Udayavni Special

ಎಪಿಎಂಸಿಗೆ ಬೆಳೆ ಒಯ್ಯಲು ಬೇಕಿದೆ ವಾಹನ

ಮನೆ ಬಳಿಯೇ ವ್ಯಾಪಾರಕ್ಕೆ ಮುಂದಾಗುತ್ತಿರುವ ರೈತರುವಾಹನ ಸೌಲಭ್ಯ ಒದಗಿಸಬೇಕಿದೆ ಎಪಿಎಂಸಿ

Team Udayavani, Jan 23, 2020, 3:04 PM IST

23-January-13

ಹೊಸನಗರ: ರೈತರ ಸೇವೆಯೇ ನಮ್ಮ ಧ್ಯೇಯ ಎಂಬುದು ಎಪಿಎಂಸಿ ಗುರಿ. ಆದರೆ ರೈತರು ಕಷ್ಟಪಟ್ಟು ಫಸಲು ತೆಗೆಯುತ್ತಾರೆ. ಆದರೆ ಅದನ್ನು ಎಪಿಎಂಸಿ ಮಾರುಕಟ್ಟೆಗೆ ತೆಗೆದುಕೊಂಡು ಬರಲು ಸಾಧ್ಯವಾಗುತ್ತಿಲ್ಲ. ಎಪಿಎಂಸಿಯಿಂದ ಯಾವುದೇ ವಾಹನ ಸೌಲಭ್ಯ ಇಲ್ಲದಿರುವುದರಿಂದ ಎಪಿಎಂಸಿ ಮಾರುಕಟ್ಟೆಯಿಂದ ವಿಮುಖವಾಗುವ ಪರಿಸ್ಥಿತಿ ಒದಗಿದೆ.

ಪಟ್ಟಣದ ಎಪಿಎಂಸಿಯಲ್ಲಿ ರೈತರ ಮನೆ ಬಾಗಿಲಿಗೆ ಹೋಗುವ ವಾಹನ ಸೌಲಭ್ಯ ಇರದ ಕಾರಣ ರೈತ ಸಂಕಷ್ಟಕ್ಕೀಡಾಗಿದ್ದಾನೆ. ಈ ಬಗ್ಗೆ ಸಾಕಷ್ಟು ರೈತರು ಮೌಖೀಕವಾಗಿ ಎಪಿಎಂಸಿಯ ಗಮನ ಸೆಳೆದರೂ ಯಾವುದೇ ಪ್ರಯೋಜವಾಗದೆ ಎಪಿಎಂಸಿಗೆ ಬರಲು ಮೀನಾಮೇಷ ಎಣಿಸುವಂತಾಗಿದೆ.

ಮನೆಯಲ್ಲೇ ವ್ಯಾಪಾರ: ಮನೆ ಬಾಗಿಲ ಖರೀದಿಗೆ ಉತ್ತೇಜನ ನೀಡಬಾರದು. ಅಡಕೆ ಸೇರಿದಂತೆ ಎಲ್ಲ ವಾಣಿಜ್ಯ ಬೆಳೆ ಹಾಗೂ ಆಹಾರ ಬೆಳೆ ಕೃಷಿ ಉತ್ಪನ್ನ ಮಾರುಕಟ್ಟೆ ಮೂಲಕವೇ ಮಾರಾಟವಾಗಬೇಕು. ಅದಕ್ಕಾಗಿ ಅದನ್ನು ಮಾರುಕಟ್ಟೆ ಪ್ರಾಂಗಣಕ್ಕೆ ತರಬೇಕು ಎನ್ನುವ ಸರ್ಕಾರದ ಉತ್ತಮ ಉದ್ದೇಶ ತಾಲೂಕಿನ ಬೆಳೆಗಾರರ ವಿಷಯದಲ್ಲಿ ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮ ಕೃಷಿ ಉತ್ಪನ್ನಗಳ ಮನೆ ಬಾಗಿಲ ವ್ಯಾಪಾರ ಜೋರಾಗುತ್ತಿರುವುದು ವಿಪರ್ಯಾಸ.

ಹಿಂದೆ ವಾಹನ ವ್ಯವಸ್ಥೆ ಇತ್ತು: ಈ ಹಿಂದೆ ಸಾಗರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪ್ತಿಗೆ ಒಳಪಡುತ್ತಿರುವಾಗ ಒಮ್ಮೆ ಸುಗ್ಗಿಯ ವೇಳೆ ತಾಲೂಕಿನಾದ್ಯಂತ ವ್ಯವಸ್ಥಿತ ಮಾರ್ಗಸೂಚಿಯೊಂದಿಗೆ ಅಡಕೆ, ಕಾಳು ಮೆಣಸು ಇನ್ನಿತರ ಬೆಳೆ ಮಾರುಕಟ್ಟೆಗೆ ಹೊತ್ತೂಯಲು ಬೆಳೆಗಾರರ ಮನೆ ಬಾಗಿಲಿಗೆ ಕೃಷಿ ಮಾರುಕಟ್ಟೆಯ ಸಮಿತಿಯ ಕಡೆಯಿಂದ ವಾಹನ ವ್ಯವಸ್ಥೆ ಮಾಡಲಾಗಿತ್ತು. ಸಮಿತಿಯ ವಾಹನ ವಾರದ ನಿಗದಿತ ದಿನ ಬರುತ್ತಿರುವುದರಿಂದ ಹಳ್ಳಿಗಳಲ್ಲಿ ಯಾವುದೋ ಖಾಸಗಿ ವಾಹನ ಬಾಡಿಗೆ ಪಡೆದು ಉತ್ಪನ್ನ ಮಾರುಕಟ್ಟೆಗೆ ತರುವ ಅನಿವಾರ್ಯತೆ ಇರಲಿಲ್ಲ.

ಸಾಗಣೆ ಸಾಧ್ಯವೇ ಇಲ್ಲ ಎನ್ನುವಂತಿರುವ ತಾಲೂಕಿನ ಕುಗ್ರಾಮಗಳಿಂದಲೂ ಉತ್ಪನ್ನ ಕಡಿಮೆ ಬಾಡಿಗೆ ದರದಲ್ಲಿ ಹೊತ್ತು ತರಲಾಗುತ್ತಿತ್ತು. ಇದರಿಂದ ಸಾಗಾಟ ಸಮಸ್ಯೆ ಇಲ್ಲದೆ ಬೆಳೆಗಾರ ನೆಮ್ಮದಿಯಿಂದ ತನ್ನ ಉತ್ಪನ್ನವನ್ನು ಮಾರುಕಟ್ಟೆಗೆ ಕಳಿಸುತ್ತಿದ್ದ. ಆದರೆ ನಂತರದ ದಿನಗಳಲ್ಲಿ ಹೊಸನಗರ ಪ್ರತೇಕ ಮಾರುಕಟ್ಟೆಯಾದ ಮೇಲೆ ಈಗ ವಾಹನ ಬೆಳೆಗಾರನ ಮನೆಗೆ ಬರುವ ಪದ್ಧತಿ ಸ್ಥಗಿತಗೊಳಿಸಲಾಗಿದೆ. ಅಲ್ಪಸ್ವಲ್ಪ ಬೆಳೆಯಾಗುವವರು ಖಾಸಗಿ ವಾಹನಕ್ಕೆ ನೀಡುವ ದರ ಅಧಿಕವಾಗಲಿದೆ. ಹಾಗಾಗಿ ದೂರದ ಕೆಲ ಬೆಳೆಗಾರರು ಮಾರುಕಟ್ಟೆಯಿಂದ ದೂರವೇ ಉಳಿಯುವಂತಾಗಿರುವುದು ಇಂದಿನ ವ್ಯವಸ್ಥೆ.

ಮಾತ್ರವಲ್ಲ, ಇದರ ಜತೆಗೆ ಕೆಲ ಬೆಳೆಗಾರರು ಉತ್ಪನ್ನವನ್ನು ಮಾರುಕಟ್ಟೆಗೆ ತರಲೇಬೇಕಾದ
ಅನಿವಾರ್ಯತೆ ಇದ್ದಾಗ ಹರಸಾಹಸಪಡುವ ಸ್ಥಿತಿಯೂ ನಿರ್ಮಾಣವಾಗಿದೆ. ಖಾಸಗಿ ವಾಹನಗಳಲ್ಲಿ ಅದೂ ಅವರು ಕೇಳಿದಷ್ಟು ಬಾಡಿಗೆ ತೆತ್ತು ಮಾರುಕಟ್ಟೆ ಸೇರುವಷ್ಟರಲ್ಲಿ ಹಣ್ಣುಗಾಯಿ ನೀರುಗಾಯಿಯಾಗುವ ಪರಿಸ್ಥಿತಿಯೂ ಇದೆ.

ಮಾರುಕಟ್ಟೆ ಸಂಪರ್ಕ ಹೇಗೆ?: ಇತ್ತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆದಾಯ ಹೆಚ್ಚಿಸುವ ಉದ್ದೇಶದಿಂದ ರೈತರಲ್ಲಿ ಮನೆ ಬಾಗಿಲ ವ್ಯಾಪಾರ ಬೇಡ ಮಾರುಕಟ್ಟೆಗೆ ತನ್ನಿ ಎಂದು ನಿತ್ಯ ಹೇಳುತ್ತಿದ್ದಾರೆ. ಅಲ್ಲದೆ ಇಲ್ಲಿನ ಯಾರ್ಡ್‌ನಲ್ಲಿ ದೊಡ್ಡ ಸೂಚನಾ ಫಲಕ ಹಾಕಿ ಜನರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸಾಗಾಣಿಕೆ ಹೊರೆಯಿಂದ ತಪ್ಪಿಸಿಕೊಳ್ಳಬೇಕಾದ ರೈತ ಅನಿವಾರ್ಯವಾಗಿ ತಾನು ಬೆಳೆದ ಉತ್ಪನ್ನಗಳನ್ನು ಮನೆ ಬಾಗಿಲಿನಲ್ಲಿ ವ್ಯಾಪಾರ ಮಾಡುತ್ತಿದ್ದಾನೆ. ರೈತರಿಗೆ ನಿಖರವಾದ ತೂಕ ಮತ್ತು ನ್ಯಾಯಯುತ ಬೆಲೆ ನೀಡಿಸುವುದೇ ನಮ್ಮ ಗುರಿ ಎಂದು ಹೇಳುವ ಕೃಷಿ ಮಾರುಕಟ್ಟೆ ಸಮಿತಿ ಬಡ ರೈತ ತನ್ನ ಉತ್ಪನ್ನವನ್ನು ಮಾರುಕಟ್ಟೆಗೆ ತರುವ ವಿಧಾನ ಹೇಗೆ ಎಂದು ತಿಳಿಸಿಕೊಟ್ಟಿಲ್ಲ.

ಸರ್ಕಾರಕ್ಕೆ ಮನವಿ: ಉಳಿದ ಕಡೆಗಳಲ್ಲಿ ವಾಹನ ವ್ಯವಸ್ಥೆ ಇದೆ. ಅದು ರೈತರಿಗೆ ಅನುಕೂಲವಾಗಿದೆ. ಆದರೆ ಅತಿ ಹೆಚ್ಚು ಅಗತ್ಯವಿರುವ ಸಂತ್ರಸ್ತ ಹೊಸನಗರ ತಾಲೂಕಿನಲ್ಲಿ ಇಲ್ಲದಿರುವುದು ತೊಂದರೆ ಹೌದು. ಈ ಅಗತ್ಯತೆ ಕುರಿತು ಮೇಲಧಿಕಾರಿಗಳಿಗೆ ಮನವಿ ನೀಡಲಾಗಿದೆ ಎನ್ನುತ್ತಾರೆ ಅಧಿ ಕಾರಿಗಳು. ಒಟ್ಟಾರೆ ಉತ್ತಮ ಮಾರುಕಟ್ಟೆಯಾಗಿ ರೂಪುಗೊಳ್ಳುವ ಎಲ್ಲಾ ಲಕ್ಷಣಗಳಿರುವ ಹೊಸನಗರದ ಎಪಿಎಂಸಿ ರೈತರು ಮತ್ತು ಅವರು ಬೆಳೆದ ಫಸಲು ಮಾರುಕಟ್ಟೆಗೆ ಬರಲು ಪೂರಕವಾಗಿ ಸೂಕ್ತ ವ್ಯವಸ್ಥೆ ಮಾಡಬೇಕಿದೆ. ಇದರಿಂದ ರೈತರಿಗೂ ಅನುಕೂಲ.  ಮಾರುಕಟ್ಟೆ ಅಭಿವೃದ್ಧಿಗೂ ರಹದಾರಿ. ಎಪಿಎಂಸಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುತ್ತದೋ ಕಾದು ನೋಡಬೇಕು.

ಈ ಕುರಿತು ಸಮಿತಿಯಿಂದ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಬೆಳೆಗಾರರ ಹಿತದೃಷ್ಟಿಯಿಂದ ಅಗತ್ಯವಿದೆ ಮತ್ತು ನಿಯಮಾನುಸಾರ ಇಲ್ಲಿಗೆ ಸರ್ಕಾರ ವಾಹನ ಮಂಜೂರು ನೀಡುವುದಕ್ಕೆ ಸಾಧ್ಯವಿದೆ ಎನ್ನುವುದಾದರೆ ತಕ್ಷಣ ಸರ್ಕಾರದೊಂದಿಗೆ ಚರ್ಚಿಸಿ ವಾಹನದ ವ್ಯವಸ್ಥೆ ಮಾಡಿಸಲಾಗುವುದು.
ಹರತಾಳು ಹಾಲಪ್ಪ,
ಶಾಸಕ

ಹಿಂದೆ ಸಾಗರ ಸಮಿತಿಯಿದ್ದಾಗ ವಾರದಲ್ಲಿ
ಎರಡು ದಿನ ಇಲ್ಲಿ ವಾಹನ ವ್ಯವಸ್ಥೆ ಮಾಡಲಾಗಿತ್ತು.
ಈಗಲೂ ಇಚ್ಛಾಶಕ್ತಿ ಅಗತ್ಯವಿದೆ. ಸಂಬಂಧಪಟ್ಟವರು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಿದರೆ ಖಂಡಿತ ಈ ಕಾರ್ಯ ಸಾಧ್ಯವಿದೆ.
ವಾಟಗೋಡು ಸುರೇಶ್‌
ಮಾಜಿ ನಿರ್ದೇಶಕ, ಎಪಿಎಂಸಿ.

„ಕುಮುದಾ ನಗರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಜ್ಯ ಸಭೆಗೆ ದೇವೇಗೌಡರು ಸ್ಪರ್ಧಿಸಲಿ: ಹೊರಟ್ಟಿ ಅಭಿಮತ

ರಾಜ್ಯ ಸಭೆಗೆ ದೇವೇಗೌಡರು ಸ್ಪರ್ಧಿಸಲಿ: ಹೊರಟ್ಟಿ ಅಭಿಮತ

ಕ್ವಾರೆಂಟೈನ್ ನಿಯಮ ಬದಲಾವಣೆ: 7 ದಿನವಲ್ಲ ಇನ್ನು 14 ದಿನಗಳ ಹೋಮ್ ಕ್ವಾರೆಂಟೈನ್

ಕ್ವಾರೆಂಟೈನ್ ನಿಯಮ ಬದಲಾವಣೆ: 7 ದಿನವಲ್ಲ ಇನ್ನು 14 ದಿನಗಳ ಹೋಮ್ ಕ್ವಾರೆಂಟೈನ್

ಕೋವಿಡ್-19ನಿಂದ ಗುಣಮುಖನಾದ ನಾನು ಅದೃಷ್ಟವಂತ: ಪ್ರಿನ್ಸ್‌ ಚಾರ್ಲ್ಸ್‌

ಕೋವಿಡ್-19ನಿಂದ ಗುಣಮುಖನಾದ ನಾನು ಅದೃಷ್ಟವಂತ: ಪ್ರಿನ್ಸ್‌ ಚಾರ್ಲ್ಸ್‌

ರಾಜ್ಯಕ್ಕೆ ಮುಂಗಾರು ಪ್ರವೇಶ ಉತ್ತಮ ಮಳೆ ನಿರೀಕ್ಷೆ

ರಾಜ್ಯಕ್ಕೆ ಮುಂಗಾರು ಪ್ರವೇಶ ಉತ್ತಮ ಮಳೆ ನಿರೀಕ್ಷೆ

ಅಮೆರಿಕ, ಕೆನಡಾಕ್ಕೆ ತೆರಳಲಿವೆ 75 ವಿಶೇಷ ವಿಮಾನಗಳು

ಅಮೆರಿಕ, ಕೆನಡಾಕ್ಕೆ ತೆರಳಲಿವೆ 75 ವಿಶೇಷ ವಿಮಾನಗಳು

ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರಿಗೆ ಕರ್ತವ್ಯ ಹಾಜರಿ ಸೂಚನೆ

ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರಿಗೆ ಕರ್ತವ್ಯ ಹಾಜರಿ ಸೂಚನೆ

ಕೋವಿಡ್‌-19 ಸೋಂಕಿತರ ಸಂಖ್ಯೆ: ಚೀನ ಹಿಂದಿಕ್ಕಿದ ಪಾಕ್‌

ಕೋವಿಡ್‌-19 ಸೋಂಕಿತರ ಸಂಖ್ಯೆ: ಚೀನ ಹಿಂದಿಕ್ಕಿದ ಪಾಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

04-June-13

ಪಂಚಾಯತ್‌ ನಿರ್ಣಯ ಖಂಡಿಸಿ ಧರಣಿ

04-June-12

ಮತ್ತಿಬ್ಬರಿಗೆ ಕೋವಿಡ್ ಸೋಂಕು

03-June-17

ಶಿಮುಲ್‌ನಿಂದ ಹಾಲು ಉತ್ಪಾದಕರಿಗೆ 2 ರೂ. ಕಡಿತ

03-June-12

ಆಗುಂಬೆ ಘಾಟಿ ಈ ಬಾರಿಯೂ ಬಂದ್‌?

ಸೀಲ್ ಡೌನ್ ಆಗಿದ್ದ ಹಕ್ಕಿಪಿಕ್ಕಿ ಕ್ಯಾಂಪ್ ಜನರಿಂದ ಪಕ್ಕದ ಊರಿನ ಜನರ ಮೇಲೆ‌ ಹಲ್ಲೆ

ಸೀಲ್ ಡೌನ್ ಆಗಿದ್ದ ಹಕ್ಕಿಪಿಕ್ಕಿ ಕ್ಯಾಂಪ್ ಜನರಿಂದ ಪಕ್ಕದ ಊರಿನ ಜನರ ಮೇಲೆ‌ ಹಲ್ಲೆ

MUST WATCH

udayavani youtube

ಮರದ ಬೇರಿಗೆ ಸುಂದರ ರೂಪ ನೀಡುವ ಶಿಲ್ಪಿ | Wood sculptor Jagadesh Acharya

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

ಹೊಸ ಸೇರ್ಪಡೆ

ರಾಜ್ಯ ಸಭೆಗೆ ದೇವೇಗೌಡರು ಸ್ಪರ್ಧಿಸಲಿ: ಹೊರಟ್ಟಿ ಅಭಿಮತ

ರಾಜ್ಯ ಸಭೆಗೆ ದೇವೇಗೌಡರು ಸ್ಪರ್ಧಿಸಲಿ: ಹೊರಟ್ಟಿ ಅಭಿಮತ

ಕ್ವಾರೆಂಟೈನ್ ನಿಯಮ ಬದಲಾವಣೆ: 7 ದಿನವಲ್ಲ ಇನ್ನು 14 ದಿನಗಳ ಹೋಮ್ ಕ್ವಾರೆಂಟೈನ್

ಕ್ವಾರೆಂಟೈನ್ ನಿಯಮ ಬದಲಾವಣೆ: 7 ದಿನವಲ್ಲ ಇನ್ನು 14 ದಿನಗಳ ಹೋಮ್ ಕ್ವಾರೆಂಟೈನ್

ಅವನಿಯ ಗರ್ಭದಲ್ಲಿ ಬೃಹತ್‌ ಬಂಗಲೆಯ ದರ್ಬಾರು

ಅವನಿಯ ಗರ್ಭದಲ್ಲಿ ಬೃಹತ್‌ ಬಂಗಲೆಯ ದರ್ಬಾರು

ಕೋವಿಡ್-19ನಿಂದ ಗುಣಮುಖನಾದ ನಾನು ಅದೃಷ್ಟವಂತ: ಪ್ರಿನ್ಸ್‌ ಚಾರ್ಲ್ಸ್‌

ಕೋವಿಡ್-19ನಿಂದ ಗುಣಮುಖನಾದ ನಾನು ಅದೃಷ್ಟವಂತ: ಪ್ರಿನ್ಸ್‌ ಚಾರ್ಲ್ಸ್‌

ರಾಜ್ಯಕ್ಕೆ ಮುಂಗಾರು ಪ್ರವೇಶ ಉತ್ತಮ ಮಳೆ ನಿರೀಕ್ಷೆ

ರಾಜ್ಯಕ್ಕೆ ಮುಂಗಾರು ಪ್ರವೇಶ ಉತ್ತಮ ಮಳೆ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.