ಬಸ್ಸಿಗೆ ಕಾಯುತ್ತಿದ್ದವರಿಗೆ ಢಿಕ್ಕಿ ಹೊಡೆದ ಕಾರು: ಚಾಲಕ ಸಾವು, ಉಳಿದವರ ಸ್ಥಿತಿ ಗಂಭೀರ


Team Udayavani, Oct 24, 2021, 4:37 PM IST

incident held at sagara

ಸಾಗರ: ತಾಲೂಕಿನ ಕೆಳದಿಪುರ ಸಮೀಪದ ಸುಳಗೋಡು ಗ್ರಾಮದ ಬಳಿ ಮಾರುತಿ ಓಮ್ನಿ ಕಾರು ಪಲ್ಟಿ ಹೊಡೆದು ಚಾಲಕ ಮೃತಪಟ್ಟ ಘಟನೆ ನಡೆದಿದೆ.

ಸಾಗರದ ಷಾಹಿ ಗಾಮೇಂಟ್ಸ್‌ಗೆ ಮಾಸೂರು ಕೆಳದಿ, ಕೆಳದಿಪುರ ಗ್ರಾಮದಿಂದ ನಾಲ್ವರು ಕೆಲಸಕ್ಕೆ ಕಾರಿನಲ್ಲಿ ಬರುತ್ತಿದ್ದರು. ಈ ಸಂದರ್ಭದಲ್ಲಿ ಸುಳಗೋಡು ಗ್ರಾಮದ ಸಮೀಪ ಕಾರಿನ ಬ್ರೇಕ್ ಫೇಲ್ ಆಗಿದೆ. ಹಾಗಾಗಿ ಓಮ್ನಿ ಕಾರು  ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ಬಸ್‌ಗೆ ಕಾಯುತ್ತಾ ನಿಂತಿದ್ದ ಐವರಿಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಕಾರು ಚಾಲಕ ಸುರೇಶ್ ಕೆಳದಿಪುರ (45) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ರಸ್ತೆ ಪಕ್ಕದಲ್ಲಿ ನಿಂತಿದ್ದ ಐವರಿಗೆ ಗಂಭೀರ ಗಾಯವಾಗಿದೆ.

ಅಪಘಾತದಲ್ಲಿ ದೀಪಾ, ಆಶಾ, ಅರ್ಪಿತಾ, ಕಲಾವತಿ, ಚೈತ್ರ, ಶ್ಯಾಮಲ, ರೇಣುಕಾ, ಜಯಶ್ರೀ, ಶಾಂಭವಿ ಅವರಿಗೆ ಗಾಯವಾಗಿದ್ದು, ಈ ಪೈಕಿ ಗಂಭೀರವಾಗಿ ಗಾಯಗೊಂಡಿರುವ ಅರ್ಪಿತಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೋರ್ವರ ಪರಿಸ್ಥಿತಿ ಬಗ್ಗೆ ನಿಗಾ ವಹಿಸಲಾಗಿದ್ದು ವರದಿ ಬಂದ ನಂತರ ಸ್ಥಳೀಯ ಚಿಕಿತ್ಸೆ ಅಥವಾ ಹೆಚ್ಚಿನ ಚಿಕಿತ್ಸೆಗೆ ಕಳುಹಿಸುವ ಕುರಿತು ನಿರ್ಧರಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ನೀರಾವರಿ ಯೋಜನೆಗೆ ಗೌರಿಶಂಕರ್‌ ಅಡ್ಡಗಾಲು

ದುರದೃಷ್ಟಕರ ದಿನ: ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಮಾತನಾಡಿದ ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು,  ಉಪವಿಭಾಗೀಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಎಲ್ಲರಿಗೂ ಉತ್ತಮ ಚಿಕಿತ್ಸೆ ಕೊಡಿಸಲಾಗುತ್ತದೆ. ನಾಲ್ವರು ವೈದ್ಯರು ಸೇವೆ ನೀಡುತ್ತಿದ್ದಾರೆ. ಈ ನಡುವೆ ಷಾಹಿ ಗಾರ್ಮೆಂಟ್ಸ್‌ನ ವ್ಯವಸ್ಥಾಪಕರ ಜೊತೆ ಮಾತುಕತೆ ನಡೆಸಿದ್ದು, ಅಪಘಾತದಿಂದ ಗಾಯಗೊಂಡವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಅವರಿಗೆ ವೆಚ್ಚ ಭರಿಸಲು ಒಪ್ಪಿಗೆ ನೀಡಿದ್ದಾರೆ. ಈ ರೀತಿ ಅಪಘಾತಗಳಾಗಬಹುದಾದ ಹಿನ್ನೆಲೆಯಲ್ಲಿ ವಿಮೆ ಹಾಗೂ ಇತರ ದಾಖಲೆಗಳನ್ನು ಹೊಂದಿರಬೇಕು. ಕೆಲಸದ ಸ್ಥಳ ಸೇರಲು ಕೊನೆ ಕ್ಷಣದ ಗಡಿಬಿಡಿ ಮಾಡುವ ಬದಲು ಕಾಲು ಅರ್ಧ ಘಂಟೆ ಮೊದಲೇ ಹೊರಡಲು ವ್ಯವಸ್ಥೆ ಮಾಡಿಕೊಳ್ಳಬೇಕು. ಒಟ್ಟಿನಲ್ಲಿ ಸಾಗರದ ಪಾಲಿಗೆ ಈ ಭಾನುವಾರ ದುರದೃಷ್ಟಕರ ದಿನ ಎಂದು ತಿಳಿಸಿದರು.

ಸೂಕ್ತ ಚಿಕಿತ್ಸೆಯ ಒತ್ತಾಯ: ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ ಮಾತನಾಡಿದ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಕೊಡಲು ವೈದ್ಯರ ಬಳಿ ಮನವಿ ಮಾಡಲಾಗಿದೆ. ಮೃತಪಟ್ಟ ಚಾಲಕನಿಗೆ ಪರಿಹಾರ ಕೊಡಬೇಕು ಮತ್ತು ಗಾಯಗೊಂಡವರಿಗೆ ಷಾಹಿ ಗಾರ್ಮೇಂಟ್ಸ್‌ನಿಂದ ಚಿಕಿತ್ಸೆ ಜೊತೆಗೆ ಪರಿಹಾರ ಸಹ ಕೊಡಲು ಒತ್ತಾಯಿಸುತ್ತಿದ್ದೇನೆ ಎಂದರು.

ಟಾಪ್ ನ್ಯೂಸ್

mantri mall

ಆಸ್ತಿ ತೆರಿಗೆ ಬಾಕಿ: ಮಂತ್ರಿಮಾಲ್‌ಗೆ ಬೀಗ..!

ಎರಡೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ; ಒಂದು ತಿಂಗಳೊಳಗೆ ತೀರ್ಪು ನೀಡಿದ ಕೋರ್ಟ್

ಎರಡೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ; ಒಂದು ತಿಂಗಳೊಳಗೆ ತೀರ್ಪು ನೀಡಿದ ಕೋರ್ಟ್

ಚುನಾವಣೆ ವೆಚ್ಚಕ್ಕೆ ಅಭ್ಯರ್ಥಿಗೆ ಹಣ ಕೊಟ್ಟ ಮತದಾರರು

ಚುನಾವಣೆ ವೆಚ್ಚಕ್ಕೆ ಅಭ್ಯರ್ಥಿಗೆ ಹಣ ಕೊಟ್ಟ ಮತದಾರರು

vaccination pending

ಅವಧಿ ಮುಗಿದ್ರೂ ಲಸಿಕೆಗೆ ಬಾರದ 10 ಲಕ್ಷ ಜನ..!

ಶ್ರೀರಂಗಪಟ್ಟಣ: ಗೂಡ್ಸ್ ವಾಹನ ಚಾಲಕನ ಬರ್ಬರ ಹತ್ಯೆ

ಶ್ರೀರಂಗಪಟ್ಟಣ: ಗೂಡ್ಸ್ ವಾಹನ ಚಾಲಕನ ಬರ್ಬರ ಹತ್ಯೆ

9cm-bommai

ಬಿಜೆಪಿ ಗೆಲುವಿಗೆ ಯಾವುದೇ ಸಮಸ್ಯೆಯಿಲ್ಲ: ಸಿಎಂ ಬೊಮ್ಮಾಯಿ

food grains

ಬೇಳೆಕಾಳು, ಆಹಾರ ಧಾನ್ಯಗಳ ಬೆಲೆಯಲ್ಲೂ ಏರಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

shivamogga news

ಶಿವಮೊಗ್ಗದಲ್ಲೆ ಇನ್ನುಉಣುಗು ಪರೀಕ್ಷೆ

1-sdfdf

ವೈದ್ಯರ ನಾಯಿ ಕಳವು : ಶಿವಮೊಗ್ಗ ಪೊಲೀಸರಿಂದ ಕೆಲವೇ ಗಂಟೆಗಳೊಳಗೆ ಪತ್ತೆ

ಮಧು ಬಂಗಾರಪ್ಪ

ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಅಗತ್ಯವಿದೆ: ಮಧು ಬಂಗಾರಪ್ಪ

ಮುಂದಿನ ಚುನಾವಣೆವರೆಗೂ ಬಸವರಾಜ ಬೊಮ್ಮಾಯಿಯವರೇ ಸಿಎಂ: ಸಚಿವ ಈಶ್ವರಪ್ಪ

ಮುಂದಿನ ಚುನಾವಣೆವರೆಗೂ ಬಸವರಾಜ ಬೊಮ್ಮಾಯಿಯವರೇ ಸಿಎಂ: ಸಚಿವ ಈಶ್ವರಪ್ಪ

ಸಿದ್ದರಾಮಯ್ಯಗೆ ನಿನ್ನ ನೋಡೋಕೆ ಬಂದಿದ್ದೀನಿ ಎಂದ ಪುಟಾಣಿ: ವಿಡಿಯೋ ವೈರಲ್

ಸಿದ್ದರಾಮಯ್ಯಗೆ ನಿನ್ನ ನೋಡೋಕೆ ಬಂದಿದ್ದೀನಿ ಎಂದ ಪುಟಾಣಿ: ವಿಡಿಯೋ ವೈರಲ್

MUST WATCH

udayavani youtube

ದಾಂಡೇಲಿ : ಅರಣ್ಯ ಇಲಾಖೆಯಿಂದ ಏಕಾಏಕಿ ಬ್ರಿಟಿಷ್ ರಸ್ತೆ ಬಂದ್, ವ್ಯಾಪಕ ಆಕ್ರೋಶ

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

udayavani youtube

ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ

ಹೊಸ ಸೇರ್ಪಡೆ

ಕಳಚಿದ ಮಿರಾಶಿ ಮನೆತನದ ಹಿರಿಯ ಕೊಂಡಿ ಗೋಪಾಲ ಅರ್ಜುನ ಮಿರಾಶಿ

ಕಳಚಿದ ಮಿರಾಶಿ ಮನೆತನದ ಹಿರಿಯ ಕೊಂಡಿ ಗೋಪಾಲ ಅರ್ಜುನ ಮಿರಾಶಿ

mantri mall

ಆಸ್ತಿ ತೆರಿಗೆ ಬಾಕಿ: ಮಂತ್ರಿಮಾಲ್‌ಗೆ ಬೀಗ..!

ಎರಡೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ; ಒಂದು ತಿಂಗಳೊಳಗೆ ತೀರ್ಪು ನೀಡಿದ ಕೋರ್ಟ್

ಎರಡೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ; ಒಂದು ತಿಂಗಳೊಳಗೆ ತೀರ್ಪು ನೀಡಿದ ಕೋರ್ಟ್

11vaccine

ಮೂರನೇ ಅಲೆ ಭೀತಿಗೆ 2ನೇ ಡೋಸ್‌ಗೆ ಬೇಡಿಕೆ!

ಚುನಾವಣೆ ವೆಚ್ಚಕ್ಕೆ ಅಭ್ಯರ್ಥಿಗೆ ಹಣ ಕೊಟ್ಟ ಮತದಾರರು

ಚುನಾವಣೆ ವೆಚ್ಚಕ್ಕೆ ಅಭ್ಯರ್ಥಿಗೆ ಹಣ ಕೊಟ್ಟ ಮತದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.