ನಗರಸಭೆಯಲ್ಲಿ ಇ-ಆಸ್ತಿ ಕೌಂಟರ್‌ ಉದ್ಘಾಟನೆ

ದಲ್ಲಾಳಿಗಳ ಹಾವಳಿ ತಪ್ಪಿಸಲು ಉತ್ತಮ ಕಾರ್ಯ

Team Udayavani, Jul 16, 2019, 4:11 PM IST

sm-tdy-3..

ಭದ್ರಾವತಿ: ನಗರಸಭೆಯ ಆವರಣದಲ್ಲಿ ಇ-ಆಸ್ತಿ ಮತ್ತು ನೀರಿನ ಕರ ಸ್ವೀಕರಿಸುವ ಕೌಂಟರ್‌ಗಳನ್ನು ಉಪವಿಭಾಗಾಧಿಕಾರಿ ಪ್ರಕಾಶ್‌ ಉದ್ಘಾಟಿಸಿದರು.

ಭದ್ರಾವತಿ: ಜನಸಾಮಾನ್ಯರು ತಮ್ಮ ಆಸ್ತಿಗಳ ಕುರಿತು ನಗರಸಭೆಯಿಂದ ಖಾತೆ ಪಡೆಯಲು ಮತ್ತು ಕಂದಾಯ ಪಾವತಿಸಲು ಮತ್ತಿತರ ದಾಖಲಾತಿ ಪಡೆಯಲು ಬಯಸಿದಾಗ ದಲ್ಲಾಳಿಗಳ ಮೊರೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಇ-ಆಸ್ತಿ ದಾಖಲಾತಿ ಸ್ವೀಕರಿಸುವ ಮತ್ತು ನೀರಿನ ಕರ ಪಾವತಿಸುವ ಬ್ಯಾಂಕ್‌ ಮಾದರಿ ಕೌಂಟರ್‌ಗಳನ್ನು ನಗರಸಭೆಯಲ್ಲಿ ಆರಂಭಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ಆಡಳಿತಾಧಿಕಾರಿ ಪ್ರಕಾಶ್‌ ಹೇಳಿದರು.

ನಗರಸಭೆಯ ಆವರಣದಲ್ಲಿ ಇ-ಆಸ್ತಿ ಮತ್ತು ನೀರಿನ ಕರ ಸ್ವೀಕರಿಸುವ ಕೌಂಟರ್‌ ಉದ್ಘಾಟಿಸಿ ನಂತರ ಸಿದ್ಧಪಡಿಸಿದ ಶಾಖಾ ಕೊಠಡಿ ವೀಕ್ಷಿಸಿ ಮಾತನಾಡಿದ ಅವರು, ಇ-ಆಸ್ತಿ ತೆರಿಗೆ ಪಾವತಿಯಿಂದ ಮತ್ತು ಇಂಟರ್‌ನೆಟ್ ವ್ಯವಸ್ಥೆಯಿಂದ ಜನರಿಗೆ ಪಾರದರ್ಶಕ ಆಡಳಿತ ನೀಡಿದಂತಾಗುತ್ತದೆ. ಅರ್ಜಿದಾರರಿಗೆ ಸತಾಯಿಸದೇ ದಾಖಲಾತಿ ದೊರೆಯುವ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ ಎಂದರು.

ಪೌರಾಯುಕ್ತ ಮನೋಹರ್‌ ಮಾತನಾಡಿ, ಕಚೇರಿಯಲ್ಲಿ ನಾವು ನಗರಸಭೆಯಲ್ಲಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಾಗ ಸುಮಾರು ಏಳೆಂಟು ಸಾವಿರಕ್ಕೂ ಅಧಿಕ ಅರ್ಜಿಗಳು ವಿಲೇಯಾಗದೆ ದಲ್ಲಾಳಿಗಳ ಮತ್ತಿತರರ ಕೈಗಳಲ್ಲಿ ಕಡತಗಳು ಸಿಲುಕಿ ನಾಗರಿಕರು ಪರದಾಡುವ ಪರಿಸ್ಥಿತಿಯಿತ್ತು.

ಜನರ ಸಮಸ್ಯೆಯನ್ನೆ ದಲ್ಲಾಳಿಗಳು ಮತ್ತಿತರರು ದುರ್ಬಳಕೆ ಮಾಡಿಕೊಂಡು ಖಾತೆ ಬದಲಾವಣೆಗೆ ಎಂಟರಿಂದ ಹತ್ತು ಸಾವಿರ ರೂಗಳನ್ನು ಪಡೆದು ಮೋಸ ಮಾಡುತ್ತಿದ್ದರು. ಬಿಲ್ ಕಲೆಕ್ಟರ್‌ಗಳು ಕಂದಾಯ ವಸೂಲಿ ಮಾಡಿ ಸತಾವಣೆ ಮಾಡುತ್ತಾ, ಹಣವನ್ನು ದಾಖಲಾತಿಯಲ್ಲಿ ನಮೂದು ಮಾಡದೆ ಪರದಾಟದ ದೂರುಗಳು ಸಾಮಾನ್ಯ ದೂರಾಗಿತ್ತು. ಇವೆಲ್ಲವನ್ನು ಗಮನಿಸಿ ನಾಗರಿಕರಿಗೆ ಈ ಮೋಸದ ಜಲದಿಂದ ಮುಕ್ತಿಕೊಡಿಸುವ ಸಲುವಾಗಿ ನಾವು ಕ್ಯಾಶ್‌ ಲೆಸ್‌ ಹಾಗೂ ಕಾಗದ ರಹಿತ ವ್ಯವಸ್ಥೆ ಮಾಡಬೇಕೆಂದು ಚಿಂತಿಸಿ ಜನರಿಗೆ ನ್ಯಾಯ ಕೊಡಿಸಲು ಮತ್ತು ಕೇವಲ ಏಳು ದಿನದಲ್ಲಿ ದಾಖಲೆ ಲಭಿಸುವಂತೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಸಾರ್ವಜನಿಕರು ಇನ್ನು ಮುಂದೆ ಮೋಸ ಹೋಗದೆ ಯಾರಿಗೂ ಹಣ ನೀಡದೆ ಪಾರದರ್ಶಕ ವ್ಯವಸ್ಥೆ ಸದುಪಯೋಗಕ್ಕೆ ಮುಂದಾಗಬೇಕೆಂಕು ಎಮದರು.

ಕಂದಾಯಾಧಿಕಾರಿ ರಾಜ್‌ಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಇ-ಕೌಂಟರ್‌ ಕೆಲಸ ಮಾಡುವ ವಿಧಾನ ಮತ್ತು ಇ ವ್ಯವಸ್ಥೆ ಜಾರಿಗೆ ತರಲು ಪೌರಾಯುಕ್ತರು ನಡೆಸಿದ ಪರಿಶ್ರಮವನ್ನು ಶ್ಲಾಘಿಸಿದರು. ಅಕೌಂಟೆಂಟ್ ಮಹಮ್ಮದ್‌ ಅಲಿ, ಪರಿಸರ ಇಂಜಿನಿಯರ್‌ ರುದ್ರೇಗೌಡ, ವಿವಿಧ ವಿಭಾಗಗಳ ಮುಖ್ಯಸ್ಥರು ಸೇರಿದಂತೆ ಸಿಬ್ಬಂದಿ ಹಾಗೂ ತೆರಿಗೆದಾರರ ಸಂಘದ ಅಧ್ಯಕ್ಷ ಎಲ್.ವಿ.ರುದ್ರಪ್ಪ, ಜವರಯ್ಯ, ಆರ್‌.ವೇಣುಗೋಪಾಲ್ ಮುಂತಾದವರು ಉಪಸ್ಥತರಿದ್ದರು. ಇದೇ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿಗಳು ಶಿವಮೂರ್ತಿ ಎಂಬ ಕಟ್ಟಡ ಮಾಲೀಕರಿಗೆ ಇ-ಆಸ್ತಿ ದಾಖಲಾತಿ ವಿತರಿಸಿ ಚಾಲನೆ ನೀಡಿದರು.

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Election ಗೆದ್ದ ನಂತರ ಜನರಿಂದ ದೂರವಾಗದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು

Election ಗೆದ್ದ ಬಳಿಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು; ಬಿ.ವೈ.ರಾಘವೇಂದ್ರ

MP B.Y. Raghavendra: “ಬಿಜೆಪಿಯಿಂದ ಉತಮ ಪ್ರಣಾಳಿಕೆ ಬಿಡುಗಡೆ’ʼ

MP B.Y. Raghavendra: “ಬಿಜೆಪಿಯಿಂದ ಉತಮ ಪ್ರಣಾಳಿಕೆ ಬಿಡುಗಡೆ’ʼ

ಶಿವಮೊಗ್ಗ: ಅಪ್ಪ ಮಕ್ಕಳ ಶಿಕಾರಿ ನಾನು ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಶಿವಮೊಗ್ಗ: ಅಪ್ಪ ಮಕ್ಕಳ ಶಿಕಾರಿ ನಾನು ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಸೊರಬ: ಬಿದಿರಿನ ಬುಟ್ಟಿ ಉದ್ಯಮಕ್ಕೆ ಬಂತು ಸಂಕಷ್ಟ

ಸೊರಬ: ಬಿದಿರಿನ ಬುಟ್ಟಿ ಉದ್ಯಮಕ್ಕೆ ಬಂತು ಸಂಕಷ್ಟ

ಅಡಿಕೆ ವ್ಯಾಪಾರಿಗಳಿಗೆ 4 ಕೋ. ರೂ. ವಂಚನೆ: ಓರ್ವನ ಸೆರೆ

Sagara ಅಡಿಕೆ ವ್ಯಾಪಾರಿಗಳಿಗೆ 4 ಕೋ. ರೂ. ವಂಚನೆ: ಓರ್ವನ ಸೆರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.