇಟಿ ಪರಿಷ್ಕೃತ ರ್‍ಯಾಂಕ್‌ ಪಟ್ಟಿ ಅ.1ರಂದು ಪ್ರಕಟ

ಉಡುಪಿ: ಅ.1ರಿಂದ ಇಂದ್ರಾಳಿ ಸೇತುವೆ ರಸ್ತೆ ಕಾಮಗಾರಿ; ಘನ ವಾಹನಗಳಿಗೆ ಬದಲಿ ಮಾರ್ಗ 

ಉಡುಪಿ: ಅ.1ರಿಂದ ಇಂದ್ರಾಳಿ ಸೇತುವೆ ರಸ್ತೆ ಕಾಮಗಾರಿ; ಘನ ವಾಹನಗಳಿಗೆ ಬದಲಿ ಮಾರ್ಗ 

arrested

ಮನೆ ಕಳ್ಳತನ : ಇಬ್ಬರು ಆರೋಪಿಗಳ ಬಂಧನ, ಚಿನ್ನಾಭರಣ ನಗದು ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.